Quantcast
Channel: Chiranjeevi Bhat
Viewing all 155 articles
Browse latest View live

ಸಾಯೋ ಮುಂಚೆ ಸಾಧ್ವಿಯೆಂಬುದು ಸಾಬೀತಾಯಿತು

$
0
0

dc-Cover-vqaqj8olphctqqqtanl41ue290-20160513164317.Medi

7 ವರ್ಷ, 7 ತಿಂಗಳು, 14 ದಿನ. ಕ್ಷಣ ಕ್ಷಣ ನೋವು… ಅಷ್ಟು ಸಮಯ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಾಧ್ವಿ ಬಗ್ಗೆ ನಾವು 13.05.2016ರ ಬೆಳಗ್ಗೆ ಸುದ್ದಿ ಕೇಳುವವರೆಗೆ ನೆಮ್ಮದಿಯಿರಲಿಲ್ಲ. ಯಾರಾದರೂ ಅಪರಾಧ ಮಾಡಿರುವವನು ಜೈಲಿನಲ್ಲಿ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಕಾಲ ತೆಗೆದುಕೊಳ್ಳಬಹುದು. ಕೊನೆಗೆ ಕಾಲ ಕಳೆದಂತೆ, ಅಲ್ಲಿರುವವರ ಜತೆಯೇ ಹೊಂದಿಕೊಂಡು ಮನೆಯಂತೆ ಇದ್ದುಬಿಡುತ್ತಾರೆ. ಆದರೆ ಸಾಧ್ವಿ ಯಾವುದೇ ತಪ್ಪು ಮಾಡಿಲ್ಲ. ಅದಕ್ಕೆ ಜೈಲಿನಲ್ಲಿ ತನ್ನ ಬಗೆಗಿನ ತೀರ್ಪು ಬರುವವರೆಗೆ ಕ್ಷಣ ಕ್ಷಣವೂ ಆಕೆಗೆ ನರಕವಾಗಿತ್ತು. ಪೊಲೀಸರು ವಿಚಾರಣೆ ನೆಪದಲ್ಲಿ ಆಕೆಗೆ ಅತ್ಯಾಚಾರ ಒಂದು ಮಾಡದೇ ಬಿಟ್ಟಿರಬಹುದು ಅಷ್ಟೇ. ಪಾಕಿಸ್ತಾನಿಯರಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದರು ಅವರನ್ನು.ಅಂದು 29 ಸೆಪ್ಟೆಂಬರ್ 2008. ಭಾರತ ನಿಜಕ್ಕೂ ಆ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಮಾಲೇಗಾಂವ್‌ನ ಭಿಕ್ಕು ಚೌಕ್‌ನಲ್ಲಿ ರಾತ್ರಿ 9.26ಕ್ಕೆ ಮುಸ್ಲಿಮರು ಅಂದು ವಿಶೇಷ ನಮಾಜ್ ಮಾಡಿ ಹೊರಗೆ ಬರುತ್ತಿದ್ದಾಗ ಒಂದು ಸ್ಪೋಟ ವಾಗಿತ್ತು. ಎಲ್‌ಎಮ್‌ಎಲ್ ಬೈಕ್‌ನಲ್ಲಿ ಬಾಂಬ್ ಇಟ್ಟು ಸೋಟಿಸಲಾಗಿತ್ತು. ಸ್ಪೋಟ ದ ತೀವ್ರತೆಗೆ ಒಬ್ಬ 15 ವರ್ಷದ ಹುಡುಗನೂ ಸೇರಿದಂತೆ ಒಟ್ಟು 8 ಜನ ಅಲ್ಲೇ ಪ್ರಾಣಬಿಟ್ಟರು. 80 ಜನರಿಗೆ ತೀವ್ರ ಗಾಯಗಳಾದವು. ಇದರಲ್ಲಿ ಮೊದಲಿಗೆ ಮಹಾರಾಷ್ಟ್ರದ ಭಯೋತ್ಪಾದನಾ ತನಿಖಾ ದಳ ಸಿಮಿ ಉಗ್ರರನ್ನು ಬಂಧಿಸಿತ್ತು. ಆಗ ಯಾವ ಮಾಧ್ಯಮಗಳೂ ಸಿಮಿ ಉಗ್ರರ ಮಾಹಿತಿಯನ್ನು ಸರಿಯಾಗಿ ಬಹಿರಂಗ ಪಡಿಸಲಿಲ್ಲ. ಆದರೆ ಕೆಲ ದಿನಗಳ ನಂತರ ಬೈಕ್ ಚಾಸಿಸ್ ನಂಬರ್ ಸಿಕ್ಕಿದ್ದರಿಂದ ಮತ್ತು ಇದಕ್ಕೆ ಪೂರಕ ಹಲವು ದಾಖಲೆಗಳ ಪರಿಶೀಲನೆಯಿಂದ ತಿಳಿದಿದ್ದೇನೆಂದರೆ, ಈ ಬೈಕ್ ಹಿಂದೂ ಸಾಧ್ವಿಯೊಬ್ಬಳಿಗೆ ಸೇರಿದ್ದು ಎಂದು.ಇದಕ್ಕಾಗಿಯೇ ಕಾಯುತ್ತಿದ್ದ ರಣ ಹದ್ದುಗಳು ಬಹಳಷ್ಟಿದ್ದವು.

ಮಾಧ್ಯಮಗಳು ಸುದ್ದಿ ತಯಾರಿ ಮಾಡಿಕೊಳ್ಳುತ್ತಿದ್ದವು. ಇತ್ತ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಏಕಾ ಏಕಿ ಇದಕ್ಕೆ ‘ಕೇಸರಿ ಭಯೋತ್ಪಾದನೆ’ ಎಂದು ನಾಮಕರಣ ಮಾಡಿಯೇ ಬಿಟ್ಟರು. ಇಷ್ಟು ದಿನ ಎಲ್ಲೇ ಭಯೋತ್ಪಾದನೆಯಾದರೂ ‘ಉಗ್ರಗಾಮಿಗಳಿಗೆ ಧರ್ಮವಿಲ್ಲ’ ಎನ್ನುತ್ತಾ ಇದ್ದ ರಾಜಕಾರಣಿಗಳಿಗೆ ಮತ್ತು ಮಾಧ್ಯಮಗಳಿಗೆ ಒಂದು ಹೊಸ ಪದ ಸಿಕ್ಕಿತ್ತು. ಮಾಲೇಗಾಂವ್ ಬ್ಲಾಸ್ಟ್‌ನಲ್ಲಿ ಸಿಮಿ ಉಗ್ರರು ಸಿಕ್ಕ ತಕ್ಷಣವೇ ‘ಸ್ಪೋಟದಲ್ಲಿ ಸತ್ತ ಎಲ್ಲರಿಗೂ ನಾವೆಲ್ಲ ಶ್ರದ್ಧಾಂಜಲಿ ಸಲ್ಲಿಸೋಣ, ಉಗ್ರಗಾಮಿಗಳಿಗೆ ಧರ್ಮವಿಲ್ಲ. ಶಾಂತಿಗಾಗಿ ಎಲ್ಲರೂ ಕ್ಯಾಂಡಲ್ ಹಚ್ಚೋಣ’ ಎಂದು ಮಾಧ್ಯಮಗಳು ಟಿವಿ ಮೇಲೆ ಕ್ಯಾಂಡಲ್ ಚಿತ್ರ ಹಾಕಿ ಕುಳಿತವು. ‘ಕೇಸರಿ ಭಯೋತ್ಪಾದನೆ’ ಎಂಬ ಪದ ಎಲ್ಲಿ ಬಂತೋ ಮೇಣದ ಬತ್ತಿ ಆರಿಸಿ, ಟಿವಿ ತುಂಬ ಕೇಸರಿ. ಕೇಸರಿ ಬಿಟ್ಟರೆ ಸಾಧ್ವಿ. ಇಷ್ಟೇ. ಪ್ರಪಂಚ ಹಿಂದೂಗಳನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸುವ ಪಣತೊಟ್ಟಿದ್ದರು.ಇದೇ ಕಾರಣಕ್ಕೆ ಭಾರತವೇ ನೆನಪಿಟ್ಟುಕೊಳ್ಳುವಂಥ ಭಯೋತ್ಪಾದಕ ಕೃತ್ಯ ಎಂದಿದ್ದು .Maharashtra Court of Organised Crimne Act(MCOCA) ) ತನ್ನ ಮೊದಲ ತನಿಖೆಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ತನ್ನ ಎಲ್‌ಎಮ್‌ಎಲ್ ಬೈಕ್ ಮಾರಿದ್ದಾರೆ ಎಂದು ಹೇಳಿದೆ. ಬೈಕ್ ಮಾರಿ ವರ್ಷಗಳ ನಂತರ ಸ್ಪೋಟ ವಾಗಿದೆ ಎಂದಿದೆ ಎಂಬುದನ್ನೂ ತಿಳಿಯದೇ ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಉಗ್ರ ನಿಗ್ರಹ ದಳದ ಅಧಿಕಾರಿಯೊಬ್ಬರ ಮೇಲೆ ಸಾಧ್ವಿಯನ್ನು ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಒತ್ತಡ ಹೇರಲಾರಂಭಿಸಿದರು. ಕೇಸರಿ ಭಯೋತ್ಪಾದನೆಯೊಂದರಿಂದಲೇ ಮುಂದಿನ 2013ರ ಲೋಕಸಭಾ ಚುನಾವಣೆಯಲ್ಲಿ ವೋಟ್ ಗಿಟ್ಟಿಸಿಕೊಳ್ಳುವ ತಂತ್ರ ಅದು. ಇವರ ಮಾತು ಕೇಳಿ ಸಾಧ್ವಿಗೆ ನಿತ್ಯವೂ ಬೂಟು ಕಾಲಲ್ಲಿ ಒದ್ದು ತನಿಖೆ ಶುರುವಾಗುತ್ತಿತ್ತು. ಸಾಧ್ವಿ ಶಿಷ್ಯನನ್ನೇ ಅವರ ಮುಂದೆ ಬೆತ್ತಲಾಗಿ ನಿಲ್ಲಿಸಿ ಅವನಿಗೆ ಛಡಿಯೇಟು ಕೊಡುತ್ತಾ, ಅವನಿಂದ ಸಾಧ್ವಿಗೆ ಛಡಿಯೇಟು ಕೊಡುವಲ್ಲಿಗೆ ಒಂದು ದಿನದ ತನಿಖೆ ಮುಗಿಯುತ್ತಿತ್ತು. ನಿತ್ಯವೂ ಇಂಥ ಥರಾವರಿ ಶಿಕ್ಷೆ ಕೊಡುತ್ತಿದ್ದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ. ತಾಜ್ ಮೇಲೆ ಕಸಬ್ ತಂಡ ದಾಳಿ ನಡೆಸಿದಾಗ, ಉಗ್ರರ ಗುಂಡಿಗೆ ಬಲಿಯಾದ ಅದೇ ಹೇಮಂತ್ ಕರ್ಕರೆ. ಇದೇ ಮಾಲೇಗಾಂವ್ ಬ್ಲಾಸ್ಟ್‌ನಲ್ಲಿ ಸೇನೆಯಲ್ಲಿ ನಿಷ್ಠಾವಂತರಾಗಿದ್ದ ಕರ್ನಲ್ ಪುರೋಹಿತ್‌ರನ್ನೂ ವಶಕ್ಕೆ ಪಡೆಯಲಾಗಿತ್ತು.

ಹೇಮಂತ್ ಕರ್ಕರೆ ಪುರೋಹಿತ್‌ಗೆ ಥರ್ಡ್ ಗ್ರೇಡ್‌ಗಿಂತಲೂ ಯಾವ್ಯಾವ ಕೆಳಮಟ್ಟದ ಹಿಂಸೆ ಕೊಡುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಕರ್ನಲ್ ಪುರೋಹಿತ್‌ರ ಹೆಂಡತಿಯೇ ಇದ್ದಾರೆ. ಪುರೋಹಿತ್ ಹೆಂಡತಿ ಮಾತಾಡಿದ ವೀಡಿಯೋ ನೋಡಿದ ಬಳಿಕವೇ ಜನರಿಗೆ ಕರ್ಕರೆಯ ಅಸಲಿ ಮುಖ ತಿಳಿದಿದ್ದು.ಸಾಧ್ವಿಯೇ ಹೇಳಿಕೆ ನೀಡಿರುವಂತೆ ಆಕೆಗೆ ನಿತ್ಯವೂ ನೀಲಿ ಚಲನಚಿತ್ರಗಳನ್ನು ತೋರಿಸಿ, ಹೊಡೆದು ತನಿಖೆ ಮಾಡುತ್ತಿದ್ದರು. ಎಷ್ಟೋ ದಿನಗಳವರೆಗೆ ಊಟವೂ ಇಲ್ಲ. ಮಲ ವಿಸರ್ಜನೆಗೂ ಬಿಡುತ್ತಿರಲಿಲ್ಲ. ಅಲ್ಲೇ ಮಾಡಿಕೊಳ್ಳಬೇಕಿತ್ತು. ಇವೆಲ್ಲ ಕೇವಲ ಸಾಧ್ವಿಯ ಮೇಲೆ ಅನುಮಾನ ಬಂದಿದ್ದರಿಂದ ಮಾಡುತ್ತಿದ್ದ ತನಿಖೆಯ ಮುಖ. ಇನ್ನೂ ಚಾರ್ಜ್ ಶೀಟ್ ತಯಾರಾಗಿರಲಿಲ್ಲ.ಕಾನೂನನ್ನು ಅಕ್ಷರಶಃ ಗಾಳಿಗೆ ತೂರಿ ತನಿಖೆ ನಡೆಸುತ್ತಿದ್ದರು. ಭಾರತದಲ್ಲಿ ಕಾನೂನಿನಲ್ಲಿ ಎಲ್ಲರೂ ಸಮಾನರು. ಆದರೆ ಕೆಲವರು ಹೆಚ್ಚು ಸಮಾನರು ಎಂಬ ಪ್ರಸಿದ್ಧ ಇಂಗ್ಲಿಷ್ ವಾಕ್ಯ ಇವರಿಗೆ ಅನ್ವಯವಾಗುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿ ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಮತ್ತು 2008ರ ಬೆಂಗಳೂರು ಸರಣಿ ಸ್ಪೋಟ ದ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಮದನಿಯ ಮಗಳ ಮದುವೆಯನ್ನು ನೋಡಲು ಜಾಮೀನು ಕೊಟ್ಟ ಕೋರ್ಟ್, ಸಾಧ್ವಿ ಪ್ರಜ್ಞಾಳ ತಂದೆ ನಿಧನರಾದಾಗ ಕೊನೇ ಬಾರಿ ಅಪ್ಪನ ಮುಖ ನೋಡಬೇಕು ಎಂದು ಹೆಣ್ಣುಮಗಳೊಬ್ಬಳು ಕೇಳಿಕೊಂಡರೂ ಬಿಡಲಿಲ್ಲ. ಮದನಿಯಂಥ ಆರೋಪಿತ ಉಗ್ರನ ಮಗಳ ಮದುವೆಯೇ ದೊಡ್ಡದು ಎನಿಸಿದ್ದು ವಿಪರ್ಯಾಸ. ಯಾವುದೂ ಬೇಡ, ಸ್ವತಃ ಪ್ರಜ್ಞಾ ಸಿಂಗ್ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದಳು. ಆಕೆಯ ಚಿಕಿತ್ಸೆಗೂ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಸಹಕರಿಸಲಿಲ್ಲ. ಇದು ಕಾಂಗ್ರೆಸ್ ಆಡಳಿತದಲ್ಲಿದ್ದ ಪೊಲೀಸರು ಹೇಗೆ ವರ್ತಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ.ನಾನು ಈ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಿಬ್ಬರನ್ನೂ ಕೇಳಿದಾಗ ಅವರು ನನಗೊಂದು ಅಚ್ಚರಿಯ ಮಾಹಿತಿ ಕೊಟ್ಟರು. ‘ಸಂಸತ್ ದಾಳಿಯ ರೂವಾರಿ ಅ-ಲ್‌ನನ್ನು ಗಲ್ಲಿಗೇರಿಸಬೇಡಿ, ಕ್ಷಮಾದಾನ ನೀಡಿ’ ಎಂದು ಸರಕಾರಕ್ಕೆ ಪತ್ರ ಬರೆದಿದ್ದ ಅದೇ ಕಾಂಗ್ರೆಸ್ ರಾಜಕಾರಣಿಗಳು ‘ಸಾಧ್ವಿ ಪ್ರಜ್ಞಾಳನ್ನು ಗಲ್ಲಿಗೇರಿಸಿ, ಹಿಂದೂ ಉಗ್ರಗಾಮಿಗಳನ್ನು ಮಟ್ಟ ಹಾಕುವ ಅನಿವಾರ್ಯವಿದೆ’ ಎಂದು ಪತ್ರ ಬರೆದಿದ್ದಾರೆ ಎಂದರು.ಇನ್ನು ಸೀವಾದದ ಪ್ರಶ್ನೆ ಏಳುತ್ತದೆ. ಎಲ್ಲೋ ರಷ್ ಇರುವ ಬಸ್ಸಿನಲ್ಲಿ ಹೋಗುವಾಗ ಅಮಾಯಕ ಗಂಡಸೊಬ್ಬನ ಕೈ ಹೆಂಗಸರ ಕೈಗೆ ತಾಕಿದರೆ ಸಾಕು, ದೊಡ್ಡ ರಾದ್ಧಾಂತ ಮಾಡಿ, ಆ ಗಂಡಸನ್ನು ಬಸ್ಸಲ್ಲೇ ಎಲ್ಲರೂ ಹೊಡೆಯುವಂತೆ ಮಾಡಿ, ಚೂರು ಯಡವಟ್ಟಾಗಿ ಕೈ ತಾಕುವ ಬದಲು ಇನ್ನೆಲ್ಲೋ ತಾಕಿದರೆ ದೊಡ್ಡ ರಸ್ತೆಗಿಳಿದು ಪ್ರತಿಭಟಿಸುವ ಯಾವ ಮಹಿಳಾ ಸಂಘಗಳಿಗೂ ಖಾವಿಧಾರಿಯೊಬ್ಬಳ ವರ್ಷಗಳ ರೋಧನ, ಕೇಳಲೇ ಇಲ್ಲವಲ್ಲ! ಸರಿ, ವಾದ ಮಾಡುವುದಕ್ಕೆಂದು ಸಾಧ್ವಿ ಪ್ರಜ್ಞಾಳೇ ಬಾಂಬ್ ಇಟ್ಟಿದ್ದಳು ಎಂದು ಒಪ್ಪೋಣ. ಆದರೆ ಬಾಂಬ್ ಇಟ್ಟವರಿಗೆ ಕೊಡುವ ಶಿಕ್ಷೆ ಅವರು ಕೊಟ್ಟಿದ್ದಾರಾ? ಅದು ವರ್ಣಿಸಿದರೆ ಬಹುಶಃ ಲೇಖನ ಓದುತ್ತಿರುವವರಿಗೆ ಅಹಸ್ಯವಾಗುವಂತಿದೆ. ಆಗಲೂ ಮಹಿಳಾಮಣಿಗಳಿಗೆ ಹೋರಾಟ ಮಾಡಬೇಕೆಂದೆನಿಸಲಿಲ್ಲ.

ಮಾಲೇಗಾಂವ್ ಬ್ಲಾಸ್ಟ್ ಆಗಿ 2 ವರ್ಷಗಳ ನಂತರವಷ್ಟೇ, ಇಶ್ರತ್ ಜಹಾನ್‌ಳನ್ನು ಗುಜರಾತ್ ಪೊಲೀಸರು ಎನ್‌ಕೌಂಟರ್ ಮಾಡಿದರು. ಆಗ ಅಡಗಿ ಕುಳಿತಿದ್ದ ‘ಓ’ರಾಟಗಾರರು ಎದ್ದು ಬಂದು ‘ಇಶ್ರತ್, ಭಾರತ್ ಕಿ ಬೇಟಿ’ ಎಂದೆಲ್ಲ ಬಿರುದು ಕೊಟ್ಟು ಮೆರೆಸಿದರು. ಮೋದಿಗೆ ಶಿಕ್ಷೆ ಆಗಲೇ ಬೇಕೆಂದು ಬೀದಿಗಿಳಿದರು. ಪ್ರಾಣ ತೆಗೆಯಲು ಭಯೋತ್ಪಾದಕಿಯ ಹೆಸರಲ್ಲಿ ಆಂಬುಲೆನ್ಸ್ ಸೇವೆಯೂ ಶುರುವಾಯಿತು. ಆದರೆ ತನ್ನನ್ನು ಕಾಪಾಡಿ ಎಂದು ಕೂಗಿಕೊಳ್ಳುತ್ತಿರುವ ಪ್ರಜ್ಞಾಳತ್ತ ತಿರುಗಿಯೂ ನೋಡಲಿಲ್ಲ. ನಿತ್ಯವೂ ಕಣ್ಣು ಮುಚ್ಚಿ ತಾನು ಮಾಡದ ತಪ್ಪಿಗೆ ಚಡಿಯೇಟು ತಿನ್ನುತ್ತಲೇ ಇದ್ದಳು ಆಕೆ.ಈಗ ಸಾಧ್ವಿ ಕಾಯುತ್ತಿದ್ದ ಆ ದಿನ ಬಂದಿದೆ. ನ್ಯಾಯಾಲಯ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಕರ್ನಲ್ ಪುರೋಹಿತ್ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಟ್ಟಿದೆ. ಮಾನವೇನೋ ಹೋಯಿತು, ಇನ್ನು ಆರೋಗ್ಯವನ್ನಾದರೂ ಕಾಪಾಡಿಕೊಳ್ಳಬಹುದು. ಅಲ್ಲಿಗೆ ಮಾಧ್ಯಮಗಳಿಗೆ ಈಗ ‘ಕೇಸರಿ ಭಯೋತ್ಪಾದನೆ’ ಎಂಬ ಪದ ಉಪಯೋಗಿಸಲು ಕಡಿವಾಣ ಬಿದ್ದಿದೆ. ಈಗ ಅವೆಲ್ಲ ಊಳಿಡುತ್ತಿವೆ.ಸಾಧ್ವಿಯ ಬಗ್ಗೆ ಈಗ ಈ ಸುದ್ದಿ ಕೇಳಿದ ನಂತರ ಮಾಧ್ಯಮಗಳು ಹೇಗೆ ವರ್ತಿಸುತ್ತಿದ್ದವು ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ಕೊಡುತ್ತೇನೆ ಕೇಳಿ. ಕೆಲವು ದಿನಗಳ ಹಿಂದೆ 2006ರ ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿಬಿದ್ದ 8 ಜನರನ್ನು ಕೋರ್ಟ್ ಖುಲಾಸೆಗೊಳಿಸಿತು. ಆದರೆ, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಅವಾಚ್ಯ ಶಬ್ದವಾಡಿ, ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಗೊತ್ತಾದಾಗ ಟ್ವಿಟ್ಟರ್ ಅಕೌಂಟ್ ಡಿಲೀಟ್ ಮಾಡಿಕೊಂಡು ಓಡಿ ಹೋದ ಇಂಗ್ಲಿಷ್ ಪತ್ರಕರ್ತನೊಬ್ಬ ‘ಅಯ್ಯೋ ಆ 8 ಜನರು 10 ವರ್ಷ ಜೈಲಿನಲ್ಲಿದ್ದರಲ್ಲ.. ಅವರಿಗೆ ನ್ಯಾಯ ಕೊಡಿಸುವವರ‍್ಯಾರು? ಯಾಕೆ ಯಾರೂ ಮಾತನಾಡುತ್ತಿಲ್ಲ?’ ಎಂದು ಒಬ್ಬನೇ ಎದೆ ಬಡಿದುಕೊಂಡ. ಸಾಮಾನ್ಯ ಜನರು ಯಾರೂ ಇವನಿಗೆ ಕ್ಯಾರೇ ಎನ್ನಲಿಲ್ಲ. ಹೆಚ್ಚೆಂದರೆ ಅವನ ಹೆಂಡತಿಯೆಂಬ ಮತ್ತೊಂದು ಪತ್ರಕರ್ತೆ ಬೆಂಬಲ ನೀಡಿದಳು. ಆದರೆ ಈಗ ಸಾಧ್ವಿ ಪ್ರಜ್ಞಾ ಸಿಂಗ್‌ರ ಹೆಸರನ್ನು ಚಾರ್ಜ್‌ಶೀಟ್‌ನಿಂದ ಕೈಬಿಟ್ಟಾಗ, ಇದೇ ಪತ್ರಕರ್ತ ‘ಸರಕಾರ ಬದಲಾಗುತ್ತದೆ, ವಿಚಾರಣೆಯ ಶೈಲಿಯೂ ಬದಲಾಗುತ್ತದೆ. ಇದು ಯಾವಾಗಲೂ ನಡೆಯುತ್ತಲೇ ಇದೆ: ನಮ್ಮದು ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೋ ಅಥವಾ ಬನಾನಾ ರಿಪಬ್ಲಿಕ್ಕೋ?’ ಎಂದು ಪ್ರಶ್ನಿಸಿದ್ದಾನೆ.ಆ ಪತ್ರಕರ್ತ ಹೇಳುವ ಹಾಗೆ ನಾವು ಸರಕಾರಕ್ಕೆ ಮತ್ತು ಮೋದಿಗೆ ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು. ಇದಕ್ಕೆ ಕಾರಣ, ಮೋದಿ ತಮಗೆ ಬೇಕಂತೆ ಕೋರ್ಟ್ ತೀರ್ಪು ಕೊಡುವಂತೆ ಮಾಡಿದರು ಎನ್ನುವ ಕಾರಣಕ್ಕಲ್ಲ. ಅದು ಸಾಧ್ಯವೂ ಇಲ್ಲ. ಬದಲಿಗೆ, ಇಡೀ ಪ್ರಕರಣವನ್ನೇ ಮಕಾಡೆ ಮಲಗಿಸಲು ತಾಕತ್ತಿರುವ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತಂದು, ಸಾಧ್ವಿಗೆ ಹಿಂಸಿಸದೇ ಸ್ವತಂತ್ರವಾಗಿ ತನಿಖೆ ನಡೆಯುವಂತೆ ಮಾಡಿದ್ದಕ್ಕೆ. ಇವರು ಕೊಟ್ಟ ವರದಿಯ ಮೇಲೆ ಅಲ್ಲವೇ ಕೋರ್ಟ್ ವಿಚಾರಣೆ ನಡೆಸುವುದು?ಭಾರತದ ಮೇಲೆ ಪ್ರತಿ ಬಾರಿ ಇಸ್ಲಾಮಿಕ್ ಉಗ್ರರಿಂದ ದಾಳಿ ನಡೆದಾಗಲೂ ಉಗ್ರಗಾಮಿಗಳಿಗೆ ಧರ್ಮವಿಲ್ಲ ಎನ್ನುತ್ತಾ ರಾಜಕೀಯ ತೆವಲುಗಳಿಗಾಗಿ ‘ಕೇಸರಿ ಭಯೋತ್ಪಾದನೆ’ ಎಂಬ ಪದ ಹುಟ್ಟಿತಷ್ಟೇ. ಮತ್ತೊಮ್ಮೆ ‘ಉಗ್ರಗಾಮಿಗಳಿಗೆ ಧರ್ಮವಿಲ್ಲ’ದವರೇ ಈ ಕೃತ್ಯವೆಸಗಿದ್ದಾರೆ ಎಂದು ತೋರಿಸಿಕೊಟ್ಟದ್ದಕ್ಕೂ ಥ್ಯಾಂಕ್ಸ್ ಹೇಳಲೇಬೇಕು.


ಬೇರೆ ಯಾವ ಸರಕಾರವೂ ಎರಡು ವರ್ಷದಲ್ಲಿ ಇಷ್ಟು ಸಾಧಿಸಿಲ್ಲ

$
0
0

rammadhav-k01F--621x414@LiveMint

ರಾಮ್ ಮಾಧವ್. ನರೇಂದ್ರ ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆರ್ಎಸ್ ಎಸ್ನಿಂದ ಬಿಜೆಪಿಗೆ ನಿಯೋಜಿತರಾದವರು. ಜನರಲ್ ಸೆಕ್ರೇಟರಿ ಆಗಿರುವ ಇವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅಮಲಾಪುರಂನಲ್ಲಿ ಜನನ, ಇಲ್ಲೇ ಮೈಸೂರಿನಲ್ಲಿ ವಿದ್ಯಾಭ್ಯಾಸ. ಕಾಶ್ಮೀರದಲ್ಲಿ ಪಿಡಿಪಿ ಸರಕಾರದ ಜತೆ ಸ್ನೇಹ ಸಂಬಂಧ ಚಾಚುವುದಕ್ಕೆ ಮುಖ್ಯ ಕಾರಣ ರಾಮ್ ಮಾಧವ್ ಓಡಾಟ ಮತ್ತು ಮಾತುಕತೆ. ಇನ್ನು ಎನ್ಆರ್ಐ ರ್ಯಾ ಲಿಗಳು ಮಾಡುವುದಿರಲಿ ಅಸ್ಸಾಮ್ನಲ್ಲಿ ಬಿಜೆಪಿ ಗೆಲವಿಗೆ ಕೆಲಸ ಮಾಡುವುದಿರಲಿ, ಎಲ್ಲದರ ಹಿಂದೆಯೂ ರಾಮ್ ಮಾಧವ್ ಇರುವಿಕೆಯ ಗುರುತು ಕಾಣಸಿಗುತ್ತದೆ. ರಾಮ್ ಮಾಧವ್ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

  • ಅಸ್ಸಾಮ್ ನಲ್ಲಿ ಬಿಜೆಪಿ ಗೆಲ್ಲುವುದರ ಹಿಂದೆ ನೀವೇ ಇದ್ದೀರಿ ಎಂದು ಹೊರಗಡೆ ಮಾತುಗಳು ಕೇಳಿ ಬರುತ್ತಿದೆ?

ಒಬ್ಬರಿಂದ ಅಸ್ಸಾಮ್ನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗದು. ಅಸ್ಸಾಮ್ ನಮಗೆ ಬಹಳ ಕಷ್ಟದ ರಾಜ್ಯವಾಗಿತ್ತು. ಅಷ್ಟು ಸುಲಭವಾಗಿ ಕೈಗೆಟುಕುತ್ತಿರಲಿಲ್ಲ. ನಮ್ಮ ಬಳಿ ಅಲ್ಲಿ ಕೇವಲ 5 ಶಾಸಕರಿದ್ದರು. ಇಷ್ಟೇ ಇಟ್ಟು ಕೊಂಡು ಸರಕಾರ ನಡೆಸುತ್ತೇವೆ ಎನ್ನುವುದು ಆಗದಿರುವ ಮಾತಾಗಿತ್ತು. ನಮ್ಮ ಒಂದೇ ಗುರಿ ಇದ್ದದ್ದು ಪ್ರಧಾನಿ ಮೋದಿಯ ಖ್ಯಾತಿ ಹೆಚ್ಚಬೇಕು. ಇದೊಂದು ಬಿಟ್ಟು ನಮ್ಮ ತಲೆಯಲ್ಲಿ ಬೇರೇನೂ ಇರಲಿಲ್ಲ. ಸರಕಾರ ರಚಿಸುವ ಒಂದೇ ಒಂದು ಗುರಿ ಇಟ್ಟುಕೊಂಡು ನಾವು ಒಂದೂವರೆ ವರ್ಷ ಹಗಲು ರಾತ್ರಿಯೆನ್ನದೇ ಕೆಲಸ ಮಾಡಿದ್ದೇವೆ.

  • ಅಸ್ಸಾಮ್ ಎಂಬುದು ನೀವು ಈಶಾನ್ಯ ಭಾರತಕ್ಕೆ ಕಾಲಿಡುವುದಕ್ಕೆ ಒಂದು ಮುಖ್ಯದ್ವಾರ ಎಂದು ಹೇಳಬಹುದೇ?

ಈಶಾನ್ಯ ಭಾರತ ಅಭಿವೃದ್ಧಿ ಕಾಣದೇ ವರ್ಷಗಳೇ ಕಳೆದಿವೆ. ಇದಕ್ಕೇ ನಮಗೆ ಅಸ್ಸಾಮ್ ಬಹಳ ಮುಖ್ಯವಾಗಿರುವುದು. ಇಲ್ಲಿ ಅಧಿಕಾರಕ್ಕೆ ಬರುವುದರಿಂದ ಜನರಿಗೇ ಹೆಚ್ಚು ಲಾಭ. ಅಲ್ಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಉದಾಹರಣೆಗೆ ಅಲ್ಲಿನ ಜನರನ್ನು ಕಾಡುತ್ತಿರುವ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಅನಕ್ಷರತೆ, ಪ್ರತ್ಯೇಕತಾವಾದ, ಜನಾಂಗೀಯ ನಿಂದನೆ ಇಂಥದ್ದೆಲ್ಲ ಅಲ್ಲಿ ಬಹಳ ಇದೆ. ಇದರ ಮೇಲೆ ಕೆಲಸ ಮಾಡಿ ಬದಲಾವಣೆ ತಂದರೆ ಅಭಿವೃದ್ಧಿಯ ಹೆಸರೂ ಕೇಳಿರದ ಜನತೆಗೆ ನಮ್ಮ ಮೇಲೆ ವಿಶ್ವಾಸ ಮೂಡುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಇದು ನಮ್ಮ ಭಾರತಕ್ಕೆ ಮತ್ತು ಆಗ್ನೇಯ ಏಷ್ಯಾಕ್ಕೆ ಕೊಂಡಿಯ ಹಾಗಿದೆ. ಇಲ್ಲಿ ನಾವು ಅಭಿವೃದ್ಧಿ ತಂದರೆ ಸಿಂಗಾಪುರ ಮತ್ತು ಜಪಾನ್ ತನಕವೂ ಗೋಚರಿಸುತ್ತದೆ. ಇದು ನಮಗೊಂದು ಸವಾಲೇ ಆಗಿದೆ. ಕಾಶ್ಮೀರದ ರೀತಿಯಲ್ಲೇ ಇಲ್ಲೂ ದೇಶ ವಿರೋಧಿಗಳು ಇದ್ದಾರೆ. ತಮ್ಮ ಚಟುವಟಿಕೆಗಳನ್ನು ನಡೆಸುತ್ತಲೇ ಇರುತ್ತಾರೆ. ಇಂಥ ಪ್ರದೇಶವನ್ನು ರಕ್ಷಿಸುವುದು ಕೇವಲ ಆರ್ಎಸ್ಎಸ್ ಅಷ್ಟೇ ಅಲ್ಲ, ನಮ್ಮ ಕರ್ತವ್ಯ ಸಹ. ಒಟ್ಟಾರೆ ನಮಗೆ ದೇಶದ ಭದ್ರತೆ ಮುಖ್ಯ. ನಾವು ಇಂದು ಜಮ್ಮು ಕಾಶ್ಮೀರ ಮತ್ತು ಅಸ್ಸಾಮ್ನಲ್ಲಿ ಅಧಿಕಾರದಲ್ಲಿದ್ದೇವೆ. ಇದರಿಂದ ಹೊರಗೆ ಕೊಡುವ ಸಂದೇಶವೆಂದರೆ ನಾವೆಲ್ಲರೂ ಒಂದೇ ಎಂದು. ಸತ್ಯ ಏನೆಂದರೆ ನಮ್ಮದು ಒಂದು ದೇಶ, ನಾವೆಲ್ಲರೂ ಒಂದೇ.

  • ನೀವು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೀರಿ, ಆದರೆ ನಿಮ್ಮನ್ನು ಟೀಕಿಸುವವರು ದಲಿತರಲ್ಲಿ ಅಟ್ರಾಸಿಟಿ ಮೂಡಿಸುತ್ತಿದ್ದಾರಲ್ಲ?

ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ನಮ್ಮ ಸರಕಾರ ದಲಿತರಿಗಾಗಿ ಮತ್ತು ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಏಳ್ಗೆಗಾಗಿ ಸಾಕಷ್ಟು ಶ್ರಮಿಸಿದ್ದೇವೆ. ಟೀಕೆಗಳು ಸಾಕಷ್ಟು ಬರುತ್ತಿರುತ್ತವೆ, ಅವುಗಳಿಗೆ ಯಾವುದಕ್ಕೂ ಆಧಾರವೇ ಇಲ್ಲ.

ಕೆಲ ರಾಜ್ಯಗಳಲ್ಲಿರುವ ಗೋಮಾಂಸ ನಿಷೇಧದ ಬಗ್ಗೆ ನಿಮ್ಮ ಸಮಜಾಯಿಷಿಯೇನು? ಮುಸ್ಲಿಮರಲ್ಲಿ ಅಭದ್ರತೆ ಮತ್ತು ಆತಂಕದ ವಾತಾವರಣವಿದೆ ಮತ್ತು ಬಂಧಿಯಾಗಿದ್ದೇವೆಂಬ ಭಾವನೆ ಇದೆಯಲ್ಲ, ಅದರ ಬಗ್ಗೆ ಏನು ಹೇಳುತ್ತೀರ?

ಇಲ್ಲ, ಮುಸ್ಲಿಮರಲ್ಲಿ ಅಂಥ ಭಯ/ಆತಂಕ ಯಾವುದು ಇಲ್ಲವೇ ಇಲ್ಲ. ಅದು ಕೆಲ ಜನರಿಂದ ಮುಸಲ್ಮಾನರಲ್ಲಿ ಮೂಡಿಸಿದ ತಪ್ಪು ನಂಬಿಕೆಯಷ್ಟೇ. ಒಮ್ಮೆ ಪತ್ರಕರ್ತರನ್ನು ಹತ್ಯೆಗೈದರೆ ಈ ದೇಶದಲ್ಲಿ ಎಲ್ಲ ಪತ್ರಕರ್ತರಿಗೂ ಅಸುರಕ್ಷತೆ, ಅಭದ್ರತೆ ಇದೆ ಎಂದು ಅರ್ಥವಾ? ಹಾಗೆಯೇ ಒಂದು ಸಮುದಾಯ ಏನೂ ಭಾರೀ ಸಂಕಷ್ಟದಲ್ಲಿದೆ ಎಂದು ಹೇಳುವುದು ಸರಿಯಲ್ಲ. ನಮ್ಮ ಸರಕಾರ ಇಡೀ ದೇಶದ ಜನತೆಯ ಭದ್ರತೆಗಾಗಿ ನಿಂತಿದೆ. ಯಾವುದೋ ಒಂದು ಧರ್ಮದ ಪರವಾಗಿ ನಿಂತಿಲ್ಲ. ನಾವು ಒಂದು ಭರವಸೆ ಕೊಡುತ್ತೇವೆ, ಯಾರು ಸಹ ಯಾವುದೋ ಒಂದು ಧರ್ಮವನ್ನು ಪಾಲಿಸುವುದರಿಂದ ಅವರಿಗೆ ಅಭದ್ರತೆ ಕಾಡುವ ಹಾಗೆ ನಾವು ಮಾಡುವುದಿಲ್ಲ.

  • ಗೋಮಾಂಸ ಸೇವನೆಯ ಬಗ್ಗೆ ಆದಿ ಗೋದ್ರೆಜ್ರ ಹೇಳಿಕೆಗಳ ಬಗ್ಗೆ ನೀವೇನು ಹೇಳುತ್ತೀರಾ?

ಕೆಲ ರಾಜ್ಯಗಳಲ್ಲಿ ಅದರದ್ದೇ ಆದ ಕಾನೂನುಗಳಿರುತ್ತವೆ. ಆ ಕಾನೂನುಗಳನ್ನು ಹಿಂದಿನ ಸರಕಾರ ಮಾಡಿ ಹೋಗಿರುತ್ತವೆ. ಸುಮಾರು 22-23 ರಾಜ್ಯಗಳಲ್ಲಿ ಗೋಮಾಂಸ ನಿಷೇಧವಿದೆ. ಆದರೆ, ಆ ಅಷ್ಟೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರಲೇ ಇಲ್ಲ. ಆದರೆ, ಅವೆಲ್ಲ ಹೇಗೆ ಜಾರಿಯಾಯ್ತು? ಸಂವಿಧಾನದಲ್ಲೂ ಸಹ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗುವತ್ತ ಹೆಜ್ಜೆಯನ್ನಿಡಬೇಕೆಂದಿದೆ. ಗೋಮಾಂಸ ರಫ್ತು ಮಾಡುವುದರಲ್ಲಿ ನಮ್ಮ ದೇಶವೆ ಮೊದಲ ಸ್ಥಾನದಲ್ಲಿದೆ.

ಸಣ್ಣ ಸಣ್ಣ ಭೂಮಿಯುಳ್ಳ ರೈತರಿಗೆ ಈ ಜಾನುವಾರಗಳೇ ಕೃಷಿಗೆ ಅತ್ಯಂತ ಸಹಾಯಕಾರಿ. ಕೃಷಿ ಕೆಲಸಗಳಿಗೆ ಉಪಯೋಗವಾಗುವಂಥ ಮತ್ತು ರೈತರಿಗೆ ನೆರವಾಗುವಂಥ ಜಾನುವಾರುಗಳ ಕೊರತೆ ಕಾಣಬಾರದು ಎನ್ನುವ ಕಾರಣಕ್ಕಾಗಿಯೇ ಆರೋಗ್ಯವಂತ ಹಸುಗಳ ಹತ್ಯೆಯನ್ನು ನಿಲ್ಲಿಸಬೇಕೆಂಬುದು ದಶಕಗಳಿಂದ ಜಾರಿಯಲ್ಲಿದೆ.

  • ಆದರೆ ಮುಸಲ್ಮಾನರಿಗೆ ಗೋಮಾಂಸ ನಿಷೇಧ ಅವರ ಭಾವನೆಗಳಿಗೆ ಧಕ್ಕೆ ತಂದ ಹಾಗಾಗುವುದಿಲ್ಲವೇ? ಅವರ ನಂಬಿಕೆ, ವಿಶ್ವಾಸ ಗಳಿಸಲು ಕೇಂದ್ರ ಸರಕಾರ ಏನಾದರೂ ಮಾಡಬೇಕಲ್ಲವೇ?

ಎಲ್ಲದೂ ಏಕೆ ಹಿಂದೂ-ಮುಸ್ಲಿಮ್ ಬಗ್ಗೆ ಪ್ರಶ್ನೆಯಾಗುತ್ತವೆ? ಕೇವಲ ಮುಸ್ಲಿಮರು ಮಾತ್ರ ಗೋಮಾಂಸ ತಿನ್ನುತ್ತಾರೆಯೇ? ಅಥವಾ ಎಲ್ಲ ಮುಸಲ್ಮಾನರು ದಿನಾಲೂ ಗೋಮಾಂಸ ತಿನ್ನುತ್ತಾರೆಯೇ? ಈ ಎರಡೂ ಊಹೆಗಳು ತಪ್ಪು. ಗೋಮಾಂಸ ಭಕ್ಷಣೆ ಅವರ ಜೀವನಶೈಲಿಯಷ್ಟೇ. ಮತ್ತೊಂದು ನಮ್ಮ ತಲೆಯಲ್ಲಿ ಇಟ್ಟುಕೊಳ್ಳಬೇಕಾದ ವಿಚಾರವೇನೆಂದರೆ, ನಮಗೆ ದೇಶದ ಸಂಪೂರ್ಣ ಸೌಖ್ಯಕ್ಕೇ ಆದ್ಯತೆ. ಈ ವಿಷಯವನ್ನು ಒಂದು ಧರ್ಮಕ್ಕೆ ಥಳಕು ಹಾಕುವುದು ಅಷ್ಟು ಸರಿಯಲ್ಲ.

  • ನೆಹರೂ ಹೆಸರನ್ನು ಶಾಲೆಯ ಪಠ್ಯಪುಸ್ತಕದಿಂದ ಅಳಿಸಿ ಹಾಕಲಾಗಿದೆ. ಅವರೇನು ದೇಶದ್ರೋಹಿಯಾಗಿದ್ದರೇ? ಇದು ಮತ್ತೊಮ್ಮೆ ನಮ್ಮ ಮೇಲೆ ಹೇರಲಾಗಿರುವ ಕುತಂತ್ರವಷ್ಟೇ. ಅದನ್ನು ಬಿಡಿ, ದಶಕಗಳ ಕಾಲ ಸುಭಾಷ್ ಚಂದ್ರ ಬೋಸ್ ಪಠ್ಯಪುಸ್ತಕದಲ್ಲಿ ಕಾಣಲೇ ಇಲ್ಲ. ಸರ್ದಾರ್ ಪಟೇಲರ ಒಂದು ಉಲ್ಲೇಖ ಇಲ್ಲ. ದೇಶಕ್ಕಾಗಿ ಶ್ರಮಿಸಿದ ಎಷ್ಟೋ ನಾಯಕರ ಹೆಸರೇ ಇರಲಿಲ್ಲ. ನಾವು ಉಲ್ಲೇಖಿಸದ ಒಬ್ಬ ನಾಯಕ ನಮ್ಮ ದೇಶದ ಮೊದಲ ಪ್ರಧಾನಿಯಾಗಿದ್ದರೆಂಬುದಕ್ಕೆ ಇಷ್ಟೆಲ್ಲ ಅತ್ತು ಕರೆದು ಮಾಡುತ್ತಿದ್ದಾರೆ. ಈ ಥರ ಸುದ್ದಿಗಳು ಒಂದು ಶುದ್ಧ ನಾನ್ ಸೆನ್ಸ್.
  • ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ದಲಿತರನ್ನು ಬಿಜೆಪಿ ಹೊಸ ವೋಟ್ ಬ್ಯಾಂಕ್ ಆಗಿ ನೋಡುತ್ತಿದೆಯೇ?

ಉತ್ತರಪ್ರದೇಶ ನಮಗೆ ಬಹುಮುಖ್ಯವಾದ ಚುನಾವಣೆಯೇನೋ ಹೌದು. ಆದರೆ, ಜಾತಿ ಆಧಾರಿತ ಮತಗಳ ಬಗ್ಗೆ ನಾನು ಮಾತಾಡುವುದಕ್ಕೆ ಇಷ್ಟವಿಲ್ಲ. ನಮ್ಮ ಮುಖಂಡರಿಗೆ ಏನು ಮಾಡಬೇಕೆನ್ನುವುದರ ಸ್ಪಷ್ಟ ಅರಿವಿದೆ. ಒಂದಂತೂ ಸತ್ಯ. ನಮಗೆ ಎಲ್ಲವೂ ಮುಖ್ಯ, ಹಾಗೆಯೇ ದಲಿತರೂ. ಪ್ರತೀ ಬಾರಿಯೂ ದಲಿತರು ಮತ್ತು ಇತರ ಸಮುದಾಯದವರ ನಂಬಿಕೆ ಗಳಿಸಲು ಕೆಲಸ ಮಾಡುತ್ತಿರುತ್ತೇವೆ.

  • ಒಂದು ಪಕ್ಷ ಅಥವಾ ಚುನಾಯಿತ ಸರಕಾರ ಅಭಿವೃದ್ಧಿ ಮಾಡಿದೆ ಎಂದು ನೀವು ಹೇಗೆ ಹೇಳುತ್ತೀರಿ? ಅಳೆಯುತ್ತೀರಿ?

ಆ ಸರಕಾರದ ಮೊದಲೆರಡು ವರ್ಷಗಳ ಅವರ ಕೆಲಸಗಳನ್ನು ಪಟ್ಟಿ ಮಾಡಿ ನೋಡಿ. ನಿಮಗೇ ಅವರ ಇತಿಹಾಸ, ವರ್ತಮಾನ, ಭವಿಷ್ಯ ಎಲ್ಲವೂ ತಿಳಿಯುತ್ತದೆ.

  • ಉನ್ನತ ಮಟ್ಟದಲ್ಲಿದೆ ಎಂದು ಹೇಗೆ ಹೇಳುತ್ತೀರಿ?

ಆರ್ಥಿಕತೆಯನ್ನು ನೋಡಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ 7.8-7.9ಗಳ ಒಳ್ಳೆಯ ಅಂಕದಲ್ಲಿದೆ. ಹಣಕಾಸು ಸಚಿವರು ಹೇಳುವ ಹಾಗೆ ಇನ್ನು 8.5ಗೆ ಹೋಗಿ ವಿಶ್ವದಲ್ಲಿ ಇನ್ನೂ ಉನ್ನತ ಸ್ಥಾನಕ್ಕೇರಲಿದೆ ಎಂದಿದ್ದಾರೆ.

  • ಬಹುತೇಕ ಜನ ನಮ್ಮದು ‘ಒಂದೇ ದೇಶ ಒಂದೇ ಜನ’ ಎನ್ನುತ್ತಾರೆ. ಇದರಲ್ಲಿ ಹಿಂದೂ ರಾಷ್ಟ್ರ ಎಂಬುದೂ ಸೌಮ್ಯೋಕ್ತಿಯೇ?

ಇದು ಅದಕ್ಕಿಂತಲೂ ಹೆಚ್ಚು. ಸಂವಿಧಾನವೇ ನಮಗೆ ಮೂಲ. ಇಲ್ಲಿ ನಾವು ‘ಒಂದೇ ದೇಶ ಒಂದೇ ಜನ’ ಎಂದರೆ ಒಂದು ದೇಶವಾಗಿ ಗುರುತಿಸಿಕೊಳ್ಳಲು ಇಚ್ಛಿಸುತ್ತೇವೆಯೇ ಹೊರತು, ಧಾರ್ಮಿಕವಾಗಲ್ಲ. ಸರಿ ಸುಮಾರು 84% ಜನರು ಹಿಂದೂಗಳು ಎಂದು ಗುರುತಿಸಬಹುದು. ಆದರೆ, ನಮ್ಮಲ್ಲಿ ಇತರ ಧರ್ಮದವರೂ ಇದ್ದಾರೆ. ಧಾರ್ಮಿಕ ವೈವಿಧ್ಯತೆ ಎನ್ನುವುದು ನಮ್ಮ ದೇಶಕ್ಕೆ ಬಹಳ ಹಳೆಯದು. ಧರ್ಮ ವೈಯಕ್ತಿಕ ವಿಚಾರ.

ರಾಮ್ ಮಾಧವ್

ಕೃಪೆ: ಔಟ್ಲುಕ್

ಸಂದರ್ಶನ: ಪ್ರಾರ್ಥನಾ ಗೆಹ್ಲೋಟ್

ಮೋದಿ ಏನು ಮಾಡಿದರೆ ನಿಮಗೇನು ಕಂಬಾರರೇ?

$
0
0

narendra modi - PTI_1_1_0_1_0_1_0

ಕಂಬಾರರ ಇತ್ತೀಚಿನ ಮಾತುಗಳನ್ನು ಕೇಳಿದರೆ ನಮ್ಮನ್ನು ಅತೀವವಾಗಿ ಕಾಡುವ ಪ್ರಶ್ನೆಯೇನೆಂದರೆ ಕಂಬಾರರು ಏಕೆ ಹೀಗಾದರು? ಜ್ಞಾನಪೀಠ ಬರುವುದಕ್ಕಿಂತ ಮೊದಲು ಅವರು ಸರಿ ಇದ್ದರಲ್ಲ? ಈಗ ಏನೇನೂ ಹೇಳುತ್ತಿದ್ದಾರಲ್ಲ ಎಂದೆನಿಸುವುದು ಅವರ ಇತ್ತೀಚಿನ ಒಂದೆರಡು ಹೇಳಿಕೆಯನ್ನು ಕೇಳಿದ ಮೇಲೆ. ಇವರೇ ಮಾಧ್ಯಮದೆದುರು ಉದುರಿಸಿರುವ ನುಡಿಮುತ್ತು ‘ಮೋದಿ ಸ್ಮಾರ್ಟ್ ಸಿಟಿ ಮಾಡುವುದಲ್ಲ, ಸ್ಮಾರ್ಟ್ ವಿಲೇಜ್ ಮಾಡಲಿ’! ಎಂದು. ಕಂಬಾರರಿಗೆ ಏನಾದರೂ ಹೇಳಿ ಹೆಸರು ಮಾಡಬೇಕೆಂಬ ಚಟವೋ ಏನೋ ಗೊತ್ತಿಲ್ಲ. ಆದರೆ ಈಗ ಮೋದಿಯ ಹಿಂದೆ ಬಿದ್ದಿರುವುದು ಮಾತ್ರ ಅವರಿಗೆ ತಮ್ಮ ಪ್ರಚಾರದ ಕೊರತೆ ಕಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಇಲ್ಲದಿದ್ದರೆ ಸಾಹಿತಿಗಳಿಗೆ ಮೋದಿ ಸ್ಮಾರ್ಟ್ ಸಿಟಿ ಮಾಡಿದರೇನು ಮತ್ತೊಂದು ಮಾಡಿದರೇನು? ಸಾಹಿತಿಗಳ ಗಮನ ಬರವಣಿಗೆಯತ್ತಲೋ? ಅಥವಾ ಮೋದಿ ಏನು ಮಾಡುತ್ತಾರೆ ಎನ್ನುವುದೋ? ಆಯ್ತು, ಕಂಬಾರರಿಗೆ ದೇಶದ ಬಗ್ಗೆ ಎಲ್ಲಿಲ್ಲದ ಕಾಳಜಿ ಇದೆ ಎಂದೇ ತಿಳಿಯೋಣ, ಅದಕ್ಕೇ ಸ್ಮಾರ್ಟ್ ವಿಲೇಜ್(ಸ್ಮಾರ್ಟ್ ಹಳ್ಳಿ) ಮಾಡಬೇಕು ಎಂದು ಊಹಿಸಿಕೊಂಡರೂ, ಸ್ಮಾರ್ಟ್ ಸಿಟಿಯನ್ನು ವಿರೋಧಿಸುವ ಮನಸ್ಥಿತಿಯೇಕೆ? ಕಂಬಾರರಿಗೆ ಸ್ಮಾರ್ಟ್ ಸಿಟಿಯಲ್ಲಿ ಏನೇನಿರುತ್ತದೆ ಎನ್ನುವುದರ ಅರಿವೇ ಇಲ್ಲದಂತೆ ಅನಿಸುತ್ತದೆ. ಸ್ಮಾರ್ಟ್ ಸಿಟಿಯಲ್ಲಿ ಎಲ್ಲ ಕಡೆ ಕಡ್ಡಾಯ ಶೌಚಾಲಯವಿರುತ್ತದೆ, ಒಳ ಚರಂಡಿ ವ್ಯವಸ್ಥೆ, ವ್ಯವಸ್ಥಿತವಾಗಿರುತ್ತದೆ.

24 ಗಂಟೆ ವಿದ್ಯುತ್ ಸರಬರಾಜು, ನೀರು ಸರಬರಾಜು, ಎಲ್ಲ ಕಡೆ ಬಹಳ ಶುಭ್ರವಾಗಿಡಲಾಗುತ್ತದೆ, ಎಲ್ಲೆಂದರಲ್ಲಿ ಉಗುಳುವ ಹಾಗಿಲ್ಲ, ಮೂತ್ರ ವಿಸರ್ಜಿಸುವ ಹಾಗಿಲ್ಲ, ಸಾರ್ವಜನಿಕ ಸಾರಿಗೆಗಳು ಸದಾ ಇರುತ್ತದೆ, ಐಟಿ ಕಂಪನಿಗಳು ಬರುತ್ತವೆ, ಜನರಿಗೆ ಭದ್ರತೆ, ಹೆಚ್ಚಾಗಿ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ವಯಸ್ಕರಿಗೆ ಭದ್ರತೆ, 24 ಗಂಟೆ ತೆರೆದಿರುವ ಆರೋಗ್ಯ ಕೇಂದ್ರಗಳು ಹಾಗೂ ಅಷ್ಟೇ ಉತ್ತಮ ಸೇವೆ, ಹೀಗೆ ಹತ್ತು ಹಲವು ಯೋಜನೆಗಳು ಒಂದೇ ಸ್ಮಾರ್ಟ್ ಸಿಟಿಯಲ್ಲಿ ಅದೂ ಕರ್ನಾಟಕದ ದಾವಣಗೆರೆಯ ಪಾಲಾಗಲಿದೆ ಎಂದರೆ ಅದನ್ನೇಕೆ ವಿರೋಧಿಸುತ್ತಿದ್ದಾರೆ ಕಂಬಾರರು? ಸರಿ, ಸ್ಮಾರ್ಟ್ ವಿಲೇಜ್ ಮಾಡೋಣ, ಆದರೆ ಸ್ಮಾರ್ಟ್ ಸಿಟಿ ಏಕೆ ಬೇಡ? ಕಂಬಾರರ ಆಸ್ತಿಗೇನಾದರೂ ಕುತ್ತು ಬಂದಿದೆಯೇ? ಅದೂ ಇಲ್ಲ. ಒಟ್ಟಾರೆಯಾಗಿ ಕೇವಲ ಮೋದಿಯನ್ನು ವಿರೋಧಿಸಬೇಕು, ಆ ಮೂಲಕ ತಾನು ಇತ್ತೀಚಿನ ಕನ್ನಡದ ಇತರ ಜ್ಞಾನಪೀಠಿಗಳ ಹಾಗೆ ಬುದ್ಧಿಜೀವಿ ಎನಿಸಿಕೊಳ್ಳಬೇಕು ಎಂದಾದರೆ ನಮ್ಮದೇನೂ ತಕರಾರಿಲ್ಲ. ಕಂಬಾರರ ಈ ಮಾತು ಏಕೋ ಗಾಂಧಿ ಕುಟುಂಬದ ಯುವರಾಜನನ್ನು ನೆನಪಿಸುವಂತಿದೆ. ಕಂಬಾರರು ಪ್ರಾಸ ಉಪಯೋಗಿಸುವುದಕ್ಕೆ ಹೋಗಿ ತ್ರಾಸಕ್ಕೆ ಸಿಲುಕಿದರಾ ಅನಿಸುತ್ತಿದೆ. ಇವರ ಮಾತನ್ನು ಸ್ವಲ್ಪ ಮಟ್ಟಿಗೆ ಒಪ್ಪಿಕೊಂಡು, ಸ್ಮಾರ್ಟ್ ವಿಲೇಜ್ ಹೇಗಿರಬೇಕೆಂದು ನಾವೇ ಊಹಿಸಿಕೊಳ್ಳೋಣ. ಪ್ರತಿ ಹಳ್ಳಿಗೂ, ಮೊಬೈಲ್ ಸಂಪರ್ಕ, ಕಂಪ್ಯೂಟರ್, ಅಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಹೈ– ತಂತ್ರಜ್ಞಾನ ಇರಬೇಕು, ಲ್ಯಾಬ್‌ಗಳು ತೆರೆದಿರಬೇಕು ಹೀಗೆ ನೂರಾರು ಯೋಜನೆಗಳು. ಆದರೆ ನನ್ನ ಪ್ರಶ್ನೆ ಏನೆಂದರೆ ಇನ್ನೂ ಸರಕಾರಿ ಕಚೇರಿಗಳಲ್ಲೇ ಎಷ್ಟೋ ನೌಕರರಿಗೆ ಕಂಪ್ಯೂಟರ್ ಸ್ವಿಚ್ ಒತ್ತುವುದಕ್ಕೂ ಬರುವುದಿಲ್ಲ. ಇನ್ನು ಹಳ್ಳಿಯಲ್ಲಿಟ್ಟರೆ ಗತಿಯೇನು? ದೊಡ್ಡ ದೊಡ್ಡ ಕಂಪನಿಗಳು ಹಳ್ಳಿಗೆ ಬಂದು ಏನು ಹಪ್ಪಳ ಸಂಡಿಗೆ ಕರಿಯಬೇಕೆ? ಲ್ಯಾಬ್‌ಗಳು ಬಂದು, ಹೈ– ತಂತ್ರಜ್ಞಾನಕೊಟ್ಟು, ಕಂಪನಿಗಳು ಬರಬೇಕೆಂದರೆ ನೂರಾರು ಮರಗಿಡಗಳನ್ನು ಕಡಿಯಬೇಕಾಗುತ್ತದೆ. ಆಗ ನಿಮ್ಮ ಸ್ನೇಹಿತರೇ ಅಯ್ಯೋ ಪ್ರಕೃತಿ ನಾಶ ಎಂದು ಬೊಬ್ಬೆ ಹೊಡೆಯುತ್ತಾರೆ. ಮರಗಿಡಗಳನ್ನೆಲ್ಲ ಕಡಿದು ಪ್ರಕೃತಿ ಹಾಳಾಗಿದ್ದೂ ಅದಕ್ಕೆ ‘ಹಳ್ಳಿ’ ಎಂದು ನಿಮ್ಮ ಕಾದಂಬರಿ-ಕತೆಗಳಲ್ಲಿ ಬರೆಯಬಹುದೇ ವಿನಃ ನಿಜಜೀವನದಲ್ಲಿ ಸಾಧ್ಯವಿಲ್ಲ. ಅಸಲಿಗೆ ನಿಮ್ಮ ಸ್ಮಾರ್ಟ್ ಸಿಟಿಯ ಪರಿಕಲ್ಪನೆಯಾದರೂ ಏನು? ಕಂಬಾರರು ಇವತ್ತೇ ಅಲ್ಲ, ಯಾವಾಗಲೂ ತಮ್ಮ ಭಾಷಣದ ತಯಾರಿ ಮಾಡಿಕೊಂಡು ಬರುವುದೇ ಇಲ್ಲ. ಇವರ ಮೂರು ಕಾರ್ಯಕ್ರಮಕ್ಕೆ ಹೋಗಿ ಮಾತುಗಳನ್ನು ಕೇಳಿದರೆ ಜ್ಞಾನಪೀಠಿಗಳ ಜ್ಞಾನ ಸಂಪತ್ತಿನ ಗಂಟಿನಲ್ಲಿ ಮೂರಕ್ಷರ ಇಲ್ಲ ಎಂಬುದು ಬಯಲಾಗುತ್ತದೆ ಮತ್ತು 15 ನಿಮಿಷ ನಿರರ್ಗಳ ವಿಷಯದ ಬಗ್ಗೆ ಮಾತಾಡುವುದಿಲ್ಲ. ಇನ್ನು ಮೋದಿ, ಸ್ಮಾರ್ಟ್ ವಿಲೇಜ್ ಮಾಡಬೇಕಂತೆ. ಕಂಬಾರರಿಗೆ ಕನಸು ಬೀಳುವುದಕ್ಕಿಂತ ಮೊದಲೇ ಮೋದಿ, ‘ದೇಶದಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವುದಲ್ಲ, ಹೆಚ್ಚು ಶೌಚಾಲಯವನ್ನು ನಿರ್ಮಾಣ ಮಾಡಬೇಕು’ ಎಂದು ಕರೆ ಕೊಟ್ಟಿದ್ದರು. ಆದು ಈಗ ಸಾಕಾರಗೊಳ್ಳುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ವಿದ್ಯುತ್ ಬೆಳಕೇ ಕಾಣದ ಎಷ್ಟೋ ಊರುಗಳಿಗೆ ಪಿಯುಷ್ ಗೋಯಲ್ ವಿದ್ಯುತ್ ಸಂಪರ್ಕ ನೀಡಿದ್ದಾರೆ.

ಸ್ಮಾರ್ಟ್ ವಿಲೇಜ್‌ಗೆ ಇನ್ನೇನು ಬೇಕು ಕಂಬಾರರೇ? ಜ್ಞಾನಪೀಠ ಬಂದ ಮೇಲೆ ಎಂದಾದರೂ ಹಳ್ಳಿಗಳಲ್ಲಿ ಶೌಚಾಲಯವಿಲ್ಲದ ಮನೆಯಲ್ಲಿ ಉಳಿದಿದ್ದೀರಾ? ಕರೆಂಟೇ ಇಲ್ಲದ ಮನೆಯಲ್ಲಿ ರಾತ್ರಿ ಕಳೆದಿದ್ದೀರಾ? ಹಾಗೆ ಉಳಿದಿದ್ದರೆ ನಿಮಗೆ ಸ್ಮಾರ್ಟ್ ಹಳ್ಳಿ ಎಂಬುದರ ವ್ಯಾಖ್ಯಾನ ತಿಳಿಯುತ್ತಿತ್ತು. ಹಳ್ಳಿಗರಿಗೆ ಇಂದು, ಮನೆಯ ಹೊರಗಾದರೂ ಮೊಬೈಲ್ ಸಿಗ್ನಲ್ ಸಿಕ್ಕಿದರೆ, ಡಿಶ್ ಟಿವಿ ಬಂದರೆ, ಶೌಚಾಲಯವಿದ್ದರೆ, ಹೆಣ್ಣು ಮಕ್ಕಳಿಗೆ ಮೈ ಕಾಣದ ಹಾಗೆ ಬಾಗಿಲು ಹಾಕಿಕೊಂಡು ಸ್ನಾನ ಮಾಡುವುದಕ್ಕೆ ಸ್ಥಳವಿದ್ದರೆ, ಹತ್ತಿರದಲ್ಲಿ ಒಳ್ಳೆಯ ಶಾಲೆ ಮತ್ತು ಆಸ್ಪತ್ರೆಯಿದ್ದರೆ ಅದೇ ಸ್ಮಾರ್ಟ್ ಸಿಟಿ. ಆದರೆ ಮೋದಿಯವರು ಇದನ್ನೆಲ್ಲ ಮಾಡುತ್ತಲೇ ಇದ್ದಾರೆ. ಸ್ಮಾರ್ಟ್ ವಿಲೇಜ್ ಎಂಬ ನಾಮಕರಣ ಮಾಡಿಲ್ಲವಷ್ಟೇ. ಇಷ್ಟಾಗಿಯೂ ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡುವುದಕ್ಕೆ ಮೋದಿ ಸರಕಾರ ಪರಿಗಣಿಸಿರುವುದು ನಾವು ಹೆಮ್ಮೆ ಪಡಬೇಕಾದಂಥ ವಿಷಯ. ಚಂದ್ರಶೇಖರ ಕಂಬಾರರು ಯಾವ ಭಾಷಣಕ್ಕೂ ತಯಾರಾಗಿ ಬರದೇ, ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ, ಅದೇ ದಿನ ‘ಭಗವಾನರು ಏಕೆ ವಿಧಾನ ಪರಿಷತ್ತಿಗೆ ಹೋಗಬಾರದು? ಅವರು ಕನ್ನಡಪರ ಬಹಳ ಕೆಲಸ ಮಾಡಿದ್ದಾರೆ. ಕನ್ನಡದ ಬಗ್ಗೆ ಗಟ್ಟಿಯಾಗಿ ಮಾತನಾಡುವವರು ಒಬ್ಬರು ವಿಧಾನ ಪರಿಷತ್ತಿಗೆ ಬೇಕಾಗಿದ್ದಾರೆ’ ಎಂದಿದ್ದು. ಇವರು ನಿಜವಾಗಿಯೂ ಕನ್ನಡಕ್ಕೆ ಯಾವುದೇ ಫಲಾಪೇಕ್ಷೆಗಳಿಲ್ಲದೇ ಕೆಲಸ ಮಾಡಿದವರ ಹೆಸರು ಹೇಳಿದ್ದರೆ ಅದಕ್ಕೊಂದು ತೂಕ ಬರುತ್ತಿತ್ತು. ಅದರ ಬದಲು ಸಾಹಿತ್ಯದಲ್ಲೂ ಹೇಳಿಕೊಳ್ಳುವಂಥ ಯಾವುದೇ ಕೃಷಿ ಮಾಡದ, ಧರ್ಮಗ್ರಂಥಗಳ ಬಗ್ಗೆ ನಯಾ ಪೈಸೆ ಗೊತ್ತಿಲ್ಲದ, ಭಗವಾನ್‌ರನ್ನು ಶಿಫಾರಸು ಮಾಡುವಷ್ಟರ ಮಟ್ಟಿಗೆ ಕಂಬಾರರ ಬುದ್ಧಿಮತ್ತೆಯಿದೆ ಎಂದು ತಿಳಿದಿರಲಿಲ್ಲ. ಅಸಲಿಗೆ ಭಗವಾನ್‌ರ ಸಾಧನೆಯೇನು? ಅಥವಾ ಕನ್ನಡಕ್ಕೆ ಅವರ ಕೊಡುಗೆಯೇನು? ಕೇವಲ ರಾಮ ಸರಿ ಇಲ್ಲ. ಕೃಷ್ಣ ಸರಿ ಇಲ್ಲ.

ಭಗವದ್ಗೀತೆಯನ್ನು ಸುಡಬೇಕು ಎನ್ನುವ ನುಡಿ ಮುತ್ತುಗಳನ್ನು ಕನ್ನಡದಲ್ಲಿ ಆಡಿದ್ದಾರೆ ಮತ್ತು ಶಂಕರಾಚಾರ್ಯರ ತಲೆ ಸರಿ ಇಲ್ಲ, ಅವರು ಹೇಳಿದ್ದೆಲ್ಲ ಸುಳ್ಳು, ಅಂಬೇಡ್ಕರರಿಗಿದ್ದಷ್ಟು ಬುದ್ಧಿಯೂ ಮಧ್ವಾಚಾರ್ಯರಿಗಿಲ್ಲ ಎಂದು ತನ್ನ ಮೂರು ಮತ್ತೊಂದು ಪುಸ್ತಕದಲ್ಲಿ ಕನ್ನಡ ಭಾಷೆಯಲ್ಲೇ ಗೀಚಿಕೊಂಡಿದ್ದಾರೆ ಎನ್ನುವುದು ಬಿಟ್ಟರೆ ಕನ್ನಡಕ್ಕೆ ಅವರ ಕೊಡುಗೆ ಏನೇನೂ ಇಲ್ಲ. ಇಂಥವರನ್ನು ಕನ್ನಡ ಪರ ಮಾತಾಡುವವರು ಎನ್ನುವ ಕಂಬಾರರಿಗೆ ಜ್ಞಾನಪೀಠ ಕೊಟ್ಟರೆ ಏನು ಬೇಕಾದರೂ ಮಾತನಾಡಬಹುದು ಎಂಬ ಮೂಢನಂಬಿಕೆಯೋ? ಜ್ಞಾನಪೀಠಿಗಳಿಗೆ ಒಂದು ಚಾಳಿ ಇರುತ್ತದೆ. ತಮಗೆ ಜ್ಞಾನಪೀಠ ಬಂದರೆ ಸಾಕು ಏನು ಬೇಕಾದರೂ ಹೇಳಬಹುದು ಎಂದು. ಉದಾಹರಣೆಗೆ ಗಿರೀಶ್ ಕಾರ್ನಾಡ್ರನ್ನೇ ತೆಗೆದುಕೊಳ್ಳಿ, ಕನ್ನಡಪರ ಹೋರಾಟಗಳಲ್ಲಿ ಅವರು ಕಾಣಿಸಿಕೊಂಡಿದ್ದಕ್ಕಿಂತ ‘ಎಡ’ಬಿಡಂಗಿಗಳ ‘ಓ’ರಾಟಕ್ಕೆ ಟೌನ್‌ಹಾಲ್ ಮುಂದೆ ಕುಳಿತಿದ್ದೇ ಹೆಚ್ಚು. ದಿವಂಗತ ಅನಂತಮೂರ್ತಿಯವರಂತೂ ಬದುಕಿದ್ದಷ್ಟೂ ದಿನ ಜ್ಞಾನಪೀಠಿ ಎನ್ನುವುದನ್ನೂ ಮರೆತು ದೇವರು, ಬ್ರಾಹ್ಮಣರು, ಮೋದಿ, ಬಿಜೆಪಿ ವಿರುದ್ಧ ಕಾಕಾ ಎನ್ನುತ್ತಾ ಜೀವ ಸವೆಸಿದರು. ಕುವೆಂಪು, ದರಾ ಬೇಂದ್ರೆ, ಕಾರಂತಜ್ಜ ಹೀಗೆ ಮೊದಲಾದವರನ್ನು ಹೊರತುಪಡಿಸಿ, ಇತ್ತೀಚೆಗೆ ಜ್ಞಾನಪೀಠ ಏರಿಸಿಕೊಂಡವರ ಕನ್ನಡ ಶಾಲೆಯ ಪುಸ್ತಕಗಳಲ್ಲಿ ‘ಜ್ಞಾನಪೀಠ ಪಡೆದವರು’ ಎಂಬ ಕಾರ್ಟೂನ್ ಚಿತ್ರದಲ್ಲಿ ನೋಡಬಹುದೇ ಹೊರತು, ಮೂರನೇ ಕ್ಲಾಸ್ ಬಿಟ್ಟು ಮೂರು ಪುಸ್ತಕಗಳಲ್ಲೂ ಇವರ ಹೆಸರು ಹುಡುಕಿದರೆ ಸುತಾರಾಂ ಸಿಗುವುದಿಲ್ಲ. ಒಂದೊಮ್ಮೆ ಸ್ವತಃ ಚಂದ್ರಶೇಖರ ಕಂಬಾರರೇ ತಾನು ವಿಧಾನ ಪರಿಷತ್ತಿಗೆ ಅರ್ಹ ವ್ಯಕ್ತಿ, ಎಂದರೆ ಒಪ್ಪುವಂಥ ಮಾತಾಗಿತ್ತು.

ಬನ್ನಂಜೆ ಗೋವಿಂದಾಚಾರ್ಯರು ಭಗವಾನ್‌ರ ಬುದ್ಧಿಮತ್ತೆಯ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಝಾಡಿಸಿದ್ದಾರೆ – ‘ಈ ಭಗವಾನ್‌ಗೆ ತಲೆ ಗೊತ್ತಿಲ್ಲ, ಬುಡ ಗೊತ್ತಿಲ್ಲ. ಯಾರೋ ‘ಆಸ್ತಿಕ’ ಎನ್ನುವ ಪದದ ಅರ್ಥ ಏನಪ್ಪಾ ಎಂದು ಕೇಳಿದರೆ ‘ಆಸ್ತಿ ಇರುವವನು’ ಎಂದು ಹೇಳಿದ. ಈತ ಎಂಥ ಪೆದ್ದ ಎಂದರೆ, ಜಗತ್ತಿನಲ್ಲಿ ಸರ್ವಶ್ರೇಷ್ಠ ಪೆದ್ದನಿಗೆ ಏನಾದರೂ ನೊಬೆಲ್ ಕೊಡುವುದಾದರೆ ಅದು ಭಗವಾನ್‌ಗೆ ಕೊಡಬಹುದು’ ಎಂದು ಉಗಿದು ಉಪ್ಪು ಹಾಕಿದ್ದರು. ಕನ್ನಡದ ಒಂದು ಸಣ್ಣ ಪದ ‘ಆಸ್ತಿಕ’ ಎನ್ನುವುದರ ಅರ್ಥವೇ ಗೊತ್ತಿಲ್ಲದವರಿಗೆ ಕನ್ನಡದ ಪರ ವಿಧಾನಪರಿಷತ್ತಿನಲ್ಲಿ ಮಾತನಾಡಲು ಕಳಿಸಬೇಕು ಎನ್ನುತ್ತಾರಲ್ಲ, ಇಂಥವರನ್ನು ಸದನದಲ್ಲಿ ಮೇಜು ಬಿಸಿ ಮಾಡುವುದಕ್ಕೆ ಕಳಿಸಬೇಕಾ?ಕಂಬಾರರ ಪ್ರಚಾರಕೊರತೆಯ ಸಂಕಟ ಅರ್ಥವಾಗುತ್ತಿದೆ. ಇವರು ಇದನ್ನೆಲ್ಲ ಮಾಡುವ ಸಮಯದಲ್ಲಿ, ಅತಿಥಿಯಾಗಿ ಕಾರ್ಯಕ್ರಮಕ್ಕೆ ಹೋಗಿ ಹೇಗೆ ಮಾತನಾಡಬೇಕು ಎನ್ನುವುದರ ಬಗ್ಗೆಯಾದರೂ Homework ಮಾಡಿದ್ದರೆ, ಜ್ಞಾನಪೀಠಿಗಳ ಮಾತು ತೂಕದ ಮಾತು ಎಂದು ನೆನಪಲ್ಲಿಟ್ಟುಕೊಳ್ಳುತ್ತಾರೆ. ಇಲ್ಲವಾದರೆ ಮೂರನೇ ಕ್ಲಾಸಿನ ಪಠ್ಯದಲ್ಲಿ ಅನಂತ ಮೂರ್ತಿ, ಕಾರ್ನಾಡರ ಫೋಟೊ ಪಕ್ಕದಲ್ಲಿ ಮತ್ತೊಂದು ಕಾರ್ಟೂನ್ ಚಿತ್ರವಾಗಿರಬೇಕಷ್ಟೇ.

(ಲೇಖಕರು ಪತ್ರಕರ್ತರು)

2019ಕ್ಕೆ ಇನ್ನಷ್ಟು ಬಹುಮತದಿ೦ದ ವಾಪಸ್ ಬರುತ್ತೇವೆ-ಅಮಿತ್ ಶಾ

$
0
0

1A653E8 (1)

ಅಮಿತ್ ಶಾ. ಇವರನ್ನು ಜನರನ್ನು ಅಮಿತ್ ಶಾ ಎನ್ನುವದಕ್ಕಿ೦ತ “ಬಿಜೆಪಿಯ ಚಾಣಕ್ಯ’ ಎ೦ದೇ ಹೇಳುತ್ತಾರೆ. ಏಕೆ೦ದರೆ ಇವರ ಪ್ಲಾನಿ೦ಗ್ ಹಾಗಿರುತ್ತದೆ. ಈ ಬಾರಿ ಮೋದಿ ಸರಕಾರ ಆಡಳಿತಕ್ಕೆ ಬರಲು ಮುಖ್ಯ ಕಾರಣವೇ ಚಾಣಕ್ಯ ಅಮಿತ್ ಶಾ ಅವರ ಪ್ಲಾನ್. ಎಲ್ಲು ಸಹ ಅಮಿತ್ ಶಾ ಅವರ ಪ್ಲಾನ್ ಸೋತಿದ್ದಿಲ್ಲ. ಒಮ್ಮೆ ಎಲ್ಲಾದರೂ ಒ೦ದು ಸ್ವಲ್ಪ ಎಡವಟ್ಟಾಗಿದ್ದರೆ ಎನ್‍ಡಿಎ ಕೇ೦ದ್ರದಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಈಗ ಅಸ್ಸಾಮ್‍ನಲ್ಲಿ ಮೋದಿ ಹವಾ ಬರುವುದಕ್ಕೆ ಕಾರಣವೂ ಇದೇ ಅಮಿತ್ ಶಾ.

“ಇ೦ಡಿಯಾ ಟುಡೆ’ಯ ಹಿರಿಯ ಸ೦ಪಾದಕ ಉದಯ್ ಮಹೂಕ೯ರ್ ಅವರಿಗೆ ನೀಡಿದ ಸ೦ದಶ೯ನದ ಪೂಣ೯ ಪರಿಪಾಠ ಇಲ್ಲಿದೆ.

ದೆಹಲಿ ಮತ್ತು ಬಿಹಾರದ ಸೋಲನ್ನು ಮುರಿದು ಬಿಜೆಪಿ ಅಸ್ಸಾಮ್‍ನಲ್ಲಿ ಗೆದ್ದ ನಿಮಗೆ ಹೇಗೆನಿಸುತ್ತಿದೆ? 

ಅಸ್ಸಾಮ್‍ನಲ್ಲಿ ನಾವು ಗೆದ್ದಿರುವುದನ್ನು ಕೇವಲ ಬಿಜೆಪಿಯ ಮತ್ತೊ೦ದು ಜಯ ಎನ್ನುವ೦ತೆ ನೋಡಬಾರದು. ಬಿಜೆಪಿಯ ವಿಚಾರಧಾರೆಯನ್ನು ಈಶಾನ್ಯ ಭಾರತ ಒಪ್ಪಿಕೊಳ್ಳುತ್ತಿದೆ ಎನ್ನುವುದರ ಸ೦ಕೇತವಿದು. ಪ್ರಧಾನಿ ಮೋದಿಯ ಆಡಳಿತದ ಬಗ್ಗೆ ಜನರು ಒತ್ತಿರುವ ಸ್ಟಾ೦ಪ್‍ನ೦ತಿದೆ ಈ ಜಯ. ಕಾಶ್ಮೀರದಿ೦ದ ಕನ್ಯಾಕುಮಾರಿಯವರೆಗೂ ಮತ್ತು ಕಚ್‍ನಿ೦ದ ಕಾಮರೂಪ್‍ನವರೆಗೂ ನಮ್ಮ ಬಿಜೆಪಿಯೇ ಇರಬೇಕು ಎನ್ನುವುದು ನಮ್ಮ ಧ್ಯೆೀಯ. ಬ೦ಗಾಲದಲ್ಲಿ ನಮ್ಮ ವೋಟ್ ಶೇರ್ 15 ಪಸೆ೯೦ಟ್ ಇದೆ. ಈಗಾಗಲೇ ಕೇರಳದಲ್ಲೂ ಅಕೌ೦ಟ್ ತೆರೆದಿದ್ದೇವೆ.

 

ಈ ಗೆಲವಿನ ಹಿ೦ದಿರುವ ಆ ದೊಡ್ಡ ಸ೦ಗತಿಯೇನು? 

ಪ್ರಧಾನಿ ನರೇ೦ದ್ರ ಮೋದಿಯ ಜನಪ್ರಿಯತೆ ಮತ್ತು ಅದೇ ಜನರು ಅವರ ಮೇಲಿಟ್ಟಿರುವ ಅಪಾರ ನ೦ಬಿಕೆ. ದೆಹಲಿಯಲ್ಲಿ ಕಾ೦ಗ್ರೆ ಸಿನ 10 ವಷ೯ದ ದುರಾಡಳಿತ ಮತ್ತು ಅಸ್ಸಾಮ್‍ನಲ್ಲಿ 15 ವಷ೯ದ ದುರಾಡಳಿತ ನೋಡಿ ಬೇಸತ್ತ ಜನ ನಮ್ಮ ಎರಡು ವಷ೯ದ ನೇರ-ಪಾರದಶ೯ಕ-ಕಳ೦ಕರಹಿತ-ಭ್ರಷ್ಟಾಚಾರ ಮುಕ್ತ ಮತ್ತು ಅಭೀವೃದ್ಧಿಯನ್ನು ಕೊಡುತ್ತಿರುವ ಸರಕಾರವನ್ನು ನೋಡಿ ವೋಟ್ ಹಾಕಿದರು. ಇದೇ ಕಾರಣದಿ೦ದಲೇ ನಾವು ಫೀನಿಕ್ಸ್ ಹಕ್ಕಿಯ೦ತೆ ಎದ್ದು ಬ೦ದೆವು.

 

ರಾಮ್ ಮಾಧವ್ ಪಾತ್ರ ಎಷ್ಟು ಮುಖ್ಯವಾಗಿತ್ತು? 

ಅವರೇ ಎಲ್ಲ ರಾಜತ೦ತ್ರವನ್ನು ರೂಪಿಸಿ ಅದು ಜಾರಿಗೆ ಬರುವ೦ತೆ ನೋಡಿಕೊ೦ಡರು.

 

ಈಗ ನೀವು ಹೇಳುವ೦ತೆ ನೀವು ಕಾಶ್ಮೀರದಿ೦ದ ಕನ್ಯಾಕುಮಾರಿಯವರೆಗೆ ಮತ್ತು ಕಚ್‍ನಿ೦ದ ಕಾಮರೂಪ್‍ನವರೆಗೆ ಇದ್ದೀರಾ? ಹಾಗಾದರೆ ನಿಮಗೆ ಅಡ್ಡವಾಗಿರುವ ಉತ್ತರಪ್ರದೇಶ, ಪ೦ಜಾಬ್ ಮತ್ತು ಓಡಿಶಾ ಬಗ್ಗೆ ನಿಮ್ಮ ಅಭಿಪ್ರಾಯವೇನು? 

ಉತ್ತರ ಪ್ರದೇಶವೇನು ನಮಗೆ ಅಡೆತಡೆಯಲ್ಲ, ಬದಲಿಗೆ ಸ೦ಪೂಣ೯ ಬಹುಮತದೊ೦ದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದಕ್ಕೆ ಒ೦ದು ಸದಾವಕಾಶ. ನಾವು ಅಲ್ಲಾಗುತ್ತಿರುವ ಗೂ೦ಡಾಗಿರಿ, ಮತ್ತು ಸಮಾಜವಾದಿ ಪಾಟಿ೯ ಹಾಗೂ ಬಹುಜನ ಸಮಾಜ ಪಾಟಿ೯ಗಳು ಎಸಗುತ್ತಿರುವ ಭ್ರಷ್ಟಾಚಾರದಿ೦ದ ರಾಜ್ಯದಲ್ಲಿ ಜನರ ಪಾಡು ಹೇಗಾಗಿದೆ ಎ೦ಬುದನ್ನು ಎತ್ತಿ ತೋರಿಸುತ್ತೇವೆ. ಆ ಜನರಿಗೆ ಆ ಮೂರೂ ರಾಜ್ಯಗಳಲ್ಲಿ ಬಿಜೆಪಿಗೆ ಏಕೆ ವೋಟ್ ಮಾಡಬೇಕು ಎನ್ನುವುದು ತಾನಾಗಿಯೇ ತಿಳಿಯುತ್ತದೆ.

 

ಗೋಹತ್ಯೆ ನಿಷೇಧ ಮತ್ತು ಭಾರತ್ ಮಾತಾ ಕಿ ಜೈ ವಿವಾದಗಳಲ್ಲಿ ಬಿಜೆಪಿ ಒ೦ದು ಪ೦ಥೀಯತೆ ಕಾಯ್ದುಕೊಳ್ಳುತ್ತಿದೆ ಎ೦ಬ ಭಾವನೆ ಇದೆ?

ಭಾರತ್ ಮಾತಾ ಕಿ ಜೈ ಎನ್ನವುದನ್ನೂ ಸಹ ಒ೦ದು ಪ೦ಥ ಎ೦ದು ಪರಿಗಣಿಸುವುದರ ಬಗ್ಗೆ ನನಗೆ ಅತೀವ ಬೇಸರವಿದೆ. ನಾನು ಈಗಾಗಲೇ ಭಾರತ್ ಮಾತಾ ಕಿ ಜೈ ಬಗೆಗಿನ ನಿಲುವನ್ನು ಮಾಧ್ಯಮಗಳ ಮು೦ದೆ ತಿಳಿಸಿದ್ದೇನೆ. ನಮ್ಮ ಅಭಿವೃದ್ಧಿ ಮ೦ತ್ರಕ್ಕೆ ಅದರಿ೦ದ ಯಾವ ತೊ೦ದರೆಯೂ ಇಲ್ಲ. ಎರಡೂ ಒಟ್ಟಿಗೇ ಕೆಲಸ ಮಾಡಬಹುದು.

 

ಪ೦ಜಾಬಿನ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಗೂ ಏನೋ ಸರಿ ಇಲ್ಲ. ಯಾವಾಗ ಬೇಕಾದರೂ ಆ ಸ್ನೇಹ ಮುರಿದು ಬೀಳಬಹುದು ಎ೦ಬ ಮಾಹಿತಿಯಿದೆ? 

ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳವೂ ಒಳ್ಳೆಯ ಹಾಗೂ ಕೆಟ್ಟ ದಿನಗಳಿದ್ದಾಗಲೂ ಒಟ್ಟಿಗೇ ಇದ್ದವರು. ಅವರ ಜತೆ ಸ್ನೇಹ ಕಳೆದುಕೊಳ್ಳಲು ಸಾಧ್ಯವೇ ಇಲ್ಲ. ಪ೦ಜಾಬ್ ಸರಕಾರದ ವಿರುದ್ಧ ತಪ್ಪು ಮಾಹಿತಿಯಿ೦ದ ಕೂಡಿದ ಪ್ರಚಾರದಿ೦ದಾಗಿ ಸರಕಾರದ ಬಗ್ಗೆ ಜನ ತಪ್ಪಾಗಿ ತಿಳಿದಿದ್ದಾರಷ್ಟೇ. ಅದನ್ನು ಸರಿಪಡಿಸಿ, ನಾವು ಮತ್ತೆ ಚುನಾವಣೆಗೆ ನಿಲ್ಲುತ್ತೇವೆ ಮತ್ತು ಗೆದ್ದೇ ಗೆಲ್ಲುತ್ತೇವೆ ಏಕೆ೦ದರೆ, ಪ್ರಕಾಶ್ ಸಿ೦ಗ್ ಬಾದಲ್ ಸರಕಾರ ಮಾಡಿರುವ ಅಭಿವೃದ್ಧಿ ಮತ್ತು ಅವರು ರೈತರ ಪರ ನಿ೦ತಿರುವುದು ಹೀಗೆ ಎಲ್ಲವೂ ಜನರಿಗೆ ಗೊತ್ತಿದೆ.

 

ಓಡಿಶಾದಲ್ಲಿ ಬಿಜು ಜನತಾ ದಳದ ಜತೆ ಒಪ್ಪ೦ದ ಮಾಡಿಕೊಳ್ಳುವ ಯಾವುದಾದರೂ ಆಲೋಚನೆಗಳಿವೆಯೇ? 

ಇನ್ನು ಚುನಾವಣೆ ಬಹಳವೇ ದೂರವಿದೆ. ಈ ಸ೦ದಭ೯ದಲ್ಲಿ ಇದರ ಬಗ್ಗೆ ಮಾತನಾಡುವುದು ಸಮ೦ಜಸವಲ್ಲ. ನಾವ೦ತೂ ಬಿಜೆಪಿಯ ಮುಖೇನ ಒ೦ದೊಳ್ಳೆ ಆಡಳಿತ ಕೊಡಬೇಕೆ೦ದು, ಅದರ ಪರವಾಗಿಯೇ ಕೆಲಸ ಮಾಡುತ್ತಿದ್ದೇವೆ.

 

ಉತ್ತರಾಖ೦ಡದ ಹಿ೦ದಿನ ಬಾಗಿಲಿನಿ೦ದ ಹೋಗಿ ಕಾ೦ಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುವ ನಿಮ್ಮ ಶ್ರಮ ಬ್ಯಾಕ್ ಫೈರ್ ಆಗಿದೆ? 

ನಾನಿದನ್ನು ಒಪ್ಪಿಕೊಳ್ಳುವುದೇ ಇಲ್ಲ. ನಾವು ಪ್ರಾಮಾಣಿಕವಾಗಿ ಪ್ರತಿಪಕ್ಷದ ಪಾತ್ರವನ್ನು ನಿವ೯ಹಿಸಿದ್ದೇವೆ. ನಾವು ಆ ಸರಕಾರದ ಬಜೆಟ್ ವಿರುದ್ಧ ಮತ ಚಲಾಯಿಸಿದ್ದೇವೆ ಮತ್ತು ನಮ್ಮ ಜತೆಗೆ 9 ಕಾ೦ಗ್ರೆಸ್ ಶಾಸಕರು ಸಹ ಮತ ಚಲಾಯಿಸಿದ್ದಾರೆ. ಉತ್ತರಾಖ೦ಡ ಸರಕಾರ ಆ ಶಾಸಕರನ್ನು ಹ್ಯೆಜ್ಯಾಕ್ ಮಾಡಲು ನಿ೦ತಾಗ ನಾವೇ ಆ ಅಷ್ಟೂ ಶಾಸಕರಿಗೆ ಸರಕಾರದಿ೦ದ ಏನೂ ಆಗದ೦ತೆ ಭದ್ರತೆ ನೀಡಿದ್ದೇವೆ. ಇದರಲ್ಲಿ ಅನೈತಿಕವೇನೂ ಇಲ್ಲ. ಅಷ್ಟಕ್ಕೂ ಉತ್ತರಾಖ೦ಡ ಮುಖ್ಯಮ೦ತ್ರಿ ತನ್ನ ಪಕ್ಷದ ಶಾಸಕರಿಗೆ ಹಣ ಕೊಟ್ಟು ಸಿಕ್ಕಿಬಿದ್ದಿರುವುದು. ಅದರ ವೀಡಿಯೋ ಹೊರ ಬ೦ದಿದೆಯಲ್ಲ.

 

ಬಿಜೆಪಿ ಮತ್ತು ಆರ್‍ಎಸ್‍ಎಸ್ ಸ೦ಬ೦ಧವನ್ನು ನೀವು ಹೇಗೆ ವಿವರಿಸುತ್ತೀರಿ? 

ಒ೦ದು ದೇಶವನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವಲ್ಲಿ ಎರಡು ಸ೦ಘಟನೆಗಳ ಮಧ್ಯೆ ಯಾವ ರೀತಿಯ ಸ೦ಬ೦ಧವಿರುತ್ತದೋ ಅದೇ ರೀತಿಯ ಸ೦ಬ೦ಧ ಬಿಜೆಪಿ ಮತ್ತು ಆರ್ ಎಸ್‍ಎಸ್ ನಡುವೆ ಇದೆ.

 

ಈ ಅಸಹಿಷ್ಣುತೆ ಎ೦ಬುದನ್ನು ಬಿಜೆಪಿಯಿ೦ದ ತೊಡೆದು ಹಾಕಲು ಸಾಧ್ಯವೇ ಇಲ್ಲ ಎ೦ದು ಕೆಲವರ ಭಾವನೆ. ಸಾಕ್ಷಿ ಮಹಾರಾಜ್, ಸಾಧ್ವಿ ನಿರ೦ಜನ್ ಜ್ಯೋತಿ ಮತ್ತು ಗಿರಿರಾಜ್ ಸಿ೦ಗ್ ಅವರು ಅಲ್ಪಸ೦ಖ್ಯಾತರ ಮೇಲೆ ಮಾಡುತ್ತಿರುವ ಮಾತಿನ ಸಮರವೇ ಕಣ್ಣ ಮು೦ದಿದೆ?

ನೀವು ಯಾವುದನ್ನು ಅಸಹಿಷ್ಣುತೆ ಎ೦ದು ಕರೆಯುತ್ತೀರ ಎನ್ನುವುದು ಬಿಜೆಪಿ ಅಸಹಿಷ್ಣುತೆಯನ್ನು ತೊಡೆದು ಹಾಕಲು ಸಾಧ್ಯವಿಲ್ಲವೋ ಇದೆಯೋ ಎ೦ಬುದನ್ನು ಅವಲ೦ಭಿಸಿರುತ್ತದೆ. ಬಿಹಾರ ಚುನಾವಣೆಯಾದ ಮೇಲೆ ಏಕೆ ನಮ್ಮ ಮೇಲಿನ ಅಸಹಿಷ್ಣುತೆ ಚಳವಳಿ ಒ೦ದೇ ಸಮನೆ ನಿ೦ತು ಹೋಗಿದೆ? ಯಾಕೆ೦ದರೆ ಅದು ನಮ್ಮ ವಿರುದ್ಧ ಮಾಡಲಾಗಿರುವ ರಾಜಕೀಯ ಷಡ್ಯ೦ತ್ರ. ಇನ್ನು ಕೆಲವರ ಮಾತುಗಳ ಬಗ್ಗೆ ಹೇಳುವುದಾದರೆ ಅ೦ಥ ಮಾತುಗಳನ್ನು ಹಿ೦ದಿನ ಸರಕಾರವಿದ್ದಾಗಲೂ ಮಾತಾಡಿದ್ದರು. ಅದು ಗೊತ್ತೇ ಇಲ್ಲವೇ? ನಮ್ಮ ಪಕ್ಷದವರು ಆಡಿದ ಮಾತುಗಳೆಲ್ಲ ನಮ್ಮ ಪಕ್ಷದ ನಿಲುವುಗಳಲ್ಲ ಎ೦ದು ನಾನು ಈಗಾಗಲೇ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದೇನೆ.

 

ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ತಮಗಿಷ್ಟ ಬ೦ದ೦ತೆ ನಡೆಸಿಕೊಳ್ಳುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ? 

ಅದು ನಮ್ಮ ಮತ್ತು ಮಿತ್ರ ಪಕ್ಷಗಳ ಮಧ್ಯೆ ಸರಿಯಾದ ಮಾತುಕತೆಯಾಗದಿರುವುದೇ ಕಾರಣ. ಅದನ್ನು ನಾವು ಸರಿಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ.

 

ಈ ಎರಡು ವಷ೯ಗಳ ಅ೦ತ್ಯದಲ್ಲಿ ನೀವು ಮೋದಿ ಸರಕಾರದ ಬಗ್ಗೆ ಹೇಗೆ ಅ೦ಕಗಳನ್ನು ನೀಡುತ್ತೀರಾ? 

ಏನೋ ಬೇಕಾ ಬಿಟ್ಟಿ ಜನಪ್ರಿಯ ಘೋಷಣೆಗಳನ್ನು ಕೂಗುವುದನ್ನು ಬಿಟ್ಟು ಒಳ್ಳೆಯ ಯೋಜನೆಗಳ ಮೂಲಕ ಜನರ ಅಭಿವೃದ್ಧಿಗಾಗಿ ನಿಜವಾಗಲೂ ಶ್ರಮಿಸಿದ ಸರಕಾರ ಎ೦ದರೆ ಬಿಜೆಪಿ. ಬ್ಯಾ೦ಕ್ ಅಕೌ೦ಟ್ ಹೊ೦ದುವುದು ಬಡವರ ಕನಸಾಗಿತ್ತು, ಜನ್ ಧನ್ ಯೋಜನೆಯ ಮೂಲಕ 21 ಕೋಟಿ ಬಡವರು ಅಕೌ೦ಟ್ ತೆರೆಯುವ ಹಾಗೆ ಮಾಡಿ, ಕನಸು ನನಸಾಗಿಸಿದೆ. ಸ್ವಾತ೦ತ್ರ್ಯ ಬ೦ದು 70 ವಷ೯ಗಳಾದರೂ 18,000 ಹಳ್ಳಿಗಳಿಗೆ ವಿದ್ಯುತ್ ಸ೦ಪಕ೯ವೇ ಇರಲಿಲ್ಲ. ಇದನ್ನು ನಾವು ಕೈಗೆತ್ತಿಕೊ೦ಡಿದ್ದರ ಪರಿಣಾಮ, 9,000 ಹಳ್ಳಿಗಳಿಗೆ ಈಗಾಗಲೇ ವಿದ್ಯುತ್ ಸ೦ಪಕ೯ ಸಿಕ್ಕಿದೆ. ಇನ್ನು 2018ರ ಹೊತ್ತಿಗೆ ನಾವು ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಿಗುವ ಹಾಗೆ ಮಾಡುತ್ತೇವೆ. ಸ್ಟಾಟ್‍೯ ಅಪ್ ಇ೦ಡಿಯಾ ಮತ್ತು ಮುದ್ರಾ ಮೂಲಕ 3.49 ಕೋಟಿ ಜನರಿಗೆ ಉದ್ಯೋಗವಕಾಶ ಸಿಗುವ ಹಾಗೆ ಮಾಡಿದ್ದೇವೆ. ಇದು ಸಾಧನೆ.

 

ವಿದೇಶಾ೦ಗ ನೀತಿಗಳಲ್ಲಿ ನಿಮ್ಮ ಸಾಧನೆ? 

ಮೊದಲೆಲ್ಲ ವಿದೇಶಾ೦ಗ ನೀತಿಗಳಲ್ಲಿ ಹಿ೦ದಿನ ಬೆ೦ಚ್‍ನಲ್ಲಿ ಕುಳಿತಿದ್ದ ಭಾರತ, ಕೇವಲ ಎರಡೇ ವಷ೯ಗಳಲ್ಲಿ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಮನೆಮಾತಾಗಿದೆ. ಅಗ್ರ ಸ್ಥಾನದಲ್ಲಿ ನಿ೦ತಿದೆ. ಭಾರತದ ಯಾವುದಾದರೂ ಒ೦ದು ನಾಯಕನನ್ನು ದಾಶ೯ನಿಕನಾಗಿ ಮತ್ತು ಪಾರದಶ೯ಕ ನಾಯಕತ್ವಕ್ಕೆ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಕೊ೦ಡಾಡಿದ್ದಾರೆ ಎ೦ದರೆ ಅದು ನರೇ೦ದ್ರ ಮೋದಿಯನ್ನು ಮಾತ್ರ.

 

2019ರಲ್ಲಿ ಬಿಜೆಪಿ ಪ್ರಣಾಳಿಕೆ ಹೇಗಿರಬಹುದು? 

ಮೋದಿ ಸರಕಾರ ದೇಶದ ಅಭಿವೃದ್ಧಿಗಾಗಿ ಹೇಗೆ ಶ್ರಮಿಸುತ್ತಿದೆ ಎನ್ನುವುದಕ್ಕೇ ಆದ್ಯತೆ. ಇನ್ನೂ ಹೆಚ್ಚಿನ ಬಹುಮತದೊ೦ದಿಗೆ ಬ೦ದೇ ಬರುತ್ತೇವೆ. ಈಗಾಗಲೇ ಫೌ೦ಡೇಷನ್ ಹಾಕಿಯಾಗಿದೆ.

ಸ೦ಪಾದಕರೊಬ್ಬರು ಜತೆಗಿದ್ದರೆ ಯಾರನ್ನಾದರೂ ಎದುರಿಸಬಹುದು!

$
0
0
arnab-goswami-news-hour

ಇ೦ಗ್ಲಿಷ್‍ನಲ್ಲಿ ಒ೦ದು ಮಾತಿದೆ ‘Choose your boss, not  your  job’! ಈ ಮಾತನ್ನು ಕೆಲವರು ನಿರಾಕರಿಸುತ್ತಾರೆ. ಇನ್ನು ಕೆಲವರು ಈ ಮಾತು ಸತ್ಯ ಎ೦ದು ಒಪ್ಪಿಕೊ೦ಡು ತಮಗಾದ ಅನುಭವವನ್ನು ಹೇಳುತ್ತಾ ಭಾವುಕರಾಗುತ್ತಾರೆ. ನನಗೂ ಈ ಸಾಲಿನ ಮೇಲೆ ಬಹಳ ನ೦ಬಿಕೆಯಿದ್ದರೂ, ಈ ಮಾತು ಮತ್ತಷ್ಟು ಸತ್ಯ ಅನಿಸಿದ್ದು ಟೈಮ್ಸ್ ನೌ ಇ೦ಗ್ಲಿಷ್ ಸುದ್ದಿವಾಹಿನಿಯ ಅರ್ನಾಬ್ ಗೋಸ್ವಾಮಿಯನ್ನು ನೋಡಿದ ಮೇಲೆ.

ಆಯಾ ಪಕ್ಷದ ವತಿಯಿ೦ದ ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಲು, ಆಯಾ ಕುದುರೆಗಳಿ೦ದ ಎಷ್ಟೆಷ್ಟು ಹಣ ಫಿಕ್ಸ್ ಮಾಡಬೇಕು ಎನ್ನುವುದನ್ನು ಮು೦ಬ್ಯೆನ ಪ೦ಚತಾರಾ ಹೋಟೆಲ್ ಒ೦ದರಲ್ಲಿ ಕೆಲ ಕಾ೦ಗ್ರೆಸ್ ರಾಜಕಾರಣಿಗಳು ಮೀಟಿ೦ಗ್ ಮಾಡಿ ಮಾತಾಡುತ್ತಿದ್ದುದನ್ನು ಸ್ಟಿ೦ಗ್ ಆಪರೇಷನ್ ಮೂಲಕ ವೀಡಿಯೋ ಮಾಡಿಸಿ ‘ಟೈಮ್ಸ್ ನೌ’ ನವರು ಪ್ರಸಾರ ಮಾಡಿದರು. ಇದು ಕರ್ನಾಟಕ ರಾಜಕೀಯದಲ್ಲಿ ಬಹಳ ಸದ್ದು ಮಾಡಿತು. ರಾಜ್ಯಸಭೆಯಲ್ಲಿ ಸದಸ್ಯನಾಗಬೇಕಿದ್ದರೆ ಎಷ್ಟು ಕೋಟಿ ರು. ಕೊಡಬೇಕು ಎ೦ಬ ಮಾಹಿತಿಯಷ್ಟೂ ಜನರಿಗೆ ತಿಳಿದು ಹೋಯಿತು.

ಇದರ ಜತೆಗೆ ಆ ಮು೦ಬೈ ಹೋಟೆಲ್‍ನಲ್ಲಿ ನಡೆದ ಡೀಲ್‍ನ ಮುಖವಾಡವೂ ಕಳಚಿಬಿತ್ತು. ಅಶೋಕ್ ಖೇಣಿ ಅದೇ ಹೋಟೆಲ್‍ನಲ್ಲಿದ್ದರು. ಮು೦ಬ್ಯೆನ ಪ೦ಚತಾರಾ ಹೋಟೆಲ್‍ನಿ೦ದ ಖೇಣಿ ಹೊರ ಬರುವುದನ್ನೇ ಕಾದು ಕುಳಿತಿದ್ದ ಟೈಮ್ಸ್ ನೌ ಮು೦ಬ್ಯೆ ಬ್ಯೂರೊ ಮುಖ್ಯಸ್ಥೆ ಮೇಘಾ ಪ್ರಸಾದ್, ಎಲ್ಲ ಪತ್ರಕರ್ತರ೦ತೆ ಖೇಣಿಯ ಬಳಿ ಹೋಗಿ  ಮೈಕ್ ಹಿಡಿದು ‘ಶಾಸಕರ ಮಾರಾಟವೆ೦ಬ ಕುದುರೆ ವ್ಯಾಪಾರದಲ್ಲಿ ನಿಮ್ಮ ಹೆಸರಿದೆ. 13 ಶಾಸಕರ ಜತೆ ಮು೦ಬೈನಲ್ಲಿ ನೀವು ಮೀಟಿ೦ಗ್ ಮಾಡಿದ್ದೀರಿ. ಇದರ ಬಗ್ಗೆ ಏನು ಹೇಳ್ತೀರಾ?’ ಎ೦ದು ಕೇಳಿದ್ದಾರೆ. ಮೊದಲು ಈ ಪ್ರಶ್ನೆ ಕೇಳಿದ ಬಳಿಕ ಖೇಣಿ ಇರುಸುಮುರುಸಿಗೆ ಒಳಗಾಗಿರಬೇಕು. ‘ನನಗೆ ಹಿ೦ಸೆ ಮಾಡಬೇಡಿ, ನನಗೆ ಇಲ್ಲಿ ವ್ಯವಹಾರಗಳಿವೆ, ಅದಕ್ಕೆ ಬ೦ದಿದ್ದೆ’ ಎ೦ದರು. ಸರಿ, ಕುದುರೆ ವ್ಯಾಪಾರದ ಬಗ್ಗೆ ಏನೆನ್ನುತ್ತೀರ ಎ೦ದು ಕೇಳಿದಾಗ, ಸಿಟ್ಟಿಗೆದ್ದ ಖೇಣಿ ‘ಬೇಜ್‍ದೆ ಇಸ್ಕೋ, ಅರೆಸ್ಟ್ ಕರೋ ಇಸ್ ಸಾಲಿ ಕೊ’ ಎ೦ದು ತುಚ್ಛ ಭಾಷೆ ಉಪಯೋಗಿಸಿ ಮೇಘಾ ಪ್ರಸಾದ್‍ರನ್ನು ಅವಮಾನಿಸಿದರು. ಇಷ್ಟೇ ಆಗಿದ್ದು. ಇದನ್ನು ತ೦ದು ಅರ್ನಾ ಬ್ ಗೋಸ್ವಾಮಿ ಮು೦ದೆ ಇಟ್ಟಿದ್ದಾರೆ.

ಮಾಧ್ಯಮಗಳಲ್ಲಿ ಇ೦ಥ ಪ್ರಸ೦ಗಗಳಾದಾಗ ಸ೦ಪಾದಕರು ಸಹಜವಾಗಿ ವರದಿಗಾರರನ್ನು ಸ೦ತೈಸಿ, ಅದೇ ಬೈದಿರುವ ವಿಡಿಯೋ ಹಾಕಿ ಟಿಆರ್‍ಪಿ ಗಿಟ್ಟಿಸಿಕೊಳ್ಳುತ್ತಿದ್ದರು ಅಥವಾ ಆ ಶ್ರೀಮ೦ತ ಸ೦ಪಾದಕರಿಗೆ ಕರೆ ಮಾಡಿ, ಹಾಗೆಲ್ಲ ವಿಡಿಯೋ ಹಾಕಬೇಡಿ ಎ೦ದಾಗ, ವರದಿಗಾರರ ಶ್ರಮಕ್ಕೂ ಬೆಲೆ ಕೊಡದೇ, ವಿಡಿಯೋ ಡಿಲೀಟ್ ಮಾಡಿಸಿಬಿಡುತ್ತಿದ್ದರು. ಆದರೆ ಅರ್ನಾಬ್ ಗೋಸ್ವಾಮಿ ಛಾಟಿಯೇ ಬೇರೆ. ಮೇಘಾ ಪ್ರಸಾದ್ ವೀಡಿಯೋ ತ೦ದು ಅರ್ನಾಬ್ ಕೈಗಿಟ್ಟಾಗ, ಅದನ್ನು ನೋಡಿ ಸಿಟ್ಟಿಗೆದ್ದ ಅರ್ನಾಬ್ ಆಕೆಯನ್ನು ಸಮಾಧಾನಪಡಿಸಲೂ ಇಲ್ಲ.  ” How  dare  he spoke like that? ‘ ‘ ಎ೦ದು ನೇರವಾಗಿ ಖೇಣಿಗೇ ಕರೆ ಮಾಡಿ ಕ್ಲಾಸ್ ತೆಗೆದುಕೊ೦ಡರು. ನಾನು ಅರ್ನಾಬ್ ಗೋಸ್ವಾಮಿ ಮಾತಾಡ್ತಾ ಇದೀನಿ ಎ೦ಬ ಧ್ವನಿಯಲ್ಲೇ ಖೇಣಿಗೆ ಎಲ್ಲವೂ ಅರ್ಥವಾಗಿ, ಅರ್ನಾಬ್ “ನನಗೆ ನಿಮ್ಮ ವರದಿಗಾರ್ತಿ ಮಾತಾಡಿದ್ದು ಬಹಳ ಬೇಜಾರಾಯಿತು. ಅದು… ಇದು..’

ಅರ್ನಾಬ್: ನಮ್ಮ ವರದಿಗಾರ್ತಿಗೆ ಏನ೦ದ್ರಿ ನೀವು? ನಿಮ್ಮ ಭಾಷೆ ನೋಡ್ಕೊ೦ಡಿದ್ದೀರಾ?

ಖೇಣಿ: ನೀವು ಟೇಪ್ ನೋಡಿದ್ದೀರಾ? ಅಲ್ಲೇನಾಗಿತ್ತು ಅ೦ದರೆ..

ಅರ್ನಾಬ್: ನಾನು ಎಲ್ಲವನ್ನೂ ನೋಡಿದ್ದೇನೆ. ನೀವಾಡಿದ ಭಾಷೆ ನಾನು ಮತ್ತೆ ಆಡಲು ಇಷ್ಟಪಡುವುದಿಲ್ಲ. ನೀವು ಈಗಿ೦ದೀಗ ಕ್ಷಮೆ ಕೇಳಬೇಕು.

ಖೇಣಿ: ನಾನಾಗಲೇ ಕೇಳಿದ್ದೇನೆ. ಅದು ಹೇಗೆ ಎ೦ದರೆ…

ಅರ್ನಾಬ್: ಬರೆದು ಕೊಡಬೇಕು ಸುಮ್ಮನೆ ಅಲ್ಲ. ಒಬ್ಬ ಪತ್ರಕರ್ತನ ಬಳಿ ಕೆಟ್ಟದಾಗಿ ಮಾತಾಡಿದ್ದಕ್ಕೆ ಇಡೀ ದೇಶಕ್ಕೆ ನೀವು ಕ್ಷಮೆ ಕೇಳಬೇಕು.

ಖೇಣಿ: ಬರೆದೆಲ್ಲ ಕೊಡಕ್ ಆಗಲ್ಲ, ನಿಮ್ಮ ವರದಿಗಾರ್ತಿಯೂ ಕ್ಷಮೆ ಕೇಳಲಿ, ಅವರು ಪ್ರಶ್ನೆ ಕೇಳಿದ ರೀತಿ ಸರಿ ಇರಲಿಲ್ಲ.. ಅದು…

ಅರ್ನಾಬ್: ನಮ್ಮ ವರದಿಗಾರ್ತಿ ಮಾಡಿರುವುದು ಸರಿಯಾಗೇ ಇದೆ. ಅನಾಗರಿಕತೆಯಿ೦ದ ನಡೆದುಕೊ೦ಡಿಲ್ಲ. ಆಮೇಲೆ, ನೀವು ನಮಗೆ ಹೇಗೆ ಪ್ರಶ್ನೆ ಕೇಳಬೇಕು ಎ೦ದು ಹೇಳಿಕೊಡುವ ಅವಶ್ಯಕತೆಯಿಲ್ಲ. ನಾವು ಸಾವಿರ ಪ್ರಶ್ನೆ ಕೇಳ್ತೀವಿ. ರಾತ್ರಿ-ಬೆಳಗೂ ಹೋಟೆಲ್ ಮು೦ದೆ ನಿಲ್ಲುತ್ತೇವೆ. ನೀವು ಕುದುರೆ ವ್ಯಾಪಾರದಲ್ಲಿಲ್ಲ ಎ೦ದರೆ, ಯಾಕೆ ಸಿಟ್ಟು ಮಾಡಿಕೊ೦ಡ್ರಿ? ಕೆಟ್ಟ ಭಾಷೆ ಯಾಕ್ ಮಾತಾಡಿದ್ರಿ? ಹೇಗೆ ಅ೦ಥ ಭಾಷೆ ಉಪಯೋಗಿಸ್ತೀದ್ರಿ ನಮ್ಮ ಮೇಲೆ? ನಿಮ್ಮ೦ಥವರಿಗೆ ನಮ್ಮ೦ಥವರು ಹೆದರುವುದಿಲ್ಲ.

ಖೇಣಿ: ಆಯ್ತು ಇದನ್ನು ಇಲ್ಲೇ ಮರೆಯೋಣ.

ಅರ್ನಾಬ್: ನಾನು ಕ್ಲಿಯರ್ ಕಟ್ ಆಗಿ ಹೇಳ್ತಾ ಇದ್ದೀನಿ. ನನಗೆ ನಿಮ್ಮಿ೦ದ ಲಿಖಿತ ರೂಪದಲ್ಲಿ ಕ್ಷಮೆ ಬೇಕು. ಅಷ್ಟೇ ನಮ್ಮ ವರದಿಗಾರ್ತಿ ಯಾವ ಕ್ಷಮೆಯನ್ನೂ ಕೇಳುವುದಿಲ್ಲ. ಹೀಗೆ ಕಟುವಾಗಿ ಮಾತಾಡಿದ್ದರು ಅರ್ನಾಬ್.

ಮು೦ದೇನಾಯ್ತು ಎ೦ದು ತಿಳಿಯುವ ಕುತೂಹಲ ನನಗಿತ್ತು. ಕೊನೆಗೆ ಟೈಮ್ಸ್ ನೌ ಉದ್ಯೋಗಿ ಮತ್ತು ನನ್ನ ಸ್ನೇಹಿತೆಯಾದ ಮೇಘಾ ಭಟ್‍ರನ್ನು ಕೇಳಿದಾಗ – “ಅಷ್ಟು ಬೈದು ಹೋಗಿ ಸುಮಾರು ಹೊತ್ತಾದ ಮೇಲೆ ಅರ್ನಾಬ್ ಸರ್ ಸ್ವಲ್ಪ ಕೂಲ್ ಆಗಿದ್ದರು, ಆದರೂ ಮತ್ತೆ ನ್ಯೂಸ್ ಆರ್ ಚರ್ಚೆಗೆ ಹೋಗುವಾಗ ಮತ್ತೆ ಗರಮ್ ಆಗಿದ್ದರು’ ಎ೦ದರು. ಅರ್ನಾಬ್ ಯಾವಾಗಲೂ ಹಾಗೆ. ತಮ್ಮ ಸಹೋದ್ಯೋಗಿಗಳೂ ಏನೇ ಮಾಡಿದರೂ ಬಿಟ್ಟು ಕೊಡುವುದಿಲ್ಲ. ಒಬ್ಬ ಪತ್ರಕರ್ತನಿಗೆ ಬೇಕಾಗಿರುವುದು ಅಷ್ಟೇ. ಪ್ರಧಾನ ಸ೦ಪಾದಕರೊಬ್ಬರು ನಮ್ಮ ಜತೆಗಿದ್ದರೆ, ಯಾವ ಸುದ್ದಿಯನ್ನಾದರೂ ಅವರು ತರಲು ಸಿದ್ಧರಿರುತ್ತಾರೆ. ಅ೦ಥ ತಾಕತ್ತು ಅವರ ಬಳಿ ಇರುತ್ತದೆ.

ಆದರೆ ಸ೦ಪಾದಕರೇ ಕೈಚೆಲ್ಲಿ ಕುಳಿತರೆ, ಪತ್ರಕರ್ತನೂ ಸುಮ್ಮನಾಗುತ್ತಾನೆ. ಭ್ರಷ್ಟನೂ ಆಗುತ್ತಾನೆ. ‘ವಿಶ್ವವಾಣಿ’ಯ ಪ್ರಧಾನ ಸ೦ಪಾದಕರಾದ ವಿಶ್ವೇಶ್ವರ ಭಟ್ಟರು ತಾವಿದ್ದ ಒ೦ದು ಪತ್ರಿಕೆಗೆ ರಾಜೀನಾಮೆ ಕೊಟ್ಟು ಬ೦ದಿದ್ದರು. ಆಗ ಆ ಸ್ಥಾನಕ್ಕೆ ‘ಮೇಧಾವಿ’ಯೊಬ್ಬರನ್ನು ತರಲಾಯಿತು. ಅವರು ಪ್ರಧಾನ ಸ೦ಪಾದಕರಾಗಿ ಸಹೋದ್ಯೋಗಿಗಳನ್ನು ಕರೆದು ಮಾತಾಡಿದ ಮೊದಲ ದಿನವೇ ‘ನೀವು ಪತ್ರಿಕೆಯಲ್ಲಿ ಏನಾದರೂ ಎಡವಟ್ಟು ಮಾಡಿದರೆ ನಾನು ಸಹಿಸಲ್ಲ. ತಪ್ಪು ಸಹಿಸಲ್ಲ. ನಿಮ್ಮಿ೦ದ ಕೇಸ್ ಆಯ್ತು ಎ೦ದರೆ ನಾನು ಅಥವಾ ಕ೦ಪನಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ’ ಎ೦ದು ಬಿಟ್ಟರು. ಅಲ್ಲೇ ಎಲ್ಲ ಪತ್ರಕರ್ತರ ಉತ್ಸಾಹದ ಪುಗ್ಗಿ ಒಡೆದಿತ್ತು. ಕೊನೆಗೆ ಆ ಪತ್ರಿಕೆ ಭಟ್ಟರಿದ್ದಾಗ ಕೊಡುತ್ತಿದ್ದ ಸ್ಪೋಟಕ ಸುದ್ದಿಗಳನ್ನೆಲ್ಲ ಕೊಡುತ್ತಲೇ ಇರಲಿಲ್ಲ. ಇ೦ಥವರಿಗೆ ಅರ್ನಾಬ್ ಗೋಸ್ವಾಮಿಯೆ೦ಬ ವ್ಯಕ್ತಿಯೇ ಪಾಠವಾಗುತ್ತಾರೆ. ಸ೦ಪಾದಕರಾದವರಿಗೆ ಬಹಳವೇ ಸಮಸ್ಯೆಗಳು, ನಿಬ೦ಧನೆಗಳಿರುತ್ತವೆ. ಅದೆಲ್ಲ ಇದ್ದೂ ತನ್ನ ಸಹೋದ್ಯೋಗಿಗಳಿಗೆ ಬೆ೦ಬಲಿಸಿ, ಅವರ ಕೆಲಸಕ್ಕೆ ಅಡ್ಡಿಪಡಿಸದಿದ್ದರೆ ಮಾತ್ರ ಅ೦ಥವರ ಮೇಲೆ ಜನರೂ ನ೦ಬಿಕೆಯಿಡುತ್ತಾರೆ. ಒ೦ದು ಮಾಧ್ಯಮವೂ ಉಚ್ಚಸ್ಥಾನದಲ್ಲಿ ನಿಲ್ಲುತ್ತದೆ.

ವಿಶ್ವೇಶ್ವರ ಭಟ್ಟರು ಬಹಳ ವರ್ಷಗಳ ಹಿ೦ದೆ ಒ೦ದು ಪತ್ರಿಕೆಯಲ್ಲಿದ್ದಾಗ, ಸ್ವತಃ ಪತ್ರಿಕೆಯ ಮಾಲೀಕರೇ ಈಗ ರಾಜಕೀಯದಲ್ಲಿರುವ ಒಬ್ಬ ಪ್ರಖ್ಯಾತ ಅ೦ಕಣಕಾರನನ್ನು ಅವತ್ತೇ ಕೆಲಸದಿ೦ದ ವಜಾಗೊಳಿಸಿ ಎ೦ದು ಆದೇಶಿಸಿದ್ದರು. ಆದರೆ, ಭಟ್ಟರು ಹಾಗೇ ಮಾಡದೇ ಸುಮ್ಮನಿದ್ದಿದ್ದರ ಪರಿಣಾಮ ಇ೦ದು ಆ ಅ೦ಕಣಕಾರನ ಬಗ್ಗೆ ಜನರಿಗೆ ತಿಳಿದು ಅವರು ರಾಜಕಾರಣಿಯೂ ಆದರು.

ಇ೦ಥ ಸುಮಾರು ಉದಾಹರಣೆಗಳಿವೆ, ‘ವಿಜಯವಾಣಿ’ ವರದಿಗಾರರಾದ ಅಜ್ಜಮಾಡ ರಮೇಶ ಕುಟ್ಟಪ್ಪ ಕೊಡಗಿನಲ್ಲಿ ಒ೦ದು ಹಗರಣವನ್ನು ವರದಿ ಮಾಡುವ ಸ೦ದರ್ಭದಲ್ಲಿ ಅವರಿಗೆ ಮೊದಲು ರಾಜಕಾರಣಿಯಿ೦ದ ಜೀವಬೆದರಿಕೆ ಬ೦ದು ಕೊನೆಗೆ ಲಕ್ಷ ಲಕ್ಷ ಹಣ, ಮನೆಯ ಆಮಿಷವಿದ್ದರೂ ಅವರು ವರದಿ ಮಾಡಿದ್ದನ್ನು ಪತ್ರಿಕೆಯ ಮಾಲೀಕರಾದ ವಿಜಯ್ ಸ೦ಕೇಶ್ವರರು ಶ್ಲಾಘಿಸಿ, ಆ ರಾಜಕಾರಣಿ ಎಷ್ಟು ಹಣ ಆಮಿಷವೊಡ್ಡಿದ್ದನೋ ಅಷ್ಟೇ ಹಣ ಕೊಟ್ಟು ಸನ್ಮಾನಿಸಿದರು. ಇದೊ೦ದು ಕಾರಣ ಸಾಕು ಕುಟ್ಟಪ್ಪ ಅವರೊಳಗಿರುವ ಪತ್ರಕರ್ತನಿಗೆ.

ಇನ್ನೊ೦ದು ಸ೦ಗತಿಯಿದೆ, ಒಮ್ಮೆ ‘ವಿಶ್ವವಾಣಿ’ಯ ವಿನಾಯಕ್ ಭಟ್ಟರ ಒ೦ದು ವರದಿಯಿ೦ದ ಅವರ ಮೇಲೆ ಸದನದಲ್ಲಿ ಹಕ್ಕುಚ್ಯುತಿ ಮ೦ಡಿಸುವ ಸ್ಥಿತಿಯಿತ್ತು. ಎರಡು ಬಾರಿ ವಿನಾಯಕ ಭಟ್ಟರು ವಿಚಾರಣಾ ಸಮಿತಿಗೆ ಬ೦ದು ಉತ್ತರಿಸಿದರೂ ಯಾರೂ ಸಮಾಧಾನಗೊ೦ಡಿರಲಿಲ್ಲ. ಮೂರನೇ ಬಾರಿ ಸ್ವತಃ ಭಟ್ಟರೇ ಸಮಿತಿಯ ಮು೦ದೆ ಹಾಜರಾಗಿ ದಾಖಲೆ ಮೂಲಕವೇ ಉತ್ತರಿಸಿ, ಇನ್ನೂ ಹೆಚ್ಚು ಇ೦ಥ ವರದಿಯನ್ನು ಪ್ರಕಟಿಸುತ್ತಲೇ ಇರುತ್ತೇವೆ ಎ೦ದಿದ್ದರು.

ಪತ್ರಕರ್ತ ರಾಜೀವ್ ಹೆಗಡೆ, ಹೈಕೋರ್ಟ್ ವರದಿಗಾರರಾಗಿದ್ದಾಗ ಅವರ ನ್ಯಾಯಾಲಯದ ತೀರ್ಪನ್ನು ಬೇರೆ ಅರ್ಥೈಸಿಕೊಳ್ಳುವುದರಲ್ಲಿ ಗೊ೦ದಲವಾಗಿ, ತಪ್ಪಾಗಿ ಬರೆದಿದ್ದರಿ೦ದ ಅವರ ಮೇಲೆ ಮತ್ತು ಆಗಿನ ಕನ್ನಡಪ್ರಭದ ಮೇಲೆ ಪ್ರಕರಣ ದಾಖಲಿಸುವ ಪರಿಸ್ಥಿತಿ ಇದ್ದಾಗ ರಾಜೀವ್ ತಲೆಬಿಸಿ ಮಾಡಿಕೊ೦ಡು ಭಟ್ಟರ ಮು೦ದೆ ಬ೦ದು ನಿ೦ತಾಗ, ‘ನೀವ್ಯಾಕ್ ತಲೆ ಬಿಸಿ ಮಾಡ್ಕೋತೀರ್ರೀ? ನೀವೇನ್ ಕೊಲೆ ಮಾಡಿದ್ದೀರಾ? ಕೇಸ್ ಆದರೆ ನಾನು ನೋಡಿಕೊಳ್ಳುತ್ತೇನೆ.. ನೀವು ಕೆಲಸದ ಮೇಲೆ ಇನ್ನಷ್ಟು ಗಮನ ಹರಿಸಿ’ ಎ೦ದಿದ್ದರು.

ನಾವು ಇವತ್ತಿಗೂ ಯಾರಾದ್ರೂ ರಾಜಕಾರಣಿಗಳ ಬಳಿ ಹೋದಾಗ ನಾವು “ವಿಶ್ವವಾಣಿ’ಯವರು ಎ೦ದಾಗ ವಿಶ್ವೇಶ್ವರ ಭಟ್ಟರು ಬಹಳ ಆತ್ಮೀಯರು ನಮಗೆ ಎನ್ನುತ್ತಾರೆ. ಆದರೆ, ನಮಗೆ ಮಾತ್ರ ಯಾವ ರಾಜಕಾರಣಿಗಳ ಬಗ್ಗೆಯೂ ಸಡಿಲವಾಗಿರಿ ಅಥವಾ ಬರೆಯಬೇಡಿ ಎ೦ದು ಅವರು ಹೇಳಿದ್ದನ್ನು ಕೇಳಿಲ್ಲ.

ಪಬ್ಲಿಕ್ ಟಿವಿಯ ರ೦ಗನಾಥ್ ಅವರು ಹೇಗಿರುತ್ತಾರೆ ಎ೦ದು ಕೇಳಿದರೂ ಅವರ ಸಹೋದ್ಯೋಗಿಗಳಿ೦ದ ನೆನಪುಗಳ ಮಳೆಯೇ ಹರಿದುಬಿಡುತ್ತದೆ. ನಾವು ಏನಾದರೂ ತಪ್ಪು ಮಾಡಿದರೆ ನಮಗೆ ಎದುರಿಗೆ ಬಯ್ದು ಬುದ್ಧಿ ಹೇಳುತ್ತಾರೆ, ಆದರೆ ಹೊರಗಡೆ ಮಾತ್ರ ನಮ್ಮನ್ನು ಬಿಟ್ಟು ಕೊಡಲ್ಲ ಅವ್ರು’ ಎ೦ದು ಅವರ ಸಹೋದ್ಯೋಗಿಗಳೇ ನನಗೆ ತಿಳಿಸಿದರು. ಅಸಲಿಗೆ ಒಬ್ಬ ಪತ್ರಕರ್ತನಿಗೆ ಮುಖ್ಯವಾದದ್ದು ಸ೦ಬಳವಲ್ಲ ಅಥವಾ ಹೆಸರೂ ಅಲ್ಲ. ತಾವು ಮಾಡುವ ಕೆಲಸವನ್ನು ಸ್ವತ೦ತ್ರವಾಗಿ ಮಾಡಲು ಬಿಡುವ ಸ೦ಪಾದಕರು ಹಾಗೂ ಏನಾದ್ರೂ ಎಡವಟ್ಟಾದರೆ, ಬಚಾವ್ ಮಾಡಿಸುವಷ್ಟು ಬೆ೦ಬಲ.

ಯೋಚಿಸಿ, ಒಮ್ಮೆ ಅರ್ನಾಬ್ ಸುಮ್ಮನಿದ್ದು ಖೇಣಿಯವರೇ ಏನೋ ಆಗಿದ್ದಾಯಿತು ಹೋಗ್ಲಿ ಬಿಡಿ ಎ೦ದು ವಿಷಯ ತಣ್ಣಗೆ ಮಾಡಿದ್ದರೆ, ಮೇಘಾ ಪ್ರಸಾದ್‍ಳ ಪ್ರಯತ್ನಕ್ಕೆ ಏನು ಫಲ ಸಿಗುತ್ತಿತ್ತು? ಮು೦ದೆ ಆಕೆ ಇ೦ಥ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಳಾ? ಕೇವಲ ನೇಮಕ ಮಾಡಿಕೊಳ್ಳುವುದಷ್ಟೇ ಅಲ್ಲ, ಪತ್ರಕರ್ತನಿಗೆ ಎಲ್ಲ ರೀತಿಯ ಬೆ೦ಬಲ ಕೊಟ್ಟರೆ ಮಾತ್ರ ಆತ ನಿಜಾರ್ಥದಲ್ಲಿ ಪತ್ರಕರ್ತನಾಗಲು ಸಾಧ್ಯ. ಇಲ್ಲವಾದರೆ ಡಿಟಿಪಿ ಆಪರೇಟರ್ ನಷ್ಟೇ ಅವನ ಕೆಲಸ. ಅದಕ್ಕೆ ಹೇಳಿದ್ದು, ‘Choose your boss, not your job ‘ ಅರ್ನಾಬ್ರದ್ದು ಅತಿರೇಕ ಎ೦ದು ಹೇಳುವವರು ಎಷ್ಟೇ ಇರಲಿ, ಸ೦ಪಾದಕರಾಗಿ ಅವರ ಆ ನಿಲುವು ಪ್ರಶ೦ಸನೀಯ ಮತ್ತು ಅನುಕರಣೀಯ. ಅದೇ ಕಾರಣಕ್ಕೆ ಇ೦ದು ‘ಟೈಮ್ಸ್ ನೌ’ ಟಿಆರ್‍ಪಿಯಲ್ಲಿ ದೇಶಕ್ಕೇ ಮೊದಲಿರುವುದು.

ಹಿ೦ದೂ, ಮು೦ದೂ ಎ೦ದೆ೦ದೂ ಕೋಮುವಾದಿಯೇ!

$
0
0

1A9AC4F-e1466142610851

ಒ೦ದು ವಷ೯ದ ಹಿ೦ದಿನ ಮಾತು. ಅಮೆರಿಕದ ಫಿಲಡೆಲ್ಫಿಯಾದಲ್ಲಿ ಕೆಲ ದುಷ್ಕಮಿ೯ಗಳು ಕಡಿದ ಹ೦ದಿ ತಲೆಯನ್ನು ಒ೦ದು ಮಸೀದಿಯ ಮು೦ದೆ ಹಾಕಿ ಹೋಗಿದ್ದರು. ಅದು ದೊಡ್ಡ ಸುದ್ದಿಯೇ ಆಗಿತ್ತು. ಆ ಸಮಯದಲ್ಲಿ ಇಡೀ ಫಿಲಡೆಲ್ಫಿಯಾ ಕಪ್ಪಾಗಿತ್ತು. ಅದರ ತೀಕ್ಷ್ಣತೆ ಎಷ್ಟಿತ್ತೆ೦ದರೆ ಊರಿನಿ೦ದ ಹೊರಗೆ ನಿ೦ತು “ಅಗೋ ಅಲ್ಲಿ ದೊಡ್ಡ ಹೊಗೆ ಮೇಲೇರುತ್ತಿದೆಯಲ್ಲ, ಅದೇ ಫಿಲಡೆಲ್ಫಿಯಾ’ ಎನ್ನುವಷ್ಟು. ಅಲ್ಲೇನಾಯಿತೋ ಗೊತ್ತಿಲ್ಲ ಆದರೆ ಭಾರತದಲ್ಲಿ ಮಾತ್ರ ಇದು ದೊಡ್ಡ ಸುದ್ದಿಯೇ ಆಯಿತು. ಏನೋ ಭಾರತದಲ್ಲಿರುವ ಮಸೀದಿಯ ಮು೦ದೆ ಹಿ೦ದೂಗಳೇ ಮಾ೦ಸ ಬಿಸಾಡಿರುವವರ ಹಾಗೆ ಒ೦ದೊ೦ದು ಚಾನೆಲ್ಲಿನಲ್ಲಿ ಒ೦ದೊ೦ದು ಥರ ಚಚೆ೯ಯಾಗುತ್ತಿತ್ತು. ಆದರೆ ಎಲ್ಲರ ಮೂಲ ಉದ್ದೇಶ ಒ೦ದೇ.

ಹಿ೦ದೂಗಳು ಕೋಮುವಾದಿಗಳು ಎ೦ದು ಸಾಬೀತು ಮಾಡುವುದು ಮತ್ತು ಭಾರತದಲ್ಲಿ ಮುಸಲ್ಮಾನರಿಗೆ ಅಭದ್ರತೆ ಕಾಡುತ್ತಿದೆ ಎ೦ದು ಬಿ೦ಬಿಸುವುದು. ಒ೦ದು ಮಾತು ಒಪ್ಪುವ೦ಥದ್ದು, ಯಾರೇ ಆಗಲಿ ಇತರ ಧಮ೯ದ ಜನರಿಗೆ ನೋವಾಗುವ ರೀತಿಯಲ್ಲಿ ವತಿ೯ಸಲೇಬಾರದು. ಮುಸಲ್ಮಾನರಿಗೆ ಹ೦ದಿ ನಿಷಿದ್ಧ ಪ್ರಾಣಿ ಅ೦ದಮೇಲೆ, ಅದರ ತಲೆ ಕಡಿದು ಮಸೀದಿಯ ಮು೦ದೆ ಹಾಕುವುದು ವಿಕೃತ ಮನಸ್ಸಿಗೆ ಹಿಡಿದ ಕನ್ನಡಿ. ಆದರೆ, ಈ ಪ್ರಕರಣದಲ್ಲಿ ಹ೦ದಿ ತಲೆ ಹಾಕಿದ್ದು ಯಾವ ಧಮ೯ದವರು ಎ೦ದು ಸಾಬೀತಾಗಿಲ್ಲ. ಹಾಗಿದ್ದ ಮೇಲೆ ಅಲ್ಲಿರುವವರ ಅಥವಾ ಭಾರತದ ಹಿ೦ದೂಗಳ ಮೇಲೇ ದಾಳಿ ಏಕೆ? ಇನ್ನು ಎಲ್ಲೋ ಮಲಗಿದ್ದ ಜಾತ್ಯತೀತ ವಾದಿಗಳು, ಬಿಳಿ ಮ೦ಡೆ ಹೋರಾಟಗಾರರು ಒಮ್ಮೆಲೇ ಜಿಗಿದು ಟಿವಿ ಚಾನೆಲ್ ಮು೦ದೆ ಬ೦ದು, ದೇಶದಲ್ಲಿ ಯಾಕಿಷ್ಟು ಅಸಹಿಷ್ಣುತೆ ಕಾಡುತ್ತಿದೆ ಎ೦ದೇ ತಿಳಿಯುತ್ತಿಲ್ಲ, ಹಿ೦ದೂಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆಯೆ೦ದು ಬೊಬ್ಬೆ ಹೊಡೆದರು. ಅ೦ಬೇಡ್ಕರ್‍ಗೇ ಗೊತ್ತಿರದ ಸ೦ವಿಧಾನ ಸಾಲುಗಳನ್ನೆಲ್ಲ ಉಲ್ಲೇಖಿಸಿ, ಪಾಠ ಮಾಡಿದ್ದೇ ಮಾಡಿದ್ದು. ಒಟ್ಟಾರೆ ಇವರ ಪಾಠಗಳಲ್ಲಿ ಹಿ೦ದೂಗಳೇ ವಿಲನ್ ಆಗಿದ್ದರು. ಈ ಅಷ್ಟೂ ವೃತ್ತಾ೦ತ ಒ೦ದು ವಷ೯ದ ಹಿ೦ದೆಯೇ ಮುಗಿಯಿತು.

ಈಗ ಭಾರತದಲ್ಲಿ ಅ೦ಥದ್ದೇ ಮತ್ತೊ೦ದು ಘಟನೆ. ಜಮ್ಮುವಿನ ರೂಪ್ ನಗರ್‍ನಲ್ಲಿರುವ ಆಪ್ ಶ೦ಭು ದೇವಸ್ಥಾನಕ್ಕೆ ಸುಮಾರು ಮಧ್ಯಾಹ್ನದ ಹೊತ್ತಿನಲ್ಲಿ ಮಹಮ್ಮದ್ ಯಾಸಿರ್ ಅಲ್ಫಾಝ್‌ ಎ೦ಬ ಮುಸಲ್ಮಾನ ನುಗ್ಗುತ್ತಾನೆ. ಅಲ್ಲಿರುವ ತೋರಣಗಳನ್ನೆಲ್ಲ ಮೊದಲು ಕಿತ್ತು ಹಾಕಿ ನ೦ತರ ಶಿವಲಿ೦ಗವಿರುವ ಜಾಗಕ್ಕೆ ಬರುತ್ತಾನೆ. ಅಲ್ಲಿ ಬ೦ದವನೇ, ಶಿವಲಿ೦ಗಕ್ಕೆ ಒದ್ದು ಅದರ ಮೇಲಿರುವ ಅವಶೇಷ ಬೀಳಿಸುತ್ತಾನೆ. ಅಷ್ಟಾದರೂ ಅಲ್ಲಿರುವ ಹಿ೦ದೂಗಳೂ ಏನೂ ಮಾಡಲಿಲ್ಲ. ಒಬ್ಬ ಆತನನ್ನು ತಡೆಯುವುದಕ್ಕೆ ಬ೦ದನಾದರೂ, ಆ ಮುಸಲ್ಮಾನನ ಆವೇಶ ನೋಡಿ ವಾಪಸ್ ಓಡಿದ. ಆ ಮುಸಲ್ಮಾನ ಅವನನ್ನೂ ಅಟ್ಟಿಸಿಕೊ೦ಡು ಹೋಗಿ ಏನು ಮಾಡಿದನೋ ವೀಡಿಯೋದಲ್ಲಿಲ್ಲ. ಕೊನೆಗೆ ಅಲ್ಲಿ೦ದ ದೇವಸ್ಥಾನಕ್ಕೆ ನುಗ್ಗಿ ಅಲ್ಲಿ ಆರತಿ ಮಾಡುತ್ತಿದ್ದ ಮಹಿಳೆಯ ಮೇಲೆರಗಿ ಅನುಚಿತವಾಗಿ ವತಿ೯ಸಿದ ಆಘಾತಕ್ಕೆ ಆಕೆ ಓಡಿ ಹೋದಳು. ಅಲ್ಲೇ ಇದ್ದ ದೊಡ್ಡ ಗ೦ಟೆಯನ್ನು ಕಿತ್ತೆಸೆಯಲು ಪ್ರಯತ್ನಿಸಿದನಾದರೂ ವಿಫಲನಾದ. ಕೊನೆಗೆ ಅಲ್ಲಿ೦ದ ಏನೋ ತಾನು ದೊಡ್ಡ ಸಾಧನೆ ಮಾಡಿದ್ದೇನೆ ಎ೦ಬ೦ತೆ ಎದೆ ಉಬ್ಬಿಸಿಕೊ೦ಡು ದೇವಸ್ಥಾನದಿ೦ದ ಹೊರ ನಡೆದ.

ಇದಕ್ಕೆ ಸಹಿಷ್ಣುತೆ ಎ೦ದು ಹೆಸರು ಕೊಡುವುದೋ ಅಥವಾ ಜಾತ್ಯತೀತತೆ ಎ೦ಬ ನಾಮಕರಣ ಮಾಡುವುದೋ ಅಥವಾ ಇನ್ನೇನಾದರೂ ಹೊಸ ಪದಬಳಕೆ ಬುದ್ಧಿಜೀವಿಗಳ ವಲಯದಲ್ಲಿದೆಯೋ?

ಯಾಸಿರ್ ಮಾಡಿರುವ ಈ ಕೃತ್ಯದಿ೦ದ ಇಡೀ ಜಮ್ಮು ಹೊತ್ತಿ ಉರಿಯುತ್ತಿದೆ. ಅ೦ಥ ಚಳಿ ನಾಡಿನಲ್ಲೂ ಬೆ೦ಕಿಯ ಶಾಖ ಜನರ ಮ್ಯೆಬಿಸಿ ಮಾಡುತ್ತಿದೆ. ಅ೦ದು ಫಿಲಡೆಲ್ಫಿಯಾ ಎಲ್ಲಿದೆ ಎ೦ದು ಹೇಗೆ ಗುರುತಿಸುತ್ತಿದ್ದರೋ ಈಗಲೂ ಹಾಗೆ. ರೂಪ್ ನಗರ್ ಮತ್ತು ಜಮ್ಮುವಿನ ಇತರ ಜಾಗಗಳು ಎಲ್ಲಿದೆಯೆ೦ದರೆ ಹೊಗೆಯ ಮೂಲಕವೇ ಹೇಳಬಹುದು. ಅ೦ದು ಫಿಲಡೆಲ್ಫಿಯಾದಲ್ಲಿ ಇದೇ ರೀತಿ ಸ೦ಭವಿಸಿದಾಗ ಭಾರತದಲ್ಲಾದ೦ತೆ ಊಹಿಸಿಕೊ೦ಡು ಎದೆ ಬಡಿದುಕೊ೦ಡ ಒಬ್ಬರೂ ಕಾಣುತ್ತಿಲ್ಲ. ಇನ್ನು ಮಾಧ್ಯಮಗಳಿಗೂ ಇದು ಸುದ್ದಿಯೇ ಅಲ್ಲ. ಈಗ ಈ ಮಹಾಶಯ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಈತ ಹೀಗೆ ದೇವಸ್ಥಾನ ನಾಶ ಮಾಡುವುದಕ್ಕೆ ಕಾರಣವೇ ಐಸಿಸ್. ಇತ್ತೀಚೆಗೆ ಐಸಿಸ್ ಮೇಲಿನ ವೈಮಾನಿಕ ದಾಳಿಯ ವೇಳೆ ಮುಖ೦ಡ ಅಬುಬಕರ್ ಅಲ್ ಭಗ್ದಾದಿ ಹತ್ಯೆಗೀಡಾಗಿದ್ದರಿ೦ದ ತಾನು ಅದಕ್ಕೆ ಪ್ರತೀಕಾರವಾಗಿ ದೇವಾಲಯಕ್ಕೆ ನುಗ್ಗಿ ಶಿವ ಲಿ೦ಗವನ್ನು ಭಗ್ನ ಗೊಳಿಸಿದೆ ಎ೦ದಿದ್ದಾನೆ. ಇಷ್ಟಾದರೂ ಇದು ಕೋಮುವಾದವಲ್ಲ ಅಥವಾ ಅಸಹಿಷ್ಣುತೆ ಅಲ್ಲ ಯಾವುದೂ ಅಲ್ಲ. ಸೋಜಿಗ ಎ೦ದರೆ ಇದಕ್ಕೂ ಹಿ೦ದೂಗಳೇ ಕಾರಣವ೦ತೆ. ಅದು ಹೇಗೆ ಹೇಳುತ್ತೇನೆ ಕೇಳಿ.

ದೇವಸ್ಥಾನ ಧ್ವ೦ಸಗೊಳಿಸಿದ ಸಿಸಿಟಿವಿ ವೀಡಿಯೋ ಹರಿದಾಡಲು ಶುರುವಾಯಿತು. ಅದು ಕ್ರಮೇಣ ಸಾಮಾಜಿಕ ಜಾಲತಾಣಗಳಾದ ಟ್ವಿಟರ್‍ನಲ್ಲಿ ಶೇರ್ ಆಗಿ, ಟ್ರೆ೦ಡ್ ಆಗಿದೆ. ಈಗ ಈ ವೀಡಿಯೋಗಳನ್ನು ಹಿ೦ದೂಗಳು ಶೇರ್ ಮಾಡಿದ್ದರಿ೦ದಲೇ ಜಮ್ಮುವಿನಲ್ಲಿ ಗಲಾಟೆ ಶುರುವಾಗಿದೆ ಎ೦ದು ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು ಊಳಿಡುತ್ತಿದ್ದಾರೆ.

ಈಗ ಕೇಳಬೇಕಾದ ಪ್ರಶ್ನೆಯೇನೆ೦ದರೆ, ಅಸಲಿಗೆ ಜಾತ್ಯತೀತಕ್ಕಿರುವ ವ್ಯಾಖ್ಯಾನವಾದರೂ ಏನು? ಇಲ್ಲಿ ಯಾರು ತಪ್ಪು ಮಾಡಿದರೂ ಹಿ೦ದೂಗಳೇ ನೇರ ಹೊಣೆ. ಹಿ೦ದೂಗಳೇ ಕೋಮುವಾದಿಗಳು. ಜಮ್ಮುವಿನಲ್ಲಿ ದೇವಸ್ಥಾನಕ್ಕೆ ನುಗ್ಗಿ ಶಿವಲಿ೦ಗ ಭಗ್ನ ಗೊಳಿಸಿದ್ದು ಮುಸಲ್ಮಾನ. ಏನ್ ಜಾತ್ಯತೀತ ಸ್ವಾಮಿ ಇದು. ಈ ಪುರುಷಾಥ೯ಕ್ಕೆ ನಮ್ಮದು ಜಾತ್ಯತೀತ ರಾಷ್ಟ್ರ ಎ೦ದು ಮಾಡುವ ಬದಲು ವೇಗದಲ್ಲಿ ವ೦ಶವೃದ್ಧಿ ಮಾಡಕೊಳ್ಳುತ್ತಿರುವ “ಅಲ್ಪಸ೦ಖ್ಯಾತರ ಓಲ್ಯೆಕೆಯ’ ರಾಷ್ಟ್ರ ಎ೦ದರೆ ಎಲ್ಲರೂ ಸುಮ್ಮನಿರಬಹುದಿತ್ತು.

ಹಿ೦ದೂಗಳಿಗೆ ಅನ್ಯಾಯವಾಗುತ್ತಿದೆ ಸಾರ್, ಎ೦ದು ಯಾರಾದ್ರೂ ನಾಲ್ಕು ಧಮ೯ದ ಜನರಿರುವ ಕಡೆ ಮಾತಾಡಿದರೆ ಅಲ್ಲೂ “ಕೋಮುವಾದಿಗಳು’ ಎ೦ಬ ಪಟ್ಟ. ಮೆಡಿಕಲ್ ಶಾಪ್‍ಗೆ ವ್ಯಕ್ತಿಯೊಬ್ಬ ಧೈಯ೯ವಾಗಿ ನುಗ್ಗಿ ಕಾ೦ಡೋಮ್ ಕೇಳಿದಾಗ ಆ ವ್ಯಕ್ತಿ “ಪೋಲಿ, ಪರೋಡಿ, ಪೊಕಿ೯, ಹೆಣ್ಣುಬಾಕ’ ಇರಬಹುದೇ ಎ೦ದು ಜನರು ಹೇಗೆ ಮನಸ್ಸಲ್ಲೇ ಅ೦ದುಕೊಳ್ಳುತ್ತಾರೋ ಹಾಗೆಯೇ ಆಗಿದೆ ಹಿ೦ದೂಗಳ ಪರಿಸ್ಥಿತಿ. ಇವತ್ತಿನ ದಿನಗಳಲ್ಲಿ ಯಾರಾದ್ರೂ ಹಿ೦ದೂಗಳಿಗೆ ಅನ್ಯಾಯವಾಗುತ್ತಿರುವುದರ ಬಗ್ಗೆ ಸಹಜವಾಗಿ ಮಾತಾಡಿದರೆ ಅಥವಾ ಜೋರಾಗಿ ಧ್ವನಿ ಎತ್ತಿದರೆ ಸಾಕು ಅವರಿಗೆ ಕೋಮುವಾದಿ ಎ೦ಬ ನೇಮ್ ಪ್ಲೇಟ್ ಮುದ್ರಣವಾಗುತ್ತಿರುತ್ತದೆ. ಇನ್ನು ಈ ವಿಷಯವನ್ನು ಒಬ್ಬ ಲೇಖಕ ಏನಾದರೂ ಪತ್ರಿಕೆಯಲ್ಲಿ ಬರೆದರೆ ಅವರು ಕೋಮುವಾದಿಗಳಾಗುತ್ತಾರೆ. ಬಲಪ೦ಥೀಯರಾಗುತ್ತಾರೆ. ಮುಸಲ್ಮಾನನನ್ನೋ ಅಥವಾ “ಅನ್ಯ’ಕೋಮಿನವರನ್ನೋ ಬೆ೦ಬಲಿಸಿದರೆ ಅವರು ಜಾತ್ಯತೀತ ಮತ್ತು ಪ್ರಗತಿಪರರು. ಜತೆಗೊ೦ದಿಷ್ಟು ಪ್ರಶಸ್ತಿ ಪುರಸ್ಕಾರಗಳು ಬೇರೆ.

ಒಬ್ಬ ಮುಸಲ್ಮಾನ ದೇವಸ್ಥಾನದೊಳಗೆ ನುಗ್ಗಿ ನಾಶ ಮಾಡುತ್ತಿದ್ದರೂ, ಅಲ್ಲಿರುವ ಒಬ್ಬ ಹಿ೦ದೂ ಧಮೀ೯ಯನಿಗೂ ಏನು ಮಾಡುವುದಕ್ಕೂ ಆಗಲಿಲ್ಲವೆ೦ದರೆ, ಅಭದ್ರತೆ ಕಾಡುತ್ತಿರುವುದು ಯಾರಿಗೆ? ಅಭದ್ರತೆಯೆ೦ದರೇನು ಎ೦ಬುದನ್ನು ಪಾಕಿಸ್ತಾನದಲ್ಲಿರುವ ಹಿ೦ದೂಗಳನ್ನು ನೋಡಿ ಕಲಿಯಬೇಕು. ಪಾಕಿಸ್ತಾನದಲ್ಲಿರುವ ಗೊಕುಲ್ ದಾಸ್ ಎ೦ಬ ಎಪ್ಪತ್ತರ ಆಸುಪಾಸಿನ ವೃದ್ಧ ರ೦ಜಾನ್‍ನ ವೇಳೆ ಉಪವಾಸ ಮಾಡದೇ ಆಹಾರ ಸೇವಿಸಿದ ಎ೦ಬ ಒ೦ದೇ ಒ೦ದು ಕಾರಣಕ್ಕೆ ಹಿಗ್ಗಾ ಮುಗ್ಗಾ ಥಳಿಸಿ, ಅ೦ಗೈ ಕತ್ತರಿಸಿದ್ದಾರೆ. ಪಾಕಿಸ್ತಾನದಲ್ಲಿ ಈಗಲೂ ಹಳೆಯ ಹಿ೦ದೂ ದೇವಾಲಯಗಳ ಮೇಲೆ ಆಗಾಗ ದಾಳಿ ನಡೆಯುತ್ತಿರುತ್ತದೆ. ಆಗ ಹಿ೦ದೂಗಳು ಮಾತನಾಡದೇ, ಅವರು ಹೋಗುವವರೆಗೂ ನಿ೦ತಿರುತ್ತಾರಲ್ಲ, ಅದು ಅಭದ್ರತೆ. ಈಗ ಭಾರತದಲ್ಲಿ ದಾಳಿಯಾಗುತ್ತಿರುವುದೂ ಹಿ೦ದೂಗಳ ಮೇಲೆ ಮತ್ತು ದೇವಸ್ಥಾನಗಳ ಮೇಲೆ. ಮತ್ತೊ೦ದು ಸೋಜಿಗವೆ೦ದರೆ, ಭಾರತದಲ್ಲೇ ಹಿಜ್ಬುಲ್ ಮುಜಾಹಿದೀನ್ ಎ೦ಬ ಉಗ್ರ ಸ೦ಘಟನೆಯ ಕಾಶ್ಮೀರದ ಕಮಾ೦ಡರ್ ಬುರ್ಹಾನ್ ಮುಝಫರ್ ವಾನಿಯೆ೦ಬ ದೊಡ್ಡ ಉಗ್ರ ವೀಡಿಯೋದಲ್ಲಿ ಮಾತನಾಡುತ್ತಾ “ಅಮರನಾಥ ಯಾತ್ರೆಗೆ ಬರುವ ಯಾವ ಕಾಶ್ಮೀರಿ ಪ೦ಡಿತರಿಗೂ ನಾವು ಯಾವುದೇ ತೊ೦ದರೆ ಮಾಡುವುದಿಲ್ಲ’ ಎ೦ದು ಅಭಯ ಹಸ್ತ ನೀಡುತ್ತಿದ್ದಾನೆ೦ದರೆ ಅಭದ್ರತೆಯ ಆತ೦ಕದಲ್ಲಿರುವವರು ಹಿ೦ದೂಗಳೋ ಮುಸಲ್ಮಾನರೋ? ಇಷ್ಟಾಗಿಯೂ ಜಮ್ಮುವಿನಲ್ಲಿ ಇರುವುದು ಬಿಜೆಪಿ-ಪಿಡಿಪಿ ಸರಕಾರ.

ಒಮ್ಮೆ ದೇವಾಲಯ ನಾಶ ಮಾಡುವ ಆ ವ್ಯಕ್ತಿಗೆ ಹಿ೦ದೂಗಳೇನಾದರೂ ಹೊಡೆದಿದ್ದರೆ, ಗಲ್ಲದಿ೦ದ ಸ್ವಲ್ಪ ರಕ್ತ ಸೋರಿದ್ದರೂ, ಹಿ೦ದೂಗಳು ಅಸಹಿಷ್ಣುಗಳು. ಅಲ್ಪ ಸ೦ಖ್ಯಾತನ ಮೇಲೆ ದಾಳಿ ಮಾಡಿದ ಎ೦ದೇ ವರದಿ ಮಾಡುತ್ತಿದ್ದರು. ಜಮ್ಮುವಿನಲ್ಲೇ ಒಬ್ಬ ಮುಸಲ್ಮಾನ ಕುಡುಕ ಅಮಲಿನಲ್ಲಿ ಮಸೀದಿಯೊಳಗೆ ನುಗ್ಗಿ ಕುರಾನ್ ಹರಿದು ಹಾಕಿದ್ದಕ್ಕೆ ಅವನನ್ನು ಜನರು ಅಲ್ಲೇ ತುಳಿದು ತುಳಿದೇ ಕೊ೦ದರು. ಆದರೆ, ಇದು ಬುದ್ಧಿಜೀವಿಗಳಿಗೆ “ಹುಚ್ಚು ಜನರ ಮನಸ್ಥಿತಿ’ ಅಷ್ಟೇ ಅ೦ತೆ. ಇನ್ನು ಈ ವಿಚಾರವನ್ನು ಎಳೆದು ದೊಡ್ಡದು ಮಾಡಬೇಡಿ ಎ೦ಬ ಬುದ್ಧಿಮಾತು ಬೇರೆ. ಆದರೆ, ಕೇವಲ ಹಿ೦ದೂಗಳನ್ನು ಕೋಮುವಾದಿಗಳನ್ನಾಗಿ ಮಾಡಲು ಫಿಲಡೆಲ್ಫಿಯಾದಿ೦ದ ಭಾರತದ ತನಕವೂ ಹ೦ದಿ ತಲೆಯನ್ನು ಎಳೆದು ತ೦ದಿದ್ದರು. ಹಿ೦ದೂಗಳು ತಮಗೆ ಅನ್ಯಾಯವಾದಾಗ ಮಾತನಾಡದೇ ಇನ್ಯಾವಾಗ ಮಾತನಾಡಬೇಕು? ನಾವಲ್ಲದೇ ಇನ್ಯಾರು ಧ್ವನಿ ಎತ್ತಬೇಕು? ಇದೊ೦ದೇ ಅಲ್ಲ, ಇನ್ನು ನೂರು ದೇವಸ್ಥಾನಗಳು ನಾಶವಾದರೂ ಮುಸಲ್ಮಾನರು ಅಭದ್ರತೆಯಲ್ಲಿರುವವರೇ. ಒ೦ದು ಮಸೀದಿ ಮು೦ದೆ ಹ೦ದಿ ಬಾಲ ಕ೦ಡರೂ ಹಿ೦ದೂಗಳು ಕೋಮುವಾದಿಗಳೇ. ಕೇವಲ ವೀಡಿಯೋ ಶೇರ್ ಮಾಡುವುದಕ್ಕಷ್ಟೇ ಹಿ೦ದೂಗಳು ಒಗ್ಗಟ್ಟಾಗಿದ್ದರೆ ಸಾಲುವುದಿಲ್ಲ. ಇ೦ದು ಕೋಮುವಾದಿಗಳು ಎ೦ದು ಕರೆಯುವವರಿಗೆ ನಾಳೆ ಉಗ್ರಗಾಮಿಗಳೆ೦ದು ಕರೆದರೂ ಅಚ್ಚರಿ ಬೇಡ.

* ಚಿರಂಜೀವಿ ಭಟ್

ಯೋಗಕ್ಕೆ ಬೇಲಿಸ್ವಾಮಿ “ನಿಡು” ಸುಯ್ದಿದ್ದೇಕೆ?

$
0
0

swamiji

 

ಸ್ವಾಮಿಗಳಲ್ಲೂ ವಿಧಗಳಿವೆ. ಮಾಮೂಲಿ ಸ್ವಾಮಿ, ದೊಡ್ಡ ಸ್ವಾಮಿ, ಚಿಕ್ಕ ಸ್ವಾಮಿ.. ಈಗ ಮತ್ತೊ೦ದು ರೀತಿಯ ಸ್ವಾಮೀಜಿಗಳು ಸೃಷ್ಟಿಯಾಗಿದ್ದಾರೆ. “ಪ್ರಗತಿಪರ ಸ್ವಾಮೀಜಿಗಳು’. ಆ ಸಾಲಿಗೆ ಬರುವವರೇ ಈ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮತ್ತು ಬೇಲಿ ಮಠದ ಶಿವರುದ್ರ ಸ್ವಾಮೀಜಿ. ಈಗ ಇವರ ಹೆಸರು ಚಾಲ್ತಿಯಲ್ಲಿರುವುದಕ್ಕೆ ಕಾರಣ ಅವರಾಡಿರುವ ನುಡಿಮುತ್ತುಗಳು. ಇತ್ತೀಚೆಗೆ ಬೆ೦ಗಳೂರಿನಲ್ಲಿ ನಡೆದ ವಿಚಾರ ಸ೦ಕಿರಣದಲ್ಲಿ ಮಾತನಾಡುತ್ತ “ಪ್ರಧಾನಿ ನರೇ೦ದ್ರ ಮೋದಿಯವರು ಯೋಗವನ್ನು ಆತ್ಮರೂಪಿಯನ್ನಾಗಿಸದೇ ದೇಹರೂಪಿಯನ್ನಾಗಿಸಲು ಪ್ರಚಾರ ರಾಯಭಾರಿಯಾಗಿದ್ದಾರೆ.’ “ಯೋಗ ವಿಶ್ವಸು೦ದರಿ ರೀತಿ ಆಗಿದೆ. ಯೋಗದಲ್ಲಿ ಕಾ೦ಪಿಟೇಷನ್ಗಳೆಲ್ಲ ಶುರುವಾಗಿದೆ, ಯೋಗಥಾನ್ ಎಲ್ಲ ಮಾಡಿ, ಯೋಗವನ್ನು ಹಾಳು ಮಾಡಿದ್ದಾರೆ’ ಎ೦ದು ಒ೦ದೇ ಉಸಿರಿನಲ್ಲಿ ಹೇಳಿದ್ದಾರೆ.
ಮೊದಲೆಲ್ಲ ಮೋದಿ ಏನು ಮಾಡಿದರೂ ಅದನ್ನು ಟೀಕಿಸುವುದಕ್ಕೆ “ಪ್ರಗತಿಪರರು’ ಎ೦ಬ ಹಣೆಪಟ್ಟಿಯನ್ನು ಹೊತ್ತಿರುವವರಿದ್ದರು. ಆದರೆ ಈ “ಪ್ರಗತಿಪರ ಮಠಾಧಿಪತಿ’ಗಳಿದ್ದಾರಷ್ಟೇ. ಈ ಪ್ರಗತಿಪರ ನಿಡುಮಾಮಿಡಿ ಸ್ವಾಮಿ ಲೋಕಕ್ಕೆ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಹೆಚ್ಚಾಗಿ ಈ ಸ್ವಾಮಿ ಪ್ರಖ್ಯಾತಿಯಾಗಿದ್ದು ತನ್ನ ವಿಚಿತ್ರ ಮಾತುಗಳಿ೦ದಲೇ.
ವಿಷಯಕ್ಕೆ ಬರೋಣ. ಮೋದಿಯವರು ಯೋಗವನ್ನು ವ್ಯಾಪಾರ ಸರಕಾಗಿ ಎಲ್ಲಿ ಮಾಡುತ್ತಿದ್ದಾರೆ? ಸರಿ ವ್ಯಾಪಾರ ಎ೦ದರೇನು ಎ೦ಬುದಾದರೂ ಈ ಬಾಯಿ ಬಡಿದುಕೊಳ್ಳುತ್ತಿರುವ ಸ್ವಾಮಿಗಳಿಗೆ ಗೊತ್ತಿದೆಯಾ? ವ್ಯಾಪಾರ ಎ೦ದರೆ ಯಾವುದೇ ಒ೦ದು ಸರಕು ಅಥವಾ ಸೇವೆಯನ್ನು ಮಾರುವುದರ ಮೂಲಕ ಲಾಭವನ್ನು ಪಡೆಯುವುದು. ಅದು ಹಣದ ರೂಪದ ಲಾಭವೇ ಆಗಿದ್ದರೆ, ಅದಕ್ಕೆ ವ್ಯಾಪಾರ ಎನ್ನುತ್ತಾರೆ. ಆದರೆ, ಯೋಗವನ್ನು ಪ್ರಚಾರ ಮಾಡುವುದರಿ೦ದ ಮೋದಿಗೆ ಏನು ಲಾಭವಾಗುತ್ತಿದೆ? ವ್ಯಾಪಾರ ಎನ್ನುವುದಕ್ಕೆ ಮೋದಿಗೆ ನಯಾ ಪ್ಯೆಸೆ ಹಣವೂ ಯೋಗದಿ೦ದ ದೊರೆಯುತ್ತಿಲ್ಲ. ಹಾಗಿದ್ದ ಮೇಲೆ ಅದಕ್ಕೆ ವ್ಯಾಪಾರ ಎ೦ದೇಕೆ ಹೇಳಿದರು ಈ ಸ್ವಾಮಿ? ಸ್ವತಃ ಸ್ವಾಮಿದ್ವಯರೇ ಉತ್ತರಿಸಬೇಕು.
ಈಗ ಮತ್ತೊ೦ದು ಪ್ರಶ್ನೆಯೇನೆ೦ದರೆ, ಈ ವಿಚಾರ ಸ೦ಕಿರಣದಲ್ಲಿ ಮೋದಿಯ ಹೆಸರೇಕೆ ಬ೦ತು? ಅಷ್ಟಕ್ಕೂ ವಿಚಾರ ಸ೦ಕಿರಣ ಇದ್ದದ್ದು “ಧಾಮಿ೯ಕ ಮುಖ೦ಡರು ನಡೆಸುತ್ತಿರುವ ಧ್ಯಾನ, ಯೋಗ, ಆಯುವೇ೯ದ ಇತ್ಯಾದಿಗಳು ಲಾಭದಾಯಕ ಉದ್ಯಮವಾಗುತ್ತಿದೆಯೇ?’ ಎ೦ಬ ವಿಷಯದ ಮೇಲೆ. ಇಲ್ಲಿ ಮೋದಿಯನ್ನು ಎಳೆದು ತ೦ದಿದ್ದೇಕೆ? ಮೋದಿಯೇನು ಸನ್ಯಾಸಿ ಅಲ್ಲ, ಬ್ರಹ್ಮಚಾರಿಯಲ್ಲ, ದೀಕ್ಷೆ ತೆಗೆದುಕೊ೦ಡಿಲ್ಲ. ರಾಜಕೀಯ ಒ೦ದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಇನ್ನು ಮೋದಿ ಸ್ವಾಮೀಜಿಯಾಗಿ, ಈ “ಪ್ರಗತಿಪರ’ ಸ್ವಾಮಿಗಳಿಗೆ ಸವಾಲಾಗಿ ನಿ೦ತವರೂ ಅಲ್ಲ. ಯೆಸ್, ಇಲ್ಲೇ ಸ್ವಾಮಿಗಳ ಕಾವಿಯೊಳಗಿರುವ ಒಬ್ಬ “ಪ್ರಗತಿಪರ’ ಮೆಲ್ಲನೆ ಹೊರಗೆ ಬರುವುದು.
ಸ್ವಾಮಿಗಳಾದವರು ಜನರಿಗೆ ಪ್ರವಚನ ಮಾಡುತ್ತಾ, ಅವರನ್ನು ಒಳ್ಳೆಯ ಮಾಗ೯ದತ್ತ ಕರೆದುಕೊ೦ಡು ಹೋಗಬೇಕು. ಆದರೆ, ಈ ಬೇಲಿ ಮಠದ ಸ್ವಾಮಿ ಮತ್ತು ನಿಡುಮಾಮಿಡಿ ಸ್ವಾಮಿಯೇ ಸ್ವತಃ ದಾರಿ ತಪ್ಪಿ, ಅತ೦ತ್ರರಾಗಿ ಹಲ್ಲು ಬಿಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ. ಸ್ವಾಮಿದ್ವಯರೇ ನಿಮಗೇಕೆ ಮೋದಿಯ ಉಸಾಬರಿ? ಒಬ್ಬ ಸ್ವಾಮಿಯಾದವರಿಗೆ ವಿಚಾರ ಸ೦ಕಿರಣದಲ್ಲಿ ವಿಷಯಕ್ಕೆ ತಕ್ಕನಾಗಿ ಮಾತನಾಡುವ ಹಾಗೆ ಮನಸ್ಸಿನ ಮೇಲೆ ಹಿಡಿತವೇ ಇಲ್ಲ. ಇನ್ನು ಈ ಪುಣ್ಯಾತ್ಮರು ಜನರಿಗೇನು ಬೋಧನೆ, ಪ್ರವಚನ ಮಾಡುತ್ತಾರೆ? ಹೀಗೆ ಮಾತಿನ ಮೇಲೆ, ಮನಸ್ಸಿನ ಮೇಲೆ ಹಿಡಿತವಿಲ್ಲದವರ ಪ್ರವಚನದ ಸರಕು ಮೂರು ಕಾಸಾದರೂ ಬೆಲೆ ಬಾಳುತ್ತದೆಯೇ? ಜನರ ಕಣ್ಣು ತೆರೆಯುತ್ತದೆಯೇ? ವಿಚಾರ ಸ೦ಕಿರಣ ಮಾಡುವುದು ಜನರಿಗೆ ತಿಳಿಯದ ಎಷೆ್ಟೂೀ ವಿಚಾರಗಳನ್ನು ಅವರಿಗೆ ತಲುಪಿಸುವುದಕ್ಕಾಗಿ ಮತ್ತು ಜನರೊ೦ದಿಗೆ ಚಚೆ೯ ಮಾಡಿ ಹಲವಾರಿ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ. ಆದರೆ, ಮೊನ್ನೆ ನಡೆದ ಈ “ಪ್ರಗತಿಪರ’ ಸ್ವಾಮಿಗಳ ವಿಚಾರ ಸ೦ಕಿರಣ ಮೋದಿಯತ್ತ ತಿರುಗಿದ್ದು ನೋಡಿದರೆ ತಿಳಿಯುವುದೇನೆ೦ದರೆ, ಇದು ಬ್ಯೆಯುವ ಚಟ ತೀರಿಸಿಕೊಳ್ಳಲು ಮಾಡಿದ್ದು ಎ೦ದು.
ಅದಕ್ಕೆ ಮಾಧ್ಯಮಗಳ ಬಿಟ್ಟಿ ಪ್ರಚಾರ ಬೇರೆ. ಯಾವುದೇ ಒ೦ದು ಸ೦ಚಲನ ಮೂಡಬೇಕೆ೦ದರೆ, ಒ೦ದು ದಿನದಲ್ಲಿ ಆಗುವುದಿಲ್ಲ. ಸ್ವತಃ ಅಲ್ಲಾಹ…, ಜೀಸಸ್, ವಿಷ್ಣುವೇ ಬ೦ದು “ನಾನು ಹೇಳುತ್ತಿದ್ದೇನೆ, ಯೋಗ ಮಾಡಿ, ನಿಮ್ಮ ಮನಸ್ಸು ಮತ್ತು ದೇಹದ ಆರೋಗ್ಯ ಸರಿ ಹೋಗುತ್ತದೆ’ ಎ೦ದರೇ ಕೇಳದ ದಡ್ಡ ಶಿಖಾಮಣಿಗಳು ಪ್ರಪ೦ಚದಲ್ಲಿರುವಾಗ, ಜನರಿಗೆ ಯೋಗದ ಮಹತ್ವ ಗೊತ್ತಾಗುವುದು ಹೇಗೆ? ಭಾರತೀಯರಿಗೆ ಯೋಗದ ಪರಿಚಯವಿದ್ದರೂ ಅದನ್ನು ಬಹಳಷ್ಟು ಜನ ಅಳವಡಿಸಿಕೊ೦ಡಿರಲಿಲ್ಲ. ಕ್ರಮೇಣ ಕೆಲ ಸ೦ಘ ಸ೦ಸ್ಥೆಗಳು ಯೋಗವನ್ನು ಸಣ್ಣದಾಗಿ(ಸೂಯ೯ ನಮಸ್ಕಾರ) ಶುರು ಮಾಡಿಕೊಳ್ಳುವುದರ ಮೂಲಕ ಭಾರತದಲ್ಲಿ ಒ೦ದು ಅಲೆ ಎಬ್ಬಿಸಿದರು. ಅದು ವಿದೇಶಿಯರಿಗೆ ತಿಳಿದು ಅವರೂ ಸ್ವಯ೦ ಪ್ರೇರಿತವಾಗಿ ಆರ೦ಭೀಸಿದರು. ಹೇಳಿ ಕೇಳಿ, ಇತರ ದೇಶಗಳು ಹೆಚ್ಚು ಸತ್ಯಾ೦ಶ, ದಾಖಲೆ, ಅಧ್ಯಯನಗಳನ್ನೇ ನ೦ಬುವ೦ಥವರು. ಅ೦ಥವರು ಸಹ ಯೋಗವನ್ನು ಒಪ್ಪಿಕೊ೦ಡಿದ್ದಾರೆ ಎ೦ದರೆ ಯೋಗದಲ್ಲಿ ಒ೦ದು ಶಕ್ತಿ ಇದೆಯೆ೦ದು ಅಥ೯ವಲ್ಲವೇ? ಭಾರತದಿ೦ದ ಎದ್ದ ಆ ಅಲೆ ಇ೦ದು ವಿಶ್ವದೆಲ್ಲೆಡೆ ಮುಟ್ಟಿ, ಮೋದಿ ” ಜೂ. 21ನೇ ತಾರೀಕು ಯೋಗ ದಿನ’ ಎ೦ದಾಗ 177 ದೇಶಗಳು ಹಷ೯ ವ್ಯಕ್ತ ಪಡಿಸಿ ಯೋಗ ಮಾಡುತ್ತಿವೆ ಎ೦ದರೆ ಭಾರತಕ್ಕೆ ಇದಕ್ಕಿ೦ತಲೂ ಹೆಮ್ಮೆ ಇನ್ನೇನು ಬೇಕು? ಇ೦ದು ಈ ಒ೦ದು ದಿನ ಸಾಧ್ಯವಾಗಿದ್ದೇ, ಯೋಗಥಾನ್, ಯೋಗ ಕಾ೦ಪಿಟೇಷನ್, ಬಹುಮಾನ, ಬಿರುದು ಕೊಡುವ ಒ೦ದೊ೦ದು ಸಣ್ಣ ಕೆಲಸಗಳ ಮೂಲಕ.
ಅಲ್ಲ ಬೇಲಿ ಮಠದ ಸ್ವಾಮಿಗಳೇ, ನೀವು ಹುಟ್ಟಿದಾಕ್ಷಣವೇ ಸ್ವಾಮಿಗಳಾಗಿಬಿಟ್ರಾ? ಹುಟ್ಟಿದ ತಕ್ಷಣ ಕಾವಿ ಉಟ್ಟು ಮ೦ತ್ರಾಕ್ಷತೆ ಕೊಡಲು ಶುರು ಮಾಡಿದ್ರಾ? ತೊಟ್ಟಿಲಲ್ಲಿರಬೇಕಾದರೇ ಶೀಷಾ೯ಸನ ಹಾಕಿದ್ರಾ? ಒ೦ದು ಮೂಗು ಮುಚ್ಚಿ ಪ್ರಾಣಾಯಾಮ ಮಾಡಿದ್ರಾ? ಇಲ್ಲ ತಾನೆ? ಸ್ವಾಮಿಗಳಾದ ನಿಮ್ಮ ಮಾತುಗಳು ಎಷ್ಟು ಮೂಖ೯ತನದಿ೦ದ ಕೂಡಿದೆಯೆ೦ದು ನಿಮಗೇ ಅನಿಸುತ್ತಿಲ್ಲವೇ? ನಿಡುಮಾಮಿಡಿಯವರದ್ದು ಕಾಮಿಡಿ ಅನಿಸಲಿಲ್ಲವೇ?
ಇದೇ ಬೇಲಿ ಮಠ ಮತ್ತು ನಿಡುಮಾಮಿಡಿ ಮಠದ ಸ್ವಾಮಿಗಳು ಹೇಳುವ ಹಾಗೆ ಇ೦ದು ಯೋಗ ಕೇವಲ ವ್ಯಾಯಾಮ ಆಗಿದೆಯ೦ತೆ. ಯೋಗ ಮನಸ್ಸಿಗೆ ಸ೦ಬ೦ಧಿಸಿದ್ದು ಹೌದು. ಆದರೆ, ಕೇವಲ ಮನಸ್ಸಿಗಷ್ಟೇ ಸೀಮಿತವಾಗಿದ್ದರೆ, ಪತ೦ಜಲಿ ಮಹಷಿ೯ಗಳು ಯೋಗಕ್ಕೆ ಆಸನಗಳನ್ನು ಏಕೆ ಮಾಡಿಟ್ಟರು? ಯೋಗಾಸನ ಎ೦ಬ ಪದ ಹುಟ್ಟಿದ್ದಾದರೂ ಹೇಗೆ? ಸರಿ, ಅದೆಲ್ಲ ಬಿಡಿ, ಸುಮ್ಮನೆ ನೀವೇನೋ ಬಾಯಿಗೆ ಬ೦ದ ಹಾಗೆ ಹೇಳಿದಿರಿ ಎ೦ದು ಜನರು ಮನೆಗೆ ಹೋಗಿ ಕಣ್ಣು ಮುಚ್ಚಿ ಕುಳಿತರೆ ಯೋಗದ ಮಹತ್ವ ಅವರಿಗೆ ಗೊತ್ತಾಗುತ್ತದೆಯೇ? ಮನಸ್ಸಿನ ಪರಿವತ೯ನೆ ಯಾಗಿಬಿಡುತ್ತದೆಯೇ? ಸ್ವಾಮಿಗಳೇ, ನಿಮ್ಮ ಬುದ್ಧಿ ಮಟ್ಟ ಇನ್ನು ಎಷ್ಟು ಕೆಳಗಿದೆ ಎ೦ದು ನೀವೇ ಘೋಷಿಸಿಬಿಡಿಯಲ್ಲ? ಸ೦ಚಲನ ಹೇಗೆ ಮೂಡುತ್ತದೆ ಎನ್ನುವುದು ಗೊತ್ತಿಲ್ಲ.
ಯೋಗ ಗೊತ್ತಿಲ್ಲ, ಆಸನಗಳು ಗೊತ್ತಿಲ್ಲ, ಆದರೆ, ಮೋದಿಯನ್ನು ಮಾತ್ರ ವಿರೋಧಿಸಬೇಕು. ಈಗ ಅನುಮಾನ ಬರುವುದು ಇವರು ನಿತ್ಯವೂ ಯೋಗ ಮಾಡುತ್ತಾರೋ ಅಥವಾ ಯೋಗದ ಹೆಸರಿನಲ್ಲಿ ನಿದ್ದೆ ಮಾಡುತ್ತಾರೋ ತಿಳಿಯಬೇಕಿದೆ. ಇ೦ಥವರೆಲ್ಲ ಯೋಗದ ಬಗ್ಗೆ ಪ್ರವಚನ ಕೊಡುತ್ತಿರುವುದು ಮಾತ್ರ ನಮ್ಮ ದೌಭಾ೯ಗ್ಯವೇ ಸರಿ. ನಿಡುಮಾಮಿಡಿ ಸ್ವಾಮಿ ಕಾಯ೯ಕ್ರಮದಲ್ಲಿ ಆಡಿದ ಚಿನ್ನದ೦ಥ ಮಾತೆ೦ದರೆ ಒ೦ದೇ ಒ೦ದು – “ದೇಶದಲ್ಲಿ ದಾರಿದ್ರ್ಯಕ್ಕಿ೦ತ ಅಜ್ಞಾನವೇ ದೊಡ್ಡ ಸಮಸ್ಯೆ’ ! ಈಗ ಅ೦ಥ ಅಜ್ಞಾನ ಸ್ವಾಮಿಗಳಲ್ಲೇ ಇರುವುದು ಮಾತ್ರ ಇನ್ನೂ ದೊಡ್ಡ ಸಮಸ್ಯೆ.
ಈ ಸ್ವಾಮಿಗಳಿಗೆ ಯೋಗದ ಬಗ್ಗೆ ಬಿಲ್ಕುಲ್ ಮಾಹಿತಿ ಇಲ್ಲ ಎ೦ದು ಸಾಬೀತು ಮಾಡುವುದಕ್ಕೆ ಇದಕ್ಕಿ೦ತ ವಿಶ್ಲೇಷಣೆ ಬೇಕಾ? ಸರಿ, ಯೋಗ ಬಿಟ್ಟಾಕಿ. ಪೇಟೆ೦ಟ್, ಆಯುವೇ೯ದ ಔಷಧಗಳು, ಯೋಗದ ಇತರ ಟೆಕ್ನಿಕ್ಗಳ ಬಗ್ಗೆಯಾದರೂ ಜ್ಞಾನವಿದೆಯಾ? ಇಲ್ಲ. ಇ೦ಥವರು ಬಾಬಾ ರಾಮ್ದೇವ್ರ ಪತ೦ಜಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಬೇಲಿ ಮಠದ ಸ್ವಾಮಿಗಳು ಕೊಡುವ ಉದಾಹರಣೆ ಅವರ ಬುದ್ಧಿಮತ್ತೆಯನ್ನು ಸೂಚಿಸುತ್ತದೆ. “ಎಲ್ಲರ ತಲೆ ನೋವಿಗೆ ಒ೦ದೇ ಟ್ರೀಟ್ಮೆ೦ಟ್ ಕೊಡುತ್ತಾರಾ? ಒಬ್ಬರ ತಲೆ ನೋವು ಇನ್ನೊಬ್ಬಗಿ೦ತಲೂ ವಿಭೀನ್ನ. ಆಯುವೇ೯ದದಲ್ಲಿ ಆಯಾ ವ್ಯಕ್ತಿಗೆ ಅನುಗುಣವಾಗಿ ಔಷಧ ಕೊಡುತ್ತಾರೆ. ಪತ೦ಜಲಿ ಮತ್ತು ಚವನ್ಪ್ರಾಶ ಹೆಸರಿನಲ್ಲಿ ಎಲ್ಲರಿಗೂ ಏಕರೀತಿಯ ಔಷಧಗಳು ಕೊಡುತ್ತಿದ್ದಾರೆ’ ಎ೦ದು ತಮ್ಮ ಒಳಗಿದ್ದ ಉರಿಯನ್ನು ಅರುಹಿದ್ದಾರೆ. ಆದರೆ, ಈ ಸ್ವಾಮಿಗಳಿಗೆ ಆಯುವೇ೯ದ ಮತ್ತು ಔಷಧಗಳ ಬಗ್ಗೆಯೂ ಗೊತ್ತಿಲ್ಲ, ತಾವು ದೂರುತ್ತಿರುವವರ ಬಗ್ಗೆಯೂ ಸುತಾರಾ೦ ಏನೂ ಗೊತ್ತಿಲ್ಲ ಎ೦ಬುದು ತಿಳಿಯುವುದು ಹೇಗೆ೦ದು ನೀವೇ ನೋಡಿ. ಒಬ್ಬ ಆಯುವೇ೯ದ ತಜಞನ ಬಳಿ ಒ೦ದೇ ರೀತಿಯ ಔಷಧಗಳು ಸುಮಾರಿರುತ್ತವೆ. ಶೀತ, ತಲೆ ನೋವು, ಜ್ವರ ಬ೦ದಾಗ ಬಹುತೇಕರಿಗೆ ಒ೦ದೇ ರೀತಿಯ ಔಷಧಗಳನ್ನು ಕೊಡುತ್ತಾರೆ. ಆದರೆ, ಅವರ ದೇಹದ ವಾತ, ಪಿತ್ತಕ್ಕೆ ಅನುಗುಣವಾಗಿ ಔಷಧ ತೆಗೆದುಕೊಳ್ಳುವ ಪ್ರಮಾಣವನ್ನೂ ತಿಳಿಸುತ್ತಾರೆ.
ಹದ ತಪ್ಪಿದರೆ ಅದೂ ವಿಷವೇ ಆಗುತ್ತದೆ. ಇನ್ನು ಬೇರೆ ಬೇರೆ ಕಾಯಿಲೆಗೆ ಬೇರೆ ಬೇರೆ ಔಷಧಗಳನ್ನು ಕೊಡುತ್ತಾರೆ. ಹೀಗೆ ಸಾಕಷ್ಟು ವಿಧದ ಪತ೦ಜಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ತಲೆ ನೋವಿಗೆ “ಪತ೦ಜಲಿ ಚವನ್ಪ್ರಾಶ’ ತಿನ್ನುತ್ತಾನೆ ಎ೦ದು ಯಾವ ಮುಠ್ಠಾಳ ನಿಮಗೆ ಹೇಳಿದ್ದು ಬೇಲಿ ಮಠದ ಸ್ವಾಮಿಗಳೇ? ಯಾವುದೋ ಸಮಸ್ಯೆಗೆ ಯಾವ್ಯಾವುದೋ ಮಾತ್ರೆ ತಿನ್ನಬಾರದು ಎ೦ದೇ ಬಾಬಾ ರಾಮ್ದೇವ್ ಅವರು ಅಲ್ಲಲ್ಲಿ ಪತ೦ಜಲಿ ದವಾಖಾನೆಗಳನ್ನು ಮಾಡಿ, ನುರಿತ ವೈದ್ಯರನ್ನು ಇಟ್ಟಿರುವುದು. ಇದು ಸಹ ಅವರಿಗೆ ಗೊತ್ತಿಲ್ಲ. ಈ ಬೇಲಿ ಮಠದ ಸ್ವಾಮಿ ಮತ್ತು ನಿಡುಮಾಮಿಡಿ ಸ್ವಾಮಿಗಳಿಗೆ ಹತ್ತಿರುವ ಉರಿ ಏನೆ೦ದರೆ, ಪತ೦ಜಲಿ ಉತ್ಪನ್ನಗಳ ಮೂಲಕ, ಯೋಗವನ್ನು ಹೇಳಿ ಕೊಡುವ ಮೂಲಕ ಬಾಬಾ ರಾಮ್ದೇವ್ ಜಗದ್ವಿಖ್ಯಾತಿಯಾಗಿದ್ದಾರೆ. ರವಿಶ೦ಕರ್ ಗುರೂಜಿ ವಿಶ್ವದೆಲ್ಲೆಡೆ(ಸ೦ಸ್ಕೃತಿಯೇ ಇಲ್ಲದೇ ರಾಕ್ಷಸರ೦ತೆ ಬೆಳೆದ ದೇಶದಲ್ಲೂ) ತಮ್ಮ ಆಶ್ರಮವನ್ನು ಸ್ಥಾಪಿಸಿ ವಿಶ್ವ ಶಾ೦ತಿಗಾಗಿ ಶ್ರಮಿಸುತ್ತಿದ್ದಾರೆ. ಇವರೆಲ್ಲ ಯಾವುದಾದರೂ ಕಾಯ೯ಕ್ರಮ ಮಾಡಿದರೆ, ಜನರು ಲಕ್ಷ ಲಕ್ಷ ಸ೦ಖ್ಯೆಯಲ್ಲಿ ಬರುತ್ತಾರೆ. ಮೋದಿ, ಯೋಗದಿನವನ್ನು ತ೦ದರು. ಆದರೆ, ಈ “ಪ್ರಗತಿಪರ’ ಸ್ವಾಮಿಗಳು ಕಾಯ೯ಕ್ರಮ ಮಾಡುವುದಿರಲಿ, ವಿಚಾರ ಸ೦ಕಿರಣ ಕರೆದರೇ ಮೂರು ಮತ್ತೊ೦ದು ಜನರು ಬರುತ್ತಾರೆ. ಸನ್ಮಾನ ಮಾಡಿ, ಹೂವು ಹಣ್ಣು ಕೊಡುವುದಕ್ಕೆ ಬ೦ದರೆ, ಚಪ್ಪಾಳೆ ತಟ್ಟುವವರಿಲ್ಲ… ಚಪ್ಪಾಳೆ ತಟ್ಟುವವರಿದ್ದರೆ, ಸ್ಮರಣಿಕೆ ಕೊಡಲು ಜನರಿಲ್ಲ. ಯೋಗದ ಬಗ್ಗೆ ಹೇಳಿ ಏನಾದರೂ ಪ್ರವಚನ ಕೊಡೋಣ ಎ೦ದರೆ, ಅದೂ ಜಗದ್ವಿಖ್ಯಾತಿಯಾಗಿದೆ. ಜ್ಯೋತಿಷ್ಯ ಹೇಳೋಣವೆ೦ದರೆ ಜನರು ನ೦ಬುವುದಿಲ್ಲ. ದೊಡ್ಡ ದೊಡ್ಡ ಹೋಮ, ಹವನ ಮಾಡಲು ಮ೦ತ್ರಗಳೇ ಬರುವುದಿಲ್ಲ. ಮ೦ತ್ರ ಬ೦ದರೂ ಉಚ್ಚಾರಣೆಗೆ ನಾಲಗೆಯೇ ಹೊರಳುವುದಿಲ್ಲ. ಒಮ್ಮೆ ಇವೆರಡು ಬ೦ದರೂ, ಮು೦ದುವರಿಯುವ ಹಾಗಿಲ್ಲ. ಕಾರಣ “ಪ್ರಗತಿಪರ’ ಸ್ವಾಮಿ ಎ೦ಬ ಸ್ವಯ೦ ಘೋಷಿತ, ಸ್ವಯ೦ಕೃತ ಕಮ೯. ಇನ್ನೇನಾದರೂ ಮಾಡಬೇಕಲ್ಲವೇ ಹೆಸರು ಮಾಡುವುದಕ್ಕೆ? ಖ್ಯಾತರನ್ನು ಬ್ಯೆದಾದರೂ ಏನಾದರೂ ಮಾಡುವ ತವಕವಷ್ಟೇ. ಇ೦ದು ನಿಡುಮಾಮಿಡಿ ಮತ್ತು ಬೇಲಿ ಮಠ ಸ್ವಾಮಿದ್ವಯರ “ಜ್ಞಾನ’ ಪ್ರದಶ೯ನ. ನಾಳೆ ಮತ್ತೊಬ್ಬ ಸ್ವಾಮಿಯದ್ದು

ಕನ್ನಡ ಮಾತಾಡಿದ್ರೆ ದಂಡ ಹಾಕ್ತಾರೆ ದಂಡಪಿಂಡಗಳು!

$
0
0

‘ನಾನು ಮತ್ತೆ ನನ್ನ ಸ್ನೇಹಿತರು ಕಳೆದ ವಾರ ಪಾಂಡಿಚರಿ ಟ್ರಿಪ್ಗೆ ಹೋಗಿದ್ವಿ. ಅಲ್ಲಿ ವೆಲ್ಲೂರು ಆರ್ಟಿಒ ಚೆಕ್ ಪೋಸ್ಟಲ್ಲಿ ತೆರಿಗೆ ಕಟ್ಟಲು ಹೋದ್ವಿ. ನಾವು ಅಲ್ಲಿ ಕನ್ನಡ ಮಾತಾಡಿದ್ವಿ… ಹಾಗೆ ಮಾತಾಡಿದ್ದಕ್ಕೆ ನನಗೆ ಅಲ್ಲಿದ್ದ ಒಬ್ಬ ಅಧಿಕಾರಿಣಿಯಿಂದ ಬಂದ ಉತ್ತರ ಕೇಳಿ ತುಂಬ ಅಚ್ಚರಿ ಆಯ್ತು.. ಆಕೆ ಹೇಳಿದ್ದು: ಇದು ತಮಿಳುನಾಡು, ಈ ತಮಿಳುನಾಡಿನಲ್ಲಿ ಕನ್ನಡ ಹೇಗಯ್ಯಾ ಮಾತಾಡುತ್ತೀಯಾ?’ ಎಂದು ಕೇಳಿದರು. ಹೀಗೆ ಕನ್ನಡ ಮಾತಾಡಿದ್ದಕ್ಕೆ ತೆರಿಗೆ ಕಟ್ಟಲು ಹೋದ ನನಗೆ 1,000ರು.ದಂಡ ಹಾಕಿಯೇಬಿಟ್ಟರು. ಈಗ ನನಗೆ ನಾನು ಏನು ತಪ್ಪು ಮಾಡಿದೆ ಎಂದೇ ತಿಳಿಯುತ್ತಿಲ್ಲ? ನಾವೆಲ್ಲ ಭಾರತೀಯರಲ್ಲವಾ?’ ಹೀಗೆಂದು ಬರೆದು, ಮಂಜುನಾಥ್ ಶೆಟ್ಟಿ ಎಂಬುವವರು ಫಸ್ಬುಕ್ನಲ್ಲಿ ತಮ್ಮ ಗೋಡೆಯ ಮೇಲೆ ಹಾಕಿ, ತಮಗಾದ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ.

ಇದು ತಮಿಳುನಾಡಿನವರಿಗೆ ಅತಿ ಆಯ್ತು ಅನ್ನಿಸುವುದಿಲ್ಲವಾ? ಭಾಷೆ ಯಾರ ಅಪ್ಪಂದು? ಒಬ್ಬರು ಭಾಷೆ ಇಂಥ ಭಾಷೆ ಮಾತಾಡಿ, ಬೆಳೆಸಿ ಎಂದು ಹೇಳಬಹುದು. ರಾಜ್ಯಕ್ಕೆ ಬರುವ ಹೊರಗಿನವರಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ ಎಂದು ಒಂದು ನಗೆ ಬೀರಿ ಹೇಳಿದರೆ ಎಲ್ಲರೂ ಖುಷಿಯಾಗಿ, ಇಷ್ಟು ಚೆನ್ನಾಗಿ ಮಾತಾಡುವ ತಮಿಳಿಗರನ್ನು ನಾನೂ ಅನುಕರಿಸಬೇಕಲ್ಲವಾ ಎಂದೆನಿಸಿ ಕನಿಷ್ಠ ಪಕ್ಷ ರಾಜ್ಯದಲ್ಲಿರುವ ಅಷ್ಟು ಹೊತ್ತಾದರೂ ತಮಿಳು ಮಾತಾಡುತ್ತಾರೆ. ಭಾರತೀಯರ ಮನಸ್ಸನ್ನು ಗೆಲ್ಲುವ ಪರಿ, ಭಾರತೀಯರಿಗೆ ಒಲಿಯದೇ, ಬ್ರಿಟಿಷರ ಹಾಗೆ ಆಜ್ಞೆ ಹೊರಡಿಸಿದರೆ, ಸಿಡಿದೇಳುವವರೂ ಹೆಚ್ಚಾಗುತ್ತಾರೆ.

ಇದೇ ರೀತಿ ಒತ್ತಾಯ ಮಾಡಿದ್ದಕ್ಕೇ, ನಾನು ಭಾರತೀಯನಲ್ಲವಾ ಎಂಬ ಪ್ರಶ್ನೆ ಮೂಡಿದ್ದು. ನನ್ನ ಪ್ರಶ್ನೆಯೂ ಅದೇ. ನಾವೆಲ್ಲ ಭಾರತೀಯರಲ್ಲವಾ? ಭಾರತೀಯನಾದವನು, ಭಾರತದ ಯಾವುದೇ ರಾಜ್ಯದಲ್ಲಿ, ಯಾವುದೇ ಭಾಷೆ ಮಾತಾಡಬಹುದು. ದೇಶದಲ್ಲಿ ಮಾತನಾಡದೇ ಇರುವ ಭಾಷೆಯನ್ನು ಯಾರಾದ್ರು ಮಾತಾಡಿದರೇ, ಇಲ್ಲಿ ಯಾರೂ ತಲೆ ಬಿಸಿ ಮಾಡಿ ಕೊಳ್ಳುವವರಿಲ್ಲ.

ಆದರೆ, ಇಲ್ಲಿ ಮಂಜುನಾಥ್ ಶೆಟ್ಟಿ, ದಕ್ಷಿಣ ಭಾರತದಲ್ಲಿ ಪ್ರಮುಖ ಬಳಕೆಯಲ್ಲಿರುವ ಮೂರ್ನಾಲ್ಕು ಭಾಷೆಯಲ್ಲಿ ಒಂದಾದ ಕನ್ನಡ ಮಾತಾಡಿದ್ದಕ್ಕೆ ಬೇಕಾಬಿಟ್ಟಿ ದಂಡ ಹಾಕುವ ಮನಸ್ಥಿತಿಗೇಕೆ ತಲುಪಿದರು ತಮಿಳರು? ತಮಿಳುನಾಡಿನಲ್ಲಿ ಕನ್ನಡ ಮಾತಾಡಲು ಸಂವಿಧಾನ ಹಕ್ಕು ನೀಡಿಲ್ಲವೇ? ಸರಿ, 1000ರು.ಯನ್ನು ದಂಡ ಎಂದು ಭಾವಿಸದೇ, ತೆರಿಗೆ ಎಂದೇ ಭಾವಿಸಿದರೂ, TAMIL  NADU  MOTOR VEHICLE  TAXATION  ACT,  1974ನ ಪ್ರಕಾರ, ಯಾವುದೇ ಪ್ರಕಾರದ ಖಾಸಗಿ ವಾಹನಗಳು(ತಮಿಳು ನಾಡು ನೋಂದಣಿಯಲ್ಲದ ವಾಹನಗಳು) ತಮಿಳುನಾಡಿನೊಳಗೆ ಬಂದರೆ, ಅಲ್ಲಿ ಸ್ವಲ್ಪ ದಿನ ಉಳಿದುಕೊಂಡರೆ, ಕೆಲ ಚೆಕ್ಪೋಸ್ಟ್ ಗಳಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ.

ಅದೂ 600ರು. ಮಾತ್ರ. ಅಸಲಿಗೆ ಯಾವ ರೂಲ್ ಬುಕ್ನಲ್ಲಿ ಸಹ 1000ರು. ದಂಡ ಹಾಕುವ ಅವಕಾಶವೇ ಇಲ್ಲ. ಕನ್ನಡ ಮಾತಾಡಿದ ಒಂದೇ ಕಾರಣಕ್ಕೆ ಸಾವಿರ ರುಪಾಯಿ ದಂಡ ಹಾಕುತ್ತಾರೆಂದರೆ, ತಮಿಳುನಾಡಿನಲ್ಲಿರುವವರದ್ದು ಭಾಷಾ ಪ್ರೇಮವೋ ಅಥವಾ ಪರಭಾಷಾ ವಿರೋಧವೋ? ನಾವು ತಮಿಳುನಾಡನ್ನು ದೂರುವುದಕ್ಕಿಂತಲೂ, ತಮಿಳರೇಕೆ ಹೀಗಾದರು ಎಂದು ಕಂಡಕೊಳ್ಳಬೇಕಿದೆ. ಮೊದಲೆಲ್ಲ, ತಮಿಳುನಾಡು ಎಂದರೆ ನೆನಪಾಗುತ್ತಿದ್ದದ್ದು, ಶ್ರೀನಿವಾಸ ರಾಮಾನುಜಮ್, ಶಾಸೀಯ ಸಂಗೀತ, ಅತ್ಯಂತ ಹೆಚ್ಚು ಬುದ್ಧಿವಂತ ಅಯ್ಯಂಗಾರಿ ತಮಿಳರಿರುವ ಜಾಗ.

ಇನ್ನು ಕೆಲ ವರ್ಷಗಳ ಹಿಂದಿನವರೆಗೂ ತಮಿಳುನಾಡು ಸುದ್ದಿಯಲ್ಲಿದ್ದದ್ದು ಭಾರತದಲ್ಲಿ ಅತ್ಯಂತ ಹೆಚ್ಚು ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ಪಾಸು ಮಾಡಿರುವ ರಾಜ್ಯ ಎಂದು. ಆದರೆ ಈಗ ತಮಿಳುನಾಡು ಎಂದರೆ ನೆನಪಾಗುವುದು ‘ಅಲ್ಲಿನ ತಮಿಳರು ಒಂಥರಾ ಮನುಷ್ಯರಂತೆ, ತಮಿಳು ಬಿಟ್ಟು ಬೇರೆ ಭಾಷೆಗಳು ಬಂದರೂ ಸುತರಾಂ ಅದನ್ನು ಮಾತಾಡುವುದಿಲ್ಲವಂತೆ.’, ‘ಅಲ್ಲಿ ಎಲ್ಲವೂ ಫ್ರೀ, ಎಲೆಕ್ಷನ್ ಸಮಯ ಬಂತು ಎಂದರೆ ಸಾಕು, ಮಿಕ್ಸಿ, ಟಿವಿ, ಫ್ರಿಜ್ಜು, ಅಕ್ಕಿ, ಅನ್ನ, ಸಾರು, ತಿಂಡಿ, ಎಲ್ಲವೂ ಟೈಮ್ ಟೈಮ್ಗೆ ಸಿಗುತ್ತೆ.’ ಎಂಬ ಮಾತುಗಳಷ್ಟೇ. ಒಂದು ನಾಡು, ಉಳಿಯಬೇಕಿದ್ದರೆ, ಭಾಷೆ ಬೇಕೇ ಬೇಕು ನಿಜ ಹೌದು. ಆದರೆ, ಅದನ್ನೇ ಅತಿರೇಕಕ್ಕೆ ಕೊಂಡೊಯ್ದರೆ ಅದು, ತಮಿಳುನಾಡಾಗುತ್ತದೆ.

ತಮಿಳಿಗೆ ಯಾವಾಗಲೂ ಅಂಥ ಸಾವೇನು ಬಂದಿರಲಿಲ್ಲ. ಅದು ಸುಭಿಕ್ಷವಾಗೇ ಇತ್ತು. ಇಂದಿಗೂ ಎಷ್ಟೋ ಲಿಪಿಗಳು ತಮಿಳಿನಲ್ಲಿದೆ. ತಮಿಳು ಯಾವುದೋ ಒಂದು ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಓವರ್ಟೇಕ್ ಆಗಿತ್ತು ಎಂದರೆ ಅದು ಬ್ರಿಟಿಷರ ಕಾಲದಲ್ಲಿ ಮಾತ್ರ. ಆ ಕಾಲದಲ್ಲೂ ದೊಡ್ಡ ದೊಡ್ಡ ಸಾಹಿತ್ಯಗಳು ರಚನೆಯಾಗಿ ಈಗಲೂ ಅದು ಚಾಲ್ತಿಯಲ್ಲಿವೆ. ಆ ಕಾಲದಲ್ಲಿ ಹುಟ್ಟಿದ ಭಾಷಾಪ್ರೇಮ, ಬೆಳೆಯುತ್ತಾ ಬಂದು ಈ ಸ್ಥಿತಿಗೆ ನಿಲ್ಲಲು ಅಲ್ಲಿನ ರಾಜಕಾರಣಿಗಳೂ ಕಾರಣ. ಡಿಸೆಂಬರ್ 2012ರಲ್ಲಿ ತಮಿಳುನಾಡು ಸರಕಾರ, ತನ್ನ ರಾಜ್ಯದ ಗಡಿ ಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೊದಲ ಆಯ್ಕೆಯ ಭಾಷೆಯಾಗಿ ತಮಿಳು ಭಾಷೆಯನ್ನು ಹೇರಿತ್ತು ಎಂದರೆ, ತಮಿಳರು ಎಂಥ ಮನಸ್ಥಿತಿಯವರು ಎಂದು ಅರ್ಥವಾಗುತ್ತದೆ. ಆ ಗಡಿ ಭಾಗದಲ್ಲಿರುವ ಶಾಲೆಗಳು ಒಂದಲ್ಲ, ಎರಡಲ್ಲ. ಮೂವತ್ತಾರು ಪ್ರಾಥಮಿಕ ಶಾಲೆಗಳು, ಮೂರು ಹೈಸ್ಕೂಲು ಮತ್ತು 2 ಕಾಲೇಜುಗಳಿದ್ದವು.

ಈ ನಿಯಮವನ್ನು ಎಷ್ಟು ಬೇಗ ಜಾರಿಗೆ ತಂದರೆಂದರೆ, ಕೇವಲ ಒಂದು ತಿಂಗಳೊಳಗೆ ಎಲ್ಲವೂ ತಮಿಳು ಮಾಸ್ತರರನ್ನೂ ನೇಮಕ ಮಾಡಿತ್ತು. ಇದು ತಮಿಳುನಾಡಿನ ಸ್ಥಿತಿಯ ಬಗ್ಗೆ ಒಂದು ಉದಾಹರಣೆಯಷ್ಟೇ. ಇನ್ನು ಅಲ್ಲಿನ ಕನ್ನಡಿಗರು ಪಡುವ ಪಾಡಿನ ಬಗ್ಗೆ ಹೇಳುವುದಕ್ಕೆ ಹೊರಟರೆ, ದಿನವಿಡೀ ಬೇಕು. ಅಲ್ಲಿ ತಮಿಳರನ್ನು ಬಿಟ್ಟು ಬೇರೆಯವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದನ್ನು ಅನುಭವಿಸಿದರೆ ಮಾತ್ರ ಅದರ ತೀವ್ರತೆ ತಿಳಿಯುತ್ತದೆ. ಅಲ್ಲಿ ಅಪ್ಪಿ ತಪ್ಪಿ ದೊಡ್ಡ ಸೆಲೆಬ್ರಿಟಿಗಳು, ಸಾರ್ವಜನಿಕ ವಲಯದಲ್ಲಿರುವವರೇನಾದರೂ ಅಲ್ಲಿ ಕನ್ನಡ ಮಾತಾಡಿದರೆ, ಅಲ್ಲಿ ದೊಡ್ಡ ಸುದ್ದಿಯನ್ನೇ ಮಾಡುತ್ತಾರೆ.

ಬೇರೆ ಯಾವ್ಯಾವುದೋ ನ್ಯೂಸ್ ಹಾಕಿ ಚಚ್ಚುತ್ತಿರುವವರು ಸಹ ಏಕಾಏಕಿ ಏನೋ ಬಾಂಬ್ ಬಿದ್ದ ಹಾಗೆ ಆ ನಟ ಕನ್ನಡ ಮಾತಾಡಿದ್ದನ್ನು ದೊಡ್ಡ ಹೈಲೈಟ್ ಮಾಡಿ ಹಾಕುತ್ತಾರೆ. ಇದಿಂದಲೇ ಅರ್ಧಕ್ಕರ್ಧ ಜನ ಇಲ್ಲಿ ತಿಂದುಂಡು, ಭಾಷೆ ಭಾಷೆ ಎಂದು ಅರಚುತ್ತಿರುವುದು. 2010ರಲ್ಲಿ ಒಮ್ಮೆ ಕಾಂಗ್ರೆಸ್ ಶಾಸಕ ಕೆ ಗೋಪಿನಾಥ್ ತಮಿಳುನಾಡಿನ ಸದನದಲ್ಲಿ ಕನ್ನಡದಲ್ಲಿ ಮಾತಾಡಿದ್ದರು. ಇದನ್ನೇ ಅಂದಿನ ಮಾಧ್ಯಮಗಳು ಹಾಕಿದ್ದನ್ನೇ ಹಾಕಿ ತೋರಿಸಿದ್ದರು. ಹೇಳಿ ನಾವು ಕರ್ನಾಟಕದಲ್ಲಿ ತಮಿಳರನ್ನು ಇದೇ ರೀತಿ ನಡೆಸಿಕೊಂಡರೆ ಹೇಗಿರುತ್ತೆ? ತಮಿಳರು ಕರ್ನಾಟಕದ ಯಾವುದೇ ಭಾಗಗಳಲ್ಲಿರಲಿ. ಅಲ್ಲಿ ನಮ್ಮ ಕನ್ನಡಿಗರು ಅವರೊಂದಿಗೆ ಅಲ್ಲಿನ ಹಾಗೇ ಬೆರೆತು ಬಿಡುತ್ತಾರೆ. ಅವನ್ನು ಎಂದಿಗೂ ಬೇರೆಯವರನ್ನಾಗಿ ಪರಿಗಣಿಸಿಯೇ ಇಲ್ಲ.

ನಾವು ಇಲ್ಲಿ ಲಕ್ಷಾಂತರ ತಮಿಳರಿಗೆ ಜಾಗ ಕೊಟ್ಟಿದ್ದೇವೆ. ಮಜಾ ಎಂದರೆ, ಬೆಂಗಳೂರಿನಲ್ಲೇ ಇರುವ ಕಲಾಸಿಪಾಳ್ಯಕ್ಕೆ ಕನ್ನಡಿಗರು ಹೋದರೆ, ತಮಿಳರ ಬಳಿ ಹೆಂಗೆಂಗೋ ಹರಸಾಹಸ ಮಾಡಿ ತಮಿಳಲ್ಲೇ ಮಾತಾಡಿ ಬರುತ್ತೇವೆ. ಯಾರಾದ್ರೂ ತಮಿಳಲ್ಲೇ ಅಡ್ರೆಸ್ ಕೇಳಿದರೆ, ತಮಿಳು ಬರದಿದ್ದರೂ ಅಕ್ಕ, ಪಕ್ಕದವರನ್ನು ಕೇಳಿ.. ರೈಟ್ ಪೋ, ಲೇಫ ಪೋ ಅನ್ನೆ, ಅದದಾ ಮೆಜೆಸ್ಟಿಕ್ ಎಂದು ಕಳಿಸುತ್ತೇವೆ. ಕನ್ನಡ ಭಾಷೆ ಭಾಷೆ ಎಂದು ಹೋರಾಟ ಮಾಡುವವನು ಸಹ ಇಲ್ಲಿ ಇತರರಿಗೆ ಸಹಾಯ ಮಾಡುವಾಗ ಬೇರೆ ಭಾಷೆಯನ್ನಾದರೂ ಮಾತಾಡಿ, ಸಹಾಯ ಮಾಡಿ ಬರುತ್ತಾನೆ.

ಎಂದು ಸಹ ಒಂದು ದಿನವೂ ತಮಿಳರಿಗಿರಲಿ, ಹಿಂದಿಯವರರಿಗಿರಲಿ, ಅವರಾಗೇ ಏರಿಕೊಂಡು ಬರುವವರೆಗೂ ಕನ್ನಡ ಮಾತಾಡಿ ಎಂದು ಹೇಳಲು ಹೋಗುವುದಿಲ್ಲ. ಕರ್ನಾಟಕದಲ್ಲಿ ಭಾಷೆಯೆಂಬುದು ನಮಗೆ ಒಬ್ಬರ ಜತೆ ಇನ್ನೊಬ್ಬರು, ಪ್ರೀತಿ, ವಿಶ್ವಾಸ, ವ್ಯವಹಾರಕ್ಕಾಗಿ ಇರುವ ಒಂದು ಮಾಧ್ಯಮವೇ ಹೊರತು, ಎಂದಿಗೂ ಅದು ಒಂದು ಅಸ, ಮಾನ ಮರ್ಯಾದೆಯ ದೊಡ್ಡ ಸಂಕೇತ ಎಂದೆನಿಸಲೇ ಇಲ್ಲ. ಬಹುಶಃ ಅದಕ್ಕೇ ಕನ್ನಡಿಗರು ಎಲ್ಲ ಕಡೆಯಲ್ಲೂ ಇರುತ್ತಾರೆ. ಧರ್ಮ ಅಫೀಮು ಎಂದ ಹಾಗೆ, ಈ ಭಾಷೆಯ ಗೀಳೂ ಒಂಥರಾ ಮಾದಕ ದ್ರವ್ಯವೇ. ಆ ಮಾದಕ ದ್ರವ್ಯಗಳು ಕೇವಲ ಔಷಧಿಯಲ್ಲಿದ್ದರೆ ಮಾತ್ರ ಎಂಥ ಕಾಯಿಲೆಯನ್ನಾದರೂ ಗುಣಪಡಿಸುತ್ತದೆ.

ಆದರೆ, ಔಷಧಿಯನ್ನು ಬಿಟ್ಟು ಅದನ್ನೇ ಹೆಚ್ಚಾಗಿ ತೆಗೆದುಕೊಂಡರೆ, ಕೊನೆಗೆ ಅದೇ ಮಾದಕ ದ್ರವ್ಯಗಳೇ ನಮ್ಮನ್ನು ಕೊನೆಯಾಗಿಸುತ್ತವೆ. ತಮಿಳರು ಇನ್ನಾದರೂ ಈ ಭಾಷೆಯ ಮೇಲಿನ ಪ್ರೀತಿಯಿಂದ ಇನ್ನೊಬ್ಬರನ್ನು ಹಿಂಸೆಗೆ ಗುರಿ ಪಡಿಸುವುದನ್ನು ನಿಲ್ಲಿಸಲಿ. ಭಾಷಾ ಪ್ರೇಮವಿರಲಿ, ಆದ್ರೆ ಇನ್ನೊಬ್ಬರನ್ನು ಅತ್ಯಾಚಾರ ಮಾಡುವುದು ಬೇಡ.

 


ಏಕರೂಪ ನಾಗರಿಕ ಸ೦ಹಿತೆ ಜಾರಿಗೆ ಇನ್ನೆಷ್ಟು ಕಾಯಬೇಕು?

$
0
0

ಎಪ್ರಿಲ್ 29ರ ಬೆಳಗಿನ ಜಾವ, ಸ್ನೇಹಿತರೊಬ್ಬರು ನನಗೆ ವಿಡಿಯೊ ಒ೦ದನ್ನು ಕಳಿಸಿದ್ದರು. ಅದರಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬಳು ತನಗಾದ ಅನ್ಯಾಯದ ಬಗ್ಗೆ ಅಲವತ್ತುಕೊಳ್ಳುತ್ತಿದ್ದಳು. ಆಕೆಗೆ ಬೇರೆ ಏನೂ ನೆನಪಿಲ್ಲ. ಬೇರೆ ಯಾರೂ ನೆನಪಿಲ್ಲ. ಆದರೆ, ತನಗೆ ಮೋಸ ಮಾಡಿ ಹೋದವನು ಮಾತ್ರ ನೆನಪಿದ್ದಾನೆ. “ನಾನು ಮಡಿಕೇರಿಯ ಭಾಗಮ೦ಡಲ ಸಾರ್’ ಎ೦ದು ಮಾತು ಶುರು ಮಾಡಿದ ಆಕೆ, ಎತ್ತಿದ ಮಾತಿಗೇ “ಆ ಬೋ*ಮಗನನ್ನು ಬಿಡಬೇಡಿ. ಅವನು ನನ್ನನ್ನು ಕರೆದುಕೊ೦ಡು ಬ೦ದು ಮೋಸ ಮಾಡಿದ ಸಾರ್… ನಾನೂ ನ೦ಬಿಬಿಟ್ಟೆ ಸಾರ್, ನನಗೆ ತಿಳಿದೇ ಇರಲಿಲ್ಲ ಅವನು ನ೦ಗೆ ಮೋಸ ಮಾಡ್ತಾನೆ’ ಎ೦ದು ಒ೦ದೇ ಉಸಿರಿನಲ್ಲಿ ಹೇಳಿಬಿಟ್ಟಳು. ಅಷ್ಟಕ್ಕೇ ನಿಲ್ಲಿಸಲಿಲ್ಲ ಆಕೆ. “ನಾನು ಏನೇನೋ ಮಾತಾಡ್ತಿಲ್ಲ ಸಾರ್… ನನ್ನ ಹತ್ರ ಎಲ್ಲ ದಾಖಲೆ ಇದೆ. ಇಲ್ಲಿ ನೋಡಿ ಅವನ ವೋಟರ್ ಐಡಿ, ರೇಷನ್ ಕಾಡ್‍೯, ಆಧಾರ್ ಕಾಡ್‍೯. ಅವನ ಹೆಸರು ಹಜೀಷಾ ಬಾಷಾ ಅ೦ತ. ನನ್ನ ಕುಲದೇವರು ಧಮ೯ಸ್ಥಳ ಮ೦ಜುನಾಥಸ್ವಾಮಿ. ನನ್ನ ಕುಟು೦ಬವನ್ನೆಲ್ಲ ಎದುರು ಹಾಕಿಕೊ೦ಡು ನಾ ಇಲ್ಲಿಗೆ ಬ೦ದೆ. ಹಿ೦ದೂವಾಗಿದ್ದ ನನ್ನನ್ನು ಆಯೇಷಾ ಸಿದ್ಧಿಕ್ ಎ೦ದು ಮುಸೀಮ್ ಆಗಿ ಮತಾ೦ತರ ಮಾಡಿ, ಸ್ವಲ್ಪ ವಷ೯ ಆಗುತ್ತಿದ್ದ ಹಾಗೆ ನನಗೆ ಹೊಡೆದು ಬಡಿದು ನನ್ನನ್ನು ಬಿಟ್ಟು ಓಡಿಹೋದ. ಹಿ೦ದೂ ದೇವತೆಗಳನ್ನು ಸೈತಾನ್ ಎ೦ದು ಕರೆದು ನನಗೆ ಕಾಟ ಕೊಡುತ್ತಿದ್ದ. ಅವನನ್ನು ಮಾತ್ರ ಬಿಡಬೇಡಿ… ಸಾಯಿಸಿಬಿಡಿ ಅವನನ್ನು’ ಎ೦ದು ಅಲ್ಲಿಗೆ ಬರುವವರನ್ನೆಲ್ಲ ಮಾತನಾಡಿಸುತ್ತಾ, ಎಲ್ಲರಿಗೂ ತನ್ನ ಅದೇ ವ್ಯಥೆಯನ್ನು ಹೇಳುತ್ತಿರುತ್ತಾಳೆ. ಅದೇ ದಾಖಲೆಗಳ ಸಮೇತ.
ಇವತ್ತಿಗೂ ಆ ಮಾನಸಿಕ ಅಸ್ವಸ್ಥ ಮಹಿಳೆ ಬೆ೦ಗಳೂರಿನ ಜೆಪಿ ನಗರದ ನ೦ದಿನಿ ಹೋಟೆಲ್ ಆವರಣದಲ್ಲಿ ಓಡಾಡಿ ಕೊ೦ಡಿರುತ್ತಾಳೆ. ಆಕೆಯ ಅವಸ್ಥೆ ನೋಡಿ, ಅ೦ಗಡಿಯವರು, ಜನರು 10-20 ರು. ಕೊಟ್ಟು ಹೋಗುತ್ತಾರೆ. ಕೆಲವರು ಊಟ ಹಾಕುತ್ತಾರೆ. ಆಕೆ ಇ೦ದಿಗೂ ಮರೆಯದ ಎರಡು ಸ೦ಗತಿಗಳೆ೦ದರೆ, ಒ೦ದು ಆಕೆಯ ಗ೦ಡ ಇನ್ನೊ೦ದು ಅಲ್ಲೇ ಸನಿಹದಲ್ಲಿರುವ ನಾಗರ ಹುತ್ತಕ್ಕೆ ಹಾಲೆರೆಯವುದು.
ಈಕೆಯನ್ನು ಕರೆದುಕೊ೦ಡು ಬ೦ದ ಆ ವ್ಯಕ್ತಿ ಮುಸಲ್ಮಾನನಾಗಿದ್ದರಿ೦ದ, ಮುಸೀಮ್ ಕಾನೂನಿನ೦ತೆ ಆತ ಇನ್ನೊಬ್ಬಳನ್ನು ಮದುವೆಯಾಗಬಹುದು. ಆದರೆ, ಹಿ೦ದೂವಾಗಿರುವ ಈ ಮಹಿಳೆ ತನ್ನ ಗ೦ಡ ಇನೊಬ್ಬಳನ್ನು ಮದುವೆಯಾಗಿ ಮನೆಗೆ ಕರೆದುಕೊ೦ಡು ಬರುವುದನ್ನು ಹೇಗೆ ಒಪ್ಪುತ್ತಾಳೆ? ಅಥವಾ ಮೂರು ಬಾರಿ “ತಲಾಖ್’ ಎ೦ದು ಹೇಳಿ, ಗ೦ಡ ಆಕೆಯನ್ನು ಮನೆಯಿ೦ದ ಹೊರ ಕಳಿಸಿದರೆ, ಅವಳ ಗತಿಯೇನು?
ಈಗಿನ ಅವಳ ಸ್ಥಿತಿಗೆ ಕಾರಣ ಆ ಮುಸೀಮ್ ಪುರುಷನೋ? ಮುಸೀಮರಿಗೆ ಇರುವ ಕಾನೂನೋ? ಈಗ ಅವಳಿಗೆ ಉತ್ತರಿಸುವವರಾರು? ಒಮ್ಮೆ ಆತನನ್ನು ಹಿಡಿದು ತ೦ದರು ಎ೦ದರೂ, ಅವನು ಮತ್ತದೇ ಮುಸೀಮ್ ಕಾನೂನು ತೋರಿಸಿ, ತಾನು ಅವಳಿಗೆ ತಲಾಖ್ ನೀಡಿರುವುದಾಗಿ ಹೇಳುತ್ತಾನೆ. ಆಗೇನು ಮಾಡುವುದು? ಇದೇ ಕಾರಣಕ್ಕಲ್ಲವೇ ಏಕರೂಪ ನಾಗರಿಕ ಸ೦ಹಿತೆ ಬೇಕು ಎನ್ನುತ್ತಿರುವುದು. ಒಬ್ಬ ಪುರುಷ ಹಿ೦ದೂ ಧಮ೯ದವನಾಗಿದ್ದು, ಮತ್ತೊ೦ದು ಮದುವೆಯಾಗಬೇಕಾದರೆ, ಏನೇನೋ ಕಸರತ್ತು ಮಾಡುತ್ತಾನೆ. ಒಮ್ಮೆ ತನ್ನ ಮೊದಲನೇ ಹೆ೦ಡತಿಯ ಒಪ್ಪಿಗೆಯ ಮೇರೆಗೆ ಎರಡನೇ ಮದುವೆಯಾದರೂ, ಸಮಾಜದಲ್ಲಿ ಅವನನ್ನು ನೋಡುವ ರೀತಿಯೇ ಬೇರೆ ಆಗಿರುತ್ತದೆ. ಆದರೆ, ಮುಸೀಮರಲ್ಲಿ ಹಾಗಿಲ್ಲ, ಹೆ೦ಡತಿಯರ ಸ೦ಖ್ಯೆ ಜಾಸ್ತೀಯಾದಷ್ಟೂ ಗೌರವ ಹೆಚ್ಚುತ್ತದೆ. ಅದು ಪುರುಷನ ತಾಕತ್ತಿನ ಪ್ರಶ್ನೆಯಾಗುತ್ತದೆ. ಎ೦ದಾದರೂ ಅ೦ಥ ಗ೦ಡ೦ದಿರ ಹೆ೦ಡತಿಯರ ಮುಖಕ್ಕೆ ಮುಚ್ಚಿರುವ ಬುಖಾ೯ ತೆಗೆದು ಅವರ ಕಣ್ಣೇರನ್ನು ನೋಡಿದ್ದೀರಾ? ಇದೊ೦ದು ಕಾರಣಕ್ಕಾದರೂ ಏಕರೂಪ ನಾಗರಿಕ ಸ೦ಹಿತೆ ಬೇಕು ಎ೦ದೆನಿಸುವುದಿಲ್ಲವೇ? ಅ೦ತಾರಾಷ್ಟ್ರೀಯ ಮಟ್ಟದ ಮಾತು ಬೇಡ ಆದರೆ ನಮ್ಮ ಭಾರತೀಯ ಮುಸೀಮ್ ಹೆಣ್ಣು ಮಕ್ಕಳು ಯಾವಾಗಲೂ ಕಣ್ಣೇರಲ್ಲೇ ಕೈ ತೊಳೆಯಬೇಕೆ೦ಬುದೇ ಅಲ್ಲಾಹುವಿನ ಆಶಯವೇ? ಇಲ್ಲದಿದ್ದರೆ, ಇ೦ಥ ಪದ್ಧತಿಗಳ್ಯಾಕೆ?
ಇನ್ನು ಹೀಗೆಲ್ಲ ತಮ್ಮದೇ ಕಾನೂನು ಮಾಡಿಕೊ೦ಡು, ಮುಸಲ್ಮಾನರು ಇತರರಿಗಿ೦ತ ತಾವು ವಿಭೀನ್ನ ಎ೦ದು ತೋಪ೯ಡಿಸಿಕೊಳ್ಳುವುದೇಕೆ? ನ೦ತರ ಒ೦ದೇ ಕಣ್ಣಲ್ಲಿ ಅಳುವುದೇಕೆ?
“ನಾವು ಅಲ್ಪ ಸ೦ಖ್ಯಾತರು ಸರ್… ನಮಗೆ ಭಾರತದಲ್ಲಿ ಸಮಾನತೆ ಸಿಗುತ್ತಿಲ್ಲ. ನಮ್ಮನ್ನು ಕ್ಯಾರೆ ಎನ್ನುವವರಿಲ್ಲ. ನಾವೇಕೆ ಇಲ್ಲಿರಬೇಕು? ನಾವು ಇನ್ಯಾವುದಾದರೂ ಮುಸೀಮ್ ರಾಷ್ಟ್ರಗಳಿಗೆ ಹೋಗಿಬಿಡುತ್ತೇವೆ’ ಎ೦ದು ಹೋದವರೆಷೆ್ಟೂೀ, ಮೋದಿ ಪ್ರಧಾನಿಯಾದ ಮೇಲೆ, ಮುಸೀಮರ ಚಮ೯ ಸುಲಿದು ಮಾ೦ಸದ೦ಗಡಿಗಳಲ್ಲಿ ಉಲ್ಟಾ ನೇತು ಹಾಕುತ್ತಾರ೦ತೆ ಎ೦ದು ಹೆದರಿ ದೇಶ ಬಿಟ್ಟವರೆಷ್ಟೋ. “ನಾನು ಹುಟ್ಟಿರುವುದು ಭಾರತದಲ್ಲಿ, ಯಾರು ಬ೦ದರೆ ನನಗೇನು?
ನಾನು ಸಾಯುವುದು ಇಲ್ಲೇ… ಆದರೆ, ಭಾರತದಲ್ಲಿ ನಮಗೆ ಸಮಾನತೆ ಸಿಗುತ್ತಿಲ್ಲ ಎನ್ನುವುದು ಮಾತ್ರ ಒಪ್ಪಲೇ ಬೇಕಾದ ಸತ್ಯ… ನಮ್ಮನ್ನು ನಮ್ಮ ಪಾಡಿಗೆ ಇರಲು ಬಿಡುವುದೂ ಇಲ್ಲ’ ಎ೦ದು ಕೊರಗುವವರು ಒ೦ದು ಪ೦ಗಡ. ಇ೦ಥ ಮಾತುಗಳಿಗೆಲ್ಲ ಒ೦ದು ಅ೦ತ್ಯ ಕೊಡಬೇಕೆ೦ದಿದ್ದರೆ ಏಕರೂಪ ನಾಗರಿಕ ಸ೦ಹಿತೆಯೆ೦ಬುದೊ೦ದು ಬರಲೇಬೇಕಿದೆ.
ಹೀಗೆ೦ದ ಮಾತ್ರಕ್ಕೆ ನಾನೇನು ಮುಸೀಮರ ವಿರೋಧಿಯೆ೦ದಲ್ಲ. ಬದಲಿಗೆ ಒ೦ದು ದೇಶ ನಿಮಾ೯ಣವಾಗಬೇಕಾದರೆ, ಕೆಲ ವಿಚಾರಗಳಲ್ಲಿ ನಾವು ಒ೦ದಾಗಲೇ ಬೇಕು. “ವೈವಿಧ್ಯತೆಯಲ್ಲಿ ಏಕತೆ’ ಎ೦ದು ದೇಶವನ್ನು ಹಿ೦ದೂ, ಮುಸೀಮ್, ಕ್ರಿಶ್ಚಿಯನ್, ಸಿಖ್, ಜೈನ್ ಎ೦ದು ಭಾಗ ಮಾಡಿಕೊಡಲು ಸಾಧ್ಯವೇ? ಎನ್ನುವುದಷ್ಟೇ ನನ್ನ ಪ್ರಶ್ನೆ.
ಮುಸೀಮ್ ಹೆಣ್ಣುಮಕ್ಕಳ ಮನಸ್ಸು ಹೇಗಿರುತ್ತದೆಯೆ೦ಬುದಕ್ಕೆ ಒ೦ದು ಉದಾಹರಣೆ ಕೊಡುತ್ತೇನೆ ಕೇಳಿ, ಈಗ ಎ೦ಜಿನಿಯರಿ೦ಗ್ ಮಾಡುತ್ತಿರುವ ನನ್ನ ಸ್ನೇಹಿತೆ ಆಯೇಷಾ ಶೇಖ್ ಳನ್ನು ನಾನು ಮೊದಲು ಭೇಟಿ ಆದಾಗ “ನೀನು ನನ್ನ ಬಳಿ ಮಾತಾಡಿದರೆ, ನಿನ್ನ ಕಡೆಯವರು ನಿ೦ಗೆ ಬ್ಯೆಯಲ್ವಾ?’ ಎ೦ದಾಗ ಆಕೆ ಜೋರಾಗಿ ನಕ್ಕು, “ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ, ನನ್ನ ತ೦ದೆ ತಾಯಿಯೂ ಅ೦ಥದ್ದೆಲ್ಲ ನನಗೆ ಹೇಳಿಕೊಟ್ಟಿಲ್ಲ. ಸತ್ಯ ಹೇಳಬೇಕೆ೦ದರೆ, ನನಗೆ ಅಲ್ಲಾಹ… ಎ೦ದರೆ ಎಷ್ಟು ಇಷ್ಟವೋ ಅದಕ್ಕಿ೦ತಲೂ ಹೆಚ್ಚು ಪ್ರೀತಿಸುವುದು ಶಿವನನ್ನು. ಏಕೆ೦ದರೆ, ಶಿವ ತನ್ನಲ್ಲಿ ಶಕ್ತಿಗೂ ಇರುವುದಕ್ಕೆ ಸ್ಥಾನ ಕೊಟ್ಟಿದ್ದಾನೆ. ಆದರೆ, ಶಿವನಿಗೆ ಈ ಬಗ್ಗೆ ಒ೦ದು ಸಾಸಿವೆಯಷ್ಟೂ ಅಹ೦ಕಾರವಿಲ್ಲ. ಪುರುಷ ಮತ್ತು ಸ್ತ್ರೀ ಒ೦ದೇ ಎ೦ದು ಜಗತ್ತಿಗೆ ಸಾರಿದಾತ ಅವನು’ ಎ೦ಬ ಆಕೆಯ ಉತ್ತರಕ್ಕೆ ಬೆರಗಾಗಿದ್ದೆ. “ಹಾಗಾದ್ರೆ ಇಸ್ಲಾ೦ನಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತ೦ತ್ರ್ಯವಿಲ್ಲವಾ?’ ಎ೦ದು ಕೇಳಿದಾಗ, “ಇಸ್ಲಾ೦ನಲ್ಲಿ ತಪ್ಪಿಲ್ಲ, ಆದರೆ ಅದನ್ನು ಜನರಿಗೆ ಸಾರುತ್ತಿರುವವರಲ್ಲಿ ಬಹಳ ತಪ್ಪಿದೆ, ಯಾವಾಗಲೋ ಮಾಡಿಟ್ಟ ಕಾನೂನನ್ನು ಇನ್ನೂ ಇಟ್ಟುಕೊ೦ಡಿದ್ದರೆ ಹೇಗೆ? ಜತೆಗೆ ಈ ಕಾನೂನಿನ ಹೆಸರು ಹೇಳಿಕೊ೦ಡು ಹೆಣ್ಣಿನ ಮೇಲಿನ ದೌಜ೯ನ್ಯವ೦ತೂ ಇದೆ. ಪುಣ್ಯಕ್ಕೆ ನನ್ನ ಮನೆಯಲ್ಲಿ ವಿಶಾಲವಾಗಿ ಆಲೋಚಿಸುವವರು ಇರುವುದರಿ೦ದ ನಾನು ಶಿವನನ್ನೂ ಆರಾಧಿಸಬಹುದು, ಹುಡುಗರ ಬಳಿಯೂ ಮಾತನಾಡಬಹುದು’ ಎ೦ದಳು.
ಇದು ಈಕೆಯೊಬ್ಬಳ ಮಾತಲ್ಲ. ಅಸ೦ಖ್ಯಾತ ಮುಸೀಮ್ ಹೆಣ್ಣು ಮಕ್ಕಳದ್ದು. ಇ೦ದು ಒ೦ದು ಅಕ್ಷರವನ್ನೂಪಾಲಿಸಲಾಗದ ಮನು ಸ್ಮೃತಿ ಪುಸ್ತಕವನ್ನು ಒ೦ದು ಕೈಯಲ್ಲಿ ಹಿಡಿದು, ಮತ್ತೊ೦ದು ಕೈಯಲ್ಲಿ ಸ೦ವಿಧಾನ ಪುಸ್ತಕ ಹಿಡಿದು “ನೋಡಿ, ಹಿ೦ದೂ ಧಮ೯ ಹೇಗಿದೆ… ಸ೦ವಿಧಾನ ಇ೦ಥದ್ದೆಲ್ಲ ವಿರೋಧಿಸುತ್ತೆ’ ಎ೦ದು ಬಾಯಿ ಬಡಿದುಕೊಳ್ಳುವವರು ಮುಸೀಮ್ ಕಾನೂನುಗಳ ಬಗ್ಗೆ, ಹೆಣ್ಣು ಮಕ್ಕಳ ವಿಷಯ ಬ೦ದಾಗ ಮಾತ್ರ ಸ೦ವಿಧಾನ ಪುಸ್ತಕವನ್ನು ಅಡಿಗಿಟ್ಟು ಕುಳಿತಿದ್ದರು.
ಒಮ್ಮೆ ಮುಸೀಮ್ ಮಹಿಳಾ ಸ೦ಘಟನೆಯ ಅಧ್ಯಕ್ಷೆ ಫರಾ ಫೈಜ್ ಅವರು ಸುಪ್ರೀ೦ ಕೋಟ್‍೯ನಲ್ಲಿ ಮಾತನಾಡುತ್ತಾ, “ನಮ್ಮ ಕಾನೂನಿ೦ದ ಹೆಣ್ಣುಮಕ್ಕಳಿಗೆ ಸ್ವಲ್ಪವೂ ಸ್ವಾತ೦ತ್ರ್ಯ ಸಿಗುತ್ತಿಲ್ಲ. ಭಾರತದಲ್ಲಿ ಮುಸೀ೦ ಹೆಣ್ಣು ಮಕ್ಕಳಿಗೆ ಎಲ್ಲಾದರೂ ಸ್ವಾ೦ತ೦ತ್ರ್ಯ ನೀಡಿದ್ದಾರೆ ಎ೦ದರೆ ಅದು ಸ೦ವಿಧಾನದ ಪುಸ್ತಕದಲ್ಲಿ ಮಾತ್ರ. ಜಾರಿಗೆ ಬ೦ದಿಲ್ಲವಾದರೂ ಅಕ್ಷರ ರೂಪದಲ್ಲಿದೆಯಲ್ಲ ಎ೦ದು ಖುಷಿ ಪಡಬೇಕಷ್ಟೇ. ಜಸ್ಟ್ ಒನ್ಸ್, ಟ್ರಿಪಲ್ ತಲಾಖ್ ಬಗ್ಗೆ ವಿಚಾರಣೆ ಮಾಡಿ.. ನ್ಯಾಯ ಕೊಡಿಸಿ’ ಎ೦ದಾಗ, ಜಸ್ಟಿಸ್ ಟಿಎಸ್ ಠಾಕೂರ್ ಮತ್ತು ಜಸ್ಟಿಸ್ ಎ ಎಮ್ ಖಾನ್ವಿಲ್ಕರ್ ನ್ಯಾಯಪೀಠದ ಮು೦ದೆ ಇಷ್ಟು ಧೈಯ೯ವಾಗಿ ಮಾತನಾಡಿದಾಗ ಉತ್ತರವೇ ಸಿಗದೇ, ಏನು ಹೇಳಬೇಕು ಎ೦ದು ತಿಳಿಯದೇ ಒ೦ದು ಕ್ಷಣ ನೆಲ ನೋಡಿದ್ದರು.
ಇನ್ನು ಮುಸೀಮರಲ್ಲಿ ಮತ್ತು ಕ್ರಿಶ್ಚಿಯನ್ನರಲ್ಲಿ ಇರುವ ಮೂಢನ೦ಬಿಕೆಯೇನೆ೦ದರೆ, ಎಲ್ಲರಿಗೂ ಒ೦ದೇ ಕಾನೂನು ತರುತ್ತಿರುವುದು ಮೋದಿಯೇ. ಅವರೇ ಇದಕ್ಕೆಲ್ಲ ಸೂತ್ರಧಾರಿ ಎ೦ದು. ಆದರೆ, ಸ೦ವಿಧಾನದ 44ನೇ ವಿಧಿಯಲ್ಲಿ”The State shall endeavour to secure for the citizens a uniform civil code throughoutthe territory of India’ಎ೦ದಿದೆ. ಈ ವಾಕ್ಯವು ಯಾವುದೇ ಅನುಮಾನ, ಗೊ೦ದಲ ಹುಟ್ಟು ಹಾಕದೇ ಸ್ಪಷ್ಟವಾಗಿ ಏಕರೂಪ ನಾಗರಿಕ ಸ೦ಹಿತೆ ಇರಬೇಕೆ೦ದು ಹೇಳಿದೆ. ಇನ್ನು ನ್ಯಾಯಾಲಯ ಸಹ ಶಯಾರಾ ಬಾನೋ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ, ಒ೦ದೇ ಕಾನೂನು ಇರಬೇಕೆ೦ದು ಹೇಳಿದೆ.
ಇ೦ಥ ಏಕರೂಪ ಸ೦ಹಿತೆ ಜಾರಿಯಾಗುವುದು ಜಾತ್ಯತೀತವಾದಿಗಳಿಗೂ ಇಷ್ಟವಿಲ್ಲದಿರುವುದು ಬಹಳ ಆಶ್ಚಯ೯ಕರ. ಮಾತೆತ್ತಿದರೆ ಸ೦ವಿಧಾನ ಪುಸ್ತಕ, ಅ೦ಬೇಡ್ಕರ್ ಎ೦ದು ದೊಡ್ಡ ದೊಡ್ಡ ಪ೦ಡಿತ ಪಾಮರರ ರೀತಿ ಭಾಷಣ ಬಿಗಿಯುವ ಚಿ೦ತಕರು, ಬುದ್ಧಿಜೀವಿಗಳು ಎ೦ಬ ಇತ್ಯಾದಿ ಬಿರುದುಗಳಿ೦ದ ಕೇಳಿ ಕೇಳಿ ಕರೆಸಿಕೊಳ್ಳುವ ಒಬ್ಬನೂ ಯಾವ ಮಾಧ್ಯಮಗಳಲ್ಲೂ ಇದರ ಬಗ್ಗೆ ಮಾತಾಡಿಲ್ಲ. ಸ೦ವಿಧಾನ ಎ೦ಬುದು ಹಿ೦ದೂಗಳನ್ನು, ಅವರ ಆಚರಣೆಗಳನ್ನು ಸುಳ್ಳೆ೦ದು ಹೇಳಲಷ್ಟೇ ಸೀಮಿತವೋ ಅಥವಾ ಅದೇ ಸ೦ವಿಧಾನ ಮುಸೀಮರು ಮತ್ತು ಕ್ರಿಶ್ಚಿಯನ್ನರಿಗೂ ಅನ್ವಯಿಸುತ್ತದೆಯೋ?
ಹಿ೦ದೂ ಧಮ೯ದ ಕೆಲವು ಕುಟು೦ಬಗಳಲ್ಲಿ ವಿಧವೆಯರನ್ನು ಮತ್ತೊಮ್ಮೆ ಮದುವೆಯಾಗಲು ಬಿಡುವುದಿಲ್ಲ ಎನ್ನುವುದು ಬಿಟ್ಟರೆ ಇನ್ನೇನೂ ಸಮಸ್ಯೆಯಿಲ್ಲ. ಈಗ ಅದರಲ್ಲೂ ಎಷ್ಟೋ ಬ್ರಾಹ್ಮಣ, ಗೌಡ, ಲಿ೦ಗಾಯತ ವಿಧವೆಯರಿಗೂ ಮದುವೆ ಮಾಡಿಸುತ್ತಿದ್ದಾರೆ ಎನ್ನುವುದಕ್ಕೆ ದಿನಪತ್ರಿಕೆಯ ವಿವಾಹ ಜಾಹೀರಾತುಗಳೇ ಸಾಕ್ಷಿ. ಆದರೆ, ನಿಜವಾಗಿ ಬದಲಾಗಬೇಕಾಗಿರುವುದು ಮುಸೀಮ್ ಹೆಣ್ಣುಮಕ್ಕಳ ಸ್ಥಿತಿ, ಮುಸೀಮ್ ಕಾನೂನಿನ ಸಾಕಷ್ಟು ಅ೦ಶಗಳು. ಇದೇ ಕಾರಣಕ್ಕೆ ಏಕರೂಪ ನಾಗರಿಕ ಸ೦ಹಿತೆ ಜಾರಿಯಾಗಬೇಕಾಗಿರುವುದು. “ಯತ್ರ ನಾಯಾ೯ಸ್ತು ಪೂಜ್ಯ೦ತೆ ರಮ೦ತೇ ತತ್ರ ದೇವತಾಃ’ ಎ೦ದಿದ್ದು ಕೇವಲ ಹಿ೦ದೂ ಹೆಣ್ಣುಮಕ್ಕಳನ್ನಷ್ಟೇ ಗ್ರಹಿಸಿಯಲ್ಲ, ಎಲ್ಲ ಧಮ೯ಗಳ ಸ್ತ್ರೀಯರೂ ಇದಕ್ಕೆ ಒಳಪಡುತ್ತಾರೆ. ಮುಸೀಮ್ ಹೆಣ್ಣು ಮಕ್ಕಳು ಇನ್ನೆಷ್ಟು ದಿನ ಬುಖಾ೯ ಪರದೆಯೊಳಗೇ ಅಳಬೇಕು?

ಕಾಶ್ಮೀರದಲ್ಲಿ ಗುಂಡಿಟ್ಟರೆ ಕರ್ನಾಟಕದವರು ಊಳಿಡುವುದೇಕೆ ?

$
0
0

 

kashmir7

ಆಜಾದಿ!
ಮೊದಲೆಲ್ಲ ಈ ಶಬ್ದವನ್ನು ಬ್ರಿಟಿಷರಿಂದ ನಮಗೆಲ್ಲ ಸ್ವಾತಂತ್ರ್ಯ ಬೇಕು ಎನ್ನುವುದಕ್ಕೆ ಜೋರಾಗಿ ‘ಆಜಾದಿ ಬೇಕು’ ಎಂದು ಕೂಗಲಾಗುತ್ತಿತ್ತು. ಆದರೆ, ಈಗ ಆಜಾದಿಯ ವ್ಯಾಖ್ಯೆ ಬದಲಾಗಿದೆ.

ಉಮರ್ ಖಾಲಿದ್ ಅಥವಾ ಕನ್ಹಯ್ಯ ಕೂಗಿದರೆ ಮಾತ್ರ ಆಜಾದಿಗೆ ಒಂದು ಅರ್ಥ ಎಂದು ಈಗ ಭಾವಿಸಲಾಗಿದೆ. ತಾನು -ಟ್ನಲ್ಲಿ ಬಂದು ಹೋರಾಟ ಮಾಡುವಾಗ ನೆಲದ ಮೇಲೆ ಕುಳಿತು ಆಜಾದಿ ಬೇಕು ಎಂದರೂ, ಅದಕ್ಕಿಲ್ಲಿ ಬೆಲೆಯಿದೆ.

ಈಗ ಅದೇ ಆಜಾದಿ ಕೂಗು ಕರ್ನಾಟಕದಲ್ಲೂ ಕೇಳಿ ಬರಲಿದೆ. ಈ ಬಾರಿ ಆಜಾದಿಗಾಗಿ ಕೂಗಾಡುತ್ತಿರುವುದು ಕಾಶ್ಮೀರಕ್ಕಾಗಿ. ಆಜಾದಿ ಬೇಕಾಗಿರುವುದು ಭಾರತದಿಂದ. ಸೈನ್ಯದಿಂದ. ಕಾಶ್ಮೀರದಲ್ಲಿ ನಿಯೋಜಿಸಿರುವ ಪೊಲೀಸರಿಂದ.

ಅದಕ್ಕಾಗಿ ಅರಚಾಡುತ್ತಿರುವುದು ಮಾತ್ರ ಕರ್ನಾಟಕದಲ್ಲಿ. ಅದೂ ಬೆಂಗಳೂರಿನಲ್ಲಿ. ಎಲ್ಲಿಂದೆಲ್ಲಿಗೆ ಸಂಬಂಧವಿದು. ಕಾಶ್ಮೀರದಲ್ಲಿ ಗಲಭೆಯಾದರೆ, ಕರ್ನಾಟಕದಲ್ಲಿ ಹೋರಾಟ ಮಾಡಿ ಪ್ರಯೋಜನವೇನು? ಅಸಲಿಗೆ ಹೋರಾಟ ಮಾಡುತ್ತಿರುವುದು ಯಾವ ಕಾರಣಕ್ಕಾಗಿ? ಇದರ ಒಳ ಮರ್ಮ ತಿಳಿದರೆ ಸಾಕು. ಎಲ್ಲವೂ ಬಯಲಾದಂತೆ.

ಭಾರತದಲ್ಲಿ ಗಲಭೆ ನಡೆಯವುವಾಗ ವಾತಾವರಣ ಹೇಗಿರುತ್ತದೆಯೆಂದು ಯಾರನ್ನೂ ಕೇಳುವ ಹಾಗೇ ಇಲ್ಲ. ಇಲ್ಲಿ ಗಲಭೆ ಯಾವಾಗಲೂ ಆಗುತ್ತಲೇ ಇರುತ್ತವೆ. ಈ ಗಲಭೆಗಳಲ್ಲಿ ಪೊಲೀಸರು ಗುಂಪು ಚದುರಿಸಲು ಏನೇನು ಮಾಡುತ್ತಾರೆ ಎಂಬುದೂ ತಿಳಿದ ವಿಚಾರವೇ. ಮೊದಲಿಗೆ ಗುಂಪು ರೊಚ್ಚಿಗೇಳುವ ಸ್ಥಿತಿಯಲ್ಲಿದ್ದರೆ ಅಥವಾ ಆಗಷ್ಟೇ ಸಾರ್ವಜನಿಕ ಸ್ವತ್ತುಗಳನ್ನು ಹಾನಿ ಮಾಡುತ್ತಿದ್ದರೆ, ಲಾಠಿ ಚಾರ್ಜ್ ಮಾಡುತ್ತಾರೆ. ವಾಟರ್ಗನ್ ಬಳಸುತ್ತಾರೆ. ಮೊದಲೆಲ್ಲ ಇಂಕ್ ಸೋಕಿ, ನಂತರ ಅವರನ್ನೆಲ್ಲ ಹಿಡಿಯುತ್ತಿದ್ದರು.

ಈಗ ಬಳಸುವುದು ಪೆಲೆಟ್ ಗನ್. ಇದನ್ನು ಕೊನೆಯ ಅಸ್ಠಉ ಎಂಬಂತೆ ಬಳಸಲಾಗುತ್ತದೆ. ಈ ಗನ್ನಿಂದ ಹೊರ ಬರುವ ಸಣ್ಣ ಸಣ್ಣ ಪೆಲೆಟ್ಗಳು, ಎದುರಾಳಿಯ ದೇಹದೊಳಕ್ಕೆ ಸೇರುತ್ತದೆ. ಹೀಗಾದಾಗ ಗಲಭೆಯಲ್ಲಿ ಪಾಲ್ಗೊಳ್ಳುತ್ತಿರು ವವರು, ತಮಗಾದ ಗಾಯದಿಂದ ಸ್ವಲ್ಪ ವಿಚಲಿತರಾಗಿ, ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಇನ್ನಾಗುವ ಹಾನಿ ತಪ್ಪಿಸಬಹುದು ಎಂದು ಇದರ ಉದ್ದೇಶ. ಆದರೆ, ಈ ಗನ್ಗಳನ್ನು ಯಾವುದೇ ಕಾರಣಕ್ಕೂ ಗಲಭೆಗೆ ಮೊದಲೇ ಪ್ರಯೋಗಿಸುವುದಿಲ್ಲ.

ಇದೇ ಗನ್ಗಳನ್ನು ಮೊನ್ನೆ ಕಾಶ್ಮೀರದಲ್ಲಿ ಬಳಸಲಾಗಿತ್ತು. ಇದು ಅವರ ಕೊನೆಯ ಅಸ್ಠಉವಾಗಿತ್ತು. ಮೊದಲಿಗೆ ಗಲಭೆ ನಡೆದಾಗ ಲಾಠಿ ಚಾರ್ಜ್ ಮಾಡಲಾಯ್ತು. ಯಾರೂ ಜಗ್ಗ ಲಿಲ್ಲ. ಕೊನೆಗೆ ಈ ಗಲಭೆ ಯಾವ ಮಟ್ಟಿಗೆ ಹೋಯಿತೆಂದರೆ, ಲಾಠಿ ಚಾರ್ಜ್ ಮಾಡುತ್ತಿರುವ ಪೊಲೀಸರ ಮೇಲೇ ಹಲ್ಲೆ ಮಾಡಲು ನಿಂತರು. ಕಲ್ಲು ತೂರಾಟ ಶುರುವಾಯಿತು. ಕಲ್ಲು ತೂರಾಟ ಇದ್ದದ್ದು ಪೆಟ್ರೋಲ್ ಬಾಂಬ್ ಎಸೆಯುವಲ್ಲಿಗೆ ಬಂದಿತು. ಕೊನೆಗೆ ಗಲಭೆ ತೀವ್ರಗೊಳ್ಳುತ್ತಾ ಗುಂಪು ಗುಂಪು ಹೋರಾಟಗಾರರು, ಒಬ್ಬೊಬ್ಬ ಪೊಲೀಸರನ್ನು ಹಿಡಿದು, ನೆಲಕ್ಕೆ ಹಾಕಿ ತುಳಿದು, ಅರೆಜೀವ ಮಾಡಿಬಿಡುತ್ತಿದ್ದರು. ಅಲ್ಲಿಯವರೆಗೂ ಯಾವೊಬ್ಬ ಹೋರಾಟಗಾರನಿಗೂ ಮೈಮೇಲೆ ಖಬರೇ ಇರಲಿಲ್ಲ. ನಮ್ಮ ಪೊಲೀಸರ ಬಗ್ಗೆ ಕ್ಯಾರೇ ಎಂದಿಲ್ಲ.

ಇಷ್ಟು ಬೆಳವಣಿಗೆಗಳ ನಂತರವೇ ಪೆಲೆಟ್ ಗನ್ ಬಳಸಲಾಗಿದ್ದು. ಇದು ಬಳಸಿದ್ದಕ್ಕೆ, ಹೇಗೆ ಗಲಭೆ ನಿಯಂತ್ರಣಕ್ಕೆ ಬಂತೋ, ಬೀದಿಗಿಳಿದು ಕಲ್ಲೆಸೆಯುವವರಿಗೂ ಅಷ್ಟೇ ಗಾಯಗಳಾದವು. ಮುನ್ನುಗ್ಗಿ ಕಲ್ಲೆಸೆಯುವ ಮಂದಿಗೆ ಪೆಲೆಟ್ ಗಳು ನೇರವಾಗಿ ಕಣ್ಣಿಗೇ ಬಿದ್ದು ಎಲ್ಲರೂ ಆಸ್ಪತ್ರೆಗೆ ಸೇರಿದರು. ಈಗ ನಮ್ಮ ದೇಶದ ಕೆಲಸವಿಲ್ಲದ ಚಿಂತಕರಿಂದ ಇಂಥ ಸೋ ಕಾಲ್ಡ್ ಸಂತ್ರಸ್ತರ ಪರವಾಗಿ ಕೂಗು ಕೇಳಿ ಬರುತ್ತಿದೆ. ಇವರು ಮರುಕ ಪಡುವುದನ್ನು ನೋಡಿದರೆ, ಕ್ರಾಂತಿಕಾರಿಗಳಿಗೇ ಗುಂಡು ತಾಕಿದೆಯೋ ಎಂಬಂತೆ ಕಣ್ಣೀರಿಡುತ್ತಿದ್ದಾರೆ. ಕೆಲ ಮಾಧ್ಯಮಗಳು ಮತ್ತು ಪತ್ರಕರ್ತರಂತೂ ವೈದ್ಯರಿಗಿಂತಲೂ ತಾವೇ ಮೊದಲು ಆಸ್ಪತ್ರೆಯೋಳಗೆ ಹೋಗಿ ‘ನಿಮಗೆ ಇಲ್ಲಿ ನೋವುತ್ತಿದೆಯೇ’, ‘ಹೇಳಿ, ಇನ್ನೆಲ್ಲೆಲ್ಲಿ ನೋವುತ್ತಿದೆ’ ಎಂದು ಕೇಳಿ, ಅದನ್ನೂ ಮೋದಿಯ ಮೇಲೇ ಹಾಕಿ ಚಟ ತೀರಿಸಿಕೊಳ್ಳುತ್ತಿದ್ದಾರೆ. ಆಂಗ್ಲ ಮಾಧ್ಯಮಗಳ ಬೆಂಬಲ ಎಲ್ಲಿ ಇದೆ ಎಂದು ತಿಳಿಯಿತೋ, ಬುದಿಟಛಿಜೀವಿಗಳ ಮಟ್ಟದಲ್ಲಿ, ಚಿಂತಕರ ಮಟ್ಟದಲ್ಲಿ ಪ್ರತಿಭಟನೆಗಳಾರಂಭವಾದವು. ಆದರೆ, ಇವರ ಪ್ರತಿಭಟನೆ, ಮೊದಲು ಆರಂಭವಾಗಿದ್ದು ಪೆಲೆಟ್ ಗನ್ ಗಳ ಉಪಯೋಗ ಬ್ಯಾನ್ ಆಗಬೇಕೆಂದು. ಪೆಲೆಟ್ ಗನ್ ಗಳಿಂದ ಎಷ್ಟೋ ಅಮಾಯಕರು ಕಣ್ಣು ಕಳೆದುಕೊಳ್ಳುತ್ತಿದ್ದಾರೆ. ಪೆಲೆಟ್ನಿಂದ ಪ್ರಾಣ ಹೋಗದಿದ್ದರೂ, ಮಾರಣಾಂತಿಕ ನೋವು ಮತ್ತು ಕಣ್ಣೇ ಕಳೆದುಕೊಂಡ ಮೇಲೆ ಬದುಕಿದ್ದೂ ಏನು ಉಪಯೋಗ ಎಂದೆಲ್ಲ ಒಂದೇ ಕಣ್ಣಲ್ಲಿ ಅಳುತ್ತಿದ್ದಾರೆ.

 

ಈಗ ನಾವು ಕೇಳಬೇಕಿರುವುದೇನೆಂದರೆ, ಅಲ್ಲಿ ಪ್ರತಿಭಟನೆಗೆ ಬಂದವರು ಗಲಭೆ ಎಬ್ಬಿಸಿದರೂ ಸುಮ್ಮನಿರಲು, ಅವರ್ಯಾೆರೂ ಈರುಳ್ಳಿ ಟೊಮೆಟೊ ಬೆಳೆಗೆ ಮಾನ್ಯತೆ ನೀಡಿ ಎಂದು ಬಂದವರಲ್ಲ. ನಮಗೆ ಅನ್ನ ಹಾಕುವ ರೈತರಂತೂ ಅಲ್ಲವೇ ಅಲ್ಲ. ಅಲ್ಲಿ ಗಲಭೆ ಆಗಿದ್ದು ಒಬ್ಬ ಮೋಸ್ಟ್ ವಾಂಟೆಡ್ ಉಗ್ರಗಾಮಿ ಬುರ್ಹಾನ್ ವನಿಯನ್ನು ನಮ್ಮ ಸೇನೆ ಹುಡುಕಿ ಅವನಿದ್ದಲ್ಲಿಯೇ ಹೋಗಿ, ಹತ್ಯೆ ಮಾಡಿದ್ದಕ್ಕಾಗಿ ಸಿಡಿದೆದ್ದ ಜನತೆ ಇದು. ಉಗ್ರಗಾಮಿ ಬುರ್ಹಾನನ್ನು ದೇಶಭಕ್ತನನ್ನಾ ಗಿಸಲು ಹೊರಟ ಜನತೆ ಇದು. ಹೀಗಿರುವಾಗ ಅವನ ಪರ ಪ್ರತಿಭಟನೆ ಮಾಡುವವರಿಗೆ ಒಂದೋ ಕಾಶ್ಮೀರ ಪ್ರತ್ಯೇಕವಾ ಗುವುದು ಇಷ್ಟವಿರುತ್ತದೆ. ಇಲ್ಲವೇ ಉಗ್ರವಾದದಲ್ಲಿ ಒಲವಿ ರುತ್ತದೆ. ಇಂಥವರಿಗೆ ಪೆಲೆಟ್ ಬಿದ್ದು ಕಣ್ಣು ಹೋದರೆ ಅಳುವ ಇವರು, ಎಂದಾದರೂ ಬುರ್ಹಾನ್ ಗುಂಡೇಟಿಗೆ ಬಲಿಯಾದ ಕರ್ನಲ್ ಎಮ್.ಎನ್. ರೈ ಮನೆಗೆ ಹೋಗಿ ಅವರ ೧೦ವರ್ಷದ ಪುಟ್ಟ ಮಗಳನ್ನು ಮಾತಾಡಿಸಿದ್ದಾರಾ? ಇಲ್ಲ.

ಈ ಊಳಿಡುವವರ ಹೋರಾಟದ ಅಜೆಂಡಾ ಹೇಗೆ ಬದಲಾಗುತ್ತದೆ ನೋಡಿ:

ಮೊದಲ ಹಂತದಲ್ಲಿ ಪೆಲೆಟ್ ಗನ್ ವಿರೋಧ, ಅಲ್ಲಿನ ಸಂತ್ರಸ್ತರಿಗೆಲ್ಲ ಭಾರತ ಚಿಕಿತ್ಸೆ ಕೊಡಿಸಬೇಕಂತೆ, ಎಲ್ಲ ರೀತಿಯ ಹಾನಿಗಳೆಲ್ಲವೂ ನಿಲ್ಲಬೇಕಂತೆ, ಇದಕ್ಕೆ ಸರಿಯಾಗಿ ಬೆಂಬಲ ಸಿಕ್ಕ ಮೇಲೆ, ಎರಡನೇ ಹಂತದಲ್ಲಿ ಕಾಶ್ಮೀರದಿಂದ ಮಿಲಿಟರಿಯನ್ನು ವಾಪಸ್ ಕರೆಸಿಕೊಳ್ಳಬೇಕು. ಅದೂ ವರ್ಕೌಟ್ ಆಗುತ್ತಿದ್ದಂತೆ, ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು. ಭಾರತ ಕಾಶ್ಮೀರವನ್ನು ಬಿಟ್ಟುಕೊಡಬೇಕು.

ಈಗ ಹೋರಾಟ ಸಾಗುತ್ತಿರುವ ಹಾದಿ ಇದು. ಇಂಥ ಹೋರಾಟ ಕಾಶ್ಮೀರದಲ್ಲೋ, ದೆಹಲಿಯಲ್ಲೋ ಅಥವಾ ಉತ್ತರ ಭಾರತದಲ್ಲಿ ನಡೆದಿದ್ದರೆ ಅದನ್ನು ಒಪ್ಪಿಕೊಳ್ಳ ಬಹುದಿತ್ತು. ಆದರೆ, ಕರ್ನಾಟಕದಲ್ಲಿ ಹೋರಾಟವೇಕೆ? ದೊಡ್ಡ ದೊಡ್ಡ ‘ಸಲಹೆಗಾರ’ರ ಸಲಹೆ ಪಡೆದು ಹೋರಾಟ ಮಾಡುತ್ತಿರುವ ಇವರ್ಯಾಗರೂ ಒಂದು ಬಾರಿಯೂ ರೈತರ ಪರವಾಗಿ ಧ್ವನಿ ಎತ್ತಿದವರಲ್ಲ. ಇದೇ ಕಾಂಗ್ರೆಸ್ ಸರಕಾರ ರೈತರು ತಮ್ಮ ಬೆಳೆಗೆ ಒಳ್ಳೆಯ ಬೆಲೆ ನೀಡಿ ಎಂದು ಬಂದಾಗ, ಬೂಟು ಕಾಲಲ್ಲಿ ಒದ್ದ ಪೊಲೀಸರ ವಿರುದಟಛಿ ಇವರ ಧ್ವನಿ ಏರಲಿಲ್ಲ. ಪಿಯು ಪ್ರಶ್ನೆಪತ್ರಿಕೆ ಬಹಿರಂಗವಾಗಿ, ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟವಾಡಿದ ಸರಕಾರದ ಬಗ್ಗೆ ಗೊತ್ತೇ ಇಲ್ಲ. ಸಾಲು ಸಾಲು ಪೊಲೀಸರು, ಐಎಎಸ್ ಅಽಕಾರಿಗಳು ಆತ್ಮಹತ್ಯೆ, ಹತ್ಯೆಯಾಗಿ ಹೋಗುತ್ತಿದ್ದರೂ ಯಾವೊಬ್ಬ ಚಿಂತಕನಿಗೂ ಚಿಂತೆ ಕಾಡಲಿಲ್ಲ.

ಆದರೆ, ಈಗ ಪ್ರಾಣ ಬೆಲೆ, ಮನುಷ್ಯತ್ವದ ಬೆಲೆ ಗೊತ್ತಾಗಿದ್ದಾದರೂ ಹೇಗೆ? ಮನುಷ್ಯತ್ವದ ನೆಪದಲ್ಲಿ ಕಾಶ್ಮೀರವನ್ನೂ ಪಾಕಿಸ್ತಾನಕ್ಕೆ ಸೇಲ್ ಮಾಡುವ ತಂತ್ರವೇ? ಇದೇ ಕಾಶ್ಮೀರದ ವಿಷಯವನ್ನಿಟ್ಟುಕೊಂಡು, ಇಂದು ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಯುತ್ತಿದೆ. ಅಚ್ಚರಿ ಯೆಂಬಂತೆ, ಈ ಪ್ರತಿಭಟನೆಯ ಅಜೆಂಡಾಗಳೂ ಪೆಲೆಟ್ನಿಂದ ಶುರುವಾಗಿ, ಯೋಧರನ್ನು ಹೊರ ಕಳಿಸಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುತ್ತಿದೆ. ನಮ್ಮ ರಾಜ್ಯದಲ್ಲೇ ತಲೆ ಮೇಲೆ ತಲೆ ಬಿದ್ದರೂ ಮನೆಯ ಕಾಂಪೌಂಡ್ ಬಿಟ್ಟು ಹೊರ ಬರದವರು ಸಿಡಿzದಿ ದ್ದಾಜಂರ , ವು ತೂ ಂದು ಅನು ಜಿ ಹು ಟ್ಟುಡz. ಕಳೆದ ನಾಲ್ಕೈದು ದಿನಗಳಿಂದ ಸರಕಾರ ಬಹಳ ಪೇಚಿಗೆ ಸಿಲುಕಿದೆ. ಡಿವೈಎಸ್ಪಿ ಎಮ್.ಕೆ. ಗಣಪತಿ, ಜಾರ್ಜ್ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕಾಂಗ್ರೆಸಿಗರು ನೆಮ್ಮದಿಯಿಂದ ನಿದ್ದೆ ಮಾಡುತ್ತಿಲ್ಲ ಎನ್ನುವುದಂತೂ ಸತ್ಯ.

ಇದನ್ನು ತಪ್ಪಿಸಲು ಎಡಬಿಡಂಗಿ ಪತ್ರಕರ್ತರ ತಂಡ ಮತ್ತು ಅವರ ಗಂಜಿಕೇಂದ್ರ ವಾಸಿಗಳು ಹಲವು ದಿನಗಳಿಂದ -ಸ್ಬುಕ್, ಜಾಲತಾಣ, ದಿನಪತ್ರಿಕೆ ಸೇರಿದಂತೆ ಹಲವಾರು ಕಡೆ ಗಣಪತಿಯ ಮಾನಹಾನಿಗೆ ಪ್ರಯತ್ನಿಸಿ ಸೋತಿದ್ದರು. ಇವರ ಬರವಣಿಗೆಗಳನ್ನು ಓದಿ ಮತ್ತಷ್ಟು ಜನರು ಗಣಪತಿಯವರ ಸಾವಿಗೆ ನ್ಯಾಯ ಕೇಳುತ್ತಿದ್ದರೇ ಹೊರತು ಯಾರ ಮಾತಿಗೂ ಬಗ್ಗಲಿಲ್ಲ. ಈಗ ಜನರ ಗಮನವನ್ನು ಬೇರೆಡೆ ಸೆಳೆಯಲು ಬೆಂಗಳೂರಿನಲ್ಲಿ ಹೊಸ ಬಯಲು ನಾಟಕ. ಇಲ್ಲದಿದ್ದರೆ, ಒಮ್ಮೆ ಆಲೋಚಿಸಿ, ಉಗ್ರಕಾರ್ಯಾಚರಣೆಯಲ್ಲಿ ಹುತಾತ್ಮರಾದ ಒಬ್ಬರ ಮನೆಗೂ ಹೋಗದವರು, ಸಂದೀಪ್ ಉನ್ನಿಕೃಷ್ಣನ್ ಎಂಬ ಹೆಸರೇ ಕೇಳದವರು, ಲಕ್ಷ ಲಕ್ಷ ಕಾಶ್ಮೀರಿ ಪಂಡಿತರನ್ನು ಅಲ್ಲಿನ ಮುಸಲ್ಮಾನರು ಕೊಚ್ಚಿ ಕೊಂದಾಗ, ಕಾಶ್ಮೀರದವರಾದ ಅವರನ್ನೇ ನಿರಾಶ್ರಿತರನ್ನಾಗಿ ಮಾಡಿದಾಗ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡು, ಮನಷ್ಯತ್ವವೆಂಬ ಪದವನ್ನೇ ಮರೆತಂತಿದ್ದ ಈ ತಂಡಕ್ಕೆ ಯಾವ ಬುದಟಛಿನ ಉಪದೇಶದಿಂದ ಜ್ಞಾನೋದಯವಾಯಿತು? ಇದು ಕೇವಲ ಊಹೆಯಲ್ಲ. ಸ್ವಲ್ಪ ನಮ್ಮ ಕರ್ನಾಟಕದ ಹಿಂದಿನ ದಿನಗಳ ಡೈರಿಯನ್ನು ತೆಗೆದು ನೋಡಿ. ಮಲ್ಲಿಕಾರ್ಜುನ ಬಂಡೆ ಸತ್ತಾಗ, ಜನರೆಲ್ಲ ರೊಚ್ಚಿಗೆದ್ದು ಇನ್ನೇನಾದರೂ ಮಾಡಿಬಿಟ್ಟಾರು ಎಂದಾದಾಗ ‘ದೇಶದಲ್ಲಿ ಅಸಹಿಷ್ಣುತೆ ಕಾಡುತ್ತಿದೆ’ ಎಂದು ಹೊಸ ಕ್ಯಾತೆ ತೆಗೆದಿದ್ದರು.

ಅದು ಮುಗಿಯುತ್ತಿದ್ದಂತೆ, ಡಿಕೆ ರವಿ ಸೇರಿದಂತೆ ಸುಮಾರು ಅಽಕಾರಿಗಳು ಅಸಹಜವಾಗಿ ಮೃತಪಟ್ಟಾಗ ಜನರು ಈ ಸಲ ಸರಕಾರವನ್ನು ಬಿಡುವುದೇ ಇಲ್ಲ ಎಂದು ಗೋಮಾಂಸ ವಿಚಾರವನ್ನು ಎತ್ತಿ, ಪ್ರತಿಭಟನೆಯ ಸೋಗಿನಲ್ಲಿ ನಾಯಿ ಮಾಂಸ ತಿಂದು ತೇಗಿದವರೂ ಇದೇ ತಂಡವೇ.

ಆದರೆ, ಇವರು ಮಾಡುವ ಹೋರಾಟಕ್ಕೆ, ಪ್ರತಿಭಟನೆಗೆ, ಟೌನ್ಹಾಲ್ ದೊಂಬರಾಟಕ್ಕೆ ಒಂದಕ್ಕೂ ಇತಿಶ್ರೀ ಹಾಡಿದ್ದಾಗಲೀ, ನ್ಯಾಯ ಒದಗಿಸಿದ್ದಾಗಲಿ ಇವರ ಇತಿಹಾಸದಲ್ಲೇ ಇಲ್ಲ. ಎಲ್ಲಿ ಜನರ ಗಮನ ಬೇರೆಡೆ ಹೋಗಿದೆ ಎಂದು ಮಾಹಿತಿ ಬಂತೋ ಇವರ ಹೋರಾಟಗಳೆಲ್ಲವೂ ನಿಜಕ್ಕೂ ನಡೆದಿತ್ತೋ ಅಥವಾ ಕನಸೋ ಎಂಬಷ್ಟರ ಮಟ್ಟಿಗೆ ಸುಮ್ಮನಿರುತ್ತಾರೆ.

ಅಷ್ಟಕ್ಕೂ ಬೆಚ್ಚಗೆ ಬೆಂಗಳೂರಿನಲ್ಲಿದ್ದುಕೊಂಡು ನಯಾ ಪೈಸೆ ಕೆಲಸ ಮಾಡದೇ, ಮೋದಿಯ ವಿದೇಶ ಪ್ರಯಾಣದ ಬಗ್ಗೆ ಟೀಕೆ ಮಾಡುತ್ತಾ ಮಕ್ಕಳನ್ನು ಮಾತ್ರ ಇಂಗ್ಲೆಂಡಿನ ಕಾರ್ಡಿ- ವಿವಿಯಲ್ಲೇ ಉನ್ನತ ಅಭ್ಯಾಸಕ್ಕೆ ಕಳಿಸಿ ಕೂರುವ ಈ ತಂಡಕ್ಕೆ ಕಾಶ್ಮೀರದಲ್ಲಿ ಯಾರು ಸತ್ತರೇನು? ಎಷ್ಟು ಜನ ಸತ್ತರೇನು? ಕಾಶ್ಮೀರಕ್ಕೂ ಕರ್ನಾಟಕಕ್ಕೂ ಎಲ್ಲಿಂದೆಲ್ಲಿಗೆ ಸಂಬಂಧ? ಈ ಎಡಬಿಡಂಗಿಗಳು ಇನ್ಯಾವುದಾದರೂ ದಾರಿ ಹುಡುಕಿ ಕೊಳ್ಳುವುದು ಉತ್ತಮ. ಜನರು ಇಂಥ ನಾಟಕಗಳನ್ನು ಹಜಾರ ನೋಡಿದ್ದಾರೆ!

ಸಾಯ್ತೀನಿ ಅ೦ದ್ರೂ ಸುಮ್ನಿರು ಅ೦ದುಬಿಟ್ರಲ್ಲಾ ಕೇಜ್ರಿವಾಲ್?

$
0
0
FotorCreated

“ಪವಾ೯ಗಿಲ್ಲ ಅಡ್ಜಸ್ಟ್ ಮಾಡ್ಕೊಳಮ್ಮ!’.

ಇದು ದೆಹಲಿಯ ಯಾವುದೋ ಬಸ್‍ನಲ್ಲಿ ಕುಳಿತುಕೊಳ್ಳುವುದಕ್ಕೆ ಜಾಗ ಸಿಗದಾಗ ಕ೦ಡಕ್ಟರ್ ಹೇಳಿರುವ ಮಾತಾಗಿದ್ದರೆ, ಅಡ್ಜಸ್ಟ್ ಮಾಡಿಕೊಳ್ಳಬಹುದಿತ್ತು. ಆದರೆ ಇ೦ಥ ಮಾತಾಡಿರುವುದು ಸ್ವತಃ ಕೇಜ್ರಿವಾಲ್. “ನನಗೆ ಲ್ಯೆ೦ಗಿಕ ಕಿರುಕುಳ ಕೊಡುತ್ತಿದ್ದಾರೆ ಸಾರ್, ಅದೂ ನಮ್ಮ ಪಕ್ಷದವರೇ. ದಯವಿಟ್ಟು ಅವರ ಮೇಲೆ ಕ್ರಮ ಕೈಗೊಳ್ಳಿ’ ಎ೦ದು ಅದೇ ಪಕ್ಷದ ಕಾಯ೯ಕತೆ೯ ಸೋನಿ, ಕೇಜ್ರಿವಾಲ್ ಕಾಲಿಗೆ ಬಿದ್ದಿದ್ದಳು. ಆಗ ಕೇಜ್ರಿವಾಲ್ ಹೇಳಿದ್ದು “ಪವಾ೯ಗಿಲ್ಲ ಅಡ್ಜಸ್ಟ್ ಮಾಡ್ಕೊಳಮ್ಮ!’

ತಾನು ಅನುಭವಿಸಿದ ಈ ಘಟನೆಯನ್ನು ಆಕೆ ಇತ್ತೀಚೆಗೆ ಟಿವಿ ಮು೦ದೆ ಹೇಳಿದ್ದಳು. ಹೇಳಿ ಒ೦ದೆರಡೇ ದಿನಕ್ಕೆ ಆಕೆ ಆತ್ಮಹತ್ಯೆ ಮಾಡಿಕೊ೦ಡಿದ್ದಾಳೆ. ಜೂನ್ 2ರ೦ದು ಆಮ್ ಆದ್ಮಿ ಪಾಟಿ೯ಯ ರಮೇಶ್ ಭಾರದ್ವಾಜ್ ತನಗೆ ಲ್ಯೆ೦ಗಿಕ ಕಿರು- ಕುಳ ಕೊಟ್ಟಿದ್ದಾನೆ ಎ೦ದು ದೂರು ದಾಖಲಿಸಿದ್ದಕ್ಕೆ, ಜೂನ್ ಮೂರರ೦ದು ಅವರನ್ನು ಬ೦ಧಿಸಲಾಗಿತ್ತು. ನಾಲ್ಕನೇ ತಾರೀಖಿಗೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಇದಾದ ನ೦ತರದ ದಿನದಿ೦ದ ಸೋನಿ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಅವರ ಮೇಲೆ ನಿರ೦ತರ ಕಿರುಕುಳ, ಒತ್ತಡ ಹೇರುತ್ತಲೇ ಇರುತ್ತಿದ್ದರು. ಕೊನೆಗೆ ಇವರ ಕಾಟ ತಡೆಯಲಾಗದೇ, ಮಾಧ್ಯಮಗಳಿಗೆ ಹೇಳಬೇಕಾದ್ದನ್ನೆಲ್ಲ ಹೇಳಿ ಆತ್ಮಹತ್ಯೆ ಮಾಡಿಕೊ೦ಡಳು.

ಅವರ ಪಕ್ಷದ ಆ ವ್ಯಕ್ತಿ ತಪ್ಪು ಮಾಡಿದ್ದಾನೋ ಬಿಟ್ಟಿದ್ದಾನೋ ಬೇರೆ ಮಾತು. ಆದರೆ ಆಕೆಗೆ ಒ೦ದು ಸಮಾಧಾನದ ಮಾತೂ ಹೇಳದ ಕೆಟ್ಟ ಸ್ಥಿತಿಯಲ್ಲಿದ್ದಾರಾ ಅಣ್ಣಾ ಹಜಾರೆಯ ಶಿಷ್ಯ? ಕೇಜ್ರಿವಾಲ್, ನಿಮಗೂ ಒಬ್ಬ ಮಗಳಿದ್ದಾಳೆ. ನಾಳೆ ಅವಳೇ ಬ೦ದು, “ಅಪ್ಪಾ ನನಗೆ ನಿನ್ನ ಪಕ್ಷದವರೇ ಲ್ಯೆ೦ಗಿಕ ಕಿರುಕುಳ ಕೊಡುತ್ತಿದ್ದಾರೆ’ ಎ೦ದರೆ, ಮೊದಲು ಹೋಗಿ ಅವನ್ಯಾರು ಎ೦ದು ಹುಡುಕಿ, ಹೊರಗೆ ಕರೆದು ಎರಡೇಟು ಬಿಗಿದು, ಪಕ್ಷದಿ೦ದ ಹೊರ ಹಾಕುತ್ತೀರೋ ಅಥವಾ “ಪವಾ೯ಗಿಲ್ಲ ಅಡ್ಜಸ್ಟ್ ಮಾಡ್ಕೊಳಮ್ಮ!’ ಎನ್ನುತ್ತೀರೋ?

ಲ್ಯೆ೦ಗಿಕ ಕಿರುಕುಳ ಕೊಟ್ಟವನನ್ನೂ ನೀವು ವಿಚಾರಿಸಿಲ್ಲ, ಸ೦ತ್ರಸ್ತೆಯನ್ನೂ ಗಣನೆಗೆ ತೆಗೆದುಕೊ೦ಡಿಲ್ಲ ಎ೦ದ ಮೇಲೆ ನಿಮಗೆಲ್ಲ ಪಕ್ಷವೇಕೆ? ಕೇಜ್ರಿವಾಲ್ ಯೋಗ್ಯತೆಗೆ ತಮ್ಮ ಪಕ್ಷದವರನ್ನೇ ನಿಭಾಯಿಸಲು ಬರುವುದಿಲ್ಲ. ಇನ್ನು ರಾಜ್ಯವನ್ನೇನು ನಿಭಾಯಿಸುತ್ತಾರೆ. ಅದಕ್ಕೇ ದೆಹಲಿ ಇಷ್ಟು ಹದಗೆಟ್ಟು ಹೋಗಿರುವುದು.

ಮೊನ್ನೆ “ಟಾಕ್ ಟು ಕೇಜ್ರಿವಾಲ್’ನಲ್ಲಿ ಕೇಜ್ರಿವಾಲ್ ಉದ್ದುದ್ದ ಭಾಷಣ ಬಿಗಿದರು. ಅವರು ಒ೦ದು ಬಾರಿಯಾದರೂ ಸೋನಿಯ ಬಗ್ಗೆ ಮಾತಾಡಿದ್ದರೆ ಜನರು ಮೆಚ್ಚುತ್ತಿದ್ದರು. ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ಅಪಾರ ಕಾಳಜಿಯುಳ್ಳವರ ಹಾಗೇ ಮಾತನಾಡಿದ ಅವರಿಗೆ ಈ ಪರಿಜ್ಞಾನವಿರಲಿಲ್ಲವೇ?

ದೆಹಲಿಯ ಒ೦ದು ಮನೆಯ ಟಾಯ್ಲೆಟ್ಟಿನಲ್ಲಿ ನೀರು ಬರದಿದ್ದರೂ, ಕರೆ೦ಟ್ ಇಲ್ಲದಿದ್ದರೂ, ಮಾತೆತ್ತಿದರೆ, ಎಲ್ಲದಕ್ಕೂ ಬಿಜೆಪಿ ಪಕ್ಷವೇ ಕಾರಣ, ಮೋದಿಯೇ ಕಾರಣ ಎ೦ದು ಗ೦ಟಲು ಹರಿಯುವ ಹಾಗೆ ಕೂಗಾಡುವ ಕೇಜ್ರಿವಾಲ್, ಈ ಹುಡುಗಿಯ ಆತ್ಮಹತ್ಯೆಯನ್ನು ಯಾರ ಮೇಲೆ ಹಾಕುವ ಆಲೋಚನೆಯಲ್ಲಿದ್ದಾರೆ. ಇದಕ್ಕೂ ಮೋದಿಯೇ ಕಾರಣವೇ? ಸ೦ಘ, ಬಿಜೆಪಿಯೇ ಕಾರಣವೇ? ಕೇಜ್ರಿವಾಲ್ ಎಷ್ಟು ಪಲಾಯನವಾದಿ ಎ೦ಬುದಕ್ಕೆ ಇದು ಸಾಕ್ಷಿ.

ಕೇಜ್ರಿವಾಲ್‍ಗೆ ಜನರ ಮೇಲಿನ ಕಾಳಜಿ ತಮಗೆಷ್ಟು ವೋಟ್ ಬರುತ್ತದೆ ಎ೦ಬುದರ ಮೇಲೆ ಅವಲ೦ಬಿತವೋ ಅಥವಾ ನಿಜವಾದ ಕಾಳಜಿಯೋ ಅವರೇ ಹೇಳಬೇಕು. ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊ೦ಡಾಗ, ರೋಹಿತ್ ಏನಾಗಿರಲಿಲ್ಲವೋ ಅದನ್ನೆಲ್ಲ ಹೇಳಿ, ಆತ ದಲಿತ ಕೋಟಾದಿ೦ದ ಕಾಲೇಜ್ ಸೇರಿದರೂ, ಆತ ತಾನು ರ್ಯಾ೦ಕ್ ಬ೦ದು ಸೀಟು ಗಿಟ್ಟಿಸಿಕೊ೦ಡಿದ್ದ ಎ೦ದು ಪು೦ಗಿದ್ದರು. ಅಥಾ೯ತ್ ಸಾವಿನ ಮನೆಯಲ್ಲೇ ಸುಳ್ಳು ಹೇಳಿ, ಜೀರೋ ಆಗಿದ್ದವನನ್ನು ಹೀರೋ ಮಾಡಿದರು. ಆದರೆ, ತಮ್ಮ ಪಕ್ಷದಲ್ಲೇ, ತಮ್ಮ ಕಣ್ಣ ಮು೦ದೆಯೇ ಓಡಾಡಿಕೊ೦ಡಿದ್ದ ಹುಡುಗಿಯೊಬ್ಬಳ ಮೇಲೆ ಲ್ಯೆ೦ಗಿಕ ಕಿರುಕುಳವಾಗಿದೆ. ಅದನ್ನು ಮಾಧ್ಯಮಗಳ ಮು೦ದೆ ಬಾಯಿ ಬಿಟ್ಟು ಹೇಳಿದ ಮೇಲೂ ಕ್ಯಾರೇ ಎನ್ನದ ನೀವೂ ಸಾವಿನ ಮನೆಗೇ ವೋಟ್ ಹಾಕುವ ಶಾಯಿ ಇಟ್ಟುಕೊ೦ಡೇ ಹೋಗುವ ಮಟ್ಟಕ್ಕೆæ ಇಳಿದಿದ್ದೀರ ಎ೦ಬುದು ಸ್ಪಷ್ಟ.

ಇನ್ನು ಇವರನ್ನು ರಕ್ಷಿಸಲು, ಬುದ್ಧಿಜೀವಿಗಳ ವಲಯದಲ್ಲೂ ಬಹಳವೇ ಪ್ರಯತ್ನಗಳು ನಡೆಯುತ್ತಿವೆ. ಇನ್ನು ಕೆಲವು ಕಡೆ, ಹಾರಾಡುವವರೆಲ್ಲ ತಣ್ಣಗಾಗಿದ್ದಾರೆ. ಅಷ್ಟೇ ಏಕೆ? ಕಾಶ್ಮೀರದಲ್ಲಿ ನಮ್ಮ ಯೋಧರು ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ, ಲ್ಯೆ೦ಗಿಕ ಕಿರುಕುಳ ಕೊಟ್ಟಿದ್ದಾರೆ೦ದು ಇಲ್ಲಿ ಬೆ೦ಗಳೂರಿನ ಟೌನ್ ಹಾಲ್ ಮು೦ದೆ ಕೂಗಾಡುವ ಯಾರೂ ಈ ಬಗ್ಗೆ ಒ೦ದೇ ಒ೦ದು ಮಾತಾಡಿಲ್ಲ. ಸೋನಿ ಆತ್ಮಹತ್ಯೆ ಮಾಡಿಕೊ೦ಡಿದ್ದು ಅವಳ ಕಮ೯ ಎ೦ಬ೦ತೆ ಆರಾಮಾಗಿದ್ದಾರೆ. ಟಿವಿ ಮು೦ದೆ ಒಬ್ಬ ಹೆಣ್ಣುಮಗಳ ಸತ್ಯ ಹೇಳಿದಾಗಲೇ ಮಹಿಳಾ ಸ೦ಘಟನೆಗಳು ಅವರ ಬೆ೦ಬಲಕ್ಕೆ ಬರಬೇಕಿತ್ತು. ಆದರೆ ಅವಳು ಸತ್ತಾಗಲೂ ಸುದ್ದಿಗೇ ಬರದಿರುವುದನ್ನು ಸೂಕ್ಷವಾಗಿ ಗಮನಿಸಿದರೆ, ಒ೦ದೊ೦ದೇ ಅಜೆ೦ಡಾಗಳು ಬಯಲಿಗೆ ಬರುತ್ತವೆ.

ಅಸಲಿಗೆ ಇದು ಕೇವಲ ಕೇಜ್ರಿವಾಲರ ಪಕ್ಷದ ಒಬ್ಬಳ ಕ೦ಪೆ್ಲೀ೦ಟ್ ಅಲ್ಲ. ಅನೇಕರ ಬಳಿ ಇ೦ಥ ಕ೦ಪೆ್ಲೀ೦ಟ್ ಕೇಳಿದ್ದೇವೆ. ನಾನು ಸ್ವತಃ ಅ೦ಥವರನ್ನು ಸ೦ದಶಿ೯ಸಿದ್ದೇನೆ ಸಹ. ಕೆಲವರು ಮಾತಾಡಿ ತಮ್ಮ ಅನುಭವಗಳನ್ನು ಹ೦ಚಿಕೊ೦ಡಿದ್ದರೆ, ಇನ್ನು ಕೆಲವರು ಕೇಜ್ರಿವಾಲರ ಲೀಲೆಗಳನ್ನು ಬರೆದು ತಮ್ಮ ಬ್ಲಾಗ್‍ನಲ್ಲಿ ಹಾಕಿಕೊ೦ಡಿದ್ದಾರೆ.

ಮೂರು ವಷ೯ಗಳ ಹಿ೦ದೆ, ಅ೦ದರೆ 2013ರಲ್ಲಿ ಕೇಜ್ರಿವಾಲ್ ತಮ್ಮ ಎಲ್ಲ ಮಾತಿಗೂ ಉಲ್ಟಾ ಹೊಡೆಯುವುದಕ್ಕೆ ನಿ೦ತಾಗ ಎಷೆ್ಟೂೀ ಜನ ಕಾಯ೯ಕತ೯ರು ಇವರ ಹಣೆಬರಹ ಗೊತ್ತಾಗಿ ಪಕ್ಷ ಬಿಟ್ಟು ಹೋಗುತ್ತಿದ್ದರು. ಆಗ ನಾನು ಆಮ್ ಆದ್ಮಿ ಪಕ್ಷದ ಮೇಘಾ ಶಮಾ೯ರನ್ನು ಸ೦ದಶಿ೯ಸಿದ್ದೆ. ಅವರು ಕೇಜ್ರಿವಾಲ್ ಅವರ ನಾಮಾಚ೯ನೆ ಮಾಡಿದ್ದರು. “ಯಾಕೆ ಪಕ್ಷ ಬಿಟ್ಟಿರಿ?’ ಎ೦ದು ಕೇಳಿದಾಗ, “ಕೇಜ್ರಿವಾಲ್ ಇದ್ದಾರಲ್ಲ ಅವರು ಈಗ ಬಹಳ ಬದಲಾಗಿದ್ದಾರೆ. ಇ೦ಡಿಯಾ ಅಗೇನ್‍ಸ್ಟ್ ಕರಪ್ಷನ್ ಕ್ಯಾ೦ಪೇನ್ ವೇಳೆ ನಾನು ಅವರನ್ನು ಬೆ೦ಬಲಿಸಲು ನಿ೦ತೆ, ಈಗ ಅವರ ಸಿದಾಟ್ಧ೦ತಗಳೇ ಬದಲಾಗಿದೆ. ಅವರು ಅ೦ದು ಅಣ್ಣಾ ಹಜಾರೆಯವರ ಜತೆಯಿದ್ದಾಗ ಆಡಿದ ಯಾವ ಮಾತುಗಳಿಗೂ ಈಗ ಬದ್ಧವಾಗಿಲ್ಲ.’ ಎ೦ದಿದ್ದರು. ಕೊನೆಗೆ ಅವರ ಪಕ್ಷದ ಇನ್ನಿತರರ ಬಗ್ಗೆ ಏನೆನ್ನುತ್ತೀರಿ ಎ೦ದಾಗ “ನನಗೆ ಕೆಲ ಮುಖ೦ಡರಿ೦ದ ಕಿರುಕುಳ ಆಗಿದೆ. ನಾನು ಯಾರಿಗೂ ಸಹಕರಿಸಲಿಲ್ಲ. ಹಾಗಾಗಿ ನನ್ನನ್ನು ತಿಕ್ಕಲು ಎ೦ದರು. ಕೊನೆಗೆ ನಾನು ನೇರವಾಗಿ ಕೇಜ್ರಿವಾಲ್‍ಗೇ ಹೇಳಬೇಕೆ೦ದರೂ ನನ್ನನ್ನು ಒಳ ಬಿಡುತ್ತಿರಲಿಲ್ಲ. ಒ೦ದು ದಿನ ಹೋಗಿ ಹೇಳಿದ್ದಕ್ಕೆ ಅವರು ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಆಗಲೇ ನನಗೆ ಅಥ೯ವಾಗಿದ್ದು, ತಮ್ಮ ಪಕ್ಷದವರು ಎ೦ಥ ಹೇಸಿಗೆ ಕೆಲಸ ಮಾಡಿದರೂ ಅದನ್ನು ಸಮಥಿ೯ಸಿಕೊಳ್ಳುತ್ತಾರೆ ಎ೦ದು. ಒ೦ದು ನೆನಪಿರಲಿ, ನಾನು ಈಗ ಏನಾದರೂ ಹೇಳಿದರೆ, ನಾನು ಪಕ್ಷ ಬಿಟ್ಟಿದ್ದೇನೆ ಹಾಗಾಗಿ ಪಕ್ಷದ ಮೇಲೆ ಟಾಗೆ೯ಟ್ ಮಾಡುತ್ತಿದ್ದಾಳೆ ಎ೦ದು ಆರೋಪ ಮಾಡುವುದಕ್ಕೂ ಹೇಸುವುದಿಲ್ಲ. ಹಾಗಾಗಿ ಈ ಬಗ್ಗೆ ಎಲ್ಲೂ ಪ್ರಸ್ತಾಪಿಸದಿರಿ. ಒ೦ದಲ್ಲ ಎರಡು ವಷ೯ಗಳ ನ೦ತರ ತಾನಾಗೇ ಇವರ ಚಟಗಳೆಲ್ಲವೂ ಹೊರ ಬರುತ್ತವೆ. ಆಗ ನಾನು ಹೀಗೆ ಹೇಳಿದ್ದೆ ಎ೦ದು ಬರೆದುಕೊಳ್ಳಿ’ ಎ೦ದಿದ್ದರು. ನೆನಪಿರಲಿ, ಈ ಮಾತನ್ನು ಮೇಘಾ ಶಮಾ೯ 2013ರಲ್ಲೇ ಹೇಳಿದ್ದರು ಎ೦ದರೆ, 2016ರ ಈ ಹೊತ್ತಿಗೆ ಆಕೆ ನನಗೆ ಹೆಸರು ಹೇಳಿರುವವರೆಲ್ಲಾ ಸಿ೦ಹಗಳೇ ಆಗಿರುತ್ತಾರೆ.

ಕೇಜ್ರಿವಾಲ್ ಪಕ್ಷದವರೇ ಆದ, ಅಮೆರಿಕದಲ್ಲಿದ್ದು ಕೇಜ್ರಿವಾಲರ ಭಾಷಣ, ಪ್ರಚಾರದ ವಿಡಿಯೊಗಳನ್ನು ಎಡಿಟ್ ಮಾಡಿ ಯೂಟ್ಯೂ ಬ್‍ಗೆ ಹಾಕುತ್ತಿದ್ದ, ಮತ್ತು ಅವರು ಮಾತಾಡಲು ರ್ಸಿಪ್ಟ್ ಬರೆಯುತ್ತಿದ್ದ ಪ್ರಿಯಾ ಜೇಮ್ಸ್ ಅವರು “ಕೇಜ್ರಿವಾಲ್ ಯಾಕೆ ಆಮ್ ಆದ್ಮಿ ಪಾಟಿ೯ಗೆ ಅನಹ೯ರು’ ಎ೦ಬ ಬಗ್ಗೆ ದೊಡ್ಡ ಲೇಖನವನ್ನೇ ಎನ್‍ಡಿಟಿವಿ ಜಾಲತಾಣದಲ್ಲಿ ಬರೆದಿದ್ದಾರೆ. ಕೇಜ್ರಿವಾಲರು ತಮ್ಮ ರಾಜಕೀಯದಾಟಗಳಲ್ಲಿ ಏನೇನೆಲ್ಲ ಮಾಡಿದ್ದಾರೆ, ಎಷ್ಟು ಜನರ ನ೦ಬಿಕೆಗಳನ್ನು ಮುರಿದಿದ್ದಾರೆ, ರೈತರ ಸರಣಿ ಆತ್ಮಹತ್ಯೆಗಳಾಗುತ್ತಿರುವಾಗ ಅದನ್ನು ಸೈಲೆ೦ಟ್ ಮಾಡಲು ಏನೇನೆಲ್ಲ ಮಾಡಿದ್ದಾರೆ, ಎ೦ಬ ಅವರ ಘೋರ ಇತಿಹಾಸ ವಣಿ೯ಸಿದ್ದಾರಲ್ಲದೇ, ಇದರಲ್ಲಿ ಪಕ್ಷದ ಕೆಲವರ ತೆವಲುಗಳೂ ಬೆಳಕಿಗೆ ಬ೦ದಿದೆ.

ಇದೇ ಪಕ್ಷದ ಬಹಳ ನಿಯತ್ತಿನ ಕಾಯ೯ಕತ೯ಳಾಗಿದ್ದ ಚಿತ್ರಾ ಅವರು ಪಕ್ಷದಿ೦ದ ನೊ೦ದು ಹೊರ ಬ೦ದು ಫೆೀಸುºಕ್ ನಲ್ಲಿ ಬರೆದುಕೊ೦ಡಿದ್ದು ಹೀಗೆ – “ಯಾವತ್ತಾದರೂ ಆಮ್ ಆದ್ಮಿ ಪಕ್ಷ ನೆಲಕಚ್ಚಿದರೆ, ಅದಕ್ಕೆ ಕಾರಣ ಬಿಜೆಪಿಯೋ, ಕಾ೦ಗ್ರೆ ಸ್ಸೋ ಅಥವಾ ನಿಮ್ಮ ವಿರುದ್ಧ ಷಡ್ಯ೦ತ್ರ ಮಾಡುತ್ತಿರುವವರಲ್ಲ. ಬದಲಿಗೆ ನೀವು ಮತ್ತು ನಿಮ್ಮ ಪಕ್ಷದಲ್ಲಿರುವ ನಿಮ್ಮ ಆಪ್ತರು’ ಎ೦ದು ದಪ್ಪಕ್ಷರದಲ್ಲಿ ಬರೆದಿದ್ದಳು. ಆಕೆಗೆ ಯಾವ ನೋವಾಗಿತ್ತೋ, ಹೇಗೇಗೆಲ್ಲ ಯಾರ್ಯಾರು ಹಿ೦ಸಿಸಿದ್ದರೋ ಯಾರಿಗೆ ಗೊತ್ತು?

ಇಷ್ಟೆಲ್ಲ ನೋಡಿದೆ ಮೇಲೆ ಒ೦ದು ಕತೆ ನೆನಪಾಗುತ್ತದೆ. ಒ೦ದೂರಲ್ಲಿ ಭವಿಷ್ಯ ಹೇಳುತ್ತಿದ್ದ ಒಬ್ಬ ಅಜ್ಜಿ ಇದ್ದಳು. ಮಳೆ ಬರದಿರಬಹುದು, ಸೀಮೆ ಎಣ್ಣೆಗೆ ಅ೦ಟಿದ ಬೆ೦ಕಿ ಹೊತ್ತುರಿಯಲು ತಡವಾಗಬಹುದು, ಉರಿಯದೇ ಇರಬಹುದು. ಆದರೆ, ಅಜ್ಜಿ ಹೇಳಿದ ಭವಿಷ್ಯ ಒ೦ದೇ ಒ೦ದೂ ಸುಳ್ಳಾಗುತ್ತಿರಲಿಲ್ಲ. ಆಜ್ಜಿಯ ಭವಿಷ್ಯವನ್ನು ಸುಳ್ಳು ಮಾಡಬೇಕೆ೦ದು ಒಬ್ಬ ಹೊ೦ಚು ಹಾಕುತ್ತಿದ್ದ. ಒ೦ದು ದಿನ ಗುಬ್ಬಿ ಮರಿಯನ್ನು ತನ್ನ ಕೈ ಮುಷ್ಠಿಯೊಳಗಿಟ್ಟುಕೊ೦ಡು, ಅಜ್ಜಿಯ ಬಳಿ ಬ೦ದು, “ಅಜ್ಜಿ, ನೀನು ಬಹಳ ಚೆನ್ನಾಗಿ ಭವಿಷ್ಯ ಹೇಳುತ್ತೀಯ೦ತೆ. ನಿನ್ನ ಭವಿಷ್ಯ ಒ೦ದು ದಿನವೂ ಸುಳ್ಳಾಗಲಿಲ್ಲವ೦ತೆ. ಈಗ ಹೇಳು, ನನ್ನ ಮುಷ್ಠಿಯೊಳಗಿರುವ ಗುಬ್ಬಿಮರಿ ಬದುಕಿದೆಯೋ ಸತ್ತಿದೆಯೋ? ಎ೦ದು ಕೇಳಿದನ೦ತೆ. ಅಜ್ಜಿಗೆ ಇದು ಸ೦ದಿಗಟ್ಧದ ಸ್ಥಿತಿ.

ಗುಬ್ಬಿಮರಿ ಬದುಕಿದೆ ಎ೦ದರೆ, ಮುಷ್ಠಿಯನ್ನು ಒತ್ತಿ ಅದನ್ನು ಕೊ೦ದು ಬಿಡುತ್ತಾನೆ. ಅಜ್ಜಿಯ ಭವಿಷ್ಯ ಸುಳ್ಳೆ೦ದು ಹೇಳುತ್ತಾನೆ. ಒಮ್ಮೆ ಗುಬ್ಬಿಮರಿ ಸತ್ತಿದೆ ಎ೦ದರೆ, ಅದನ್ನು ಹಾರಿ ಬಿಟ್ಟು, ಮತ್ತೆ ಅಜ್ಜಿಯ ಭವಿಷ್ಯ ಸುಳ್ಳಾಯಿತೆ೦ದು ಡ೦ಗೂರ ಸಾರುತ್ತಾನೆ.

ಇದನ್ನೆಲ್ಲ ಆಲೋಚಿಸಿದ ಅಜ್ಜಿ ಹೇಳಿದ್ದು ಒ೦ದೇ ಮಾತು – “ಮಗನೇ, ಆ ಪಕ್ಷಿಯ ಅಳಿವು, ಉಳಿವು ನಿನ್ನ ಕೈಯಲ್ಲಿದೆ’ ಎ೦ದಳು. ಅಜ್ಜಿಯ ಭವಿಷ್ಯವೂ ಸುಳ್ಳಾಗಲಿಲ್ಲ. ಆತ ಗುಬ್ಬಿಮರಿಯನ್ನು ಹಾರಬಿಟ್ಟು ಅಜ್ಜಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ.

ಹೀಗೆಯೇ, ಅರವಿ೦ದ ಕೇಜ್ರಿವಾಲ್ ಮತ್ತು ಅವರ ಪಕ್ಷದವರು ಏನೇ ಮತ್ತು ಎಷ್ಟೇ ಸಾವಿರ ವಾದ ಮಾಡಲಿ. ನನ್ನದು ಒ೦ದೇ ಮಾತು. ಸೋನಿಯೆ೦ಬ 28 ವಷ೯ದ ಆ ಗುಬ್ಬಿಮರಿಯನ್ನು ಕೇಜ್ರಿವಾಲ್ ಉಳಿಸಿಕೊಳ್ಳಬಹುದಿತ್ತು. ಪಕ್ಷದಲ್ಲಿಯೂ, ಜೀವ೦ತವಾಗಿಯೂ.

 

ಸಾವಿನ ಮನೆಯಲ್ಲಿ ಮಾನವೀಯತೆಯ ಲೆಕ್ಕಾಚಾರ!

$
0
0

16528C7

ಸಾವು! ಈ ಎರಡಕ್ಷರ ಕೇಳಿದರೆ ಸಾಕು, ಎ೦ಥ ಧೈಯ೯ಶಾಲಿಯೂ ಹೊರಗೆ ಹೇಳಿಕೊಳ್ಳದಿದ್ದರು, ಒಳಗೊಳಗೇ ಒಮ್ಮೆ ನಡುಗಿ ಹೋಗಿರುತ್ತಾನೆ. “ಸಾವು ನಮ್ಮ ಮು೦ದೆ ಬರುವುದು ಖಾತ್ರಿಯಾದಾಗ ಹಾರಾಟ ಚೀರಾಟಗಳೇಕೆ? ಯಾಕೆ ಇನ್ನೊಬ್ಬರ ಸಾವನ್ನು ನೋಡಿ ಗಹಗಹಿಸಿ ನಗುವುದು? ಮನುಷ್ಯರಿಗೆ ಈ ಸತ್ಯ ಗೊತ್ತಿಲ್ಲವೇ? ಅಥವಾ ಗೊತ್ತಿದ್ದೂ ಹೀಗೇ ಮೃಗಗಳ೦ತೆ ವತಿ೯ಸುತ್ತಾರಾ? ಒ೦ದು ಸಿ೦ಹ ಕುರಿಯನ್ನು ಹಿಡಿದು ತಿ೦ದು ಹೊಟ್ಟೆ ತು೦ಬಿಸಿಕೊ೦ಡಾಗ ಅದಕ್ಕೆ ಸ೦ತಸವಾಗುತ್ತದೆ. ನೆಮ್ಮದಿ ಸಿಗುತ್ತದೆ. ಆದರೆ ಕುರಿಗೆ ಅದು ಸಾವು. ಇ೦ಥ ಸಾವು ಆ ಸಿ೦ಹಕ್ಕೂ ಬರಬಹುದು ಎ೦ದು ತಿಳಿದಿಲ್ಲವೇ? ಆ ಸಿ೦ಹದ ಇ೦ಥದ್ದೇ ಖುಷಿಯನ್ನು ಮನುಷ್ಯರು ಮತ್ತೊಬ್ಬನ ಸಾವಲ್ಲಿ ಕಾಣುತ್ತಿದ್ದಾರೆ. ಇವರ್ಯಾರಿಗೆ ಸಾವಿನ ಹಿ೦ದಿರುವ ಭಯ, ದುಃಖ ತಿಳಿದಿಲ್ಲವೇ?’ ಎ೦ದು ಒಬ್ಬ ಯಮನನ್ನು ಕೇಳಿದಾಗ ಯಮ ಉತ್ತರಿಸುತ್ತಾನೆ – “ನಿನ್ನ ಮಾತು ನಿಜ. ನೀನು ಉಲ್ಲೇಖಿಸಿರುವ ಮನುಷ್ಯರ ವತ೯ನೆಗಳೂ ನಿಜ. ಆದರೆ ಸಾವು ಎಲ್ಲರಿಗೂ ತನ್ನ ಘೋರ ಮುಖವನ್ನು ತೋರಿಸುವುದಿಲ್ಲ. ಒಮ್ಮೆ ತೋರಿಸಿದರೆ ಮನುಷ್ಯರು ತಪ್ಪುಗಳನ್ನೇ ಮಾಡುವುದಿಲ್ಲ. ಸನ್ಯಾಸಿಯಾಗಿಬಿಡುತ್ತಾನೆ. ಆದರೂ ಇನ್ನೊಬ್ಬ ಸತ್ತಾಗ ಒಮ್ಮೊಮ್ಮೆ ಸಾವು ತಾನು ನಿನ್ನಲ್ಲಿಗೂ ಬರುತ್ತೇನೆ ಎ೦ದು ತೋರಿಸುತ್ತದೆ. ಇಷ್ಟಾದರೂ ಬೇರೆಯವರ ಸಾವನ್ನು ಕಡೆಗಣಿಸುವವನ ಹತ್ತಿರದ ಸ೦ಬ೦ಧದಲ್ಲೇ ಒ೦ದು ಸಾವಾದರೆ ಅದರ ದುಃಖ ಅಥ೯ವಾಗುತ್ತದೆ.’ ಎ೦ದ ಯಮ.
ಯಮನ ಈ ಮಾತು ಎಷ್ಟು ಸತ್ಯವಲ್ಲವೇ?
ಮಲ್ಲಿಕಾಜು೯ನ ಬ೦ಡೆಯ೦ಥ ದಕ್ಷ ಪೊಲೀಸ್ ಅಧಿಕಾರಿಯನ್ನು ಕಳೆದುಕೊ೦ಡು ಎರಡೂವರೆ ವಷ೯ಗಳಾಗುತ್ತಾ ಬ೦ತು. ಸುಮ್ಮನೆ ಸತ್ತಿದ್ದಲ್ಲ. ಅದು ವೀರ ಮರಣವಾಗಿತ್ತು. ಬ೦ಡೆ ಎ೦ಥ ಖಡಕ್ ಅಧಿಕಾರಿ ಎ೦ದು ಇಡೀ ಕಲಬುರಗಿಗೇ ಗೊತ್ತಿತ್ತು. ಅ೦ದು ಮುನ್ನಾ ಎ೦ಬ ಅ೦ಡರ್ವಲ್ಡ್೯ ಶಾಪ್೯ ಶೂಟರ್ ಬರುತ್ತಾನೆ ಎ೦ದು ಪಕ್ಕಾ ಆಗಿತ್ತು. ಅ೦ಥವನ ಮೇಲೆ ಗು೦ಡು ಹಾರಿಸಿದ್ದೇ ಬ೦ಡೆಯ ತಪ್ಪಾಯಿತು. ಮುನ್ನಾ ದೂರದಲ್ಲಿದ್ದರೂ, ಅವನ ಕೈಲಿ ಗನ್ ಇಲ್ಲದಿದ್ದರೂ, ಪಾಯಿ೦ಟ್ ಬ್ಲಾ೦ಕ್ ರೇ೦ಜ್ನಲ್ಲಿ ಬ೦ಡೆಗೆ “ಬೇಲಿಯೇ ಎದ್ದು ಹೊಲ ಮೇಯ್ದ೦ತೆ’ ಅವರ ಜತೆಗಿದ್ದವರೇ ಶೂಟ್ ಮಾಡಿದರು. ಬ೦ಡೆ ತಲೆಗೆ ಗು೦ಡು ಹೊಕ್ಕಿ ದೇಹ ನೆಲಕ್ಕೆ ಬಿದ್ದಿತ್ತು. ಆದರೆ ಉಸಿರಾಟ ನಿ೦ತಿರಲಿಲ್ಲ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ ಬ೦ಡೆ ಹೆ೦ಡತಿ ಆಗ ಗೃಹ ಸಚಿವರಾಗಿದ್ದ ಜಾಜ್೯ ಕಾಲಿಗೆ ಬಿದ್ದಳು. “ಸಾರ್ ನನ್ನ ಗ೦ಡನನ್ನು ಬೇರೆ ದೇಶದ ಆಸ್ಪತ್ರೆಗೆ ಕರೆದುಕೊ೦ಡು ಹೋದರೆ ಬದುಕ ಬಹುದ೦ತೆ… ದಯವಿಟ್ಟು ಸಹಾಯ ಮಾಡಿ’. ಕೊನೆಗೆ ಸಿದ್ದರಾಮಯ್ಯನವರ ಕಾಲಿಗೂ ಬಿದ್ದಳು. ರಾಜಕಾರಣಿಗಳೆಲ್ಲರೂ ನಿಧಾ೯ರ ತೆಗೆದುಕೊಳ್ಳುವುದರಲ್ಲೇ ಇದ್ದರು. ಸಾವಿನ ಸಮಯದಲ್ಲೂ ಯಾವ ನಿಧಾ೯ರ ಸ್ವಾಮಿ? ಕುಟ್ಟುತ್ತಿದ್ದರೆ ಬ೦ಡೆಯೂ ಪುಡಿಯಾಗುತ್ತದೆ, ಇನ್ನು ಈ ಬ೦ಡೆ ಎಷ್ಟು ಹೊತ್ತು ನೋವು ತಿನ್ನುತ್ತಿರುತ್ತಾರೆ ಹೇಳಿ. ಕಣ್ಣು ಮುಚ್ಚಿದರು. ಅವರ ಹೆ೦ಡತಿ ಮಕ್ಕಳ ಕನಸುಗಳು ಸಹ.

ಹೆ೦ಡತಿಗೂ ಗ೦ಡನನ್ನು ಬಿಟ್ಟು ಬಹಳ ದಿನ ಇರುವುದಕ್ಕಾಗಲಿಲ್ಲ. ಮೊನ್ನೆ ಜುಲ್ಯೆ 9ರ೦ದು ಮಲ್ಲಮ್ಮ ಬ೦ಡೆ ಬ್ರೈನ್ ಟ್ಯೂಮರ್ನಿ೦ದ ತೀರಿಕೊ೦ಡರು. ಅಲ್ಲಿಗೆ ಒ೦ದು ಸ೦ಸಾರವೇ ನಾಶ. ಇಬ್ಬರು ಮಕ್ಕಳು ಅನಾಥ. ಸರಕಾರ ಅ೦ದು ತ್ವರಿತವಾಗಿ ಏನಾದರೂ ಮಾಡಿದ್ದರೆ ಬ೦ಡೆಯನ್ನು ಉಳಿಸಿಕೊಳ್ಳಬಹುದಿತ್ತೇನೊ.

ಇದಾದ ನ೦ತರ, ಡಿಕೆ ರವಿ ಸಾವು. ದಕ್ಷ ಅಧಿಕಾರಿ, ಸಮಯ ಸಿಕ್ಕಾಗಲೆಲ್ಲ ಹೋಗಿ ಮಕ್ಕಳಲ್ಲಿ ಉತ್ಸಾಹ ತು೦ಬುತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ೦ದರೆ ನ೦ಬಲಸಾಧ್ಯ. ಹೀಗಿರುವಾಗ ಅವನಿಗೆ ಮತ್ತೊಬ್ಬ ಐಎಎಸ್ ಆಫೀಸರ್ ಜತೆ ಸ೦ಬ೦ಧವಿತ್ತು ಎ೦ದು ಮಾತಾಡಿದ್ದು ಇದೇ ಸರಕಾರದ ರಾಜಕಾರಣಿಗಳೇ ಅಲ್ಲವೇ? ಆತ ಭ್ರಷ್ಟನಾಗಿದ್ದ ಎ೦ದು ಹೇಳುವವನೊಬ್ಬನಾದರೆ, ಮತ್ತೊಬ್ಬನದ್ದು ಇನ್ನೊ೦ದು ವಾದ. ಯಾರೊಬ್ಬರಿಗೂ “ಹೌದಪ್ಪಾ ಒಬ್ಬ ಒಳ್ಳೆಯ ಅಧಿಕಾರಿ ಆತ್ಮಹತ್ಯೆ ಮಾಡಿಕೊ೦ಡಿದ್ದಾನೆ. ಕಾರಣ ಹುಡುಕಬೇಕು’ ಎ೦ದೆನಿಸಲಿಲ್ಲ. ಸತ್ತವರ ಬಗ್ಗೆ ಕೆಟ್ಟದಾಗಿ ಹೇಳಬಾರದು ಎ೦ಬುದು ಆಗ ನೆನಪಾಗಲಿಲ್ಲ.

ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದು ಇಲ್ಲಿ ಎಲ್ಲ “ಕೆಲಸ ಮುಗಿಸಿ’ದ ಮೇಲೆ. ಡಿಕೆ ರವಿ ಸ೦ಪಾದಿಸಿದ ಜನರನ್ನು ಬಿಟ್ಟರೆ ಯಾವ ಸರಕಾರದ ಸಲಹೆಗಾರನೂ ದುಃಖ ತೋರುವುದಿರಲಿ, ಅಧಿಕಾರಿಯ ಬಗ್ಗೆ ಒಳ್ಳೆ ಮಾತನ್ನೂ ಆಡಲಿಲ್ಲ. ಇದಾಗಿ ಸ್ವಲ್ಪ ದಿನಕ್ಕೆ ಕಲ್ಲಪ್ಪ ಹ೦ಡಿಭಾಗ್ ಆತ್ಮಹತ್ಯೆ ಮಾಡಿ- ಕೊ೦ಡರು. ಯಾಕೆ ಆತ್ಮಹತ್ಯೆ ಮಾಡಿಕೊ೦ಡರು ಎ೦ದರೆ ಯಾವ ಅಧಿಕಾರಿಯೂ ಅವರ ಬಗ್ಗೆ ಮಾತಾಡುವುದಿಲ್ಲ. ಮುಖ್ಯಮ೦ತ್ರಿಗಳಿಗೆ ಇವೆಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಪುರಸೊತ್ತಿಲ್ಲ. ಇತ್ತೀಚಿನ ಸಾವು ಡಿವೈಎಸ್ಪಿ ಎ೦.ಕೆ. ಗಣಪತಿಯವರದ್ದು. ನೇರವಾಗಿ “ನನ್ನ ಸಾವಿಗೆ ಜಾಜ್೯ ಅವರೇ ಕಾರಣ’ ಎ೦ದು ವಿಡಿಯೊದಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊ೦ಡರು. ಇವರು ಸತ್ತಾಗ ಸ೦ತಾಪ ಸೂಚಿಸಿದವರಿಗಿ೦ತ, ಅದರಲ್ಲಿ ಜಾಜ್೯ ತಪ್ಪಿಲ್ಲ ಎ೦ದು ಹೇಳಲು ಪ್ರಯತ್ನಿಸಿದವರೇ ಹೆಚ್ಚು. “ಸತ್ತವರನ್ನೆಲ್ಲ ಹೀರೋ ಮಾಡಬೇಡಿ’, “ಗಣಪತಿ ಆರೆಸ್ಸೆಸ್ ಪರ’ ಎ೦ದು ಕೆಲವರು ಗೀಚಿಕೊ೦ಡು, ತಮ್ಮ ನಿಯತ್ತು ಪ್ರದಶಿ೯ಸಿದರು. ಸರಕಾರ ದಿನಕ್ಕೊ೦ದು ಹೇಳಿಕೆ ಕೊಡುತ್ತಾ ಬ೦ತು. ಮೊದಲು ಅವರ ಮಾನಸಿಕ ಸ್ಥಿತಿ ಸರಿ ಇಲ್ಲ ಎ೦ದು ಸತ್ತ ಗಣಪತಿಯನ್ನು ಹುಚ್ಚನ ಮಾಡಲು ಹೊರಟಿತು. ಅದು ವಕೌ೯ಟ್ ಆಗಲಿಲ್ಲ. ಕೊನೆಗೆ ಗಣಪತಿಗೂ ಅವರ ಹೆ೦ಡತಿಗೂ ಸರಿ ಇರಲಿಲ್ಲವ೦ತೆ ಎ೦ದು ಹೇಳಿ ಬಚಾವ್ ಆಗಲು ನೋಡಿದರು. ಕನಾ೯ಟಕ ಜನತೆ ಸರಕಾರದ ಮುಖಕ್ಕೇ ಕ್ಯಾಕರಿಸಿ ಉಗಿಯಿತು. ಆದರೆ ಅದ್ಯಾವ ಸ೦ದಭ೯ದಲ್ಲೂ ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎ೦ಬುದು ಸರಕಾರಕ್ಕೆ, ಅದರಲ್ಲಿರುವವರಿಗೆ ಅನ್ನಿಸಲೇ ಇಲ್ಲ.

ಈಗ ರಾಕೇಶ್ ಸಿದ್ದರಾಮಯ್ಯ ನಿಧನರಾಗಿದ್ದಾರೆ. ಅದು ಸ೦ತಸಪಡುವ ಸ೦ಗತಿಯ೦ತೂ ಅಲ್ಲ. ಕಣ್ಣ ಮು೦ದೆಯೇ ಆಟವಾಡಿ ಬೆಳೆದ ಮಗ ಸಾಯುವುದಕ್ಕಿ೦ತ ದೊಡ್ಡ ದುಃಖ ಇನ್ನೊ೦ದಿಲ್ಲ. ಮಕ್ಕಳನ್ನು ಕಳೆದುಕೊ೦ಡ ಶೋಕ ಯಾವ ಶತ್ರುವಿಗೂ ಬೇಡ. ರಾಕೇಶ್ ಸಾವನ್ನು ಯಾರೂ ಸ೦ಭ್ರಮಿಸುತ್ತಿಲ್ಲ, ಸ೦ಭ್ರಮಿಸಲೂ ಬಾರದು. ಮಾಧ್ಯಮದವರು ಈ ವಿಷಯದಲ್ಲಿ ಎಷ್ಟು ಸೂಕ್ಷ್ಮವಾಗಿದ್ದಾರೆ ಎ೦ದರೆ ರಾಕೇಶ್ ಬಗ್ಗೆ ಕೆಲವು ಸತ್ಯಗಳು ಕಣ್ಣಮು೦ದಿದ್ದರೂ, ಅದನ್ನು ಪ್ರಕಟಿಸದೆ ಮಾನವೀಯತೆ ಮೆರೆದಿದ್ದಾರೆ. ಸತ್ಯವಿದ್ದರೂ ಸತ್ತ ಮೇಲೆ ಅದನ್ನು ಹೇಳಬಾರದು ಎನ್ನುತ್ತಾರೆ. ಆದರೆ, ಇಷ್ಟು ಅಧಿಕಾರಿಗಳು ಸತ್ತರಲ್ಲ? ಅವರ ಸಾವಿನ ಬಗ್ಗೆ ಇಲ್ಲದ ಸಲ್ಲದ ಹೇಳಿಕೆ ನೀಡುವಾಗ ಸರಕಾರಕ್ಕೆ ಈ ಮಾತು ನೆನಪಿರಲಿಲ್ಲವೇ? ಗಣಪತಿಗೂ ಅವರ ಹೆ೦ಡತಿಗೂ ಸರಿ ಇರಲಿಲ್ಲವೆ೦ದು ವಿಧಾನಸಭೆ ಮ್ಯೆಕ್ ಮು೦ದೆ ಘೋಷಣೆ ಮಾಡುವಾಗ ಕಾಣದ ಮಾನವೀಯತೆ ಈಗೇಕೆ ಕಾಣುತ್ತಿದೆ? ಅವರ ಸ೦ಬ೦ಧ ಹಳಸಿತ್ತು ಎ೦ದು ಜಗತ್ತೇ ಮಾತಾಡುವ ಹಾಗೆ ಮಾಡಿದರಲ್ಲ ಕಾ೦ಗ್ರೆ ಸ್ ರಾಜಕಾರಣಿಗಳು, ಆಕೆಯ ಆ ಮನಸ್ಥಿತಿ ಹೇಗಿರಬಹುದು ಎ೦ದು ಒಬ್ಬರಾದರೂ ಯೋಚಿಸಿದ್ದರಾ? ಗಣಪತಿಯ ಹೆ೦ಡತಿಯ ಹೆಸರು ಹಾಳಾದರೆ ತೊ೦ದರೆಯಿಲ್ಲ, ಆದರೆ ನಮ್ಮ ಮಕ್ಕಳ ಹೆಸರು ಹಾಳಾದರೆ ಬೇಸರವಾಗುತ್ತದೆ. ಮಾಧ್ಯಮದವರೇ ಸಾವಿನ ಘಟನೆಯನ್ನು ಗ೦ಭೀರವಾಗಿ ಪರಿಗಣಿಸಿ, ಯಾವ ಅಧಿಕಾರಿಯ ಬಗ್ಗೆಯೂ ಒ೦ದು ಮಾತಾಡಿರಲಿಲ್ಲ. ಹೀಗಿರುವಾಗ ಅಧಿಕೃತವಾಗಿ ಸರಕಾರವೇ ಗಣಪತಿಯ ಹೆಣದ ಮು೦ದೆ ಸುಳ್ಳು ಹೇಳಿತಲ್ಲ? ಆಗ ಎಲ್ಲಿ ಅಡಗಿತ್ತು ಮಾನವೀಯತೆ? ಆಗ ಸಲಹೆ ಕೊಡುವವರು ಇ೦ತಹ ಸಲಹೆ ಕೊಟ್ಟಿರಲಿಲ್ಲವೇ?
ರಾಕೇಶ್ ಸಾವಿನ ಬಗ್ಗೆ ಬರೆದ ಕೆಲವರಿಗೆ, “ರಾಕೇಶ್ ಸತ್ತ ಮೇಲೂ ಅವರ ಬಗ್ಗೆ ಮಾತಾಡುವುದು ವಿಕೃತ’ ಎ೦ದು ಹೇಳುವ ಮೂಲಕ ಮಾನವೀಯತೆಯ ಪಾಠ ಮಾಡುತ್ತಿದ್ದಾರೆ. ಇದೇ ವ್ಯಕ್ತಿಗಳು, ಗ೦ಜಿಕೇ೦ದ್ರವಾಸಿಗಳು ಈಗ ರಾಕೇಶ್ ಬಗ್ಗೆ ಮಾತಾಡುವುದು ಅಭೀವ್ಯಕ್ತಿ ಸ್ವಾತ೦ತ್ರ್ಯದ ದುರುಪಯೋಗ ಎ೦ದೆಲ್ಲ ಹೇಳುತ್ತಿದ್ದಾರೆ. ಪ್ರಕರಣ ದಾಖಲಿಸಲೂ ಹುನ್ನಾರ ನಡೆಸುತ್ತಿದ್ದಾರೆ. ಫೆೀಸ್ ಬ್ಕುಕ್ ನಲ್ಲಿ ಬರೆದವರ ಸಾಲುಗಳನ್ನು ಸ೦ಗ್ರಹಿಸುತ್ತಿದ್ದಾರೆ.

ಇದೇ ನೋಡಿ ಬೇರೆಯವರ ಸಾವಿಗೂ ನಮ್ಮದೇ ಮನೆಯವರ ಸಾವಿಗೂ ಇರುವ ವ್ಯತ್ಯಾಸ. ರೈತನೊಬ್ಬ ಆತ್ಮಹತ್ಯೆ ಮಾಡಿಕೊ೦ಡಾಗ “ಅವನು ಕುಡಿದಿದ್ದ, ಸತ್ತ’ ಎ೦ದಿದ್ದರು. ಆ ರೈತನನ್ನು ಕಳೆದುಕೊ೦ಡ ನೋವು ಕುಟು೦ಬಸ್ಥರಿಗಷ್ಟೇ ಆಗಿತ್ತು. ಬಹುಶಃ ಪರಿಹಾರ ಧನಕ್ಕಾಗೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೇನೋ ಎ೦ದು ಅನಿಸಿದ್ದರೂ ಅಚ್ಚರಿಯಿಲ್ಲ. ಸರಕಾರಕ್ಕೆ ಅಪವಾದದಿ೦ದ ಬಚಾವ್ ಆಗುವುದಷ್ಟೇ ಮುಖ್ಯವಾಗಿತ್ತು. ಬ೦ಡೆ ಸತ್ತಾಗಲೂ ಅವರ ಹೆ೦ಡತಿಗೆ, ಡಿಕೆ ರವಿ ಸತ್ತಾಗ ಅವರ ತಾಯಿಗೆ, ಗಣಪತಿಯನ್ನು ಕಳೆದುಕೊ೦ಡ ಅವರ ಪತ್ನಿಗೆ ಎಷ್ಟು ನೋವಾಗಿರಬೇಡ. ಸರಕಾರ ಅಥವಾ ಸಲಹೆಗಾರರು ಆ ನೋವನ್ನು ಗ್ರಹಿಸುವ ಸೂಕ್ಷ್ಮ ಮನಸ್ಸು ತೋರಿದ್ದರೇ? ಆ ನೋವು ಗ್ರಹಿಸದವರು ಈಗ ಬೇರೆಯವರು ಸೂಕ್ಷ್ಮವಾಗಿ ವತಿ೯ಸಬೇಕು, ನೋವು ಅಥ೯ ಮಾಡಿಕೊಳ್ಳಬೇಕು ಎ೦ದು ಹೇಗೆ ನಿರೀಕ್ಷಿಸುತ್ತಾರೆ? ಇನ್ನಾದರೂ ಬುದ್ಧಿ ಕಲಿಯೋಣ. ಒಬ್ಬ ಸತ್ತ ಮೇಲೂ ಅವನ ಮೇಲೆ ಕಲ್ಲೆಸೆದು ಬಚಾವ್ ಆಗುವ ಬುದ್ಧಿ ಬಿಡೋಣ. ಎಲ್ಲ ಸಾವು ಘೋರ. ಅದೂ ನಮ್ಮ ಮನೆ ಮು೦ದೆ ಬ೦ದು ನಿ೦ತಾಗ ಘನಘೋರ.

– ಚಿರಂಜೀವಿ ಭಟ್

ಆರಕ್ಷಕರು ಕೈಚೆಲ್ಲಿದ್ದಕ್ಕೇ ಅಲ್ಲವೇ ಗೋರಕ್ಷಕರು ಹುಟ್ಟಿದ್ದು?

$
0
0

18F0D2E (1)

ಭಾರತದ ಆ ಊರೆ೦ದರೆ ಎಲ್ಲರೂ ಹೆದರಿಕೊಳ್ಳುತ್ತಿದ್ದರು. “ಯಾಕೆ ಬೇಕಪ್ಪಾ ಆ ಊರಿನ ಸಹವಾಸ’ ಎ೦ದು ನಮ್ಮ ಹಿ೦ದೂಗಳೇ ದೂರವಿದ್ದರು. ಅಲ್ಲಿ ನಿತ್ಯವೂ ಮುಸಲ್ಮಾನರಿ೦ದ ಗೋವುಗಳು ಹತ್ಯೆಯಾಗುತ್ತಿತ್ತು. ಅದನ್ನು ನೋಡಿಯೂ ಹಿ೦ದೂಗಳು ಸುಮ್ಮನಿರಬೇಕಿತ್ತು. ಗೋವಿನ ಪ್ರಾಣ ಬಿಡಿ, ನಮ್ಮ ಪ್ರಾಣವನ್ನಾದರೂ ಉಳಿಸಿಕೊಳ್ಳೋಣ ಎ೦ದು ಎಲ್ಲರೂ ಸುಮ್ಮನಿದ್ದರು. ಒ೦ದು ದಿನ ಆ ಊರಿಗೆ, “ಗೋಹತ್ಯೆ ನಿಲ್ಲಿಸಿ’ ಎ೦ಬ ಖಡಕ್ ಆಜೆಞ ಬ೦ದಿತ್ತು ರಾಜನಿ೦ದ. ಅಲ್ಲಿನ ಗೋ ಹ೦ತಕರು ಒಪ್ಪದೇ ಮು೦ದುವರಿಸಿದಾಗ, ಅವರಿದ್ದಲ್ಲಿಯೇ ಬ೦ದ ರಾಜ, “ಗೋವಿನ ಹತ್ಯೆ ಮಾಡುವ ನಿನ್ನ ಈ ಕೈಗಳನ್ನೇ ಕತ್ತರಿಸಿಬಿಡುತ್ತೇನೆ’ ಎ೦ದು ಆ ಕ್ಷಣವೇ ಕಗಳನ್ನು ಕತ್ತರಿಸಿಬಿಟ್ಟ. ಆ ಮೂಲಕ ಹಿ೦ದೂಗಳಿಗೆ ಆತ್ಮಬಲ ತು೦ಬಿದ್ದ. ಆ ರಾಜನೇ ಪರಾಕ್ರಮಿಯಾದ ಶಿವಾಜಿ ಮಹಾರಾಜ.

     ಈಗ ಎಲ್ಲರಿಗೂ ಒ೦ದು ಅನುಮಾನ ಮೂಡಬಹುದು, ಅಲ್ಲಿದ್ದ ಜನರೇಕೆ ಗೋವಿನ ರಕ್ಷಣೆ ಮಾಡಲಿಲ್ಲ? ಶಿವಾಜಿಯೇ ಏಕೆ ಬರಬೇಕಿತ್ತು? ರಾಜನಾದ ಶಿವಾಜಿಗೂ ಗೋವಿನ ರಕ್ಷಣೆಗೂ ಏನು ಸ೦ಬ೦ಧ? ಏಕೆ೦ದರೆ, ಯಾವುದೇ ಜನರ ಭಾವನೆಗಳಿಗೆ ಧಕ್ಕೆ ಆಗದ೦ತೆ ನೋಡಿಕೊಳ್ಳುವುದು ರಾಜನ ಕತ೯ವ್ಯ. ಸಹಜವಾಗಿ ಗೋವಿನ ರಕ್ಷಣೆಯೂ ಅವನದ್ದೇ ಆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

      ಮೊನ್ನೆ ಪ್ರಧಾನಿ ನರೇ೦ದ್ರ ಮೋದಿ ಮಾತನಾಡುತ್ತಾ, “ದೇಶದಲ್ಲಿ 70-80 ಪಸೆ೯೦ಟ್ ಗೋರಕ್ಷರು ನಕಲಿ’ ಎ೦ದಿದ್ದಾರೆ. ಮೋದಿ ಯಾವ ಸಮೀಕ್ಷೆಯ ಆಧಾರದ ಮೇಲೆ ಈ ಮಾತನ್ನು ಹೇಳಿದರೋ ಗೊತ್ತಿಲ್ಲ. ಆದರೆ, ಗೋರಕ್ಷಕರು ಎ೦ಬ ಪದ ಮತ್ತೆ ಬಳಕೆಯಾದಾಗ ಶಿವಾಜಿಯ ನೆನಪಾಯಿತು. ಅ೦ದು ಶಿವಾಜಿ ಮಾಡದ ಕೆಲಸವನ್ನು ಇ೦ದು ಹಿ೦ದೂ ಸ೦ಘಟನೆಗಳು ಮಾಡುತ್ತಿವೆ. ಅಥಾ೯ತ್, ಗೋರಕ್ಷಣೆಯ ಕೆಲಸ ಪೊಲೀಸರದ್ದಾಗಿತ್ತು. ಅವರು ಆ ಕೆಲಸ ಸರಿಯಾಗಿ ಮಾಡದ್ದಕ್ಕೆ ಇ೦ದು ಜನರೇ ತಮಗೆ ತಾವು ನ್ಯಾಯ ಒದಗಿಸಿಕೊಳ್ಳುತ್ತಿದ್ದಾರೆ. ಹೀಗೆ೦ದ ಮಾತ್ರಕ್ಕೆ ಹಿ೦ದೂ ಸ೦ಘಟನೆಗಳು ಮಾಡಿದ್ದೆಲ್ಲ ಸರಿ, ಇನ್ನು ನಾಲ್ಕು ಹೊಡೆಯಬೇಕಿತ್ತು ಎನ್ನುವುದು ನನ್ನ ವಾದವಲ್ಲ. ಯಾರೊಬ್ಬರ ಮೇಲೂ ಹಲ್ಲೆ ಮಾಡುವುದು ಕಾನೂನು ಬಾಹಿರ ಎ೦ದು ಗೋರಕ್ಷಕರಿಗೆ ತಿಳಿ ಹೇಳಬೇಕು. ಇಷ್ಟಕ್ಕೇ ಮುಗಿಯುವುದಿಲ್ಲ. ಹಲ್ಲೆ ಮಾಡುವ ಪ್ರಸ೦ಗ ಬರದೇ ಇರುವ ಹಾಗೆ ಗೋವು ಕಳ್ಳರನ್ನು ಹಿಡಿದು ಜೈಲಿಗಟ್ಟಬೇಕು. ಒ೦ದು ವ್ಯವಸ್ಥೆ ಸರಿಪಡಿಸುವುದಕ್ಕೆ ಇಷ್ಟೆಲ್ಲ ದೊಡ್ಡ ಕೆಲಸಗಳಿರುವಾಗ, ಮೋದಿ ನೇರವಾಗಿ 70ರಿ೦ದ 80 ಪಸೆ೯೦ಟ್ ಗೋರಕ್ಷರು ನಕಲಿ ಎ೦ದು ಹೇಗೆಹೇಳಿಬಿಟ್ಟರು?

     ಅಸಲಿಗೆ ಈಗೀಗ ಗೋರಕ್ಷಕರ ಆಭ೯ಟ ಕೇಳುತ್ತಿರುವ ಹಾಗೆ ಗೋವುಗಳ ಕಳ್ಳತನ ಇ೦ದು ನಿನ್ನೆಯದ್ದಲ್ಲ. ಕೆಲ ವಷ೯ಗಳ ಹಿ೦ದೆ, ಗೋಕಥೆ, ಗೋವು ರಕ್ಷಣೆಯಲ್ಲೇ ತೊಡಗಿಸಿಕೊ೦ಡಿರುವ ರಾಮಚ೦ದ್ರಾಪುರ ಮಠದ ರಾಘವೇಶ್ವರ ಶ್ರೀಗಳು, ಕಾಸರಗೋಡಿನ ಒಬ್ಬನಿಗೆ ಅಪರೂಪದ ದೊಡ್ಡ ಗೋವನ್ನು ಸಾಕಿಕೊಳ್ಳಲು ಕೊಟ್ಟಿದ್ದರು. ಗೋಕಳ್ಳರು ಒ೦ದು ರಾತ್ರಿ ಅದನ್ನೂ ಹೊತ್ತೊಯ್ದರು. ಗೋವು ಹೇಗಿದ್ದರೂ ಮಾ೦ಸದ೦ಗಡಿಯಲ್ಲಿ ಉಲ್ಟಾ ನೇತಾಡುತ್ತಿರುತ್ತದೆ ಬಿಡಿ, ಆದರೆ ಇದುವರೆಗೂ ಕದ್ದವರನ್ನು ಹುಡುಕಲಾಗಲಿಲ್ಲ. ಮ೦ಗಳೂರು ಕಡೆ ಒ೦ದು ದಶಕದಿ೦ದ ಇದೆಲ್ಲ ಬಹಳವೇ ಕಾಮನ್ ಆಗಿಬಿಟ್ಟಿದೆ. ಮೊದಲೆಲ್ಲ ರಾಸುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದರು. ಹತ್ತಾರು ದನಗಳನ್ನು ಒ೦ದೇ ಸಲ ಸಾಗಿಸುತ್ತಿದ್ದರಿ೦ದ ಜನರ ಮತ್ತು ಪೊಲೀಸರ ಕಣ್ಣಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಆದರೆ ಈಗೀಗ ಎರಡ್ಮೂರು ವಷ೯ಗಳಿ೦ದ ಕಳ್ಳರು ಹೊಸ ಐಡಿಯಾ ಮಾಡಿ ಕದಿಯುತ್ತಿದ್ದಾರೆ. ಒ೦ದೋ ಅಥವಾ ಎರಡೋ ಹಸುಗಳನ್ನು ಸ್ಕಾಪಿ೯ಯೋ, ಓಮ್ನಿ, ಟಾಟಾ ಸುಮೊದ೦ಥ ವಾಹನಗಳಲ್ಲಿ ಅಕ್ಕಿ ಮೂಟೆ ತು೦ಬಿದ ಹಾಗೆ ತು೦ಬಿ ಕದ್ದೊಯ್ಯುತ್ತಿದ್ದಾರೆ. ಮ೦ಗಳೂರಿನಲ್ಲಿ ಹೇಗೆ ಹಸುಗಳನ್ನು ಕದಿಯುತ್ತಾರೆ ಎ೦ದು ಕೇಳಿದರೆ ಎಲ್ಲರೂ ಕಾರಿನ ಬಗ್ಗೆ ಹೇಳುತ್ತಾರೆ. ಆದರೆ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಿದ್ದಾರೆ ಹೇಳಿ? ಸ್ವಯ೦ಪ್ರೇರಿತವಾಗಿ ಎಷ್ಟು ಗೋಕಳ್ಳರನ್ನು ಹಿಡಿದಿದ್ದಾರ೦ತೆ?

ಮಜಾ ಏನು ಎ೦ದರೆ “ಗೋರಕ್ಷಕರ ಕಾಟ’, “ಗೋರಕ್ಷಕರ ದಬ್ಬಾಳಿಕೆ’ ಎನ್ನುವ ಪದಗಳೇ ಇರಲಿಲ್ಲ. ಯಾವಾಗ? ಕೆಲ ಮುಸಲ್ಮಾನರು ಗೋವನ್ನು ಹೊತ್ತೊಯ್ದು, ಮಾ೦ಸ ಬೇಯಿಸಿ ತಿನ್ನುತ್ತಿದ್ದಾಗ. ಹಿ೦ದೂಗಳಿ೦ದ ಹಲ್ಲೆ ಶುರುವಾಯ್ತೋ, ಆಗ ಅದು “ಆಹಾರ ಪದ್ಧತಿ, ಬಿಟ್ಟು ಬಿಡಿ’ ಎ೦ದೆಲ್ಲ ವಾದ ಮಾಡಲು ನಿ೦ತರು. ಇದಕ್ಕೆ ರಾಜ್ಯದ ಬುದ್ಧಿಜೀವಿಗಳು ಎ೦ದು ತಮ್ಮನ್ನು ತಾವೇ ಕರೆದುಕೊಳ್ಳುವ, ಮೂರ್ ಕಾಸಿಗೆ ಬೆಲೆ ಬಾಳದ ಅಪ್ಪ ಮಾಡಿಟ್ಟ ಪತ್ರಿಕೆ ನಡೆಸುತ್ತಾ ಸುಲಿಗೆ ಮಾಡುವ ಬಿಳಿ ಕೂದಲಿನ ಪತ್ರಕತೆ೯ಯರೆಲ್ಲ ಇವರಿಗೆ ಸಾಥ ನೀಡಿದರು. ಆದರೂ ಈ ಹಾರಾಟ ನಿಲ್ಲಲಿಲ್ಲ. ಇದು ದಲಿತರ ಆಹಾರ ಪದ್ಧತಿಯೂ ಹೌದು ಎ೦ದು ಹೊಸ ರಾಗ ತೆಗೆದರು. ಅದಕ್ಕೆ ಸರಿಯಾಗಿ, ಗುಜರಾತ್‍ನ ಉನಾದಲ್ಲಿ ದಲಿತರು ಗೋವು ಕದ್ದರು ಎ೦ದು ಅವರಿಗೆ ಸಾವ೯ಜನಿಕವಾಗಿ ಥಳಿಸಲಾಯಿತು. ಅಲ್ಲಿ೦ದ ರೊಚ್ಚಿಗೆದ್ದ ನಮ್ಮ ಬುದ್ಧಿಜೀವಿಗಳು ಗೋರಕ್ಷಕರ ಹಾವಳಿ ಹೆಚ್ಚಾಗಿದೆ ಎ೦ದು ಬೊಬ್ಬೆಯಿಟ್ಟು, ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ.

     ಗೋವನ್ನು ಕದ್ದು ತಿನ್ನುವ ತನಕ ಸುಮ್ಮನಿದ್ದರು, ಆಗ ಯಾರೂ ಚೀರಾಡಲಿಲ್ಲ. ತಮ್ಮ ಗೋವನ್ನು ಕಳೆದು ಕೊ೦ಡಿರುವ ಸಾಲು ಸಾಲು ಜನರು ದೂರು ದಾಖಲಿ ಸಿದರೂ ಪೊಲೀಸರ ಯೋಗ್ಯತೆಗೆ ಹಿಡಿಯಲಾಗಲಿಲ್ಲ, ಆದರೆ ಈಗ ಗೋವು ಕಳ್ಳರು ರೆಡ್ ಹ್ಯಾ೦ಡಾಗಿ ಸಿಕ್ಕಿ ಬಿದ್ದು ಹೊಡೆತ ತಿ೦ದಾಗ ಮಾತ್ರ ವಿಷಯದ ತೀಕ್ಷ$್ಣತೆ ಗೊತ್ತಾಗುತ್ತಿದೆ ಎ೦ದಾಯಿತಲ್ಲ? ಹೊಡೆತ ತಿ೦ದವನು ಸುಮ್ಮನೆ ಮನೆಗೆ ಹೋದರೂ ಇನ್ನೆಲ್ಲೂ ಇರುವವನಿಗೆ ಪೆಟ್ಟು ಬಿದ್ದ೦ತೆ ಮ್ಯೆ ತಿಕ್ಕಿಕೊ೦ಡು, ಹೋರಾಟ ಮಾಡುವು ದೇಕೆ? ಗೋರಕ್ಷಕರು, ಕಳ್ಳರಿಗೆ ಕೊಟ್ಟಿರುವ ಒದೆಗಳ ನೋವಿಗಿ೦ತ ಗೋವನ್ನು ತಮ್ಮ ಮನೆಮಗಳ೦ತೆ ಸಾಕಿರುವ ಮ೦ದಿಗೆ ಇದರ ಸಾವಿರ ಪಟ್ಟು ನೋವಾಗಿರುತ್ತದೆ. ಗೋವುಗಳನ್ನು ಸಾಕುವವರಾರೂ, ಮು೦ದೊ೦ದು ದಿನತಾನು ಕಟುಕನಿಗೆ ಮಾರುತ್ತೇನೆ ಎ೦ದು ಸಾಕುವುದಿಲ್ಲ. ಬದಲಿಗೆ ಕುಟು೦ಬದ ಸದಸ್ಯನ೦ತೆ ನೋಡಿಕೊ೦ಡಿರುತ್ತಾರೆ. ಬೇರೆಯವರಿಗೆ ಆಹಾರ ಪದ್ಧತಿ ಹೇಗೋ, ಗೋವು ಹಿ೦ದೂಗಳಿಗೆ ದೇವರ ಸಮಾನವೂ ಹೌದು. ಅಷ್ಟಾದರೂ ನಮ್ಮ ಕಾನೂನು ಗೋಮಾ೦ಸ ತಿನ್ನುವವರಿಗಾಗೇ ಕೆಲ ಷರತ್ತನ್ನೊಡ್ಡಿದೆ. ಆರೋಗ್ಯವ೦ತ ಹಸುಗಳನ್ನು ಕೊಲ್ಲಬಾರದು ಎ೦ದೆಲ್ಲ ನಿಯಮಗಳಿವೆ. ಇದನ್ನೆಲ್ಲ ಎಷ್ಟು ಗೋಮಾ೦ಸ ಭಕ್ಷಕರು, ಗೋಕಳ್ಳರು ಅನುಸರಿಸುತ್ತಿದ್ದಾರೆ? ಗೋವನ್ನು ಕೊಲ್ಲುವಾಗ ಅದರ ವೈದ್ಯಕೀಯ ಪರೀಕ್ಷೆ ಆಗಬೇಕೆ೦ದಿದೆ. ಆದರೆ, ಎಷ್ಟು ಜನರ ಗೋಮಾ೦ಸ ಭಕ್ಷಕರು ವೈದ್ಯಕೀಯ ಪರೀಕ್ಷೆ ಮಾಡಿಸಿ ಕೊಲ್ಲುತ್ತಿದ್ದಾರೆ?

        ಕಾರಿನಲ್ಲಿ ಮೂಟೆ ಹಾಕುವ ಹಾಗೆ ಹಾಕಿ ಹಸುಗಳನ್ನು ಸಾಗಿಸುತ್ತಾರಲ್ಲ, ಅವರೆಲ್ಲ ಪರೀಕ್ಷೆ ಮಾಡಿಸಿ, ಹಲಾಲ್ ಕಟ್ ಮಾಡುತ್ತಾರಾ? ಇಲ್ಲ, ಇದು ಆರೋಗ್ಯವ೦ತ ಹಸು ಎ೦ದರೆ ವಾಪಸ್ ತ೦ದು ಕದ್ದ ಮನೆಗೇ ಒಪ್ಪಿಸುತ್ತಾರಾ? ಇವರಿಗಿಷ್ಟ ಬ೦ದ ಹಾಗೆ, ಸ೦ತೆಯಲ್ಲಿ ಯಾವ ಕೊಬ್ಬಿದ ಕುರಿ ಕ೦ಡಿತೋ ಅದನ್ನು ಹೊತ್ತುಕೊ೦ಡು ಬ೦ದು ಬಲಿ ನೀಡಿದ ಹಾಗೆ ಕಣ್ಣಿಗೆ ಕ೦ಡ ಹಸುಗಳನ್ನು, ಕಾಲು ಕಟ್ಟಿ ಕಾರಿನೊಳಗೆ ಹಾಕ್ಕೊ೦ಡು ಹೋಗಿ ಹಲಾಲ್ ಕಟ್ ಮಾಡಿದರೆ, ಜನರಾದರೂ ಎಷ್ಟು ದಿನ ಎ೦ದು ನೋಡಿ- ಕೊ೦ಡು ಸುಮ್ಮನಿರುತ್ತಾರೆ? ಆರಕ್ಷಕರು ತಾವು ಎಲ್ಲಿ ಶಿವಾಜಿಗಳಾಗುವುದನ್ನು ಮರೆಯುತ್ತಾರೋ, ರೋಸಿ ಹೋದ ಜನರೇ ಶಿವಾಜಿಗಳಾಗುತ್ತಾರೆ. ಯಾರು ಎಲ್ಲೆಲ್ಲಿ, ಯಾವ್ಯಾವ ವಾಹನದಲ್ಲಿ ಬ೦ದು ಗೋವುಗಳನ್ನು ಕದಿಯುತ್ತಾರೋ ಪೊಲೀಸರಿಗೆ ಅ೦ದಾಜೇ ಸಿಕ್ಕುವುದಿಲ್ಲ ಎ೦ದೇ ತಿಳಿಯೋಣ. ಆದರೆ ಹಸುಗಳನ್ನು ರಸ್ತೆಯಲ್ಲ೦ತೂ ಕೊಲ್ಲುವುದಿಲ್ಲ ಅಲ್ಲವೇ? ಯಾವುದಾದರೂ ಒ೦ದು ಹಳೆ ಗೋಡèನ್‍ಗಳನ್ನು ಅಕ್ರಮ ಕಸಾಯಿಖಾನೆಗಳೆ೦ದು ಮಾಡಿಕೊ೦ಡಿರುತ್ತಾರೆ. ಅಸಲಿಗೆ ಇ೦ಥ ಅಕ್ರಮ ಕಸಾಯಿಖಾನೆಗಳು ಎಲ್ಲೆಲ್ಲಿವೆ ಎ೦ಬುದರ ಮಾಹಿತಿ ಪೊಲೀಸರಿಗೆ ಚೆನ್ನಾಗಿಯೇ ಇರುತ್ತದೆ. ಅಷ್ಟಾದರೂ ಯಾಕೆ ಒಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ? ಎಲ್ಲರೂ ಹೀಗೆ ಕೈಕಟ್ಟಿ ಕುಳಿತರೆ ಗೋವು ಕಳೆದುಕೊ೦ಡವನು, ರೊಚ್ಚಿಗೇಳದೇ
ಮೊನ್ನೆ ಕುಮಟಾದಲ್ಲಿ ಆಗಿದ್ದೂ ಇದೇ. ಹಸುಗಳನ್ನು ಖರೀದಿಸಿ ಅದನ್ನು ವಾಹನದಲ್ಲಿ ಮನೆಗೆ ತೆಗೆದುಕೊ೦ಡು ಹೋಗುತ್ತಿದ್ದ ನಾಗಭೂಷಣ ಹೆಗಡೆ ಅವರನ್ನು ಗಿ ಬ್ ಹ್ಯೆಸ್ಕೂಲ್ ಬಳಿ ತಡೆದು ಅವರಿಗೂ ಥಳಿಸಿದ್ದಲ್ಲದೇ, ವಾಹನಕ್ಕೂ ಹಾನಿ ಮಾಡಿದ್ದಾರೆ. ವಾಹನದಲ್ಲಿ ಹಸುಗಳನ್ನು ತು೦ಬಿಕೊ೦ಡು ಹೋಗುತ್ತಿದ್ದನ್ನು ನೋಡಿದ ಕೆಲವರು ಗೋರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬ೦ದು ಪೂವಾ೯ಪರ ವಿಚಾರಿಸದೇ ಥಳಿಸಿದ್ದಾರೆ. ಆಮೇಲೆ ಸತ್ಯ ಗೊತ್ತಾಯಿತು. ಆದರೆ ಏನು ಪ್ರಯೋಜನ? ಒದೆ ಬಿದ್ದಾಗಿರುತ್ತದೆ. ಇ೦ಥ ವಾತಾವರಣ ಸೃಷ್ಟಿಯಾಗಿದೆ ಎ೦ದರೆ ಇದಕ್ಕೆಲ್ಲ ಕಾರಣ ಏನು ಗೊತ್ತಾ? ಗೋರಕ್ಷರಲ್ಲ. ಗೋವಿನ ರಕ್ಷಣೆಯನ್ನೇ ಸರಕಾರ ಮರೆತದ್ದು. ಇಷ್ಟೆಲ್ಲ ಗೊತ್ತಿದ್ದೂ ಮೋದಿ ಅದು ಹೇಗೆ, ಯಾವ ಆಧಾರದ ಮೇಲೆ 70-80 ಪ್ರತಿಶತ ಗೋರಕ್ಷಕರು ನಕಲಿ ಎ೦ದಿದ್ದು? ಒ೦ದು ವೇಳೆ ಕೆಲ ಕಡೆ ನಕಲಿ ಗೋರಕ್ಷಕರು ಇದ್ದಾರೆ೦ದೇ ಇಟ್ಟು- ಕೊಳ್ಳೋಣ. ಇದನ್ನು ಸಾವ೯ಜನಿಕ ಕಾಯ೯ಕ್ರಮದಲ್ಲಿ ವಿವಿಧಾಥ೯ ಬರುವ ಹಾಗೆ ಹೇಳಿದ್ಯಾಕೆ? ಕಾಶ್ಮೀರದಲ್ಲಿ ಇಸ್ಲಾಮಿಕ್ ಉಗ್ರರು ಅಷ್ಟು ದಾಳಿ ಮಾಡುತ್ತಿದ್ದರೂ ಯಾವತ್ತಾದರೂ ಮುಸಲ್ಮಾನರ ಬಗ್ಗೆ ಮಾತನಾಡಿದ್ದೀರಾ? ಇಲ್ಲ ಅಲ್ಲವೇ? ಅದು ಹೇಗೆ ತಪ್ಪಾಗುತ್ತದೆಯೋ, ಇದೂ ಹಾಗೆ. ಸಮಸ್ಯೆಯ ಮೂಲದಲ್ಲಿ ಇದನ್ನು ಸರಿ ಮಾಡಬೇಕೇ ಹೊರತು, ಗೋರಕ್ಷಕರನ್ನು ಬ್ಯೆದರೆ ಅವರೇನು ಮಾಡುತ್ತಾರೆ? ಒ೦ದು ವಿಷಯ ನೆನಪಿರಲಿ, ಆರಕ್ಷಕರು ಕೈಚೆಲ್ಲಿದ್ದಕ್ಕೇ ಅಲ್ಲವೇ ಗೋರಕ್ಷಕರು ಹುಟ್ಟಿಕೊ೦ಡಿದ್ದು?

ಓಡಿದ್ದು ಸಾವಕ೯ರ್ ಅಲ್ಲ , ನೆಹರೂ ಸ೦ತತಿ!

$
0
0

image courtesy www.google.com

ಸ್ವಾತ೦ತ್ರ ಸ೦ಗ್ರಾಮದಲ್ಲಿ ಪಾಲ್ಗೊಳ್ಳುತ್ತಿದ್ದ ಭಾರತೀಯರಿಗೆ ಕಾಟ ಕೊಡುತ್ತಿದ್ದ ಅಧಿಕಾರಿಗಳು ಒಬ್ಬಿಬ್ಬರಲ್ಲ. ಅದರಲ್ಲಿ ಹ್ಯಾರಿ ಜ್ಯಾಕ್ಸನ್ ಸಹ ಒಬ್ಬ. ನಮ್ಮವರು ಏನೇ ಹೋರಾಟ ಮಾಡಲಿ, ಒ೦ದಲ್ಲ ಒ೦ದು ಕಿರಿಕ್ ಮಾಡುತ್ತಿದ್ದ. ಇವನನ್ನು ಮುಗಿಸಲು ಸೆ್ಕಚ್ ಹಾಕಿದ್ದು ವೀರ ಸಾವಕ೯ರ್. ಕಾನೆರೆ ಮತ್ತು ಅವರ ಇಬ್ಬರು ಗೆಳೆಯರೊ೦ದಿಗೆ ಯೋಜನೆ ರೂಪಿಸಿದ್ದರು. ಸಾವಕ೯ರ್ ಆಗ ಪ್ಯಾರಿಸ್‍ನಲ್ಲಿದ್ದರು. ಕಾನೆರೆ ಇಲ್ಲಿ ಭಾರತದಲ್ಲಿ ಜ್ಯಾಕ್ಸನ್ ಹತ್ಯೆ ಮಾಡಿದ. ಇವರನ್ನೆಲ್ಲ ಬ೦ಧಿಸುವುದಕ್ಕೆ ಬಹಳ ಸಮಯ ಬೇಕಿರಲಿಲ್ಲ. ಅತ್ತ ಪ್ಯಾರಿಸ್‍ನಲ್ಲಿದ್ದ ಸಾವಕ೯ರ್‍ಗೆ ಎಲ್ಲ ವಿಷಯ ತಿಳಿಯಿತು. ಜ್ಯಾಕ್ಸನ್ ಹೋದ ಎ೦ಬುದು ಖುಷಿಯ ಸ೦ಗತಿಯಾದರೆ, ನಮ್ಮವರು ಜೈಲಿನಲ್ಲಿ ಹೊಡೆತ ತಿನ್ನುತ್ತಿದ್ದಾರೆ ಎ೦ಬುದು ದುಃಖದ ಸ೦ಗತಿಯಾಗಿತ್ತು. ತಾನು ಮಾತ್ರ ಇಲ್ಲಿ ಪ್ಯಾರಿಸ್‍ನಲ್ಲಿ ಹಾಯಾಗಿ ಸುತ್ತಾಡುತ್ತಿದ್ದೇನೆ. ಆದರೆ ನಮ್ಮವರು ಅಲ್ಲಿ ಪ್ರಾಣ ಒತ್ತೆಯಿಟ್ಟು ಹೋರಾಡುತ್ತಿದ್ದಾರೆ ಎ೦ಬುದು. “ನನ್ನನ್ನು ಎಲ್ಲರೂ ಸೇನಾಧಿಪತಿ ಎನ್ನುವುದೇ ನಿಜವಾದರೆ, ನಾನೇ ಮು೦ದೆ ನಿ೦ತು ಆ ಪಟ್ಟಕ್ಕೆ ಅಹ೯ನಾಗಿ ಹೋರಾಡಬೇಕು’ ಎ೦ದು ಸಾವಕ೯ರ್ ಹೊರಡಲು ಸಿದ್ಧರಾದರು. ಅಲ್ಲಿದ್ದವರಲ್ಲಿ ಹೆಚ್ಚಿನವರು ಅವರನ್ನು ತಡೆಯಲೆತ್ನಿಸಿದರು. ಆದರೆ, ಸಾವಕ೯ರ್ ನಿಧಾ೯ರ ಬದಲಿಸಲಿಲ್ಲ. ಅಲ್ಲಿ೦ದ ಲ೦ಡನ್‍ಗೆ ಹೋಗಿ ನ೦ತರ ಭಾರತಕ್ಕೆ ಹೋಗುತ್ತೇನೆ ಎ೦ದಾಗ ಹರದಯಾಳ್ ಮತ್ತು ಮೇಡ೦ ಕಾಮಾ ಒಲ್ಲದ ಮನಸ್ಸಿನಿ೦ದ ಕಳುಹಿಸಿಕೊಟ್ಟರು. ರೈಲಿನಲ್ಲಿ ಲ೦ಡನ್ನಿಗೆ ಬ೦ದಿಳಿಯುತ್ತಿದ್ದ೦ತೆ ಅಲ್ಲಿನ ಪೊಲೀಸರು ಸಾವಕ೯ರ್‍ರನ್ನು ಬ೦ಧಿಸುತ್ತಾರೆ. ಇದು ಸಾವಕ೯ರ್ ಹೇಡಿಯಲ್ಲ ಎನ್ನುವುದಕ್ಕೆ ಒ೦ದು ಉದಾಹರಣೆಯಷ್ಟೇ.

  ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆ೦ದರೆ, ಇತ್ತೀಚೆಗೆ ಕಾ೦ಗ್ರೆ ಸಿನ ದಿನೇಶ್ ಗು೦ಡೂರಾವ್ ಅವರು ಸಾವಕ೯ರ್ ಬಗ್ಗೆ ಮಾತನಾಡಿದ್ದನ್ನು ಕೇಳಿ ಇದೆಲ್ಲ ನೆನಪಾಯಿತು. ದಿನೇಶ್ ಗು೦ಡೂರಾವ್ ಹೇಳುತ್ತಾರೆ, 1925 ನ೦ತರ ಸಾವಕ೯ರ್ ಸೈಲೆ೦ಟ್ ಆಗಿºಟ್ರು. ಸ್ವಾತ೦ತ್ರ ಸ೦ಗ್ರಾಮದಲ್ಲಿರಲೇ ಇಲ್ಲ, ಮಧ್ಯದಲ್ಲೇ ಓಡಿ ಹೋದರು. ಇವರೆಲ್ಲ ಸ್ವಾತ೦ತ್ರ ಹೋರಾಟಗಾರರಲ್ಲ ಎ೦ದು ತಮ್ಮ ಇತಿಹಾಸ ಜ್ಞಾನ ತೆರೆದಿಟ್ಟಿದ್ದಾರೆ.
  ಅಷ್ಟಕ್ಕೂ ಕಾ೦ಗ್ರೆ ಸಿನ ಕಾಯಾ೯ಧ್ಯಕ್ಷರಾಗಿರುವ ಇವರಿಗೇಕೆ ಸಾವಕ೯ರ್ ಉಸಾಬರಿ? ಇವರೇನು ದೇಶಪ್ರೇಮದ ಸಟಿ೯ಫಿಕೆಟ್ ಕೊಡುವ ಅಧಿಕಾರಿಯೇ? ದಿನೇಶ್ ಗು೦ಡೂರಾವ್ ಅವರ ಈಗಿನ ಜವಾಬ್ದಾರಿ ಪ್ರಕಾರ ಇತರ ಪಕ್ಷಗಳು ಏನೇ ಮಾಡಿದರು ಅದನ್ನು ಟೀಕಿಸುತ್ತಿರಬೇಕಷ್ಟೇ. ಇತ್ತೀಚೆಗೆ ತಲೆ ಬುಡವಿಲ್ಲದೇ ಅಮೆ್ನಸ್ಟಿಯ ವಿಚಾರದಲ್ಲೂ ಟ್ವಿಟ್ಟರ್‍ನಲ್ಲಿ ಚೀರಾಡಿದ್ದರು. ಅದರ ಬಗ್ಗೆ ತಲೆ ಕೆಡಿಸಿಕೊ೦ಡವರೇ ಇಲ್ಲ. ಇದಾದ ಮೇಲೆ ವಿರೋಧ ಮಾಡುವುದಕ್ಕೆ ಬಿಜೆಪಿ ಏನೂ ಮಾಡಿಯೇ ಇಲ್ಲ, ಹಾಗಾಗಿ ಅವರ ತಲೆಯಲ್ಲಿ ಬೇರೆ ಏನೂ ಇಲ್ಲದಿದ್ದಾಗ ಹುಟ್ಟಿಕೊ೦ಡಿದ್ದೇ ಸಾವಕ೯ರ್‍ರನ್ನು ವಿರೋಧಿಸುವುದು. ಇವರ ಬಗ್ಗೆ ಮಾತನಾಡಿದರೆ, ದೇಶಾಭೀಮಾನಿಗಳಾದರೂ ರೊಚ್ಚಿಗೇಳುತ್ತಾರೆ ಎ೦ಬುದು ಅವರಿಗೆ ಗೊತ್ತಿದೆ. ಅದಕ್ಕೆ ಸಾವಕ೯ರ್‍ರನ್ನು ಸ್ವಾತ೦ತ್ರ ಸ೦ಗ್ರಾಮದ ಮಧ್ಯದಲ್ಲೇ ಓಡಿ ಹೋದರು ಎ೦ದು ಕಿಚಾಯಿಸಿದರು.
  ದಿನೇಶ್ ಗು೦ಡೂರಾವ್, “ಮಧ್ಯದಲ್ಲೇ ಓಡಿ ಹೋದ’ ಎ೦ಬ ಪದಕ್ಕೆ ನಿಮಗೆ ಸರಿಯಾದ ವ್ಯಾಖ್ಯಾನ ಬೇಕು ಮತ್ತು ಯಾರನ್ನಾದರೂ ಹಾಗೆ ಕರೆಯಬೇಕೆ೦ದು ಅನ್ನಿಸುತ್ತಿದ್ದರೆ, ನಿಮ್ಮ ಪಕ್ಷದ ಯುವರಾಜ್ ಅಲಿಯಾಸ್ ಉಪಾಧ್ಯಕ್ಷ ರಾಹುಲ್ ಗಾ೦ಧಿಯನ್ನು ಕರೆಯಿರಿ. ನಿಮ್ಮ ಪಕ್ಷದ ಪರ ಮತಯಾಚಿಸುವುದಕ್ಕೆ ರ್ಯಾಲಿ ಮಾಡಿದಾಗ, ಅಲ್ಲಿ ರೊಚ್ಚಿಗೆದ್ದು “ಆರೆಸೆ್ಸಸ್ ಗಾ೦ಧಿಯನ್ನು ಹತ್ಯೆ ಮಾಡಿತ್ತು’ ಎ೦ದಿದ್ದರು. ಆಗ ಧಿರ, ವೀರ ಶೂರ ಎ೦ದೆಲ್ಲ ಕಾ೦ಗ್ರೆ ಸ್ ಕಾಯ೯ಕತ೯ರು ಹೊಗಳಿದರು. ಕಳೆದ ತಿ೦ಗಳು ಸುಪ್ರೀ೦ ಕೋಟ್‍೯ ನಿಮ್ಮ ಯುವರಾಜನ ಮಯಾ೯ದೆ ಒ೦ದು ಸ್ವಲ್ಪವಾದರೂ ಉಳಿಯಲಿ ಎ೦ದು ಹೇಳಿ, ತಪೊ³ಪ್ಪಿಕೊಳ್ಳಲು ಹೇಳಿತು. ಆಗಲೂ ಒಪ್ಪಿಕೊಳ್ಳದೇ ಗತ್ತು ತೋರಿದ್ದರು. ಮೊನ್ನೆ ಸುಪ್ರೀ೦ ಕೋಟ್‍೯ನಲ್ಲಿ ಬ೦ದು “ಏ ನಾನು ಹ೦ಗ್ ಹೇಳಿದ್ದಲ್ಲ, ಗೋಡೆ್ಸ ಸಾಯಿಸಿದ್ದ ಅ೦ತ ಹೇಳಕ್ಕೋಗಿ ಮಿಸ್ ಆಗಿ ಹಿ೦ಗೆ ಹೇಳಿºಟ್ಟೆ’ ಎ೦ದು ಒ೦ದು ಮುಗಟ್ಧ ನಗೆ ಬೀರಿ, ಸದ್ಯ ಪ್ರಕರಣದಿ೦ದ ಪಾರಾದೆ ಅ೦ದುಕೊ೦ಡು ಹೋಗಿದ್ದಾರೆ. ಹೇಳಿ ದಿನೇಶ್, ಜನರ ಮು೦ದೆ ಇದ್ದ ಯುವರಾಜನ ಆಕ್ರೋಶ ಸುಪ್ರೀ೦ ಕೋಟ್‍೯ ಕೇಳಿದಾಗ ಎಲ್ಲಿ ಅಡಗಿತ್ತು? ಯಾವ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯ ಬಳಿ ಇಟ್ಟು ಬ೦ದಿದ್ದರ೦ತೆ ಅವರ ಧೈಯ೯ವನ್ನು? ಮಧ್ಯದಲ್ಲಿ ಓಡಿ ಹೋಗಿದ್ದು ಯಾರು? ಸಾವಕ೯ರಾ ಅಥವಾ ರಾಹುಲ್ ಗಾ೦ಧಿಯಾ? “ಮಧ್ಯದಲ್ಲೇ ಓಡಿ ಹೋದ’ ಎ೦ದು ಈಗ ರಾಹುಲ್ ಗಾ೦ಧಿಗೂ ಹೇಳುವ ತಾಕತ್ತು ನಿಮಗಿದೆಯೇ? ಆ ತಾಕತ್ತಿಲ್ಲದಿದ್ದ ಮೇಲೆ ಹೇಡಿ ಯಾರಾಗುತ್ತಾರೆ?
  ಸೋನಿಯಾ ಗಾ೦ಧಿಯೂ ಕಡಿಮೆ ಇಲ್ಲ. ರಾಜೀವ್ ಗಾ೦ಧಿ ಸತ್ತಾಗ, ವಷ೯ಗಟ್ಟಲೆ ಮೇಡ೦ ನಾಪತ್ತೆಯಾಗಿದ್ದರು. ಕೊನೆಗೆ ನೀವಿಲ್ಲದಿದ್ದರೆ ಭಾರತ ನಿರಾಶ್ರಿತವಾಗಿಬಿಡುತ್ತದೆ ಎನ್ನುವ ಬಿಲ್ಡಪ್ ಕೊಟ್ಟು ವಾಪಸ್ ಕರೆತ೦ದು, ಕಾ೦ಗ್ರೆ ಸ್ ಅಧ್ಯಕ್ಷೆ ಯನ್ನಾಗಿ ಮಾಡಲಾಗಿತ್ತು. ಗ೦ಡ ಸತ್ತರೆ ಓಡಿ ಹೋಗು ವುದೇನಿದೆ ಅಲ್ಲವೇ ದಿನೇಶ್? ಆಗ ಅವರು ಎಲ್ಲಿ ಹೋಗಿದ್ದರು, ಏನು ಮಾಡಿದ್ದರು ಎ೦ದೆಲ್ಲ ಚಚೆ೯ ಮಾಡುವುದು ಈಗ ವ್ಯಥ೯ ಬಿಡಿ. ಸೋನಿಯಾಗೆ “ಮಧ್ಯದಲ್ಲಿ ಓಡಿಹೋದರು’ ಎ೦ದು ಕರೆಯುತ್ತೀರೋ “ಕೊನೆಯಲ್ಲಿ ಓಡಿಹೋದರು’ ಎ೦ದು ಹೇಳುತ್ತೀರೋ ಅದು ನಿಮಗೇ ಬಿಟ್ಟದ್ದು.
  ನಿಮ್ಮ ಸೋನಿಯಾ ಗಾ೦ಧಿ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ರ್ಯಾಲಿ ಮಾಡುವುದಕ್ಕೆ ತಯಾರಿ ಮಾಡಿಕೊ೦ಡಿದ್ದರು. ಎಲ್ಲಿ ಜನ ಸೇರುವುದಿಲ್ಲ ಎ೦ದು ತಿಳಿಯಿತೋ, ಅವರಿಗೆ ಪಾಪ ಹುಷಾರಿಲ್ಲದೆಯೇ ರ್ಯಾಲಿ ಸ್ಥಗಿತಗೊ೦ಡಿತು. ಇದರಿ೦ದ ಅಲ್ಲಿ ಕಾ೦ಗೆಸ್ ಕಾಯ೯ಕತ೯ರೇ ಹೆಚ್ಚು ನೊ೦ದುಕೊ೦ಡರು. ಇದಕ್ಕೆ ಏನೆ೦ದು ಕರೆಯೋಣ ದಿನೇಶ್?
  ಮಧ್ಯದಲ್ಲಿ ಓಡಿಹೋಗುವುದು ಎನ್ನುವುದು ಕಾ೦ಗ್ರೆ ಸ್ ಪೂವ೯ಜರು ಕೊಟ್ಟ ಬಳುವಳಿ. ಅದನ್ನು ಈಗ ಅಧ್ಯಕ್ಷರು, ಉಪಾಧ್ಯಕ್ಷರು ಪಾಲಿಸುತ್ತಿರುವುದರಲ್ಲಿ ಯಾವುದೇ ವಿಶೇಷವಿಲ್ಲ. ಇದೆಲ್ಲ, ಈಗಿನವರ ಕತೆಯಾಯ್ತು. ಎದುರಿಗೆ ಸೆಣಸಲಾಗದೇ ಹೇಡಿ ಪಟ್ಟ ಪಡೆದ ಮೊದಲ ವ್ಯಕ್ತಿಯೇ ನೆಹರೂ. ನೇತಾಜಿ ವಿರುದ್ಧ ನೇರಾನೇರ ಗೆಲ್ಲಲು ಸಾಧ್ಯವಿಲ್ಲವೆ೦ದು ತಿಳಿದು, ತಾನು ಪ್ರಧಾನಿಯಾಗುವುದಕ್ಕಾಗಿ ನೇತಾಜಿ ಬದುಕಿದ್ದರೂ ದೂರ ತಳ್ಳುವ ಪ್ರಯತ್ನ ಮಾಡಿದರಲ್ಲ, ಅದು ಹೇಡಿತನ.
  ಇಷ್ಟಾದ ಮೇಲೆ ನೆಹರೂ ಹೇಡಿ ಎನ್ನುವುದಕ್ಕೆ ಸಾಕ್ಷಿ ಬೇಕಲ್ಲವೇ? ನೇತಾಜಿ ರಷ್ಯಾದಲ್ಲಿದ್ದಾರೆ೦ದು ಮತ್ತು ಕೆಲವರು ಅವರನ್ನು ನೋಡಿರುವುದರ ಬಗ್ಗೆ ಬ್ರಿಟಿಷ್ ಗುಪ್ತಚರಕ್ಕೆ ಖಚಿತ ಮಾಹಿತಿಯಿತ್ತು. ಸಚಿವಾಲಯಕ್ಕೆ ರಹಸ್ಯ ಮಾಹಿತಿ ಕೊಡುವ ಏಜೆನ್ಸಿಯ ನಿದೇ೯ಶಕರಾಗಿದ್ದ ರಾಯ್ ಸಿ೦ಗ್, ನೇತಾಜಿ ರಷ್ಯಾದಲ್ಲಿ ಇದ್ದಾರೆ೦ದು ಹೇಳಿದ್ದರು. ಜೋಸೆಫ಼್ ಸ್ಟಾಲಿನ್‍ನ ಬಲಗೈ ಬ೦ಟ ಬಾಬಜನ್ ಜತೆ ಬಹಳ ಸ್ನೇಹ ಹೊ೦ದಿದ್ದ ರಾಯ್ ಸಿ೦ಗ್‍ಗೆ ಬಹಳಷ್ಟು ಮಾಹಿತಿ ಸಿಗುತ್ತಿತ್ತು.  ಹೇಳುವ೦ತೆ ನೇತಾಜಿ 1945ರಲ್ಲೇ ಮ೦ಚುರಿಯಾ ಮೂಲಕ ರಷ್ಯಾಗೆ ಬ೦ದಿದ್ದರು. ಅಲ್ಲಿನ ನಿಯಮದ ಪ್ರಕಾರ ದೇಶದ ಒಳಗೆ ಬ೦ದ ನೇತಾಜಿಯನ್ನ ಕೊಲ್ಲಬಹುದಿತ್ತು. ಆದರೆ ಮು೦ದೆ ಭಾರತದ ಜತೆ ಏನಾದರೂ ಒಪ್ಪ೦ದಗಳನ್ನು ಮಾಡುವಾಗ ನೇತಾಜಿಯನ್ನು ಮು೦ದಿಟ್ಟುಕೊ೦ಡು ಲಾಭ ಪಡೆಯಬಹುದು ಎ೦ಬ ಆಲೋಚನೆಯೊ೦ದಿಗೆ ಸೈಬೀರಿಯಾದ ಲೇಬರ್ ಕ್ಯಾ೦ಪ್ ನಲ್ಲಿ ಬ೦ಧಿಸಿಡಲಾಗಿತ್ತು. ಚಾಲಾಕಿ ನೆಹರೂಗೆ ಈ ವಿಷಯ 1945ರಲ್ಲೇ ಗೊತ್ತಿತ್ತು ಎನ್ನುವುದಕ್ಕೆ ತಾಜಾ ಉದಾಹರಣೆಯೆ೦ದರೆ, ಸುಭಾಷ್ ಚ೦ದ್ರರು ರಷ್ಯಾದಿ೦ದ ನೆಹರೂಗೆ ಒ೦ದು ಪತ್ರ ಬರೆದಿದ್ದದ್ದು. “ನಾನು ಈಗ ರಷ್ಯಾದಲ್ಲಿದ್ದೇನೆ. ಹೇಗಾದರೂ ಮಾಡಿ ನನ್ನನ್ನು ಇಲ್ಲಿ೦ದ ಕರೆದೊಯ್ಯುವ ಪ್ರಯತ್ನ ಮಾಡಿ’ ಎ೦ದಿದ್ದರು. ಇದನ್ನು ಓದಿದ ನೆಹರೂಗೆ ಏಕೋ ತನ್ನ ಪ್ಲಾನ್ ಉಲ್ಟಾ ಹೊಡೆಯುತ್ತಿದೆಯಲ್ಲ ಎ೦ದೆನಿಸಿ, ಒ೦ದು ಉಪಾಯ ಮಾಡಿದರು. ಅದರ೦ತೆ ಬ್ರಿಟನ್ ಪ್ರಧಾನಿ ಕ್ಲೆಮೆ೦ಟ್ ಅಟ್ಲೀಗೆ “ನಿಮ್ಮ ಯುದ್ಧ ಖೆದಿ ನೇತಾಜಿ ಇನ್ನು ಬದುಕಿದ್ದಾನೆ, ಹಿಡಿದುಕೊ೦ಡು ಹೋಗಿ’ ಎ೦ದು ಪತ್ರ ಬರೆದರು. ಈಗ ಹೇಡಿ ಎ೦ದು ಹೇಳಿಸಿಕೊಳ್ಳಲು ಎಲ್ಲಾ ಅಹ೯ತೆ ಇರುವ ನೆಹರೂಗೆ ನಿಮ್ಮ ನುಡಿಮುತ್ತುಗಳೇನು? ಇವರಿಗೆ ಏನೆ೦ದು ಹೆಸರಿಡುತ್ತೀರಿ?
  ಇನ್ನು ಇತಿಹಾಸದ ಉದಾಹರಣೆ ಬೇಕಾ? ಕರಪಾತ್ರಿ ಮಹಾರಾಜ್ ಎ೦ಬ ಸ೦ತರು ನೆನಪಿರಲೇಬೇಕು ಕಾ೦ಗ್ರೆಸ್ಗೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ತೀರಿಕೊ೦ಡಾಗ ಕಾ೦ಗ್ರೆಸ್‍ಗೆ ಮತ್ತೆ ಚುನಾವಣೆ ಗೆಲ್ಲುವ ಯಾವುದೇ ಭರವಸೆಯೇ ಇರಲಿಲ್ಲ. ಆಗ ಕರಪಾತ್ರಿ ಮಹಾರಾಜ್‍ರ ಬಳಿ ಆಶೀವಾ೯ದ ಪಡೆಯಲು ಇ೦ದಿರಾಗಾ೦ಧಿ ಅವರಿದ್ದಲ್ಲಿಗೇ ಬ೦ದಿದ್ದರು. ಕರಪಾತ್ರಿ ಮಹಾರಾಜ್‍ರು ಆಗಿನ ಕಾಲದಲ್ಲೇ ಗೋ ರಕ್ಷಣೆಯ ಅಲೆಯನ್ನೇ ಸೃಷ್ಟಿಸಿದ್ದವರು. ಇ೦ದಿರಾ ಗಾ೦ಧೀಜಿಯವರಿಗೆ ಬೆ೦ಬಲ ಸೂಚಿಸುವುದಕ್ಕೂ ಮುನ್ನ ಒ೦ದು ಷರತ್ತನ್ನಿಟ್ಟರು, ಬ್ರಿಟಿಷರು ಸ್ಥಾಪಿಸಿರುವ ಕಸಾಯಿಖಾನೆಗಳನ್ನು ಮುಚ್ಚಿ, ಗೋ ಹತ್ಯೆ ನಿಷೇಧ ಜಾರಿಯಾಗುವುದಾದರೆ ಮಾತ್ರ ನಮ್ಮ ಬೆ೦ಬಲ ಎ೦ದು. ಆಗ ಸುಮ್ಮನೆ ಒಪ್ಪಿದರು ಇ೦ದಿರಾ. ಸ೦ತರ ಆಶೀವಾ೯ದದಿ೦ದಲೇ ಮೊರಾಜಿ೯ ದೇಸಾಯಿಯವರನ್ನು ಸೋಲಿಸಿ ಜಯ ಸಾಧಿಸಿದ ಇ೦ದಿರಾ, ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಇಲ್ಲ. ಇದಲ್ಲದೇ ಸುಮಾರು 15,000 ಹಸುಗಳನ್ನು ಕೊಲ್ಲಲಾಯಿತು. ಇದರಿ೦ದ ಬಹಳ ನೊ೦ದ ಕರಪಾತ್ರಿ ಮಹಾರಾಜ್‍ರು, ಇತರ ಸ೦ತರೊ೦ದಿಗೆ ಸೇರಿ “ಪಾಲಿ೯ಮೆ೦ಟ್ ಛೇರಾವ್’ ಮೂಲಕ ಹೋರಾಟ ಮಾಡಿದರು. ಅಲ್ಲೇ ಇದ್ದ ಇ೦ದಿರಾ ಗಾ೦ಧಿ ಲಾಠಿ ಚಾಜ್‍೯ ಮಾಡಿಸಿದರು. ಪೊಲೀಸರ ಹೊಡೆತ ತಿ೦ದು 200 ಸ೦ತರು ಸತ್ತರು. ಅಲ್ಲಿದ್ದ ಗೋವುಗಳಿಗೆ ಗು೦ಡೇಟು ಬಿದ್ದು ಅವೂ ಸತ್ತವು. ಆ ಘೋರ ನರಕವನ್ನು ಕಣ್ಣಾರೆ ನೋಡುತ್ತಾ ನಿ೦ತಿದ್ದ ಆ ತಾಯಿ ಅದೆ೦ಥ ಹೇಡಿ ಇರಬೇಕು? ಅವರಿಗೇನೆನ್ನುತ್ತೀರಿ ದಿನೇಶ್ ಗು೦ಡೂರಾವ್? ನಿಮ್ಮ ಇ೦ದಿರಾ ಗಾ೦ಧಿಗೆ ಸಾತ್ವಿಕ ಆಹಾರ ತಿನ್ನುವ ಸ೦ತರನ್ನು ಎದುರಿಸುವುದಕ್ಕೂ ತಾಕತ್ತಿಲ್ಲದೇ “ಮಧ್ಯದಲ್ಲಿ ಓಡಿ ಹೋಗಿ’ ಪೊಲೀಸರನ್ನು ಬಿಟ್ಟಿದ್ದಾರಲ್ಲ? ಇವರ ತಟ್ಟೆಯಲ್ಲೇ ಇರುವವರನ್ನು ನೋಡಿಕೊಳ್ಳುವುದನ್ನು ಬಿಟ್ಟು, ಸಾವಕ೯ರ್ ಹೇಡಿಯ೦ತೆ, ಮಧ್ಯದಲ್ಲಿ ಓಡಿ ಹೋಗುವವರ೦ತೆ.
  ದಿನೇಶ್ ಹೇಳುತ್ತಾರಲ್ಲ ಸಾವಕ೯ರ್ ಓಡಿಹೋದ್ರು ಎ೦ದು, ಸಾವಕ೯ರ್ ಅ೦ಡಮಾನ್ ಜೈಲಿನಿ೦ದ ಬಿಡುಗಡೆಯಾಗಿದ್ದು 1924ರ ಜನವರಿ 6ರ೦ದು. ಅ೦ಡಮಾನ್ ಜೈಲಿನಲ್ಲಿ 12ವಷ೯ ಇದ್ದು ಬದುಕಿ ವಾಪಸ್ ಬರುವುದೇ ಹೆಚ್ಚು, ಹೀಗಿರುವಾಗ ಸಾವಕ೯ರ್ ಅ೦ಥ ಜಾಗದಲ್ಲಿದ್ದು ಬದುಕಿ ವಾಪಸ್ ಬ೦ದು, ಪುನಃ ಸ೦ಗ್ರಾಮ- ಕ್ಕೆ ಹೊರಟು ನಿ೦ತರು. ಆದರೆ ರತ್ನಗಿರಿಯನ್ನು ಬಿಟ್ಟು ಎಲ್ಲೂ ಹೋಗುವ೦ತಿಲ್ಲ ಎ೦ಬ ಷರತ್ತಿನ ಮೇಲೆ ಬ್ರಿಟಿಷರು ಬಿಡುಗಡೆ ಮಾಡಿದ್ದರು. ಆದರೂ ಅಲ್ಲೂ ದಲಿತರಿಗೆ ದೇವಾಲಯ ಪ್ರವೇಶಕ್ಕಾಗಿ ಹೋರಾಡುತ್ತಾ, ಯುವ ಸಮೂಹವನ್ನು ಸೈನ್ಯಕ್ಕೆ ಸೇರುವ೦ತೆ ಪ್ರೇರೇಪಿಸುತ್ತಾ ಇದ್ದರು. ಅವರ ಕಾಲಿನ ಕಸಕ್ಕೂ ಸಮನಾಗಿರುವವನು ಮತ್ತೊಬ್ಬ ಹುಟ್ಟಿಲ್ಲ. ಆದರೆ, ಸಾವಕ೯ರ್ ಪಾಠಗಳನ್ನೇ ಓದಿ ಬೆಳೆದ ಗು೦ಡೂರಾವ್, ಅಧಿಕಾರ ಸಿಕ್ಕ ಮೇಲೆ ಸಾವಕ೯ರ್ ಓಡಿ ಹೋದರು ಅ೦ತಾರಲ್ಲ? ಈಗ ಯಾವನೋ ಕೆಲಸವಿಲ್ಲದ “ಸಾಯಿತಿ’ ಬರೆದ ಪುಸ್ತಕವನ್ನು, ಇವರು ಕೆಲಸ ಬಿಟ್ಟು ಓದಿ ಸಾವಕ೯ರ್ ವಿಮಶೆ೯ ಮಾಡುತ್ತಿದ್ದಾರೆ ಎನ್ನುವುದೇ ಹಾಸ್ಯಾಸ್ಪದವಾಗಿದೆ. ಸಿನಿಮಾ ನೋಡಿ, ಎಲ್ಲರೂ ನಾವೇ ಹೀರೋಗಳು, ಮು೦ದೆ ಏನೋ ಸಾಧನೆ ಮಾಡುತ್ತೇವೆ ಎ೦ಬ ಉತ್ಸಾಹದಿ೦ದ ಚಿತ್ರಮ೦ದಿರದಿ೦ದ ಹೊರ ಬರುವ ಜನರ ಹಾಗಿದೆ ದಿನೇಶ್ ಗು೦ಡೂರಾವ್‍ರ ಮನಸ್ಥಿತಿ. ಇವರಿಗೆ ಸರಿಯಾದ ಪುಸ್ತಕಗಳ ಅಗತ್ಯವಿದೆ. ಬೇಕಾದರೆ ಹೇಳಿ ಸ್ವತಃ ಕಳುಹಿಸಿ ಕೊಡುತ್ತೇನೆ. ಒಬ್ಬ ಸ್ವಾತ೦ತ್ರ ವೀರನ “ಸತ್ಯ’ ಚರಿತ್ರೆಯನ್ನು ತಿಳಿಸಿದ ಪುಣ್ಯವಾದರೂ ನನಗೆ ಸಿಕ್ಕ೦ತಾಗುತ್ತದೆ.
  ಸುಮ್ಮನೆ ಏನೇನೋ ಹೇಳಿ ನಿಮ್ಮ ಹಿಸ್ಟ್ರಿ ಮೇಷ್ಟ್ರ ಮಯಾ೯ದೆ ಕಳೆಯಬೇಡಿ.

ನೀ ಪ್ರಶ್ನೆ ಕೇಳಿದಹಂಗೆ ಮಾಡು, ನಾ ಉತ್ತರ ಕೊಟ್ಟಂಗೆ ಮಾಡ್ತೀನಿ! ಕೇಸ್ ಮುಗ್ಸಣ ಅತ್ಲಾಗೆ.. –ಜಾರ್ಜ್

$
0
0

ನೀ ಪ್ರಶ್ನೆ ಕೇಳಿದಹಂಗೆ ಮಾಡು, ನಾ ಉತ್ತರ ಕೊಟ್ಟಂಗೆ ಮಾಡ್ತೀನಿ! ಕೇಸ್ ಮುಗ್ಸಣ ಅತ್ಲಾಗೆ..
– ಜಾರ್ಜ್


ಉರಿಯಲ್ಲಿ ಬೆಂದರೂ ಹೃದಯ ಸಾಮ್ರಾಟರಾದವರು

$
0
0

139686709157dfc8584caed-e1474608985145

ನಮ್ಮ ರಾಜ್ಯದ ಮಾಧ್ಯಮ ಸಲಹೆಗಾರನೊಬ್ಬ ಹೇಳುತ್ತಾನೆ ‘ಸೈನಿಕರು ಬಡತನದಿಂದ ಸೇನೆಗೆ ಸೇರುತ್ತಾರೆಯೇ ವಿನಾ ದೇಶ ಭಕ್ತಿಯಿಂದಲ್ಲ. ಕ್ಯಾಮೆ ಇಲ್ಲದ ಕನ್ಹಯ್ಯ ಹೇಳುತ್ತಾನೆ: ಹತ್ತನೇ ಕ್ಲಾಸ್ ಪಾಸಾದವರೆಲ್ಲ ಸೈನ್ಯಕ್ಕೆ ಸೇರುತ್ತಾರೆ.

ಆರ್‌ಜೆಡಿಯ ವಕ್ತಾರ ಹೇಳುತ್ತಾನೆ:

ಎಲ್ಲ 18 ಸೈನಿಕರೂ ಲಂಚ ಕೊಟ್ಟು ಸೈನ್ಯಕ್ಕೆ ಸೇರಿದ್ದಾರೆ. ಹಾಗಾಗಿ ಇವರು ಸಾಯಲು ಅರ್ಹರು. ಅವರನ್ನು ಕೊಂದ ಅಷ್ಟೂ ಉಗ್ರರಿಗೂ ಧನ್ಯವಾದ. ಸರಕಾರದ ಬಿಟ್ಟಿ ಕೂಳು ತಿನ್ನುವ ಒಬ್ಬ ಸೈನ್ಯಕ್ಕೆ ಸಲಹೆ ಕೊಡುತ್ತಾನೆ, ಇನ್ನೊಬ್ಬ ಹತ್ತನೇ ಕ್ಲಾಸ್ ಓದಿದ ಸೈನಿಕನ ತೆರಿಗೆ ಹಣದಲ್ಲೇ ವಿದ್ಯಾಭ್ಯಾಸ ಮಾಡುತ್ತಾನೆ ಮತ್ತೊಬ್ಬ ತಾನೇ ಲಂಚ ತೆಗೆದುಕೊಂಡರೂ ಚಿಂತೆಯಿಲ್ಲ, ಯೋಧರು ಲಂಚ ಕೊಡುವುದು ತಪ್ಪಂತೆ.

ಅಸಲಿಗೆ ಲಂಚ ಕೊಟ್ಟು ಸತ್ತಿದ್ದರಿಂದ ಇವರಿಗೇನು ಬಂತು ಲಾಭ? ಗೊತ್ತಿಲ್ಲ. ಪಾಕಿಸ್ತಾನ ಕೃಪಾಪೋಷಿತ ಉಗ್ರರು ಮೊನ್ನೆ ನಡೆಸಿದ ಉರಿ ದಾಳಿಯಲ್ಲಿ ಒಟ್ಟಾರೆ ಇಪ್ಪತ್ತು ಯೋಧರು ಹುತಾತ್ಮರಾಗಿದ್ದಾರೆ. ಆದರೆ ಮಾಧ್ಯಮ ಸಲಹೆಗಾರ ಹೇಳಿದಂತೆ ಬಹುತೇಕ ಜನ ಬಡವರಾಗಿದ್ದರೂ, ದೇಶಪ್ರೇಮದ ಬಡತನವಿರಲಿಲ್ಲ. ಆ ಯೋಧರು ಹುಟ್ಟುವಾಗಲೂ ಬಡವರಾಗಿದ್ದರು, ಸಾಯುವಾಗಲೂ ಬಡವರಾಗಿ ಸತ್ತರು. ಆದರೆ, ಸತ್ತ ಮೇಲೆ ಎಲ್ಲರ ಹೃದಯದಲ್ಲಿ ನೆಲೆಸಿ ಶ್ರೀಮಂತರಾದರು. ಜನರ ಹೃದಯದಲ್ಲಿ ಸಾಮ್ರಾಟರಾಗಿ ಮೆರೆದರು. ಒಬ್ಬೊಬ್ಬ ಸೈನಿಕ ಆಡಿದ ಮಾತು, ಅವನ ಕುಟುಂಬ ಇದ್ದ ಪರಿಸ್ಥಿತಿ ನೋಡಿದರೆ, ನಮ್ಮ ಕಷ್ಟಗಳೆಲ್ಲ ಕಷ್ಟವೇ ಅಲ್ಲ ಅನಿಸುತ್ತದೆ. ಮೊನ್ನೆ ಉರಿ ದಾಳಿಯಲ್ಲಿ ಹುತಾತ್ಮರಾದ ಕುಟುಂಬಗಳನ್ನು ಪರಿಚಯ ಮಾಡಿಕೊಡಬೇಕಿದೆ.

ಸಿಪಾಯಿ ಜಾವ್ರಾ ಮುಂಡಾ

ಮುರ್ದಾಬಾದ್ ಮುರ್ದಾಬಾದ್, ಪಾಕಿಸ್ತಾನ್ ಮುರ್ದಾಬಾದ್ಅಮರ್ ರಹೇ ಅಮರ್ ರಹೇ ಜಾವ್ರಾ ಮುಂಡಾ ಅಮರ್ ರಹೇ… ಇದು ಹುತಾತ್ಮ ಜಾವ್ರಾ ಮುಂಡಾನ ಊರಾದ ಜಾರ್ಖಂಡ್ ಮೆರ್ಲಾದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪ್ರತಿಭಟನೆ. ದೇಶವನ್ನು ಉಳಿಸಲು ಉಗ್ರರ ಗುಂಡು ತಿಂದ ಜಾವ್ರಾ ಮುಂಡಾಗೆ ಇನ್ನೂ 34ವರ್ಷವಷ್ಟೇ. ಇದು ಜಾವ್ರಾ ಮುಂಡಾ ಬಯಸಿದಂಥ ಸಾವು. ಉರಿಯಂಥ ಸ್ಥಳದಲ್ಲಿ ಕ್ಷಣಕ್ಷಣವೂ ಪಾಕ್ ಮತ್ತು ಆ ದೇಶದ ಉಗ್ರರೊಂದಿಗೆ ಹೋರಾಡುವ ಅವಕಾಶ ಇರುತ್ತೆ ಎಂದು ಅವನ ಸಹೋದ್ಯೋಗಿ ಹೇಳಿದ ಒಂದೇ ಒಂದು ಮಾತಿಗೆ, ತಾನೇ ಕೇಳಿ, ಕಾಡಿ ಬೇಡಿ ಮೂರು ವರ್ಷದ ಹಿಂದೆ ಉರಿಗೆ ಪೋಸ್ಟಿಂಗ್ ಹಾಕಿಸಿಕೊಂಡಿದ್ದ.

ಇವನ ಊರಿನಲ್ಲಿ ಯೋಧರದ್ದೇ ಹಿಂಡು.. ಸತತ ಮೂರು ತಲೆಮಾರಿನಿಂದ ಇವರ ಊರಿನಲ್ಲಿ ಯೋಧರಾಗಿ ಹೊರ ಹೋಗುತ್ತಲೇ ಇದ್ದಾರೆ. ಇಂಥ ಊರಿನಿಂದ, ಯೋಧರ ಕತೆಗಳನ್ನು ಕೇಳಿಕೊಂಡು ಬೆಳೆದು ಬಂದ ಹುಡುಗ ಜಾವ್ರಾಗೆ ಸಹಜವಾಗಿಯೇ ಸೈನ್ಯಕ್ಕೆ ಸೇರಿಕೊಂಡ. ಹುತಾತ್ಮನ ಹೆಣ ಊರಿಗೆ ಬರುತ್ತಿದ್ದಂತೆ, ಎಲ್ಲರೂ ಕಣ್ಣೀರಿಟ್ಟರು. ಆದರೆ ಜಾವ್ರಾ ತಾಯಿಯ ಕಣ್ಣಲ್ಲಿ ಮಾತ್ರ ಮಗ ಏನೋ ದೊಡ್ಡ ಸಾಧನೆ ಮಾಡಿ ಜೀವಂತ ವಾಪಸ್ ಬಂದಿದ್ದಾನೆಂಬ ಹೆಮ್ಮೆಯಿದ್ದಂತೆ ಕಾಣುತ್ತಿತ್ತು.

ಇದನ್ನು ನೋಡಿದ ಊರಿನ ಜನರು ಜಾವ್ರಾ ತಾಯಿ ಸಲ್ಮೀ ಧನ್ವಾರ್ರನ್ನು ಮಾತಾಡಿಸಿದಾಗ ಅವರು ಹೇಳಿದ್ದಿಷ್ಟು- ‘ನನ್ನ ಮಗ ನನ್ನೊಂದಿಗಿಲ್ಲ ಎಂಬ ಸಣ್ಣ ಬೇಜಾರು ಇದೆ ಅಷ್ಟೇ… ಆದರೆ ಅವನು ದೇಶಕ್ಕಾಗಿ ಪ್ರಾಣ ಕೊಟ್ಟನಲ್ಲ ಅನ್ನೋ ಹೆಮ್ಮೆ ಇದೆ. ಅಷ್ಟು ಸಾಕು ನನಗೆ’ಜಾವ್ರಾನ 18 ವರ್ಷದ ಸಹೋದರ ದಾವುದ್ ಮುಂಡಾ ಬಿಎ ಓದುತ್ತಿದ್ದು, ಅಣ್ಣನ ಹೆಣದ ಮುಂದೆ ಪ್ರತಿಜ್ಞೆ ಮಾಡುತ್ತಾನೆ – ‘ಅಕ್ಟೋಬರ್‌ನಲ್ಲಿ ರಾಂಚಿಯಲ್ಲಿ ನಡೆಯುವ ಪರೀಕ್ಷೆಯನ್ನು ಬರೆದು, ಸೇನೆಗೆ ಬಂದು ನಿನ್ನನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ, ಹಾಗೇ ಅತ್ತಿಗೆ ಮತ್ತು ಮೂರು ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ. ನೆಮ್ಮದಿಯಾಗಿ ಹೋಗಿ ಬಾ ಅಣ್ಣ!’

ಸಿಪಾಯಿ ರಾಕೇಶ್ ಸಿಂಗ್, 28ವರ್ಷ

ನಾಲ್ಕು ದಿನದ ಹಿಂದೆ ನನಗೆ ಕರೆ ಮಾಡಿದ್ದ. ‘ಅಪ್ಪಾ, ನಿಮಗೆ ಕರೆ ಮಾಡುವುದಕ್ಕಾಗಿ ಒಂದು ಬೆಟ್ಟ ಹತ್ತಿ, ತುದಿಗೆ ಬಂದು ನಿಂತಿದ್ದೇನೆ. ನಾನಿರುವ ಕಡೆ ಸಿಗ್ನಲ್ ಸಿಗುವುದಿಲ್ಲ. ಸುಮ್ಮನೆ ಕರೆ ಮಾಡಲಿಕ್ಕೆ ಹೋಗಬೇಡಿ. ನನ್ನ ಕುಟುಂಬ ನನ್ನ ಜೊತೆಯೇ ಇರಬೇಕೆಂಬ ಆಸೆಯಿದೆ. ಆದರೆ ಏನ್ ಮಾಡ್ಲಿ ಅಪ್ಪಾ, ಉರಿಯಲ್ಲಿ ಅದು ಸಾಧ್ಯವಿಲ್ಲ.’ ಎಂದು ಹೇಳಿ ಫೋನ್ ಇಟ್ಟಿದ್ದ. ನಮಗೂ ಗೊತ್ತಿರಲಿಲ್ಲ, ಅವನಿಗೂ ಗೊತ್ತಿರಲಿಲ್ಲ, ಅದೇ ಕೊನೆಯ ಕರೆ ಎಂದು.

ಮತ್ತೊಂದು ಕರೆ ಮಾಡುವಷ್ಟರಲ್ಲಿ ಜವರಾಯನ ಕರೆಯನ್ನೇ ಸ್ವೀಕರಿಸಿಬಿಟ್ಟ ಎಂದು ಕಣ್ಣೀರಿಟ್ಟರು ರಾಕೇಶ್‌ನ ಅಪ್ಪ. ರಾಕೇಶ್, ಬಿಹಾರದ ಕೈಮೂರಿನ ಬದ್ಧಾ ಎಂಬ ಸಣ್ಣ ಹಳ್ಳಿಯವ. 5ಮಕ್ಕಳಲ್ಲಿ ನಾಲ್ಕನೆಯ ಮಗ. ಮನೆಯಲ್ಲಿ ದುಡಿಯುತ್ತಿರುವವನೂ ಇವನೇ. ಸಣ್ಣ ವಯಸ್ಸಿನಿಂದಲೂ ಮೈಲಿಗಟ್ಟಲೆ ಓಡುತ್ತಿದ್ದ. ಅವನ ತಮ್ಮ ಭಜರಂಗಿ ಸಿಂಗ್ ಯಾಕೆ ಹಿಂಗ್ ಓಡ್ತೀಯಾ ಎಂದು ಹೇಳಿದರೆ, ನಾನು ದೇಶಕ್ಕೆ ಏನಾದ್ರೂ ಸೇವೆ ಸಲ್ಲಿಸಬೇಕು.

ಹಿಂಗಾದ್ರೂ ಮಾಡಬೇಕು ಎನ್ನುತ್ತಿದ್ದನಂತೆ. 2008ರಲ್ಲಿ ರಾಕೇಶ್ ಸೇನೆಗೆ ಸೇರಿ 2012ರಲ್ಲಿ ಮದುವೆಯಾಗಿದ್ದ. ಇತ್ತೀಚೆಗಷ್ಟೇ ಹೆಂಡತಿ ಖಷ್ವಾಹಾ ಮತ್ತು ಮಗ ಹರ್ಶಿತ್ ಇಬ್ಬರೂ ಅಸ್ಸಾಮ್‌ಗೆ ಟೂರ್ ಹೊಗಿ ಫೋಟೊಗೆ ಪೋಸ್ ಕೊಟ್ಟಿದ್ದನ್ನು ಹಿಡಿದು ಹೆಂಡತಿ, ಬಂದವರಿಗೆಲ್ಲ ತೋರಿಸಿ ಕಣ್ಣೀರಿಡುತ್ತಿದ್ದಾಳೆ.

ಸಿಪಾಯಿ ಹರಿಂದರ್ ಯಾದವ್, 26ವರ್ಷ

ಘಾಝಿಪುರದ ಗಯೀನ್ ದೇವ್ಪುರದ ಹರಿಂದರ್ ಬಗ್ಗೆ ಹೇಳುವುದಕ್ಕೆ ಸಾಕಷ್ಟಿದೆ. ಸಾಮಾನ್ಯವಾಗಿ 26ವರ್ಷದವರ ಬುದ್ಧಿ ಹೇಗೆಂದರೆ, ತಮಗೆ ಹಣ ಬಂದರೆ ಸಾಕು ಆರಾಮಾಗಿ ಇದ್ದುಬಿಡುವುದೇ ಹೆಚ್ಚು. ಹರಿಂದರ್ ಕುಟುಂಬ ತುಂಬ ದೊಡ್ಡದು. ಅವನ ಹೆಂಡತಿ, ಅಕ್ಕ, ಅಣ್ಣ, ತಮ್ಮ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜ ಎಲ್ಲರೂ ಇದ್ದಾರೆ.

ಮನೆಯಲ್ಲಿ ಕಷ್ಟವಿದೆ ಎಂದು ಗೊತ್ತಿದ್ದರೂ ಎಲ್ಲರೂ ಒಟ್ಟಿಗೇ ಇರಬೇಕು ಎಂದು ಬಹಳ ಶ್ರಮ, ಕಾಳಜಿ ವಹಿಸುತ್ತಿದ್ದ. ಕುಟುಂಬದಲ್ಲಿ ಇವನೊಬ್ಬನೇ ಸರಕಾರಿ ಕೆಲಸದಲ್ಲಿರುವುದು. ತನ್ನ ಎಟಿಎಂ ಕಾರ್ಡನ್ನೇ ತಮ್ಮನಿಗೆ ಕೊಟ್ಟು ಹೋಗಿದ್ದ. ಒಟ್ಟಾರೆ 18 ಮಂದಿಯ ಜವಾಬ್ದಾರಿಯನ್ನು ಈ 26ವರ್ಷದ ಹುಡುಗನೇ ಹೊಂದಿದ್ದ ಎಂದರೆ ನಂಬುವ ಮಾತಾ? ನಂಬಲೇ ಬೇಕು. ಇಷ್ಟಾಗ್ಯೂ ಸಾಯುವ ಮೂರು ದಿನದ ಹಿಂದೆ ಮದ್ಯಾಹ್ನ 1ಗಂಟೆಗೆ ಮನೆಗೆ ಕರೆ ಮಾಡಿ ‘ಮನೆಯವರೆಲ್ಲ ಹೇಗಿದ್ದಾರೆ, ನಾನು ಈಗ ಹೋಗುತ್ತಿದ್ದೇನೆ ಸ್ವಲ್ಪ ದಿನ ಕರೆ ಮಾಡುವುದಕ್ಕಾಗುವುದಿಲ್ಲ. ಸೆಪ್ಟೆಂಬರ್ 22ಕ್ಕೆ ಒಮ್ಮೆ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ, ಹಣ ಬಂದಿರುತ್ತದೆ.’ ಎಂದು ಹೇಳಿ ಹೋಗಿದ್ದ.

ಆದರೆ ಭಾನುವಾರ ಕುಟುಂಬಕ್ಕೆ ಬಂದ ಕರೆ, ಹರಿಂದರ್ ಸಾವಿನ ಸುದ್ದಿಯದ್ದಾಗಿತ್ತು. ಇವನೊಬ್ಬನ ಸಾವಿನಿಂದ ಇಡೀ ಕುಟುಂಬ ಬೀದಿ ಪಾಲಾಗಿದೆ. ಆದರೆ, ಇವರ‍್ಯಾರೂ ತಮ್ಮ ಸ್ವಾರ್ಥವನ್ನ ಯೋಚಿಸದೇ, ದೇಶಕ್ಕಾಗಿ ಪ್ರಾಣತ್ಯಾಗಿ ಮಾಡಿದವನ ಸಾವಿಗೆ ನಾವು ಅಳುವುದಿಲ್ಲ. ಖುಷಿಯಿಂದಲೇ ಕಳಿಸಿಕೊಡುತ್ತೇವೆ ಎನ್ನುತ್ತಿದ್ದಾರೆ. ಹರಿಂದರ್ 2007ರಲ್ಲಿ ಸೇನೆ ಸೇರಿ, 2011ಕ್ಕೆ ಮದುವೆಯಾಗಿದ್ದ. ಇದಲ್ಲದೇ ತನ್ನ ತಮ್ಮ ನಾಗೇಂದ್ರನನ್ನೂ ಸೇನೆಗೆ ಸೇರುವಂತೆ ಒತ್ತಾಯ ಮಾಡಿ, ನಾಲ್ಕು ಬಾರಿ ದೈಹಿಕ ಪರೀಕ್ಷೆಯಲ್ಲೂ ಪಾಲ್ಗೊಳ್ಳುವಂತೆ ಮಾಡಿದ್ದ.

ಸಿಪಾಯಿ ನೈಮನ್ ಕುಜುರ್, 30ವರ್ಷ

ಒಂದೇ ಒಂದು ದಿನದ ಹಿಂದೆ ನೈಮನ್ ತನ್ನ ಪತ್ನಿಗೆ ಕರೆ ಮಾಡಿ – ‘ನೀನು ನನ್ನ ಬಗ್ಗೆ ಯವಾಗಲೂ ಯೋಚನೆ ಮಾಡುವು ದನ್ನು ಬಿಡು. ಮೊದಲು ಮಗನನ್ನು ಚೆನ್ನಾಗಿ ಬೆಳೆಸುವುದರ ಬಗ್ಗೆ ಚಿಂತಿಸು. ನಾನು ಹೇಗೋ ಇರ್ತೀನಿ ಬಿಡು’ ಎಂದಿದ್ದ. ಈ ಯೋಧನಿಗೆ ತಾನು ಸಾಯುವುದು ಮೊದಲೇ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಒಂದೇ ದಿನಕ್ಕೆ ಉರಿ ಮೇಲೆ ದಾಳಿಯಾಯಿತು. ಹುತಾತ್ಮನಾಗೇ ಬಿಟ್ಟ. ಹುಟ್ಟೂರು ಜಾರ್ಖಂಡ್‌ನ ಗುಮ್ಲಾದ ಚೈನ್ಪುರ. ಗಂಡನ ಸಾವಿನ ನಂತರ ಅಳುತ್ತಾ ಕೂರಲಿಲ್ಲ ಹೆಂಡತಿ ಬೀನಾ. ಬದಲಿಗೆ ‘ನಾನೂ ಸೈನ್ಯಕ್ಕೆ ಸೇರಲು ತಯಾರಾಗಿದ್ದೇನೆ.

ಸೇರಿ, ನನ್ನ ಗಂಡನ ಸಾವಿಗೆ ಯಾರು ಕಾರಣರಾಗಿದ್ದರೋ ಅವರನ್ನು ಹತ್ಯೆಗೈದು ಸೇಡು ತೀರಿಸಿಕೊಳ್ಳುತ್ತೇನೆ’ ಎಂದಳು. ಒಬ್ಬ ಹೆಣ್ಣು ಗನ್ ಹಿಡಿದು ಗಡಿಯಲ್ಲಿ ನಿಲ್ಲುತ್ತೇನೆ ಎನ್ನುವಾಗ ಇದನ್ನು ನೋಡಿಯಾದರೂ ಸರಕಾರ ಉಗ್ರಗಾಮಿಗಳನ್ನು ಸುಮ್ಮನೆ ಬಿಡಬೇಕೆ? 2013ರಲ್ಲಿ ನೈಮನ್‌ಗೆ ಮದುವೆಯಾಗಿತ್ತು. ಸರಿಯಾಗಿ ಹೆಂಡತಿಯ ಜತೆ ಕಾಲವೇ ಕಳೆದಿರಲಿಲ್ಲ ಈ ಮನುಷ್ಯ. ಈ ಬಾರಿ ಹತ್ತಾರು ಕನಸುಗಳನ್ನು ಹೊತ್ತು ಜುಲೈ ತಿಂಗಳಲ್ಲಿ ಬಂದಾಗ ಆಗಸ್ಟ್ ಮಧ್ಯದಲ್ಲಿ ಉನ್ನತ ಅಧಿಕಾರಿಗಳು ಕರೆದರು ಎಂದು ಹೊರಟರು.

ಹೆಂಡತಿ ಅಂದು ಗಂಡನನ್ನು ಖುಷಿ ಯಿಂದ ಕಳುಹಿಸಿ ಕೊಟ್ಟಿರಲ್ಲಿಲ್ಲ. ಗಂಡ ಪುನಃ ಬರುತ್ತೇನೆ ಎಂದು ಭಾಷೆ ಕೊಡುವ ತನಕ ಹೆಂಡತಿ ನಗಲೇ ಇಲ್ಲ. ಸಮಾಧಾನ ಮಾಡಿ ಹೋಗು ವಷ್ಟರಲ್ಲಿ ನೈಮನ್‌ಗೆ ಸಾಕುಸಾಕಾಗಿತ್ತು. ಹೆಂಡತಿಗೆ ಕೊಟ್ಟ ಮಾತಿನಂತೆ ವಾಪಸ್ ಬಂದರು. ಸಂಸಾರ ಮಾಡಕ್ಕಲ್ಲ… ಶವ ಸಂಸ್ಕಾರ ಮಾಡಿಸಿಕೊಳ್ಳಲು!

ಬಿಸ್ವಜಿತ್ ಘೊರಾಯ್, 22ವರ್ಷ

ಹುತಾತ್ಮರಿಗೆಂದೂ ಸಾವಿಲ್ಲ… ನನ್ನ ಮಗ ನನ್ನು ಕಳೆದುಕೊಂಡ ನೋವಿದೆ. ನಾವೆಲ್ಲ ಇನ್ನು ಮುಂದೆ ಹೇಗಿರು ತ್ತೇವೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ನನ್ನ ಮಗ ಸುಮ್ಮನೆ ಸತ್ತಿಲ್ಲ. ಒಂದು ಮಹತ್ಕಾರ ಣಕ್ಕಾಗಿ ಸತ್ತಿದ್ದಾನೆ. ದೇಶಕ್ಕಾಗಿ ಸತ್ತಿದ್ದಾನೆ… ಎಲ್ಲ ಬಿಟ್ಟಾಕಿ, ತನ್ನ ಮಗನಿಗೇ ಸಲ್ಯೂಟ್ ಮಾಡುವ ಅವಕಾಶ ಯಾವ ಅಪ್ಪನಿಗೆ ಸಿಗುತ್ತೆ ಸಾರ್? ಅವನ -ಟೊ ಇಟ್ಟು ನಮಸ್ಕಾರ್ ಮಾಡುವ ಭಾವ ಯಾವ ಅಪ್ಪನಿಗೆ ಸಿಗತ್ತೆ ಸಾರ್?… ನಾನೇ ಪುಣ್ಯವಂತ… ಮಗನೇ ಸಂತೋಷದಿಂದ ಹೋಗಿ ಬಾರೋ… ನಾನು ಅಳುವುದಿಲ್ಲ’ ಎನ್ನುತ್ತಿದ್ದಂತೆ ಬಿಸ್ವಜಿತನ ಅಪ್ಪನ ಕಣ್ಣಲ್ಲಿ ನೀರು ಹರಿದೇ ಬಿಟ್ಟಿತು.

ಏನೋ ಮಾತು ಹೇಳಬಹುದು, ಆದರೆ ಮನಸ್ಸು ಕೇಳುತ್ತದೆಯೇ? ತನ್ನ ಮಗನ ಹೆಣವನ್ನು ನೋಡುವ ಕರ್ಮ ಯಾವ ತಂದೆಗೆ ಬೇಕು ಎಂಬುದಿರುವುದಿಲ್ಲವೇ? ಬಂಗಾಳದ ಗಂಗಾಸಾಗರದ ನಿವಾಸಿ ಬಿಸ್ವಜಿತ್ ಸೈನ್ಯಕ್ಕೆ ಸೇರಿ ಕೇವಲ 26 ತಿಂಗಳಾಗಿತ್ತಷ್ಟೇ. ಬಿಹಾರದಲ್ಲಿದ್ದು ನಂತರ ಉರಿಗೆ ವರ್ಗಾವಣೆಗೊಂಡು 1 ತಿಂಗಳು ರಜೆಯ ಮೇಲೆ ಮನೆಗೆ ಬಂದು, ಸೇನೆಯಲ್ಲಿ ಏನೇನಿದೆ, ನಾನು ಹೆಂಗಿದ್ದೆ, ಏನು ನಡೆಯುತ್ತದೆ ಎಂದೆಲ್ಲ ಹೇಳು ತ್ತಿದ್ದ. ಉರಿಯ ಬಗ್ಗೆ ಮನೆಯವರಿಗೆ ಹೇಳಿದಾಗ ಅವರೂ ಕೊಂಚ ಗೊಂದಲದಲ್ಲಿದ್ದರು, ಹೆದರಿದ್ದರು.

ಆಗ ಮಗ ಹೇಳಿದ್ದು ಒಂದೇ ಮಾತು ‘ನೋಡಿ ನಾನು ದೇಶಕ್ಕಾಗಿ ಸೈನ್ಯಕ್ಕೆ ಸೇರಿದ್ದೇನೆ. ಎಲ್ಲೇ ಹಾಕಿದರೂ ಹೋಗುತ್ತೇನೆ. ನೀವು ನನ್ನನ್ನು ಮರೆತುಬಿಡಿ’ ಎಂದಿದ್ದ.

ನಾಯಕ್ ಸುನೀಲ್ ಕುಮಾರ್ ವಿದ್ಯಾರ್ಥಿ, 40ವರ್ಷ

ಬಿಹಾರದ ಗಯಾದವನು. ಬಹಳ ದಿನಗಳು ಕಳೆದಿರಲಿಲ್ಲ. ಎರಡು ತಿಂಗಳ ಹಿಂದಷ್ಟೇ ಬಂದಾಗ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಒಂದು ಮಾತು ಕೊಟ್ಟಿದ್ದ ‘ಮುಂದಿನ ಸಲ ದಸರಾ ರಜೆಗೆ ಬಂದಾಗ ನಮ್ಮ ಮನೆಯನ್ನು ನವೀಕರಿಸುತ್ತೇನೆ… ಅಲ್ಲಿ ತನಕ ಕಾಯಿರಿ’ ಎಂದು! ಆದರೆ ದಸರಾಕ್ಕಿಂತಲೂ ಮುಂಚೆಯೇ ಬಂದು, ಹಬ್ಬವೂ ಮಾಡದಿರುವ ಹಾಗೆ ಮಾಡುತ್ತಾನೆ ಎಂದು ಖಂಡಿತ ಕುಟುಂಬಕ್ಕೆ ಗೊತ್ತಿರಲಿಕ್ಕಿಲ್ಲ. ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ಹೋದ ಅವರ ಶ್ರಮ ಹಾಗೇ ನೀರಿನಲ್ಲಿ ಕೊಚ್ಚಿ ಹೋಗಲು ನಾವು ಬಿಡುವುದಿಲ್ಲ. ಕೇಂದ್ರೆ ಸರಕಾರ ಸಮರ್ಥ ಉತ್ತರವನ್ನು ಕೊಡಲೇಬೇಕು’ ಎಂದು ಅವರ ಪತ್ನಿ ಹೇಳುವಾಗಿನ ಆಕ್ರೋಶ, ಸುನೀಲ್ ಮನೆಯಲ್ಲಿ ಅವರಿಗೆ ಕೊಟ್ಟ ಸಂಸ್ಕೃತಿ ಹಾಗೂ ಅವರು ಬೆಳೆಸಿಕೊಂಡ ದೇಶಭಕ್ತಿಯನ್ನು ತೋರುತ್ತುದೆ.

ಹವಾಲ್ದಾರ್ ಅಶೋಕ್ ಕುಮಾರ್ ಸಿಂಗ್, 44 ವರ್ಷ

ಕುಟುಂಬ ಕಳೆದು ಕೊಂಡ ಎರಡನೇ ಮಗ ಅಶೋಕ್. 1986ರಲ್ಲಿ ಜಗನಾರಾಯಣ್‌ರ ಜೇಷ್ಠ ಪುತ್ರ ಕಮ್ತಾ ಸಿಂಗ್ ಬಾಂಬ್ ಬ್ಲಾಸ್ಟನಲ್ಲಿ ಹುತಾತ್ಮನಾಗಿದ್ದ. ಇವ ನಿಂದ ಪ್ರೇರೇಪಣೆ ಪಡೆದ ಅಶೋಕ್ ತಾನೂ ಸೇನೆ ಯನ್ನು ಸೇರುತ್ತೇನೆ ಎಂದು ಹಠ ಹಿಡಿದು 1992ರಲ್ಲಿ ಅದನ್ನು ಸಾಧಿಸಿದ. ಇವರ ಕುಟುಂಬದ ತುಂಬಾ ಸೇನೆಯಲ್ಲಿರುವವರೇ. ಅಶೋಕ್‌ರ ಮಗ ವಿಕಾಸ್ ಸಿಂಗ್ ದಾನಾಪುರ್ ಕಂಟೋನ್ಮೆಂಟ್‌ನಲ್ಲಿ ಸಿಪಾಯಿ ಆಗಿ ಇತ್ತೀಚೆಗಷ್ಟೇ ಸೇರಿದ್ದಾನೆ. ಅಶೋಕ್‌ರ ಅಜ್ಜ ರಾಜ್ಗೀರ್ ಸಿಂಗ್ ಮತ್ತು ಅವರ ಇಬ್ಬರು ಚಿಕ್ಕಪ್ಪಂದಿರೂ ಸೇನೆಯಲ್ಲಿ ಸೇವೆ ಸಲ್ಲಿಸಿದವರು.

ಇವರ ಕುಟುಂಬದಲ್ಲೇ ದೇಶಪ್ರೇಮದ ರಕ್ತ ಹೇಗೆ ಕುದಿಯುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಅಶೋಕ್‌ರ ಅಪ್ಪ ಜಗನಾರಾಯಣ್ ಸಿಂಗ್. ಮಗನ ಹೆಣ ಮನೆಯ ಮುಂದೆ ಬಂದಾಗ ಈ 78ರ ಮನುಷ್ಯ ಅಳಲಿಲ್ಲ ಬದಲಿಗೆ ಹೇಳಿದ್ದು ಇದನ್ನ – ‘ನಾನೇನು ಮುದುಕ ಅಲ್ಲ, ತೃಣ ಸಮಾನವಾದ ಪಾಕಿಸ್ತಾನವನ್ನು ಎದುರಿಸುಷ್ಟು ತಾಕತ್ತು ಇನ್ನೂ ನನಗಿದೆ. ನಾನು ಸೇನೆಗೆ ಸೇರಿ ನನ್ನ ಮಗನ ಸಾವಿಗೆ ಕಾರಣರಾದ ಉಗ್ರರನ್ನು ಸದೆಬಡಿಯುತ್ತೇನೆ. ಉಗ್ರರಿಗೆ ಗನ್ನಿನಿಂದ ಮಾತ್ರ ಉತ್ತರ ಕೊಡಲು ಸಾಧ್ಯ’. ಇದೇ ರಕ್ತ ಅಶೋಕ್‌ರಲ್ಲಿರುವುದು. ಉಗ್ರರೊಂದಿಗೆ ಕಾದಾಟ ನಡೆಸುತ್ತಿರುವಾಗ ಹಿಂದಿನಿಂದ ಬಂದ ಗುಂಡು ಕತ್ತನ್ನು ಸೀಳಿತ್ತು. ಜುಲೈ 14ರಿಂದ 24ರವರಗೆ ಮನೆಗೆ ಬಂದಾಗ ಸೇನೆ ಎಂದರೆ ಹೇಗಿರುತ್ತದೆ, ಈಗ ಉರಿಯ ವಾತಾವರಣ ಹೇಗಿದೆ ಎಂದೆಲ್ಲ ಹೇಳುತ್ತಿದ್ದರು. ‘ಕೇಂದ್ರ ಸರಕಾರ ಏನು ಮಾಡುತ್ತಿದೆ? ಇನ್ನು ಎಷ್ಟು ಜನ ಸೈನಿಕರು ಪ್ರಾಣ ಕೊಡಬೇಕು? ಒಬ್ಬರನ್ನು ಕೊಂದರೆ ಹತ್ತು ಜನರನ್ನು ಕೊಲ್ಲಬೇಕು ಎನ್ನುವ ಇವರ ನಿಯಮ ಎಲ್ಲಿ ಹೋಯ್ತು?’ ಎಂದಿದ್ದಾರೆ ಜಗನಾರಾಯಣ್ ಸಿಂಗ್. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ನೀಡಿದ ಪ್ರಶ್ನೆಗೆ, ಒಬ್ಬ ಪತ್ರಕರ್ತನೂ ತುಟಿ ಪಿಟಿಕ್ ಎನ್ನಲಿಲ್ಲ. ಏಕೆಂದರೆ, ಕಳೆದುಕೊಂಡಿರುವುದು ವಸ್ತುವನ್ನಲ್ಲ, ವಜ್ರವನ್ನು!

ಸಿಪಾಯಿ ರಾಜೇಶ್ ಕುಮಾರ್ ಸಿಂಗ್, 33 ವರ್ಷ

ಇಪ್ಪತ್ತು ದಿನಗಳ ಹಿಂದಷ್ಟೇ ನಮ್ಮ ಮನೆಗೆ ಬಂದಾಗ ನಮ್ಮೆಲ್ಲರ ಜತೆ ಮಾತಾಡಿ ಅವನಿಗೆ ಕಾಶ್ಮೀರದಲ್ಲಿ ಪೋಸ್ಟಿಂಗ್ ಆಗಿದೆ ಎಂದಿದ್ದ. ಅಲ್ಲಿ ವಾತಾವರಣ ಹೇಗಿದೆ ಎಂದು ಹೇಳುತ್ತೇನೆ ಎಂದು ಹೇಳಿ ಹೋಗಿದ್ದ. ಆದರೆ, ಅವನೇ ಮನೆಗೆ ಹೆಣವಾಗಿ ಬರುತ್ತಾನೆ ಎಂದು ಯಾರಿಗೆ ಗೊತ್ತಿತ್ತು?’ ರಾಜೇಶ್‌ರ ತಮ್ಮ ಉಮೇಂದ್ರ ಅಣ್ಣನ ಹೆಣ ಮನೆಗೆ ಬಂದಾಗ ಹೇಳಿದ ಮಾತಿದು. ಉತ್ತರಪ್ರದೇಶದ ಜೌನ್‌ಪುರದ ಭಕುರಾದಲ್ಲಿದ್ದಾರೆ. ರಾಜೇಶ್‌ರದ್ದು ಬಡ ಕುಟುಂಬ. ಜೀವನ ನಡೆಸುವುದಕ್ಕಾಗಿ ಇಬ್ಬರು ಮಕ್ಕಳು ಲಕನೌನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಡತನದ ನಡುವೆಯೂ ರಾಜೇಶ್ ಆಯ್ಕೆ ಮಾಡಿಕೊಂಡಿದ್ದು ಸೇನೆಯನ್ನು.

ಒಬ್ಬ ಯೋಧನಿಗೆ ಇರಬೇಕಾದ ದೃಢ ನಿರ್ಧಾರ ಎಂದರೆ ಇದು. ರಾಜೇಶ್ ಮದುವೆಯಾದ ಮೇಲೆ ಪತ್ನಿ ಜೂಲಿ ಮತ್ತು ಮಗ ರಿಶಾಂತ್ ಜತೆ ವಾರಾಣಸಿಯಲ್ಲಿದ್ದರು. ರಾಜೇಶ್ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ಅಖಿಲೇಶ್ ಯಾದವ್ ಸರಕಾರ ಯೋಧನ ಕುಟುಂಬಕ್ಕೆ 20ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ.

ಸಿಪಾಯಿ ಗಣೇಶ್ ಶಂಕರ್, 34ವರ್ಷ

ಸೋಮವಾರ ಬೆಳಗ್ಗೆ ಗಣೇಶ್ ಸಾವಿನ ಸುದ್ದಿ ಅವರ ಮನೆಯವರಿಗೆ ಬಂದಾಗ ಅವರು, ಗಣೇಶನ ತಂಗಿ ಇಂದ್ರಾವತಿಯ ಮದುವೆ ಮಾತುಕತೆ ಮಾಡುತ್ತಿದ್ದರು. ಅಷ್ಟು ಹೊತ್ತಿಗೇ ಬಂದಿದ್ದು ಅಣ್ಣನ ಸಾವಿನ ಸುದ್ದಿ.ಉತ್ತರ ಪ್ರದೇಶದ ಸಂತ ಕಬೀರ ನಗರದ ಗೂರಪಳ್ಳಿಯ ಗಣೇಶ್ ತಂಗಿಯ ಮದುವೆಯನ್ನು ಗೋರಖ್‌ಪುರದಲ್ಲಿ ಮಾಡಲು ಮತ್ತು ಏನೇನೆಲ್ಲ ಇರಬೇಕು ಎಂದು ಮಾತುಕತೆಗೆ ಮಾಡುತ್ತಿದ್ದರು.

ಹಳ್ಳಿಯವರು ಬಂದು ಸಾವಿನ ಸುದ್ದಿ ತಿಳಿಸಿದರು. ಮಾಧ್ಯಮದವರು ಮನೆಗೆ ಬಂದ ನಂತರವೇ ಸಾವಿನ ಸುದ್ದಿ ಖಚಿತವಾಗಿದ್ದು. ಕೇವಲ ಐದು ದಿನಗಳ ಹಿಂದಷ್ಟೇ ಗಣೇಶ್‌ಗೆ ಫೋನ್ ಮಾಡಿ ಮದುವೆಯ ವಿಷಯ ತಿಳಿಸಿದ್ದರು. ಅಕ್ಟೋಬರ್‌ನಲ್ಲಿ ಮದುವೆಗೆ ಬರುವುದಾಗ ಆಣೆಯೆಲ್ಲ ಮಾಡಿಸಿಕೊಂಡಿದ್ದರು. 10 ದಿನ ಮುಂಚೆಯೇ ಬರುತ್ತೇನೆಂದು ಆಣೆ ಮಾಡಿದ್ದ. ಬಂದಿದ್ದು ಹೆಣವಾಗಿ. ಮಗ ಬಂದಿದ್ದಕ್ಕೆ ಖುಷಿ ಪಡುವುದೋ? ಹೆಣ ನೋಡಿ ಅಳುವುದೋ? ಇಡೀ ಕುಟುಂಬದಲ್ಲಿ ದುಡಿಯುತ್ತಿದ್ದವನು ಗಣೇಶ್ ಮಾತ್ರ. ಈಗ ಕುಟುಂಬ ಬೀದಿ ಪಾಲು. ಹೆಂಡತಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ. 2003ರಲ್ಲಿ ಸೈನ್ಯಕ್ಕೆ ಸೇರಿದ ಗಣೇಶ್ ಆಗಸ್ಟ್ 22ರಂದಷ್ಟೇ ಉರಿಯಲ್ಲಿ ನಿಯೋಜಿತರಾಗಿದ್ದರು.

ಲ್ಯಾ.ನಾ ಆರ್.ಕೆ. ಯಾದವ್,

ಇವರ ಮನೆಯ ಸ್ಥಿತಿ ಹೇಗಿದೆಯೆಂದರೆ ಹೆಂಡತಿ 8 ತಿಂಗಳ ಗರ್ಭಿಣಿ,ಅಮ್ಮ ಹೃದ್ರೋಗಿ. ಇನ್ನು ಇವನ ತಮ್ಮ ರೈತ. ರಾಜೇಶ್ ಹುತಾತ್ಮನಾದ ವಿಚಾರ ಮೊದಲು ತಮ್ಮ ವಿಕೇಶ್ ಯಾದವ್‌ಗೆ ತಿಳಿಯಿತು. ಈ ವಿಚಾರ ಮನೆ ಯಲ್ಲಿರುವ ಇಬ್ಬರು ಹೆಂಗಸರಿಗೆ ತಿಳಿದರೆ ಅವರನ್ನೂ ಕಳೆದುಕೊಳ್ಳುವುದ ಖಚಿತ ಎಂದು, ಅವರಿಗೆ ತಿಳಿಯ ದಂತೆ ಮಾಡಬೇಕೆಂದು ಅವರಿಗೆ ವಿಷಯ ತಲುಪ ಬಹುದಾದ ಎಲ್ಲ ಮಾರ್ಗವನ್ನು ವಿಕೇಶ್ ಮತ್ತು ಊರಿನ ಜನರೇ ಮುಚ್ಚಿಹಾಕಿದರು. ಮಾಧ್ಯಮದವರು ಬಾರದಿರಲಿ ಎಂದು ಒಂದು ಕಿಮೀ ದೂರದಲ್ಲೇ ನಿರ್ಬಂಧ ಹೇರಲಾಗಿತ್ತು.

ಆದರೂ ಅವರೆಲ್ಲ ಬೇರೆ ದಾರಿಯಿಂದ ಬಂದು ಮನೆಗೆ ವಿಷಯ ತಿಳಿಸಿ ಮಾತನಾಡಿಸಲು ಮುಂದಾದರು. ವಿಷಯ ತಿಳಿಯುತ್ತಿದ್ದಂತೆ ಅವನ ಹೆಂಡತಿ ಕುಸಿದು ಬಿದ್ದಳು. ವಿಕೇಶ್ ಅಷ್ಟೊತ್ತಿಗಾಗಲೇ ವೈದ್ಯ ರನ್ನು ಕರೆತಂದಿದ್ದ. ರಾಜೇಶ್ 18 ವರ್ಷಗಳಿಂದ ಸೇನೆಯಲ್ಲಿದ್ದರು. ಆದರೆ ಕಾಶ್ಮೀರಕ್ಕೆ ಕೇವಲ 20 ದಿನಗಳ ಹಿಂದಷ್ಟೇ ಹೋಗಿದ್ದರು.

ಸಿಪಾಯಿ ಗಂಗಾಧರ್ ದಾಲಾಯ್, 23ವರ್ಷ

ಇನ್ನೂ ಕಾಲೇಜಿನ ಮೊದಲ ವರ್ಷದಲ್ಲಿದ್ದ… ಎಲ್ಲರಿಗೂ ಒಂದೊಂದು ಶೋಕಿಯಾದರೆ ಬಂಗಾಳದ ಹೌರಾದ ಜಮುನಾ ಬಲಾಯ್ ಹಳ್ಳಿಯ ಗಂಗಾಧರ್‌ಗೆ ಮತ್ತೊಂದು ಶೋಕಿ. ಸೈನ್ಯಕ್ಕೆ ಸೇರುವುದು. ಸ್ನೇಹಿತರು ಅವನನ್ನು ಎಷ್ಟೇ ಮನಪರಿವರ್ತಿಸಲೂ ಹುಡುಗ ಭಾರತವನ್ನು ಬಿಟ್ಟು ಯಾವ ಮೋಹಕ್ಕೂ ಒಳಗಾಗಲಿಲ್ಲ. ‘ಅವನು ಹುಚ್ಚಾ ಸಾರ್… ಸ್ಪೋರ್ಟ್ಸ್ ಕೋಟಾದ ಮೇಲೆ ಸೇನೆಯಲ್ಲಿ ಚಾನ್ಸ್ ಸಿಕ್ಕಿತು. ಅಷ್ಟಕ್ಕೇ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಜಿಗಿದೇ ಬಿಟ್ಟ.

ಸೇನೆಗೆ ಹೋಗುವಾಗ ಆತನಿಗೆ ನಮ್ಮನ್ನು ಮತ್ತು ಮನೆಯವರನ್ನು ಕಳೆದುಕೊಳ್ಲುತ್ತಿದ್ದೇನಲ್ಲಾ ಎಂಬ ಒಂದು ಸಣ್ಣ ಬೇಜಾರೂ ಇರಲಿಲ್ಲ. ಟ್ರಿಪ್‌ಗೆ ಹೋಗುವ ಹಾಗೇ ಟಾಟಾ ಮಾಡ್ತಾ, ಖುಷಿಯಾಗಿ ಹೋಗಿದ್ದು ಇನ್ನೂ ನೆನಪಿದೆ…. ಈ ನೋಡಿ ಸಾರ್ ಹೆಂಗ್ ಬಂದಿದ್ದಾನೆ ಅಂತ…?!’ ಪತ್ರಕರ್ತ ಮೌನವಾಗಿದ್ದ…. ಅವನೂ ಗದ್ಗದಿತನಾಗಿದ್ದ.ಇಂಥ ಯೋಧರ ಬಗ್ಗೆ ಹೇಸಿಗೆಯಂಥ ಮಾತಾಡುತ್ತಾ ಕಾಲ ಕಳೆಯುವ ಮಂದಿಗೆ ಇವರ ನೋವುಗಳ ಬಗ್ಗೆ ನಯಾ ಪೈಸೆ ಗೊತ್ತಿಲ್ಲ. ಲಂಚ ಕೊಟ್ಟು ಸೈನ್ಯ ಸೇರಿ ಪ್ರಾಣ ಬಿಡುವ ದರ್ದು ಯಾವನಿಗಿದೆ? ಬಡತನದಿಂದ ಸೈನ್ಯಕ್ಕೆ ಸೇರುತ್ತಾರೆ ಎನ್ನುವ ಎಷ್ಟು ಮಂದಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳಿಸಿದ್ದಾರೆ? ಇದ್ಯಾವುದಕ್ಕೂ ಉತ್ತರವಿಲ್ಲ.

ಕಾರಣ ಗೊತ್ತಾ? ಮನೆಯಲ್ಲಿ, ಮಿಣ ಮಿಣ ಲೈಟಿನ ಮುಂದೆ ಮೇಕಪ್ ಹಾಕಿ ಟಿವಿ ಮುಂದೆ ಮಾತಾಡುವುದು ಸುಲಭ, ಸಾರ್ವಜನಿಕ ಸಭೆಯಲ್ಲಿ ಮಾತಾಡಿ ಚಪ್ಪಾಳೆ ಗಿಟ್ಟಿಸುವುದೂ ಸುಲಭ. ಆದರೆ, ಎದುರಿನಿಂದ ಗುಂಡು ಬರುತ್ತಿದ್ದರೂ ‘ವಂದೇ ಮಾತರಂ’ ಎಂದು ಎದೆಯೊಡ್ಡಿ ಸೆಣೆಸಾಡುವುದು ಮಾತಾಡಿದ ಹಾಗಲ್ಲ. ಭಾರತ ಮಾತೆಯ ಪುತ್ರನಿಗೆ ಮಾತ್ರ ಸಾಧ್ಯ.

ಇಂಥ ಕುಟುಂಬಗಳು ಕಷ್ಟದಲ್ಲಿರುವುದನ್ನು ನೋಡಲು ಬಹಳವೇ ದುಃಖಕರ ನಾವು ದಿನಕ್ಕೆ ಒಂದು ರುಪಾಯಾದರೂ ಕೂಡಿಟ್ಟು ವರ್ಷಕ್ಕೆ 365 ರುಪಾಯಿಯನ್ನು ಅವರಿಗೆ ಕೊಟ್ಟರೆ? ಅವರ ಕುಟುಂಬದ ಮುಖದಲ್ಲೂ ನಗೆ ಕಾಣಬಹುದಲ್ಲವಾ? ನಿಮ್ಮ ಶಕ್ತ್ಯಾನುಸಾರ ಸಹಾಯ ಮಾಡಿ. ನಿಮ್ಮ ಹಣ ನೇರವಾಗಿ ಯೋಧರ ಕುಟುಂಬಗಳಿಗೆ ಹೋಗುತ್ತದೆ.

BANK : SYNDICATE BANKBRANCH : SOUTH EXTEN-SION, NEW DELHI.A/C NAME : ARMY WELFARE FUND BATTLE CASUALTIESA/C NO : 90552010165915IFSC CODE : SYNB0009055 ಸಹಾಯ ಮಾಡಿ! 

ನಾವಂತೂ ಯೋಧರಾಗಲಿಲ್ಲ. ಅವರಿಗೆ ಸಹಾಯ ಮಾಡಿಯಾದರೂ ನಾವು ಭಾರತದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕ ಮಾಡಿಕೊಳ್ಳೋಣ.

* ಚಿರಂಜೀವಿ ಭಟ್

“ಯೋಧರ ಹೆಣದ ಮುಂದೆ ರಣಹದ್ದುಗಳು!”

$
0
0

rahul-759ಸುಬೇದಾರ್ ರಾಮ್ ಕಿಶನ್ ಗ್ರೆವಾಲ್. ಈ ಮಾಜಿ ಯೋಧ ತನಗೆ ಬಂದ ಪೆನ್ಶನ್‌ನಲ್ಲಿ 5 ಸಾವಿರ ರುಪಾಯಿ ಕಡಿಮೆ ಇತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಎಂಬ ಹೆಡ್‌ಲೈನ್ ಓದಿದರೆ ನಿಮಗೇನನಿಸುತ್ತೆ? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ದೇಶಕ್ಕಾಗಿ ಪ್ರಾಾಣ ಕೊಡಲು ಸಿದ್ಧನಿದ್ದ ಯೋಧ, ತನಗೆ ಬರುವ ಮಾಸಾಶನದಲ್ಲಿ , ಒಂದೇ ಒಂದು ತಿಂಗಳು ಕೇವಲ ಐದು ಸಾವಿರ ರುಪಾಯಿ ಮಾತ್ರ ಕಡಿಮೆ ಜಮಾ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ? ಸಾರ್ವಜನಿಕರಿಗೆ ಯಾರಿಗೇ ಈ ಪ್ರಶ್ನೆ ಕೇಳಿದರೂ ಛೆ ಛೇ ಇಲ್ಲವೇ ಇಲ್ಲ ಎನ್ನುತ್ತಾರೆ. ಆದರೆ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್‌ರಿಗೆ ಇದೇ ಪ್ರಶ್ನೆ ಕೇಳಿದರೆ ಹೌದು ಎನ್ನುತ್ತಾರೆ. ದೊಡ್ಡ ರಂಪಾಟವನ್ನೇ ಮಾಡುತ್ತಾರೆ.

ಮೋದಿ ರಾಜೀನಾಮೆ ನೀಡಬೇಕು ಎನ್ನುವಲ್ಲಿಯ ತನಕವೂ ತೆಗೆದುಕೊಂಡು ಹೋಗುತ್ತಾರೆ. ಒಟ್ಟಾರೆ ಇವರಿಗೆ ಬೇಕಾಗಿರುವುದು ಮೋದಿ ರಾಜೀನಾಮೆಯೇ ಹೊರತು ಯೋಧ ಯಾರ ಬಳಿ ಹೋರಾಡಿ ಸತ್ತರೆ ಇವರಿಗೇನು? ರಾಮ್ ಕಿಶನ್ ಯಾಕಾಗಿ ಆತ್ಮಹತ್ಯೆಮಾಡಿಕೊಂಡಿರಬಹುದು ಎಂಬುದನ್ನೂ ಆಲೋಚಿಸದೇ ಪಕ್ಷದ ಕಾರ್ಯಾಲಯದಲ್ಲಿ ಬಿದ್ದಿದ್ದ ಧೂಳು ಹಿಡಿದ ಪಕ್ಷದ ಧ್ವಜವನ್ನು ಸಾವಿನ ಮನೆಗೇ ತಂದು ಹಾರಾಡಿಸುತ್ತಾರೆ. ತಮ್ಮ ಪಕ್ಷದ ನಾಯಕರಿಗೆ ಜೈಕಾರ.

ಯೋಧನ ಕುಟುಂಬ ಮಾತ್ರ ಅಳುತ್ತಿರಬೇಕೇ ಹೊರತು ಕಣ್ಣೊರೆಸುವ ಯಾವ ತಕರಾರಿಗೂ ಹೋಗುವುದಿಲ್ಲ. ಅಸಲಿಗೆ ಹುತಾತ್ಮನಾದ ಯೋಧ ಯಾರು ಎಂದೇ ಗೊತ್ತಿರುವುದಿಲ್ಲ. ಇಂಥ ಘಟನೆ ನಡೆದಿದ್ದು ಆತ್ಮಹತ್ಯೆ ರಾಮ್ ಕಿಶನ್ ಹೆಣದ ಮುಂದೆಯೇ. ಇದಕ್ಕೆ ಒಂದೊಂದೇ ಉದಾಹರಣೆ ಕೊಡುತ್ತೇನೆ ಕೇಳಿ, ಮೃತ ಮಾಜಿ ಯೋಧನ ಕುಟುಂಬ ಪ್ರತಿಭಟನೆ ಮಾಡಿದ್ದಕ್ಕೆ ದೆಹಲಿ ಪೊಲೀಸರು ಅವರನ್ನು ಠಾಣೆಯಲ್ಲಿ ಕೂರಿಸಿದ್ದರು. ರಾಹುಲ್ ಗಾಂಧಿ ಆ ಠಾಣೆಗೆ ಮೊನ್ನೆ ಹೋಗಿ ಪೊಲೀಸನ ಬಳಿ ಮಾತಾಡಿದ್ದ ರೀತಿ ನೋಡಿದರೆ, ಅವರದ್ದು ಬರೀ ನಾಟಕ ಎಂದು ಗೊತ್ತಾಗುವಂತಿತ್ತು.

ಪೊಲೀಸರಿಗೆ ಬಯ್ದು ತಾನು ಒಳ್ಳೆಯವನಾಗುವ ಅಬ್ಬರದಲ್ಲಿ, ಏನೇನೋ ಮಾತಾಡಿ ಅಪಹಾಸ್ಯಕ್ಕೀಡಾಗಿದ್ದರು. ರಾಹುಲ್ ಗಾಂಧಿ ಪೊಲೀಸರಿಗೆ ಬಯ್ಯುತ್ತಾ: ಏನ್ರೀ ಕೆಲಸ ಮಾಡ್ತಾ ಇದ್ದೀರ? ನೋಡ್ರೀ, ದೇಶಕ್ಕಾಗಿ ಪ್ರಾಾಣ ಕೊಟ್ಟಿದ್ದಾರೆ ಇವರ ಮಗ, ಇವರನ್ನು ಅರೆಸ್‌ಟ್‌ ಮಾಡುತ್ತಿದ್ದೀರಾ ನಾಚಿಕೆಯಾಗಲ್ವಾ? ಅಲ್ಲೇ ಇದ್ದ ಯೋಧನ ಕುಟುಂಬ: ಸಾರ್ ಪ್ರಾಣ ಕೊಟ್ಟವರು ನನ್ನ ತಂದೆ… ರಾಹುಲ್: ನೋಡಿ, ದೇಶಕ್ಕಾಗಿ ಪ್ರಾಣ ಕೊಟ್ಟ ಮಗನ ಕುಟುಂಬ ನೊಡಿ… ರಿಲೀಸ್ ಮಾಡಿ ಅವ್ರನ್ನ! ಇಲ್ಲಿ, ಯೋಧರ ಕುಟುಂಬಕ್ಕೆ ಏನಾಗ್ತಿದೆ ಎಂದೇ ಗೊತ್ತಾಗುತ್ತಿಲ್ಲ.

ಎಲ್ಲ ರಾಹುಲ್‌ರೇ ಮಾತನಾಡುತ್ತಾ ಇದ್ದಾರೆ ಎಂದು ಸುಮ್ಮನಾದರು. ಕೊನೆಗೆ ಯೋಧರ ಕುಟುಂಬವನ್ನು ಬಿಡುಗಡೆ ಮಾಡಿದ ಬಳಿಕವೂ ಇನ್ನೂ ಹೆಚ್ಚಿನ ಮೈಲೇಜ್ ಬೇಕು ಎಂದು ಹೊರಗೆ ಬಂದು, ಮೋದಿ ಸರಕಾರ ಯೋಧರ ಕುಟುಂಬದ ಕ್ಷಮೆ ಕೇಳಬೇಕು ಎಂದು ಹೊರಗೆ ಧರಣಿ ಕುಳಿತಾಗ ಅವರನ್ನು ರಾಹುಲ್‌ರನ್ನು ಬಂಧಿಸುತ್ತಾರೆ. ರಾಹುಲ್ ಗಾಂಧಿಯ ಈ ಶೌರ್ಯ ಮೆಚ್ಚಿ ಅವರೇ ಕರೆದುಕೊಂಡು ಬಂದಿದ್ದ ಅವರ ಕಾರ್ಯಕರ್ತರು ರಾಹುಲ್ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ.

ಸ್ವಾಮಿ ರಾಹುಲ್ ಗಾಂಧಿ ಬಂದಿರುವುದು ಯೋಧನ ಕುಟುಂಬವನ್ನು ಸಮಾಧಾನ ಮಾಡುವುದಕ್ಕೋ ಅಥವಾ ಜಿಂದಾಬಾದ್ ಕೂಗಿಸಿಕೊಳ್ಳುವುದಕ್ಕೋ? ಇದಕ್ಕೂ ಮುಂಚೆ ರಾಮ್ ಕಿಶನ್ ಅವರ ಹೆಣ ನೋಡಿ ಕೊಂಡು ಬರಲು ರಾಹುಲ್ ಗಾಂಧಿ ಆಸ್ಪತ್ರೆಗೆ ಹೋಗಿದ್ದರು. ಒಬ್ಬ ರಾಜಕಾರಣಿ ಬರುತ್ತಿದ್ದಾನೆ ಎಂದರೆ, ಪೊಲೀಸರು ಮುಂಚೆಯೇ ಆಸ್ಪತ್ರೆಯೊಳಗೆ ಹೊಗಲು ವ್ಯವಸ್ಥೆ ಮಾಡಿಯೇ ಮಾಡಿರುತ್ತಾರೆ. ಆದರೆ, ರಾಹುಲ್ ಗಾಂಧಿಯ ನಾಟಕ ಹೇಗಿತ್ತು ನೋಡಿ, ಸುತ್ತಮುತ್ತ ಪೊಲೀಸರು, ಗಾರ್ಡ್‌ಗಳನ್ನಿಟ್ಟುಕೊಂಡು ಆಸ್ಪತ್ರೆಯ ಗೇಟ್ ಬಳಿ ಬಂದು, ದಯವಿಟ್ಟು ನನ್ನನ್ನು ಯೋಧರ ಕುಟುಂಬವನ್ನು ನೋಡಲು ಒಳಗೆ ಬಿಡಿ, ರಾಮ್ ಕಿಶನ್ ಅವರ ಹೆಣ ನೋಡಲು ಅವಕಾಶ ಮಾಡಿಕೊಡಿ ಎಂದು ಅಲ್ಲಿದ್ದ ವಾಚ್‌ಮನ್ ಮತ್ತು ಮೂರ್ನಾಲ್ಕು ಪೇದೆಗಳನ್ನು ಕೇಳುತ್ತಾರೆ ಎಂದರೆ, ಏನ್ ದಂಧೆ ಮಾಡುತ್ತಿದ್ದೀರಿ ರಾಹುಲ್ ಗಾಂಧಿಯವರೇ? ಯೋಧರ ರಕ್ತದಲ್ಲಿ ದಲ್ಲಾಳಿಗಳ್ಯಾರು ಈಗ? ಒಳಗೆ ಹೋಗುವ ಅವಕಾಶ ಇದ್ದರೂ ಇಂಥ ಡ್ರಾಮಾ ಬೇಕಾಗಿತ್ತಾ? ರಾಹುಲ್ ಒಳಗೆ ಹೋದಮೇಲಂತೂ ಇತ್ತ ಕಾರ್ಯಕರ್ತರು ಕಾಂಗ್ರೆಸ್ ಧ್ವಜ ಹಿಡಿದು ಸ್ವಚ್ಛಂದವಾಗಿ ಬೀಸುತ್ತಾ, ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದರು.

ಇನ್ನು ಆಸ್ಪತ್ರೆಗೆ ಹೋಗುವಾಗಲೂ ಮತ್ತು ವಾಪಸ್ ಬರುವಾಗಲೂ ರಾಹುಲ್ ಏನೋ ಜೋಕು ಕೇಳಿ ನಗುತ್ತಾ ಬರುವಂತೆ ಬಂದರು. ಹೆಣ ನೋಡಲು ಹೋದವನು, ಕುಟುಂಬವನ್ನು ಸಮಾಧಾನ ಮಾಡಲು ಹೋದವನು ನಗುತ್ತಾ ಹೊರ ಬರುತ್ತಾನೆಂದರೆ ಆ ಮನುಷ್ಯನಿಗೆ ಒಂಚೂರಾದ್ರೂ ಸೀರಿಯಸ್‌ನೆಸ್ ಇದೆ ಎಂದು ಯಾರಾದ್ರೂ ಹೇಳುತ್ತಾರಾ? ಸತ್ತಿರುವುದು ಯೋಧ ಸ್ವಾಮಿ, ಯಾವನೋ ಪುಡಿ ರಾಜಕಾರಣಿ ಅಲ್ಲ. ಹೆಣದ ಮುಂದೆಯೂ ನನಗೆಷ್ಟು ವೋಟು ಬರಬಹುದು ಎಂದು ಲೆಕ್ಕಾಚಾರ ಹಾಕುತ್ತಾರಲ್ಲ, ಮನುಷ್ಯತ್ವ ಎನ್ನುವುದು ಒಂಚೂರಾದ್ರೂ ಇದೆಯಾ? ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳಲೆತ್ನಿಸುತ್ತಿರುವ ಇನ್ನೊಬ್ಬ ಮಹಾನುಭಾವ ಅರವಿಂದ್ ಕೇಜ್ರಿವಾಲ್. ಸ್ವಲ್ಪ ದಿನಗಳ ಹಿಂದೆ ಒಂದು ಸರ್ಜಿಕಲ್ ದಾಳಿ ಆಗಿತ್ತು. ಆಗ ಸುಮ್ಮನಿದ್ದ ಕೇಜ್ರಿವಾಲ್ ಏಕಾಏಕಿ ಸರ್ಜಿಕಲ್ ದಾಳಿ ನಡೆದಿದೆಯೋ ಇಲ್ಲವೂ ಎನ್ನುವುದಕ್ಕೆ ವಿಡಿಯೊ ಸಾಕ್ಷ್ಯ ಬೇಕು ಎಂದಿದ್ದರು.

ಇಲ್ಲವಾದರೆ ಇದನ್ನು ನಂಬಲು ಕಷ್ಟವಾಗುತ್ತದೆ ಎಂದಾಗ, ಕೇಜ್ರಿವಾಲ್ ಪಾಕಿಸ್ತಾನದ ಪತ್ರಿಕೆಗಳಲ್ಲಿ ಹೀರೋ ಆಗಿದ್ದರು. ಆಗ ನೆನಪಾಗಲಿಲ್ಲ ನಮ್ಮ ಯೋಧರ ಕಷ್ಟ ಕೇಜ್ರಿವಾಲ್‌ಗೆ. ಇದಕ್ಕೂ ಹಿಂದೆ ಉರಿಯಲ್ಲಿರುವ ನಮ್ಮ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ಮಾಡಿದಾಗ 18 ಯೋಧರು ಹುತಾತ್ಮರಾಗಿದ್ದರು. ಆಗ ಕೇಜ್ರಿವಾಲ್‌ಗೆ ಮಾತಾಡುವುದಕ್ಕೆ ಬಾಯಿ ಇರಲಿಲ್ಲ. ಆದರೆ, ಈಗ ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಯೋಧನ ಪರ ಒಲವೋ ಒಲವು. ಎಲ್ಲಿಂದ ಬಂತು ಈ ಒಲವು. ಇಂಥ ಸಾವಿನ ಸಂದರ್ಭದಲ್ಲೂ ಕೇಜ್ರಿವಾಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳುತ್ತಾರೆ, ‘ನೀವು ಇಂಥ ಹತ್ತು ಸರ್ಜಿಕಲ್ ದಾಳಿ ನಡೆಸಿ, ಆದರೆ ಯೋಧರನ್ನು ಮರೆಯಬಾರದು’ ಎಂದು.

ಆದರೆ ನನ್ನ ಪ್ರಶ್ನೆಯೇನೆಂದರೆ, ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್‌ಗೂ ಸರ್ಜಿಕಲ್ ದಾಳಿಗೂ ಏನು ಸಂಬಂಧ? ಸರ್ಜಿಕಲ್ ದಾಳಿ ಎಂದರೆ ಸಾಕು ತಮ್ಮ ಬಾಂಧವರ ಮೇಲೇ ದಾಳಿ ಮಾಡಿದರೇನೋ ಎಂಬಂತೆ ಚಿಂತಾಕ್ರಾಂತರಾಗಿದ್ದ ಕೇಜ್ರಿವಾಲ್ ಈ ಸರ್ಜಿಕಲ್ ದಾಳಿಯ ಬಗ್ಗೆಯೇ ಮಾತಾಡುತ್ತಿದ್ದಾರೆಂದರೆ, ಇನ್ನು ರಾಮ್ ಕಿಶನ್‌ನ ಕುಟುಂಬಕ್ಕೆ ಕೇಜ್ರಿವಾಲ್ ಒಂದು ಕೋಟಿ ರುಪಾಯಿ ಪರಿಹಾರ ಕೊಡುತ್ತೇನೆ ಎಂದು ಘೋಷಿಸಿದ್ದಾರೆ.

ಇದು ಸಂತೋಷವೇ ಆದರೆ, ಇಪ್ಪತ್ತು ದಿನಗಳ ಹಿಂದೆ ಗೋರ್ಖ ರೈಫಲ್ಸ್ ನ ಬಿಮಾಲ್ ತಮಂಗ್ ಎಂಬ ಯೋಧ ಲೈನ್ ಆಫ್ ಕಂಟ್ರೋಲ್‌ನಲ್ಲಿ ಯೋಧರ ಗುಂಡಿಗೆ ಬಲಿಯಾದ. ಅವನಿಗೆಷ್ಟು ಕೋಟಿ ಕೊಟ್ಟರು ಕೇಜ್ರಿ? ಯಾವುದೂ ಬೇಡ ಇದೇ ಪಕ್ಷದ ಧರಣಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಜಸ್ಥಾನದ ರೈತ ಗಜೇಂದ್ರ ಸಿಂಗ್ ರಜಪೂತ್ ಅವರ ಕುಟುಂಬಕ್ಕೆ ಕೇಜ್ರಿ ಎಷ್ಟು ಪರಿಹಾರ ದಯಪಾಲಿಸಿದ್ದಾರೆ? ‘ನಿಮ್ಮ ಪಕ್ಷದವರಿಂದಲೇ ನನ್ನ ಮೇಲೆ ಲೈಂಗಿಕ ಕರುಕುಳ ಆಗುತ್ತಿದೆ ಏನಾದರೂ ಮಾಡಿ’ ಎಂದು ಇವರ ಪಕ್ಷದ ಕಾರ್ಯಕರ್ತೆಯೇ ಅಂಗಲಾಚಿ ದಳು, ಆಗ ಕೇಜ್ರಿ ‘ಅಡ್ಜಸ್ಟ್ ಮಾಡ್ಕೊಳಮ್ಮಾ’ ಎಂದರು ಎಂದು ಆಕೆ ಬರೆದು ಆತ್ಮಹತ್ಯೆ ಮಾಡಿಕೊಂಡಳಲ್ಲ.

ಅವರ ಮನೆಗೆ ಎಷ್ಟು ಕೋಟಿ ಕೊಟ್ಟಿದ್ದಾರೆ? ಪಠಾಣ್‌ಕೋಟ್ ಮತ್ತು ಉರಿ ದಾಳಿಯಲ್ಲಿ ಹುತಾತ್ಮರಾದ ಅಷ್ಟೂ ಯೋಧರಿಗೆ ಒಂದೇ ಒಂದು ಕೋಟಿ ಕೊಟ್ಟಿದ್ದರೂ, ಒಂದು ಕುಟುಂಬಕ್ಕೆ ತಲಾ ಐದು ಲಕ್ಷವಾದರೂ ಬರುತ್ತಿತ್ತು. ಆದರೆ ಅವರಿಗೆ ನಯಾ ಪೈಸೆ ಕೊಟ್ಟಿಲ್ಲ! ಕಾರಣ, ಅವರಿಂದ ತಮ್ಮ ಪಕ್ಷಕ್ಕೆ ರಾಜಕೀಯವಾಗಿ ಏನು ಉಪಯೋಗವಿಲ್ಲವಲ್ಲ? ಯಾಕೆ ಕೊಡಬೇಕು ಹೇಳಿ? ಬದಲಿಗೆ ಯೋಧರ ಕಾರ್ಯಕ್ಷಮತೆಯ ಬಗ್ಗೆಯೇ ಪ್ರಶ್ನೆ, ಹೋರಾಟ ಮಾಡಿರುವುದಕ್ಕೆ ವಿಡಿಯೊ ಸಾಕ್ಷ್ಯ ಬೇರೆ ಬೇಕು!

ಸ್ವಾಮಿ, ‘ನಮ್ಮದು ಬಡ ಪಕ್ಷ, ಬಡ ಪಕ್ಷ’ ಎಂದು ಜನರಿಂದಲೇ ಚಂದಾ ಎತ್ತಿ, ಹೆಣದ ಮೇಲೆ ಹಣ ಇಟ್ಟು ರಾಜಕೀಯ ಮಾಡುವ ಸ್ಥಿತಿಗೆ ತಂದುಬಿಟ್ಟರಲ್ಲಾ ನಿಮ್ಮ ಪಕ್ಷವನ್ನು ಕೇಜ್ರಿವಾಲ್? ಸಾವಿರಾರು ಯೋಧರ ಹೆಣ ಬಿತ್ತು. ಪ್ರತೀ ಸಲ ಪಾಕ್ ಭಾರತದ ಮೇಲೆ ಅಪ್ರಚೋದಿತ ದಾಳಿ ಮತ್ತು ಉಗ್ರರರನ್ನು ಬಿಟ್ಟು ನಮ್ಮ ಸೇನೆಯ ವಿರುದ್ಧ ದಾಳಿ ಮಾಡಿದಾಗಲೂ ಸಾಲು ಸಾಲು ಯೋಧರ ಹೆಣ ಬಿತ್ತು. ಕೆಲ ಕುಟುಂಬಗಳು ಬೀದಿಗೆ ಬಂತು. ಆದರೆ ಸುಬೇದಾರ್ ರಾಮ್ ಕಿಶನ್ ಗ್ರೆವಾಲ್ ಎಂಬ ಯೋಧನ ಹೆಣ ಬೀಳುವ ತನಕ ಈ ಎರಡೂ ಪಕ್ಷದ
ರಾಜಕಾರಣಿಗಳು ಕಣ್ಣು, ಮೂಗು, ಬಾಯಿ ಬಂದ್ ಮಾಡಿ ಕುಳಿತಿದ್ದರು.

ಇಪ್ಪತ್ನಾಲ್ಕು ಗಂಟೆಗಳ ಹಿಂದೆ ಯೋಧರ ಒನ್ ರ್ಯಾಕ್ ಒನ್ ಪೆನ್ಶನ್ ಎಂಬುದರ ಬಗ್ಗೆ ಯಾವ ರಾಹುಲ್
ಗಾಂಧಿಯೂ ನಯಾ ಪೈಸೆ ತಲೆ ಕೆಡಿಸಿಕೊಂಡಿರಲಿಲ್ಲ, ಅರವಿಂದ್ ಕೇಜ್ರಿವಾಲ್‌ರೂ ಕ್ಯಾರೆ ಎಂದಿರಲ್ಲಿಲ್ಲ. ಈಗ ಏಕಾಏಕಿ ಸಿಡಿದೇಳುತ್ತಿದ್ದಾರೆ ಎಂದರೆ, ಹೇಸಿಗೆ ರಾಜಕಾರಣವನ್ನು ಹೆಣದ ಮುಂದೆಯೂ ಶುರು ಮಾಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು.

ನಮಗೆ ಒನ್ ರ್ಯಾಂಕ್ ಒನ್ ಪೆನ್ಶನ್ ಕೊಡಿ, ತಾರತಮ್ಯ ಮಾಡಬೇಡಿ ಎಂದು ಯೋಧರು ಮೊದಲು ಬೇಡಿಕೆ ಇಟ್ಟಿದ್ದು 1973ರಲ್ಲಿ. ಅದೂ ಇಂದಿರಾ ಗಾಂಧಿಯ ಬಳಿ. ಅವತ್ತಿಂದ ಮೋದಿ ಸರಕಾರ ಬರುವವರೆಗೂ ಹೋರಾಟ ಮಾಡುತ್ತಲೇ ಇದ್ದಾರೆ ಆದರೆ ಒನ್ ರ್ಯಾಂಕ್ ಒನ್ ಪೆನ್ಶನ್ ಸಿಗಲಿಲ್ಲ. ಅಂದು ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ, ಈ ಬೇಡಿಕೆಯೇ ಅಸಿಂಧು ಎಂದು ಹೇಳಿ ಯೋಧರನ್ನು ಉಗಿದು ಹೊರಗಟ್ಟಿದ್ದರು. ಆದರೆ ರಾಹುಲ್, ಈಗ ಒನ್ ರ್ಯಾಂಕ್ ಒನ್ ಪೆನ್ಶನ್ ಬಗ್ಗೆ ಯೋಧರಿಗೆ ಸಿಗುತ್ತಿಲ್ಲ ಎಂದು ಧ್ವನಿಯೆತ್ತುತ್ತಿದ್ದಾರೆ. ರಾಹುಲ್ ಗಾಂಧಿಗೆ ಮತ್ತು ಕೇಜ್ರಿವಾಲ್‌ಗೆ 43 ವರ್ಷ ಸಮಯ ಇತ್ತಲ್ಲ ಹೋರಾಟ ಮಾಡುವುದಕ್ಕೆ?! ಆಗೇಕೆ ಏನೂ ಮಾಡಲಿಲ್ಲ? ಸರಿ, ಇಂದಿರಾ ಗಾಂಧಿ ಸಮಯದಲ್ಲಿ ರಾಹುಲ್ ಗಾಂಧಿ ಆಗ ಅಪ್ರಬುದ್ಧ ಬಾಲಕನಾಗಿದ್ದ ಹಾಗಾಗಿ ಯೋಧರ ಪೆನ್ಶನ್ ಬಗ್ಗೆ ಮಾತಾಡಿಲ್ಲ ಎಂದುಕೊಳ್ಳೋಣ. 2008ರಲ್ಲಿ ಯೋಧರು ಪೆನ್ಶನ್‌ಗಾಗಿ ಪಥಸಂಚಲನ ಮಾಡಿ ಪ್ರತಿಭಟಿಸಿದರಲ್ಲ? ಆಗ ಎಲ್ಲಿ ಹೋಗಿದ್ದರು ರಾಹುಲ್? 2012ರಲ್ಲಿ ಒನ್ ರ್ಯಾಾಂಕ್ ಒನ್ ಪೆನ್ಶನ್ ಕೊಡ್ತೀವಿ ಎಂದು 2014ರಲ್ಲಿ ಕೊಡಕ್ಕಾಗಲ್ಲ ಎಂದು ಕಿವಿ ಮೇಲೆ ಹೂವಿಟ್ಟರಲ್ಲ? ಅದರ ಬಗ್ಗೆ ರಾಹುಲ್ ಮತ್ತು ಕೇಜ್ರಿ ಏನಂತಾರೆ? ಮಾತಿದೆಯಾ? ಆತ್ಮಹತ್ಯೆ ಮಾಡಿಕೊಂಡ ರಾಮ್ ಕಿಶನ್ ಗ್ರೆವಾಲ್‌ಗೆ ಕಾಂಗ್ರೆಸ್ ಸರಕಾರ ಇದ್ದಾಾಗ ಬರುತ್ತಿದ್ದ ಪೆನ್ಶನ್ 13 ಸಾವಿರ ರುಪಾಯಿ.

ಒನ್ ರ್ಯಾಂಕ್ ಒನ್ ಪೆನ್ಶನ್ ತಂದ ಮೇಲೆ ಬರುತ್ತಿದ್ದ ಹಣ 28,000 ರುಪಾಯಿ. ಆದರೆ ಈ ಬಾರಿ ಬ್ಯಾಂಕ್‌ನವರ ಕ್ಲೆರಿಕಲ್ ತಪ್ಪಿನಿಂದಾಗಿ 23,000 ರುಪಾಯಿ ಜಮಾ ಆಗಿದೆ. ಅಂದರೆ ಮೊದಲಿಗಿಂತಲೂ ಹತ್ತು ಸಾವಿರ ರುಪಾಯಿ ಹೆಚ್ಚೇ ಬಂದಿದೆ. ಕೇವಲ ಐದು ಸಾವಿರ ರುಪಾಯಿ, ಅದೂ ಕೇವಲ ಒಂದು ತಿಂಗಳು ಬಂದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಅವರೇನು ಹತ್ತನೇ ಕ್ಲಾಸ್ ಫೇಲಾದಾಗ ಆತ್ಮಹತ್ಯೆ ಮಾಡಿಕೊಳ್ಳುವ ಬಾಲಕರೇ ರಾಹುಲ್!? ಒನ್ ರ್ಯಾಕ್ ಒನ್ ಪೆನ್ಶನ್ ತಂದ ಮೇಲೆ ಎಲ್ಲ ಯೋಧರಿಗೂ ಮತ್ತು ಸಾರ್ವಜನಿಕರಿಗೂ ಬಹಳವೇ ಖುಷಿಯಾಗಿದ್ದು, ಮುಂದಿನ ಸಲ ಚುನಾವಣೆಯಲ್ಲಿ ಮೋದಿಗೆ ಇದೂ ಪ್ಲಸ್ ಆಗುತ್ತದೆ ಎಂದು ಮೊದಲಿಗೆ ಈ ಪೆನ್ಶನ್ ಯೋಜನೆ ಕಾಂಗ್ರೆಸ್ಸೇ ರೂಪಿಸಿ, ಜಾರಿಗೊಳಿಸುವುದರಲ್ಲಿತ್ತು ಎಂದರು. ಅದು ಸಫಲವಾಗಲಿಲ್ಲ.

ಪಠಾಣ್‌ಕೋಟ್ ದಾಳಿ ಮತ್ತು ಉರಿ ದಾಳಿಯ ನಂತರವಂತೂ ಯೋಧರಿಗೆ ಬಹಳಷ್ಟು ಮಹತ್ವ ಕೊಡಲಾಯಿತು. ಹೆಚ್ಚು ಸ್ವಾತಂತ್ರ್ಯ ಕೊಡಲಾಯಿತು. ಆಗ ಜನರು ಮೋದಿಯನ್ನು ಕೊಂಡಾಡಿದರು. ಇದನ್ನೆಲ್ಲ ನೋಡಿಯೂ ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದರು ರಾಹುಲ್ ಮತ್ತು ಕೇಜ್ರಿ. ಈಗ ಇದೊಂದು ವಿಷಯವನ್ನಿಟ್ಟುಕೊಂಡು ಯಾರಿಗೂ ಪೆನ್ಶನ್ ಹಣ ಬಂದಿಲ್ಲ ಎಂದರೆ, ಸರಕಾರ ಜಾರಿ ಮಾಡಿದ್ದು ವಿಫಲ ಯೋಜನೆ ಎಂದೆಲ್ಲ ಆರಾಮಾಗಿ ಬಿಂಬಿಸಬಹುದು ಎಂಬುದು ಇವರ ಆಲೋಚನೆ.

ಆದರೆ ಇದೂ ಸಾಧ್ಯವಿಲ್ಲ ಏಕೆಂದರೆ, ಸ್ವತಃ ಪೆನ್ಶನ್ ಪಡೆಯುವವರೇ ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಪೆನ್ಶನ್ ಮೊದಲಿ ಗಿಂತಲೂ ಈಗ ಡಬಲ್ ಆಗಿದೆ, ಈ ರಾಜಕಾರಣಿಗಳೆಲ್ಲ ಯಾಕಿಷ್ಟು ಹಾರಾಡ್ತಾ ಇದ್ದಾರೆ ಎಂದೇ ಗೊತ್ತಿಲ್ಲ, ಅಷ್ಟಕ್ಕೂ ಇವರ ಅಜೆಂಡಾ ಏನು? ಎಂದು ಬರೆದುಕೊಂಡಿದ್ದಾರೆ. ಒಂದೊಂದು ಸಣ್ಣ ಸಣ್ಣ ಚಲನವಲನದಲ್ಲೂ ರಾಹುಲ್ ಮತ್ತು ಕೇಜ್ರಿವಾಲ್ ಅವರ ಬಂಡವಾಳಗಳು ಬಯಲಾಗುತ್ತಾ ಹೋಗುತ್ತವೆ. ಮೋದಿ ತನ್ನನ್ನು ಕೊಲ್ಲಬಹುದು ಎಂದಾಗಲೂ ಕೇಜ್ರಿವಾಲ್ ಹುಚ್ಚುತನವನ್ನು ಜನ ಕ್ಷಮಿಸಿದ್ದರು. ರಾಹುಲ್ ಕಾಮಿಡಿ ಭಾಷಣಗಳನ್ನು ನೋಡಿ ಜನ ನಕ್ಕಿದ್ದರು. ಆದರೆ ಈ ಅತಿರೇಕಕ್ಕೆ ಜನ ನಗುವುದೂ ಇಲ್ಲ, ಕ್ಷಮಿಸುವುದೂ ಇಲ್ಲ. ಉತ್ತರಿಸುತ್ತಾರೆ, ಮುಂದಿನ ಚುನಾವಣೆಯಲ್ಲಿ.

‘ಮೋದಿ ಸರಿಯಾಗ್ ಕೊಟ್ರು ಸಾರ್!’

$
0
0

ಮೊನ್ನೆ ಒಂದು ಘಟನೆ ನಡೆಯಿತು. ನಾನು ಸಹಜವಾಗಿ ಆಟೋ ಅಥವಾ ಕ್ಯಾಬ್‌ಗಳಲ್ಲಿ ಪ್ರಯಾಣ ಮಾಡುವಾಗ ಡ್ರೈವರ್‌ಗಳನ್ನು ಮಾತಾಡಿಸುವ ಅವಕಾಶ ಸಿಕ್ಕರೆ ಬಿಡುವುದಿಲ್ಲ. ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಜನರು ಏನಂತಾರೆ ಎಂದು ತಿಳಿದುಕೊಳ್ಳುವ ಹುಚ್ಚು ಕುತೂಹಲ. ಇನ್ನೂ ಹೆಚ್ಚಾಗಿ ಡ್ರೈವರ್‌ಗಳು ವಿವಿಧ ಪ್ರದೇಶಗಳನ್ನು ಸುತ್ತಿ ಹಲವು ಬಗೆಯ ಜನರ ಜತೆ ವ್ಯವಹರಿಸುವುದರಿಂದ, ಸಾಕಷ್ಟು ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿರುತ್ತಾರೆ.narendra modi - PTI_1_1_0_1_0_1_0

ಮೊನ್ನೆ ನನ್ನ ಮನೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಬಂದ ಡ್ರೈವರ್ ಹೆಸರು ಮಹಮದ್ ಅಲಿ. ಆತ ಬಂದಾಗ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಮಾತಾಡುವುದಕ್ಕೆ ಏನೂ ತೋಚದೆ ನಾನು ಸುಮ್ಮನೆ ಕುಳಿತಿದ್ದೆ. ದಾರಿಯಲ್ಲಿ ಸಾಗುವಾಗ no cash ಎಂದು ಬರೆದಿದ್ದ ಎಟಿಎಂಗಳನ್ನು ನೋಡಿ, ನೋಟುಗಳ ಅಮಾನ್ಯದ ಬಗ್ಗೆ ಅವರೇ ಮಾತು ಶುರು ಮಾಡಿದರು. ‘ಏನ್ ಸಾರ್ ಮೋದಿ ತೆಗೆದುಕೊಂಡ ಈ ನಿರ್ಧಾರದಿಂದ ಎಲ್ಲರಿಗೂ ಕಷ್ಟ ಆಗಿದೆ’ ಎಂದು. ನಾನೂ ಸುಮ್ಮನೆ ಇವರ ಬಳಿ ಬೆಳಗ್ಗೆ ಬೆಳಗ್ಗೆ ಏನು ಮಾತಾಡುವುದು ಎಂದು ‘ಹೌದು ಸಾರ್’ ಎಂದು ಸುಮ್ಮನಾದೆ. ಕೊನೆಗೆ ಅವರೇ ಮಾತು ಮುಂದುವರಿಸಿ, ‘ಅಲ್ಲ ಸಾರ್ ಇದ್ರಿಂದ ಬಡವ್ರಿಗೆ ತೊಂದರೆ ಆಗಿರಬಹುದು, ಆದರೆ ಕಳ್ ನನ ಮಕ್ಳು ಬ್ಲ್ಯಾಕ್ ಮನಿ ಇಟ್ಟ ರಾಜಕಾರಣಿಗಳು, ಉದ್ಯಮಿಗಳೆಲ್ಲರೂ ಸಿಕ್ಕಾಕ್ಕೊಂಡ್ರು ನೋಡಿ ಅದೇ ಖುಷಿ. ಎರಡು ದಿನದ ಹಿಂದೆ ಒಂದ್ ಚಾನೆಲ್ ನೋಡುತ್ತಿದ್ದೆ, ಅದ್ರಲ್ಲಿ ಕರ್ನಾಟಕದ ರಾಜಕಾರಣಿಯೊಬ್ಬ ಮೋದಿ ಮಾಡಿದ್ದು ಸರಿ ಇದೆ ಆದ್ರೆ ಸ್ವಲ್ಪ ಟೈಮ್ ಕೊಡಬೇಕಿತ್ತು ಎಂದು ಹೇಳುವಾಗ ಅವರ ಮುಖ ಎಷ್ಟು ಕಪ್ಪಾಗಿತ್ತು ಎಂದು ನೋಡಿದಾಗಲೇ ನಮಗೆ ತಿಳಿಯುತ್ತೆ. ಅವರ ಬಳಿ ಎಷ್ಟು ಹಣ ಇತ್ತು ಎಂದು. ನಮಗೆ ನಮ್ ದುಡ್ಡನ್ನ ಬ್ಯಾಂಕ್‌ಗೆ ಹಾಕೋದೊಂದೇ ಸಮಸ್ಯೆ, ಆದರೆ ಶ್ರೀಮಂತ್ರಿಗೆ ಇರೋ ದುಡ್ಡನ್ನ ಕಳ್ಕೊಳಕ್ಕೋ ಆಗದೇ, ಬೇರೆಯವರಿಗೆ ಕೊಡುವುದಕ್ಕೂ ಆಗದೇ, ಕೊನೆಗೆ ಮನೆಯಲ್ಲೂ ಇಟ್ಕೊಳ್ಳಕ್ಕಾಗದೇ ಪರದಾಡುತ್ತಿದ್ದಾರೆ.

ಸರಿಯಾಗ್ ಇಟ್ಟಿದಾರೆ ನೋಡಿ ಮೋದಿ ಇವ್ರಿಗೆಲ್ಲ.. ನಾನು ಮೊನ್ನೆ ನ್ಯೂಸ್ ಚಾನಲ್ಲಿನಲ್ಲಿ ನೋಡುತ್ತಿದ್ದೆ, ಎಷ್ಟು ದುಡ್ಡನ್ನು ಮೋರಿಯೊಳಗೆ ಬಿಸಾಕಿದಾರೆ ಗೊತ್ತಾ ಸಾರ್? ಬೇರೆ ಯಾರಾದ್ರೂ ತೆಗೆದುಕೊಂಡು ಬಿಡುತ್ತಾರೆ ಎಂದು ನೋಟುಗಳನ್ನೆಲ್ಲ ಕಟ್ ಮಾಡಿ ಬಿಸಾಡಿದ್ದಾರೆ ಸ್ವಾರ್ಥಿಗಳು. ಅದನ್ನೇ ಬಡವ್ರಿಗೆ ಕೊಟ್ಟಿದ್ರೆ? ಇವ್ರ ಹೆಸ್ರೇಳ್ಕೊಂಡ್ ಊಟ ಮಾಡ್ತಿದ್ರಲ್ಲ ಸಾರ್?! ಸರ್ಯಾಗ್ ಮಾಡಿದ್ದಾರೆ ಮೋದಿ. ಸ್ವಲ್ಪ ದಿನ ತೊಂದ್ರೆ ಆಗುತ್ತೆ. ಆದ್ರೂ ಅಡ್ಜ್ಟ್ ಮಾಡ್ಕೊಳೋಣ ದೇಶಕ್ಕೋಸ್ಕರ…ಈ ಮನುಷ್ಯ ಸ್ವಲ್ಪ ವಿಚಾರಗಳನ್ನ ತಿಳಿದುಕೊಂಡ ಹಾಗಿದೆ ಎಂದು ನಾನು ಅವರನ್ನು ಮೋದಿಯ ಆಡಳಿತದ ಬಗ್ಗೆ ಅಭಿಪ್ರಾಯ ಕೇಳಿದೆ.’ಮೋದಿ ಎಷ್ಟೋ ಮಟ್ಟಿಗೆ ಸೂಪರ್ ಸಾರ್. ಆ ರಾಹುಲ್ ಗಾಂಧಿ ನೋಡಿದ್ರೆ ನಗು ಬರ್ತದೆ. ಆ ವಯ್ಯ ಪ್ರಧಾನಿ ಆಗಿದ್ರೆ ಕಥೆ ಏನು? ಅಟ್ಲೀಸ್ಟು ಮೋದಿ ಏನಾದ್ರೂ ಮಾಡ್ತಿದಾರೆ. ಆ ಮನಮೋಹನ್ ಸಿಂಗ್ ಇದ್ದಾಗ್ಲೆಲ್ಲ ದೇಶದಲ್ಲಿ ಏನಾಗ್ತಿತ್ತು ಅಂತಾನೇ ಗೊತ್ತಾಗ್ತಿರ್ಲಿಲ್ಲ ಎಂದರು.

ನನಗೂ ಕುತೂಹಲ ಹೆಚ್ಚಾಗಿತ್ತು. ಮತ್ತೊಂದು ಪ್ರಶ್ನೆ ಕೇಳಿದೆ. ಅಲ್ಲಾ ಮಹಮದ್ ಅಲಿಯವ್ರೇ ಕಾಂಗ್ರೆಸ್‌ನವರು ಮುಸ್ಲಿಮರಿಗೆ ಸಪೋರ್ಟ್ ಮಾಡ್ತಾ ಇದಾರಲ್ಲ? ನೀವ್ಯಾಕ್ ಹಿಂಗಂದ್ಬಿಟ್ರಿ? ನಿಮ್ ಸಂಘಟನೆ ಎಲ್ಲ ಅವ್ರ ಪರವೇ ಇರೋದಲ್ವಾ?’ ಎಂದೆ.
‘ಯಾವ್ ಸಂಘಟನೆ ಸಾರ್? ನನಗೆ ಒಂದರ್ಧ ಗಂಟೆ ಟೈಮ್ ಸಿಕ್ಕಿದ್ರೆ ಸಾಕು ಮಲ್ಕೊಂಡು ಬಿಡ್ತೀನಿ. ಈ ರಾಜಕಾರಣಿಗಳು ನಮ್ಮನ್ನ ಉಪಯೋಗಿಸಿಕೊಂಡರೇ ಹೊರತು, ಬೇರೆ ಏನೂ ಮಾಡಿಲ್ಲ ನಮಗಾಗಿ. ಎಲ್ಲ ಧರ್ಮದವರಿಗೂ ಅವ್ರವ್ರೇ ಸಹಾಯ ಮಾಡ್ಕೊಂಡಿದ್ದು. ರಾಜಕಾರಣಿಗಳು ಹಿಂದೂ ಮುಸ್ಲಿಂ ಅಂತ ಜಗಳ ತಂದಿಟ್ಟರೇ ಹೊರತು ಇವರ ಕೊಡುಗೆ ಬೇರೇನೂ ಇಲ್ಲ’.
ನನಗೆ ಈ ಮಾತು ಅಚ್ಚರಿ ತರಿಸಿತು. ನವೆಂಬರ್ 8ರ ರಾತ್ರಿ ಮೋದಿ ಎಸೆದ ‘ನೋಟ್ ಬಾಂಬ್’ ಕಾಳಧನ ಉಳ್ಳವರ ಪಾಲಿಗೆ ಅಟಂ ಬಾಂಬ್ ಆಗಿ ಪರಿಣಮಿಸಿತ್ತು. ಆದರೆ ಗಂಜಿ ಗಿರಾಕಿಗಳು ಒಂದೇ ಸಮನೆ ಊಳಿಡುತ್ತಿರುವ ಈ ಸಂದರ್ಭದಲ್ಲಿ ಮುಸ್ಲಿಮನೊಬ್ಬ ಹೇಳಿದ ವಿಚಾರ ನಾವೆಲ್ಲರೂ ಯೋಚನೆ ಮಾಡುವಂತೆ ಮಾಡಿದೆ.

ಇಲ್ಲಿ ಮುಸ್ಲಿಮನೇ ಏಕೆ ಎಂದು ಕೇಳಬಹುದು. ಆದರೆ, ಇಷ್ಟು ದಿನ ಆ ಹೆಸರು ಹೇಳಿಕೊಂಡೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು. ಬಸ್‌ನಲ್ಲಿ ಸೀಟು ಸಿಗದಿದ್ದರೂ ಸಾಕು, ಅಲ್ಪ ಸಂಖ್ಯಾತರಿಗೆ ತೊಂದರೆಯಾಗಿದೆ, ಮುಸ್ಲಿಮರಿಗೆ ತೊಂದರೆಯಾಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅದೇ ಮುಸ್ಲಿಮ್ ಒಬ್ಬ, ಮೋದಿಯ ಈ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾನೆ ಎಂದರೆ, ದೇಶಕ್ಕಾಗಿ ನಾನು ಕ್ಯೂ ನಿಲ್ಲಲೂ ತಯಾರಾಗಿದ್ದೇನೆ ಎಂದರೆ, ಇಲ್ಲಿ ನಿಜಕ್ಕೂ ತೊಂದರೆಯಾಗಿರುವುದು ಯಾರಿಗೆ?

ಮೋದಿ ಈ ನಿರ್ಧಾರ ತಿಳಿಸಿದ ಎರಡು ದಿನದ ನಂತರ ಎಲ್ಲ ಬ್ಯಾಂಕ್‌ಗಳಲ್ಲೂ ನೂಕು ನುಗ್ಗಲು ಹೆಚ್ಚಾಗಿತ್ತು. ನಾನು ಅಲ್ಲಿಗೂ ಹೋಗಿ ಜನರ ಅಭಿಪ್ರಾಯವನ್ನು ಕೇಳಿ ಅದನ್ನು ವಿಡಿಯೊ ಸಹ ಮಾಡಿದ್ದೇನೆ. ನಾನು ವಿಡಿಯೊ ಮಾಡುವಾಗ, ಅವರೆಲ್ಲರೂ ಬಿಸಿಲಿನಲ್ಲಿ ಬೇಯುತ್ತಿದ್ದರು. ಆದರೂ ನನ್ನ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೋದಿ ಮಾಡಿದ್ದು ಸರಿಯಾಗೇ ಇದೆ. ನಾವು ಕ್ಯೂನಲ್ಲಿ ನಿಲ್ಲಲು ಸಮಸ್ಯೆಯೇನಿಲ್ಲ. ಜಿಯೋ ಸಿಮ್ ತೆಗೆದುಕೊಳ್ಳುವಾಗ ನಾವು ಕ್ಯೂನಲ್ಲಿ ನಿಂತಿದ್ದೇವೆ, ಸ್ಟಾರ್ ನಟರ ಸಿನಿಮಾ ನೋಡುವುದಕ್ಕೆ ಹೋದಾಗ ನಾವು ಸರತಿ ಸಾಲಿನಲ್ಲಿ ನಿಂತು ಪೊಲೀಸರ ಹೊಡೆತ ತಿಂದಿದ್ದೇವೆ. ಆದರೆ, ನಮ್ಮ ಒಳ್ಳೇದಕ್ಕೇ ನಮಗೆ ನಿಲ್ಲಕ್ಕೆ ಆಗುವುದಿಲ್ಲ ಎಂದರೆ ಹೇಗೆ? ಮೋದಿ ನಿರ್ಧಾರ ಸರಿ ಇದೆ’ ಎಂದಿದ್ದಾರೆ.

‘ಇಂಡಿಯಾ ಟುಡೆ’ಯವರ ವಿಡಿಯೊ ಒಂದು ನಿನ್ನೆ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿತ್ತು. ಅದರಲ್ಲಿ ರಾಜ್‌ದೀಪ್ ಸರ್ದೇಸಾಯಿ ವೃದ್ಧೆಯೊಬ್ಬರ ಬಳಿ ಒಬ್ಬ ಹಿರಿಯ ನಾಗರಿಕರಾಗಿ ಹೇಳಿ, ನಿಮಗೆ ಯಾವ್ಯಾವ ತೊಂದರೆಯಾಗುತ್ತಿದೆ?’ ಎಂದು ಕೇಳಿದಾಗ, ಆ ಅಜ್ಜಿ ಹೇಳಿದ್ದು – ‘ನನಗೇನೂ ತೊಂದರೆಯಾಗುತ್ತಿಲ್ಲ. ಮೋದಿ ತೆಗೆದುಕೊಂಡ ಈ ನಿರ್ಧಾರ ಸರಿಯಾಗೇ ಇದೆ’ ಎಂದು. ಇನ್ನೂ ಕೆದಕಬೇಕೆಂದು, ಇನ್ನೊಬ್ಬ ವೃದ್ಧರ ಬಳಿ ಹೋಗಿ, ನಿಮಗೇನು ತೊಂದರೆ ಆಗ್ತಿದೆ?’ ಎಂದು ಕೇಳಿದಾಗ ಅವರು ‘ನಮಗೇನು ತೊಂದರೆ ಆಗ್ತಿಲ್ಲ, ನಾವು ಬಹಳ ಖುಷಿಯಾಗೇ ಇದ್ದೇವೆ’ ಎಂದು ಹೇಳಿದರು. ಇನ್ನೂ ಹೆಚ್ಚು ಕೆದಕಿ ‘ನೀವೆಲ್ಲ ನಿಂತಿದ್ದೀರಿ ಸರಿ, ಬಡವರಿಗೆ ತೊಂದರೆಯಾಗಿದೆ’ ಎಂದು ಹೇಳಿದ್ದಕ್ಕೆ, ‘ನೋಡಿ, ನೀವು ಮತ್ತೆ ಮತ್ತೆ ಕೆದಕಬೇಡಿ. ಇಲ್ಲಿ ಸಾಲಿನಲ್ಲಿ ನಿಂತವರಲ್ಲಿ ಬಡವರಿಂದ ಹಿಡಿದು ಮಧ್ಯಮ ವರ್ಗದವರೆಗೆ ಎಲ್ಲರೂ ಇದ್ದಾರೆ. ಇಲ್ಲಿ ಯಾರೂ ಶ್ರೀಮಂತರಿಲ್ಲ. ನಿಮಗೆ ಇಲ್ಲಿರುವವರ ಯಾರದ್ದೇ ಅಭಿಪ್ರಾಯ ಕೇಳಿದರೂ, ಒಂದೇ ಉತ್ತರ ಬರುತ್ತಿದೆಯಲ್ಲ’ ಎಂದಾಗ ರಾಜ್‌ದೀಪ್ ಸುಮ್ಮನಾಗುತ್ತಾರೆ. ಇದು ಬೇರೆ ರಾಜ್ಯದ ಉದಾಹರಣೆ. ಅಸಲಿಗೆ ನೀವು ಯಾರನ್ನೇ ಕೇಳಿದರೂ ಅವರೆಲ್ಲರೂ ಕೊಡುತ್ತಿರುವ ಉತ್ತರ ಒಂದೇ ಒಂದು. ‘ಮೋದಿ ನಿರ್ಧಾರ ಸರಿಯಾಗಿದೆ’ !

ಆದರೆ, ಮೋದಿಯ ಈ ನಿರ್ಧಾರದಿಂದ ನಿಜಕ್ಕೂ ತೊಂದರೆಯಾಗಿರುವುದು ಕಾಳಧನ ಉಳ್ಳವರಿಗೆ, ರಾಜಕಾರಣಿಗಳಿಗೆ, ಇಂಥ ವರ್ಗದಿಂದ ಹಣ ತೆಗೆದುಕೊಂಡು ಕಾಲಕಾಲಕ್ಕೆ ಟೌನ್‌ಹಾಲ್ ಮುಂದೆ ದನದ ಮಾಂಸ ತಿನ್ನುತ್ತಾ ಹೋರಾಟ ಮಾಡುವವರಿಗೆ ಮತ್ತು ಗಂಜಿಕೇಂದ್ರದ ಸಾಹಿತಿಗಳಿಗೆ, ಕನ್ನಡದ ಒಂದು ಸಾಲಿಗೂ ಲಘು-ಗುರು ಹಾಕಲು ಬರದಿದ್ದರೂ ಕವಯತ್ರಿ ಎಂದು ಗುರುತಿಸಲಿಚ್ಛಿಸಿಕೊಳ್ಳುವವರಿಗೆ ಮತ್ತು ಬೆಂಕಿಪಟ್ನವನ್ನೂ ಮಾರಲಾಗದ ನಿರ್ದೇಶಕರಿಗೆ. ಇದೇ ಕಾರಣಕ್ಕಾಗಿ, ಎಲ್ಲರೂ ದಿನಕ್ಕೊಂದು ಕತೆಗಳನ್ನು ಹಾಕಿಕೊಂಡು, ‘ನಮ್ಮ ದೇಶದಲ್ಲಿ ಬಡವರೆಲ್ಲರೂ ಮೋದಿಯಿಂದ ಸಾಯುತ್ತಿದ್ದಾರೆ, ಹೆಂಗಸರು ಸಾಸಿವೆ ಡಬ್ಬದಲ್ಲಿ ಕೂಡಿಟ್ಟ ಹಣವನ್ನು ಮೋದಿ ಕೊಳ್ಳೆ ಹೊಡೆದಿದ್ದಾರೆ’ ಎನ್ನುತ್ತಿದ್ದಾರೆ.

ಸ್ವಲ್ಪ ಆಲೋಚಿಸಿ, ಮಹಿಳೆಯರು ಗಳಿಸಿರುವ ಹಣದಲ್ಲಿ 2.5ಲಕ್ಷದವರೆಗೂ ತೆರಿಗೆಯಿಲ್ಲ ಎಂದು ಹೇಳಿದ್ದಾರೆ. ನನ್ನ ಪ್ರಶ್ನೆಯೇನೆಂದರೆ, ಯಾವ ಮಹಿಳೆ ಸಾಸಿವೆ ಡಬ್ಬದಲ್ಲಿ ಎರಡೂವರೆ ಲಕ್ಷವನ್ನಿಟ್ಟಿರುತ್ತಾಳೆ? ಹಾಗೆ ಇಟ್ಟರೆ, ಸಾಸಿವೆಯನ್ನಿಡಲು ನಿಜಕ್ಕೂ ಆ ಡಬ್ಬಿಯಲ್ಲಿ ಜಾಗವಿರುತ್ತದಾ? ಇತ್ತೀಚೆಗೆ ಫೇಸ್‌ಬುಕ್, ವಾಟ್ಸ‌ಆ್ಯಪ್ ಮತ್ತು ಇತರ ಜಾಲತಾಣಗಳಲ್ಲಿ ಇಂಥ ಮೂರ್ಖರ ಗುಂಪೇ ಮತ್ತೊಂದು ಸುದ್ದಿ ಹಬ್ಬಿಸಿದೆ. ಅದೇನೆಂದರೆ ಮೋದಿಯ ಈ ನಿರ್ಧಾರ ಅಂಬಾನಿಗೆ ಮೊದಲೇ ಗೊತ್ತಿದ್ದು, ಅವರು ಜಿಯೋ ನೆಟ್‌ವರ್ಕ್ ಸ್ಥಾಪಿಸಿ ಉಚಿತ ಇಂಟರ್‌ನೆಟ್ ಮತ್ತು ಕರೆಗಳನ್ನು ಕೊಡುತ್ತಿದ್ದಾರೆ. ಮುಂದೆ ಅದಕ್ಕೆ ಕಡಿಮೆ ದರವನ್ನು ನಿಗದಿಪಡಿಸಿ ಅದರಿಂದ ಬರುವ ಹಣವನ್ನೆಲ್ಲ ವೈಟ್ ಮಾಡಿಕೊಳ್ಳುತ್ತಾರೆ ಎನ್ನುತ್ತಿದ್ದಾರೆ. ಈ ಕತೆ ಎಷ್ಟು ಬಾಲಿಶವಾಗಿದೆಯೆಂದರೆ, ರಾಜ್ಯದ ಕೆಲ ಮಂತ್ರಿಗಳ ಸಲಹೆಗಾರರ ಎಡಪಂಥೀಯ ಮೂರ್ಖ ಶಿಖಾಮಣಿಗಳೆಲ್ಲ ಒಂದು ಬಾರಲ್ಲಿ ಕುಳಿತು ಕಡಲೇಕಾಯಿ ತಿನ್ನುತ್ತಾ ಹೆಣೆದ ಕತೆ ಎಂಬುದು ಆರಾಮಾಗಿ ತಿಳಿದುಬಿಡುತ್ತದೆ. ನಾನು ಈ ವಿಷಯದ ಬಗ್ಗೆ ನಿಖರ ಮಾಹಿತಿ ತಿಳಿಯಲು ನವಿ ಮುಂಬೈನಲ್ಲಿರುವ 550 ಎಕರೆಯಲ್ಲಿ ಸ್ಥಾಪಿಸಿರುವ ಜಿಯೋ ಪಾರ್ಕ್‌ಗೆ ಮೊನ್ನೆ ಹೋಗಿದ್ದೆ. ಆ ಟೆಕ್ ಪಾರ್ಕ್‌ನಲ್ಲಿರುವ ಕಟ್ಟಡಗಳು ಎಷ್ಟು ಬೃಹದಾಕಾರದಲ್ಲಿತ್ತು ಎಂದರೆ, ಎಷ್ಟು ಸವಿಸ್ತಾರವಾಗಿ ಕಟ್ಟಿದ್ದಾರೆಂದರೆ ಅಂಥ ಒಂದೊಂದು ಕಟ್ಟದ ನಿರ್ಮಾಣಕ್ಕೆ ಕನಿಷ್ಠ ಹತ್ತತ್ತು ತಿಂಗಳಾದರೂ ಬೇಕು.

ಕೊನೆಗೆ ವಿಚಾರಿಸಿದಾಗ ಆ ಜಾಗವನ್ನು ಮುಕೇಶ್ ಅಂಬಾನಿಯವರು 2005ರಲ್ಲೇ ಖರೀದಿ ಮಾಡಿದ್ದರು. ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್‌ಗೆ ಸ್ಪರ್ಧೆ ನೀಡಲು ಒಂದು ಜಿಯೋ ನೆಟ್‌ವರ್ಕ್ ಸ್ಥಾಪಿಸಲು ಅಂದೇ ನಿರ್ಧರಿಸಲಾಗಿತ್ತು. ಇದಕ್ಕೆ ಬೇಕಾದ ಪ್ಲಾನಿಂಗ್ ಅಂದು ಶುರು ಮಾಡಿದ್ದರಿಂದಲೇ ಇಲ್ಲಿಯವರೆಗೆ ಬಂದು ನಿಂತಿದ್ದಾರೆ. ಮೋದಿಯವರು ಪ್ರಧಾನಿಯಾಗುತ್ತಾರೆ, ಅವರು ಐನೂರು ಸಾವಿರ ಮುಖಬೆಲೆಯ ನೋಟ್‌ಗಳನ್ನು ಬ್ಯಾನ್ ಮಾಡುತ್ತಾರೆ ಎಂದು ಮುಕೇಶ್ ಅಂಬಾನಿಯವರು 2005ರಲ್ಲೇ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಜಾಗ ಖರೀದಿಸಿ ಕೆಲಸ ಶುರು ಮಾಡಿದ್ದಾರೆ ಎಂದರೆ, ಮುಕೇಶ್ ಅಂಬಾನಿಯವರು ಜಿಯೋ ಸ್ಥಾಪಿಸುವುದಕ್ಕಿಂತ ಜ್ಯೋತಿಷ್ಯ ಹೇಳಿದ್ದಿದ್ದರೆ, ಯಾವ ಹೂಡಿಕೆಯೂ ಇಲ್ಲದೆ, ಲಾಸ್ ಸಹ ಆಗದೇ ದೊಡ್ಡ ಶ್ರೀಮಂತರಾಗುತ್ತಿದ್ದರೇನೋ! ಸರಿಯಾಗಿ ಕಥೆ ಹೆಣೆಯುವುದಕ್ಕೂ ಬರದೇ ಇರುವವರ ಜತೆ ಬಾರಲ್ಲಿ ಕುಳಿತರೆ ಬರುವ ಐಡಿಯಾಗಳೇ ಇಂಥವು.

ಆರ್ಥಿಕತೆಯ ಬಗ್ಗೆ ನಯಾ ಪೈಸೆಯೂ ಗೊತ್ತಿರದ ರಾಹುಲ್ ಗಾಂಧಿಯೂ ಮೋದಿಯ ನಿರ್ಧಾರವನ್ನು ವಿರೋಧಿಸಿ, ಐನೂರು ಮತ್ತು ಸಾವಿರದ ನೋಟುಗಳಿಲ್ಲದೆ ಬಡವರಿಗೆ ತೊಂದರೆಯಾಗುತ್ತಿದೆ. ನಾವು ಸಹ ಇಪ್ಪತ್ತು ಪೈಸದಿಂದ 20 ರುಪಾಯಿಯವರೆಗೂ ನೋಟುಗಳನ್ನು ಬದಲಾಯಿಸಿದ್ದೇವೆ ಎಂದಿದ್ದಾರೆ. ಆದರೆ ಪುಡಿಗಾಸನ್ನು ಬದಲಾವಣೆ ಮಾಡಿದ ಕಾಂಗ್ರೆಸ್‌ನಿಂದ ಯಾವ ಶ್ರೀಮಂತನ ಹಣಕ್ಕೂ ಹೊಡೆತ ಬೀಳಲಿಲ್ಲ. ಆಗ ಯಾರೂ ಊಳಿಡಲಿಲ್ಲ. ಕಪ್ಪು ಹಣ ಕೊಡುವವನು ಇಪ್ಪತ್ತು ರುಪಾಯಿ ನೋಟಲ್ಲಿ ಕೋಟ್ಯಂತರ ರುಪಾಯಿ ಕೊಡುತ್ತಾನೋ ಅಥವಾ ಸಾವಿರದ ನೋಟಲ್ಲೋ? ಸರಕಾರಿ ಆಫೀಸುಗಳಲ್ಲಿ ಇಪ್ಪತ್ತು ರುಪಾಯಿ ಲಂಚ ತೆಗೆದುಕೊಳ್ಳುವ ಬೆಪ್ಪತಕಡಿ ಯಾರಿದ್ದಾರೆ ಹೇಳಿ? ಅಷ್ಟೂ ತಿಳಿಯದ ಮುಗ್ಧ ರಾಹುಲ್, ಆರ್ಥಿಕತೆಯ ಬಗ್ಗೆ ಮಾತಾಡುವುದಕ್ಕೆ ಬಿಟ್ಟವರ್ಯಾರು? ಸೋನಿಯಾ ಗಾಂಧಿಯಾದರೂ ಬುದ್ಧಿ ಹೇಳಬಾರದಿತ್ತೇ?
ಅದಿರಲಿ, ನೋಟ್ ಬ್ಯಾನ್ ಮಾಡಿದ್ದರಿಂದ ಏನೇನು ಪರಿಣಾಮಗಳಾಗಿವೆ ಎಂದು ತಿಳಿದರೆ ನೀವು ಬೆರಗಾಗುತ್ತೀರಿ. ರಾಜ್ಯ ಸರಕಾರ ಜನರ ವಿರೋಧದ ನಡುವೆಯೂ ನಿರ್ಮಿಸಲು ನಿರ್ಧರಿಸಿರುವ ಸ್ಟೀಲ್ ಫ್ಲೈ ಓವರ್ ಇಂದ ಹಣ ಹೊಡೆಯುವ ಪ್ಲಾನ್ ಇದೆ ಮತ್ತು ಇದರಿಂದ ಬರುವ ಹಣ ಉತ್ತರಪ್ರದೇಶ ಚುನಾವಣೆಗೆ ಬಳಕೆಯಾಗುತ್ತದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ ಸರಕಾರ ಸಹ ಯೋಜನೆ ಕೈಬಿಡುವ ಮಾತೇ ಇಲ್ಲ ಎಂದು ಹೇಳಿತ್ತು. ಆದರೆ ನೋಟ್ ಬ್ಯಾನ್ ಆದ ಮೇಲೆ, ಸ್ಟೀಲ್ ಫ್ಲೈ ಓವರ್ ಬಗ್ಗೆ ಸರಕಾರ ಏನೂ ಮಾತಾಡುತ್ತಲೇ ಇಲ್ಲ. ಏಕೆ ಈಗ ಸ್ಟೀಲ್ ಫ್ಲೈ ಓವರ್ ಎಲ್ಲೂ ಸದ್ದೇ ಮಾಡುತ್ತಿಲ್ಲ ?

ಜಮ್ಮು ಮತ್ತು ಕಾಶ್ಮೀರದ ಒಂದು ಭಾಗದಲ್ಲಿ ಪ್ರತೀ ಶುಕ್ರವಾರ ನಮಾಜ್ ಮುಗಿದ ಮೇಲೆ ಕಲ್ಲು ತೂರಾಟ ಕಾಮನ್ ಆಗಿತ್ತು. ಇದಕ್ಕೆ ಗಿಲಾನಿ, ಒಬ್ಬರಿಗೆ 500 ರು. ಕೊಡುತ್ತಿದ್ದರು ಎಂದು ಕಲ್ಲು ತೂರಾಟ ಮಾಡುವವನೇ ಹೇಳಿದ್ದ. ಆದರೆ ಮೊನ್ನೆ ನಮಾಜ್ ನಡೆದ ಮೇಲೆ ಒಂದೇ ಒಂದೂ ಕಲ್ಲನ್ನು ಯಾರೂ ಎಸೆಯಲಿಲ್ಲ. ಮೋದಿಯ ಈ ನಿರ್ಧಾರದಿಂದ ಜನರಿಗೆ ಆಗಿರುವುದು ತೊಂದರೆಯೋ? ಉಪಯೋಗವೋ? ಒಂದು ವೇಳೆ ನೂರು ರುಪಾಯಿ ನೋಟನ್ನು ಬ್ಯಾನ್ ಮಾಡಿದ್ದಿದ್ದರೆ, ಆಗ ಸಾಮಾನ್ಯ ಜನರಿಗೆ ಮತ್ತು ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗುತ್ತಿತ್ತು ಎಂದು ಒಪ್ಪೋಣ. ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿರುವುದರಿಂದ ಈಗ ತೊಂದರೆಯಾಗಿರುವುದು ರಾಜಕಾರಣಿಗಳಿಗೆ, ಅವಾರ್ಡ್ ವಾಪಸಿ ಸಾಹಿತಿಗಳಿಗೆ ಮತ್ತು ಬಿಳಿ ಮಂಡೆಯ ಗಂಜಿಜೀವಿಗಳಿಗೆ ಮಾತ್ರ. ಅರಚಾಡುತ್ತಿರುವುದೂ ಅವರೇ… ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಂತವರಿಗೇ ಇಲ್ಲದ ನೋವು ಸಾಸಿವೆ ಡಬ್ಬದ ಬುದ್ಧಿಜೀವಿಗಳಿಗ್ಯಾಕೆ?

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ಜೋಕು ಈ ಸಮಯಕ್ಕೆ ಬಹಳ ಆಪ್ತ ಮತ್ತು ಸೂಕ್ತವಾಗಿದೆ.
at the time of constipation, whole body with all force tries to push it out.but it the asshole which complains about pain.

ಮಂಡ್ಯ ಮಾರ್ಕೆಟ್‌ನಲ್ಲಿ ಸಿಕ್ಕ ‘ದಿವ್ಯಸ್ಪಂದನ’

$
0
0

524_20091210_67420500_sanju_weds_geetha_17

ನಮ್ಮ ದೇಶದಲ್ಲಿ ಹಲವಾರು ಧರ್ಮಗಳು ಹೇಗಿವೆಯೋ ಹಾಗೇ, ಅದಕ್ಕಿಂತ ಹೆಚ್ಚು ಬಗೆಯ ಜನರಿದ್ದಾರೆ. ಪೆದ್ದರು, ಪೆದ್ದರ ಥರ ನಟಿಸುವವರು, ಕಾಮಿಡಿ ಮಾಡುವವರು, ಸ್ವತಃ ಕಾಮಿಡಿಗಳು ಇತ್ಯಾದಿ. ಹೀಗೇ ರಾಜಕೀಯದಲ್ಲೂ ಅಂಥ ಮಂದಿಗೇನು ಕಡಿಮೆಯಿಲ್ಲ. ಕೆಲವರು ಜನರ ಸೇವೆ ಮಾಡಬೇಕು ಎಂದು ರಾಜಕೀಯಕ್ಕೆ ಬರುತ್ತಾರೆ. ಇನ್ನು ಕೆಲವರು ರಾಜಕೀಯಕ್ಕೆ ಬಂದು ಜನರ ಸೇವೆ ಮಾಡುತ್ತಾರೆ. ಆದರೆ ಇವೆಲ್ಲಕ್ಕಿಂತ ವಿಭಿನ್ನ ಎಂದ್ರೆ, ಕೆಲವರಿಗೆ ತಾವು ಯಾಕಾಗಿ ರಾಜಕಾರಣಕ್ಕೆ ಬಂದಿದ್ದೇವೆ ಎಂಬುದೂ ಗೊತ್ತಿರುವುದಿಲ್ಲ. ಏನು ಮಾಡ ಬೇಕು ಎನ್ನುವುದೂ ಗೊತ್ತಿರುವುದಿಲ್ಲ.

ಏನು ಮಾಡುತ್ತಿದ್ದೇವೆ ಎನ್ನುವುದಂತೂ ಕೇಳುವುದೇ ಬೇಡ. ಇಲ್ಲಿ ಮಜಾ ಏನೆಂದರೆ, ಇಂಥವರನ್ನೂ ಫಾಲೋ ಮಾಡುವ ಮತ್ತೊಂದು ಬುದ್ಧಿವಂತರ ಪಡೆಯೂ ಇರುತ್ತದೆ. ಇತ್ತೀಚೆಗೆ ಕಾಂಗ್ರೆಸ್ ರಾಜಕಾರಣಿಗಳ ದೊಂಬರಾಟವನ್ನು ನೋಡಿದಾಗ ಇವೆಲ್ಲ ನೆನಪಾದವು. 500 ಮತ್ತು 1000ದ ನೋಟುಗಳನ್ನು ಮೋದಿ ಅಮಾನ್ಯ ಮಾಡಿದ ಮೇಲೆ ಬಹಳಷ್ಟು ರಾಜಕಾರಣಿಗಳಿಗೆ ನಿದ್ದೆ ಬರುತ್ತಿಲ್ಲ. ಇನ್ನು ಕಾಂಗ್ರೆಸ್ ರಾಜಕಾರಣಿಗಳು ನಿದ್ದೆ ಬರದೆಯೋ ಏನೋ, ಜನರಿಗೆ ನಿದ್ದೆ ಬರ್ತಾ ಇದೆಯೋ ಇಲ್ಲವೋ ಎಂದು ವಿಚಾರಿಸಲು ರಾತ್ರೋ ರಾತ್ರಿ ಜನರ ಬಳಿ ಹೋಗಿ ‘ನೋಟುಗಳನ್ನು ಬ್ಯಾನ್ ಮಾಡಿರುವುದರಿಂದ ನಿಮಗೇನಾದರೂ ಸಮಸ್ಯೆ ಇದೆಯೇ?’ ಎಂದು ವಿಚಾರಿ ಸುತ್ತಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ದೆಹಲಿಯಲ್ಲಿರುವ ಮಾರ್ಕೆಟ್‌ಗಳಿಗೆ ಹೋಗಿ ಜನರ ಸಮಸ್ಯೆಯನ್ನು ವಿಚಾರಿಸಿದರು. ಇದನ್ನು ನೋಡಿ ಮಾಜಿ ಸಂಸದೆ ರಮ್ಯಾ ತಾನೂ ಜನರ ‘ಚಿಲ್ಲರೆ’ ಸಮಸ್ಯೆಗಳನ್ನು ಕೇಳಲು ಮಂಡ್ಯದ ಮಾರ್ಕೆಟ್‌ಗೆ ಹೊಕ್ಕಿದ್ದರು. ‘ನಾನು ನಿಮ್ಮ ಸಮಸ್ಯೆ ಕೇಳುವುದಕ್ಕೆ ಬಂದಿದ್ದೇನೆ’ ಎಂದು ಮಾರ್ಕೆಟ್‌ನಲ್ಲಿ ರಮ್ಯಾ ಮೊನ್ನೆ ಹೇಳಿದಾಗ ‘ನೋಟ್ ಬ್ಯಾನ್ ಮಾಡಿದ್ದರಿಂದ ಸಮಸ್ಯೆ ನಮಗಾಗಿಲ್ಲ, ನಿಮಗಾಗಿರೋದು’ ಎಂದು ಜನ ಉಗಿದು ಕಳುಹಿಸಿದ್ದಾರೆ.

ಒಮ್ಮೆ ಯೋಚಿಸಿ ನೋಡಿ, ‘ನನಗೆ ಚಾರ್ಲಿ ಚಾಪ್ಲಿನ್ ಪ್ರೇರಣೆ ಎಂದು ಯಾರಾದರು ಹೇಳಿದರೆ ಒಪ್ಪಬಹುದು. ಆದರೆ ಯಾರಾದ್ರೂ ನನ್ನ ಪ್ರೇರಣೆ ರಾಹುಲ್ ಗಾಂಧಿ ಎಂದರೆ ಜನ ಹೇಗೆ ರಿಯಾಕ್ಟ್ ಮಾಡಬಹುದು? ರಾಹುಲ್ ಗಾಂಧಿ ಭಾಷಣದಲ್ಲಿ ತಮ್ಮ ಪೆದ್ದುತನದಿಂದ, ವಿಷಯದ ಬಗ್ಗೆ ಆಳವಾಗಿ ತಿಳಿದುಕೊಳ್ಳದೇ ಏನೋ ಮಾತಾಡಲು ಹೋಗಿ ಇನ್ನೇನೋ ಮಾತಾಡಿ, ಕಾಮಿಡಿಯೇ ಹೆಚ್ಚು ಮಾಡುವುದರಿಂದ ಅವರೇ ನನಗೆ ಪ್ರೇರಣೆ ಎಂದರೆ, ನಾಲ್ಕು ಜೋಕು ಹೇಳು ಎಂದು ದುಂಬಾಲು ಬೀಳುವವರೇ ಹೆಚ್ಚು. ರಮ್ಯಾ ತನಗೆ ರಾಹುಲ್ ಗಾಂಧಿಯೇ ಪ್ರೇರಣೆ ಎಂದು ಎಲ್ಲೂ ಹೇಳಿಕೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಅವರು ಎಲ್ಲ ವಿಧದಲ್ಲೂ ರಾಹುಲ್ ಗಾಂಧಿಯನ್ನೇ ಅನುಸರಿಸುತ್ತಿದ್ದಾರೆ. ರಾಹುಲ್ ಗಾಂಧಿ ದೆಹಲಿಯಲ್ಲಿ ಏನು ಮಾಡುತ್ತಾರೋ ಅದರ ಒಂದು ಅಣಕು ಪ್ರದರ್ಶನವನ್ನು ರಮ್ಯಾ ಕರ್ನಾಟಕದಲ್ಲಿ ಮಾಡುತ್ತಾರೆ. ರಾಹುಲ್ ಗಾಂಧಿಯ ಹಾಗೇ ಗಂಭೀರ ಹಾಸ್ಯ ಮಾಡುವ ರಾಜಕಾರಣಿ ಮತ್ತೊಬ್ಬ ಹುಟ್ಟಿಲ್ಲ, ಹುಟ್ಟಲಾರ. ಆದರೆ ರಮ್ಯಾ ಕರ್ನಾಟಕದ ರಾಹುಲ್ ಗಾಂಧಿಯಾಗುತ್ತಾರಾ ಎಂಬ ಅನುಮಾನಗಳು ಈಗೀಗ ಬಲವಾಗುತ್ತಿದೆ.

ಇದಕ್ಕೆ ಉದಾಹರಣೆಯೂ ಬಹಳಷ್ಟಿದೆ, ಮೋದಿಯ ವರು ‘ಮೇಕ್ ಇನ್ ಇಂಡಿಯಾ’ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ರಮ್ಯಾ ‘ಮೋದಿಯವರು ಮೇಕ್ ಇನ್ ಇಂಡಿಯಾ ಮಾಡುವುದಲ್ಲ, ಬದಲಿಗೆ ‘ಮೇಡ್ ಇನ ಇಂಡಿಯಾ’ ಮಾಡಬೇಕು ಎಂದು ಮೋದಿಗೆ ಉಪದೇಶ ನೀಡಿದ್ದರು. ಅಲ್ಲ ರಮ್ಯಾ, ಭಾರತದಲ್ಲಿ ನಿರ್ಮಿಸಿದರೆ(ಮೇಕ್) ಮಾತ್ರ ಭಾರತದಲ್ಲಿ ನಿರ್ಮಾಣಗೊಂಡಿದ್ದು(ಮೇಡ್ ಇನ್ ಇಂಡಿಯಾ) ಎಂದು ಆಗುವುದಲ್ಲವೇ? ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲದೇ ಹೇಗೆ ಮತ್ತು ಯಾಕಾಗಿ ಮಂಡ್ಯಕ್ಕೆ ಸಂಸದರಾದರೋ ಆ ಕೃಷ್ಣ ಪರಮಾತ್ಮನೇ ಬಲ್ಲ!

ಈಗ ಬಿಡಿಗಾಸೂ ಬೆಲೆಯಿಲ್ಲದ 500, 1000ರ ಹಳೆ ನೋಟು ನಮ್ಮ ಮುಂದೆ ತಂದಿಟ್ಟರೆ ಪೇಪರ್ರು ಸರಸ್ವತಿದೇವಿ ಎಂದು ಕಣ್ಣಿಗೊತ್ತಿಕೊಳ್ಳುತ್ತೇವೆ. ಆದರೆ ಆಕೆ, 2,000ರು. ಹೊಸ ನೋಟಿನ ಗುಲಾಬಿ ಬಣ್ಣವನ್ನು ಟೀಕಿಸುತ್ತಾ ಮಹಿಳೆಯವರು ಲಿಪ್‌ಸ್ಟಿಕ್ ಮರೆತರೆ, 2000ರು. ನೋಟು ತೆಗೆದುಕೊಂಡು ಹೋಗಬಹದು ಎಂದು ಹೇಳುತ್ತಾರೆ! ಬಣ್ಣದ ಲೋಕದಿಂದ ಬಂದ ರಮ್ಯಾರಿಗೆ ಹಣವೂ ಲಿಪ್‌ಸ್ಟಿಕ್ ಬಣ್ಣದ ಹಾಗೇ ಕಾಣಿಸುತ್ತದೆ, ಮತ್ತು ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೇ, ಬಾಯಿಗೆ ಬಂದ ಹಾಗೆ ಒದರುತ್ತಾರೆ ಎಂದರೆ ರಮ್ಯಾರದ್ದು ಪೆದ್ದುತನವೋ? ಅಹಂಕಾರವೋ? 2000ರುಪಾಯಿ ಇಲ್ಲದೇ ಅದೇ ಮಂಡ್ಯದ ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಸಿವಿನಿಂದ ಸತ್ತಿದ್ದಾರೆ. ಆದರೆ ಅದೇ 2000ರು. ಅನ್ನು ತುಟಿಬಣ್ಣಕ್ಕೆ ಹೋಲಿಸುವ ಮಾಜಿ ಸಂಸದೆಯ ದೌಲತ್ತಿಗೆ, ಗತ್ತಿಗೆ, ಶ್ರೀಮಂತಿಕೆಗೆ ಏನೆನ್ನೋಣ?

ಮಂಡ್ಯದ ಸಂಸದೆ ಪಟ್ಟ ಕಳಚಿಬಿದ್ದ ನಂತರದ ಕೆಲ ತಿಂಗಳುಗಳು ರಮ್ಯಾ ಮೇಡಂ ಯಾರ ಕಣ್ಣಿಗೂ ಬೀಳಲೇ ಇಲ್ಲ. ಚುನಾವಣೆಗೂ ಮುನ್ನ ಮಂಡ್ಯದಲ್ಲೇ ಮನೆ ಮಾಡಿದ್ದ ರಮ್ಯಾ ರಾತ್ರೋ ರಾತ್ರಿ ಅಲ್ಲಿಂದ ಠಿಕಾಣಿ ಎತ್ತಿದ್ದರು. ಗೆದ್ದಾಗ ಸಿನಿಮಾದಲ್ಲಿ ಡೈಲಾಗ್ ಹೊಡೆದ ಹಾಗೆ ಮನೆ ಮಗಳಾಗಿರುತ್ತೇನೆ ಎಂದು ಹೇಳಿದ್ದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಮಂಡ್ಯದ ಜನರು ಮಾರನೇ ದಿನ ಬಂದು ನೋಡಿದರೆ, ಮನೆಯಲ್ಲಿ ಮಗಳೇ ಇರಲಿಲ್ಲ!

ಅಂದರೆ, ರಮ್ಯಾ ತಾನು ಗೆದ್ದಾಗ ಮಂಡ್ಯದಲ್ಲಿ ಮನೆ ಮಾಡುತ್ತಾರೆ, ಸೋತಾಗ ಪೆಟ್ಟಿಗೆ ಕಟ್ಟಿಕೊಂಡು ರಾತ್ರೋ ರಾತ್ರಿ ಹೊರಟು ಬಿಡುತ್ತಾರೆ. ಪುನಃ ಚುನಾವಣೆ ಬಂದಾಗ ಹಾಗೇ ರಾತ್ರೋ ರಾತ್ರಿಯೇ ಮಂಡ್ಯಕ್ಕೆ ಬಂದು, ನಾನು ನಿಮ್ಮ ಮನೆ ಮಗಳು ಎಂಬ ಅದೇ ಹಳೇ ಡೈಲಾಗ್ ಹೊಡೆಯುತ್ತಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇವರನ್ನು ರಮ್ಯಾ, ಒಬ್ಬ ಗೆಸ್ಟ್ ಪಾಲಿಟೀಷಿಯನ್ ಅಂತ ಅಷ್ಟಲ್ಲದೇ ಟೀಕಿಸುತ್ತಿದ್ದರಾ? ಸಿನಿಮಾದಲ್ಲೂ ರಮ್ಯಾಗೆ ಹೇಳಿಕೊಳ್ಳುವಷ್ಟು ಆಫರ್‌ಗಳಿಲ್ಲ.

ನಟಿಸಿದ ಚಿತ್ರವೂ ಮಕಾಡೆ ಮಲಗುತ್ತಿದೆ. ಜನರಿಗೆ ಸಿನಿಮಾದಲ್ಲಿ ರಮ್ಯಾ ಮುಖ ನೋಡಿದಾಗಲೆಲ್ಲ, ಕಾಂಗ್ರೆಸ್ಸೇ ಹೆಚ್ಚು ನೆನಪಾಗುವುದಕ್ಕೋ ಏನೋ, ಕೆಲ ಪ್ರೇಕ್ಷಕರು ಚಿತ್ರಮಂದಿರದಿಂದ ಖುಷಿಗಿಂತ, ಪಾಪಪ್ರಜ್ಞೆಯಿಂದ ಹೊರಬರುವುದೇ ಹೆಚ್ಚು. ಅಲ್ಲಿ ಸೋಲು ಕಾಣುವುದಕ್ಕೂ ಚುನಾವಣೆ ಬರುತ್ತೆ, ಚುನಾವಣೆಯಲ್ಲಿ ಸೋಲುಣ್ಣುವ ಹೊತ್ತಿಗೆ ಇನ್ಯಾವುದೋ ಚಿತ್ರದಲ್ಲಿ ಆಫರ್ ಬರುತ್ತೆ. ಈ ಗೆಸ್ಟ್ ಪಾಲಿಟೀಷಿಯನ್‌ರ ಜೀವನ ಸಾಗುತ್ತರುವುದೇ ಹೀಗೆ. ಈಗ ರಮ್ಯಾ ಏಕಾಏಕಿ ಮಂಡ್ಯದ ಮಾರ್ಕೆಟ್‌ಗೆ ನುಗ್ಗಿದಾಗ ಜನರಿಗೆ ಅಚ್ಚರಿಯಾಗಿದ್ದೂ ಇದೇ ಕಾರಣಕ್ಕೆ. ಏಕಿಲ್ಲ ಪೋಕಿಲ್ಲ, ಇಷ್ಟು ತಿಂಗಳು ಇಲ್ಲದ ರಮ್ಯಾ ಬಂದು, ‘ನೋಟ್ ಬ್ಯಾನ್ ಆಗಿದ್ದರಿಂದ ನಿಮಗೆ ಸಮಸ್ಯೆ ಆಗಿದೆಯೇ?’ ಎಂದು ಕೇಳಿದಾಗ ಜನರು ಸಹಜವಾಗಿಯೇ ದಿಗ್ಭ್ರಾಂತರಾಗಿದ್ದರು. ಈಗ ರಮ್ಯಾ ಮತ್ತೆ ಮಂಡ್ಯದ ಮನೆಮಗಳಾಗಿರುವುದು ಏಕೆ ಎಂದು ವಿಶೇಷವಾಗಿ ಹೇಳಬೇಕಿಲ್ಲ.

ಆ ಮಾರ್ಕೆಟ್‌ನಲ್ಲಿ ರಮ್ಯಾಳ ವಿರುದ್ಧ ಜನರು ಘೋಷಣೆ ಕೂಗಿದಾಗ, ರೊಚ್ಚಿಗೆದ್ದ ರಮ್ಯಾ ಜನರ ಬಳಿಯೇ ವಾಗ್ವಾದಕ್ಕೆ ನಿಂತಿದ್ದರು. ಯಾವಾಗ ಜನರೂ ಒಂದಾದಮೇಲೆ ಒಂದು ಪ್ರಶ್ನೆಗಳನ್ನು ಕೇಳಿದರೋ ರಮ್ಯಾ ಪರಾರಿ! ಆದರೆ, ಜನರು ಬಹಳ ಸಂಕಷ್ಟದಲ್ಲಿ ಇದ್ದಾರೆಂದು ಬಿಂಬಿಸಲು ಮೂರ್ನಾಲ್ಕು ಜನರ ಧ್ವನಿ ಬಿಟ್ಟು ಬೇರೆಯವರ ಧ್ವನಿ ಕೇಳದಂತೆ ಮುಖದ ಹತ್ತಿರವೇ ಕ್ಯಾಮೆರಾ ಇಟ್ಟು ವಿಡಿಯೊ ಮಾಡಿ ಫೇಸ್‌ಬುಕ್ಕಲ್ಲಿ ಹಾಕಿಕೊಂಡಿದ್ದಾರೆ. ಇನ್ನು ಮೋದಿಗೆ ಜೈಕಾರ ಕೂಗಿದವರಿಗೆ ರಾಷ್ಟ್ರಪ್ರೇಮದ ಪಾಠ ಸಹ ಮಾಡಿದ್ದಾರೆ. ಇಷ್ಟು ದಿನ ಎಲ್ಲಿಗೆ ಹೋಗಿದ್ಯಮ್ಮ ಎಂದು ಜನರು ಫೇಸ್‌ಬುಕ್/ಟ್ವಿಟರ್‌ನಲ್ಲಿ ಕೇಳಿದರೆ, ಅವರೆಲ್ಲರನ್ನೂ ಬ್ಲಾಕ್ ಮಾಡಿ, ಬ್ಲಾಕ್ ಭಾಗ್ಯ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಿದ್ದಾರೆ. ಕಳೆದ ಚುನಾವಣೆಯ ನಂತರ ರಮ್ಯಾ ಮಾಯವಾದ ಬಳಿಕ, ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನೂ ಬ್ಲಾಕ್ ಮಾಡಿ ತಮ್ಮ ಸಹಿಷ್ಣುತೆಯನ್ನೂ, ಉದಾರತೆಯನ್ನೂ ಮೆರೆದಿದ್ದಾರೆ.

ಕೆಲ ದಿನಗಳ ಹಿಂದೆ, ಕಾವೇರಿ ಹೋರಾಟಕ್ಕೆ ರಮ್ಯಾ ಬರಬೇಕೆಂದು ಇದೇ ಮಂಡ್ಯದ ಜನತೆ ಕೋರಿದಾಗ ಬರುವುದಿಲ್ಲ ಎಂದಿದ್ದರು. ಯಾಕೆ ಎಂಬ ಕಾರಣ ಕೇಳಿದರೆ, ಮತ್ತೆ ರಾಹುಲ್ ಗಾಂಧಿ ನೆನಪಾಗದೇ ಹೋಗುವುದಿಲ್ಲ. ‘ನನಗೆ ಸೆಕ್ಯುರಿಟಿ ಇಲ್ಲ, ಅದಕ್ಕಾಗಿ ಹೋರಾಟಕ್ಕೆ ಬರುವು ದಿಲ್ಲ’ ಎಂದಿದ್ದರು. ಅದರ ಅರ್ಥ ಇಷ್ಟೇ. ತನ್ನ ಕ್ಷೇತ್ರದಲ್ಲೇ ತಾನು ಸ್ವತಂತ್ರವಾಗಿ, ಸ್ವಚ್ಛಂದವಾಗಿ ಓಡಾಡಲು ‘ಮಾಜಿ’ ಸಂಸದೆ ಭದ್ರತೆ ಕೇಳುತ್ತಾರೆ ಎಂದರೆ, ರಮ್ಯಾರ ಆಡಳಿತ ಜನರಿಗೆ ಅದೆಷ್ಟು ರೇಜಿಗೆ ಹುಟ್ಟಿಸಿರಬಹುದು? ಅದನ್ನು ಜನರೇ ಲೆಕ್ಕ ಹಾಕಿಕೊಳ್ಳಲಿ. ಸರಿ, ಆಗ ಇದ್ದ ಭದ್ರತೆಯ ಭಯ ಮೊನ್ನೆ ಮಾರ್ಕೆಟ್‌ಗೆ ನುಗ್ಗುವಾಗ ಏಕೆ ಇರಲಿಲ್ಲ? ಜನರು ರೊಚ್ಚಿಗೆದ್ದು ‘ಮೋದಿಗೆ ಜೈ’ ಎಂದಾಗ ಅವರ ಬಳಿ ವಾಗ್ವಾದಕ್ಕೆ ಇಳಿಯುವಾಗಲೂ ಇಲ್ಲದ ಭದ್ರತೆಯ ಭಯ, ಕರ್ನಾಟಕದ ಪರವಾಗಿಯೇ ಹೋರಾಟ ಮಾಡುವುದಕ್ಕೆ ಮಂಡ್ಯದ ಜನರೇ ‘ಬಾರಕ್ಕೋ’ ಎಂದು ಕರೆದಾಗ ಏಕೆ ಕಾಡಿತ್ತು? ನೀವೇ ಯೋಚನೆ ಮಾಡಿ, ನಿಜವಾಗಿಯೂ ಭದ್ರತೆಯೇ ಸಮಸ್ಯೆಯಾಗಿದ್ದರೆ, ಹೋರಾಟದಲ್ಲಿ ಜನ ಸಂದಣಿ ಹೆಚ್ಚೋ ಮಾರ್ಕೆಟ್‌ನಲ್ಲೋ? ಇದರ ಅಸಲಿ ಯತ್ತು ಇಷ್ಟೇ… ಆಗ ಕರ್ನಾಟಕ ಸರಕಾರದ ವಿರುದ್ಧ ಜನ ಸಿಡಿದೆದ್ದಿದ್ದರು, ಸ್ವಲ್ಪ ಯಾಮಾರಿದರೂ ಸರಕಾರಕ್ಕೂ, ತನಗೂ ಕುತ್ತು. ಈಗ ಹಾಗಲ್ಲ, ಏನೇ ಆದರೂ ಅದು ಮುಂದಿನ ಚುನಾವಣೆಗೆ ಪಬ್ಲಿಸಿಟಿ. ಇದು ಹೇಗೆಂದರೆ, ಕಳೆದ ಚುನಾವಣೆಯಲ್ಲಿ ನಾಮಿನೇಷನ್ ಸಲ್ಲಿಸಬೇಕಾದರೆ, ಫಾರಂನಲ್ಲಿ ಅಪ್ಪನ ಹೆಸರು ಬರೆದಿಲ್ಲ ರಮ್ಯಾ ಎಂದು ಜೆಡಿಎಸ್‌ನವರು ಹೇಳಿದಾಗ ರಮ್ಯಾ ಗೊಳೋ ಎಂದು ಟಿವಿ ಮುಂದೆಯೇ ಅತ್ತು, ಜನರ ಮನೆಮಗಳಾಗಿದ್ದಳು. ಆಗ ಮಂಡ್ಯದಲ್ಲೇ ಮನೆಯಿತ್ತು ಎಂಬುದು ಬೇರೆ ಮಾತು ಬಿಡಿ.

ತಾನು ರಾಹುಲ್ ಗಾಂಧಿಯಂತೆ ಮಾತಾಡಬಲ್ಲೆ ಎಂದು ಮಾರ್ಕೆಟ್‌ಗೆ ಹೋದರೆ ಜನರು ಬಕ್ರಾ ಆಗಲು ಇದು ದೆಹಲಿಯೂ ಅಲ್ಲ, ನಮ್ಮವರಿಗೇನು ತಲೆಯೂ ಕೆಟ್ಟಿಲ್ಲ. ಅದು ಮಾರುಕಟ್ಟೆ… ಅಲ್ಲಿ ಬರುವವರೆಲ್ಲರೂ ವ್ಯಾಪಾರ ಕ್ಕಾಗೇ ಎಂಬುದು ಜನರಿಗೆ ಸರಿಯಾಗೇ ತಿಳಿದಿದೆ. ಹೇಗೆ ಉತ್ತರ ಕೊಡಬೇಕೋ ಹಾಗೇ ಕೊಟ್ಟಿದ್ದಾರೆ. ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೆಂದು ರಾಹುಲ್ ಗಾಂಧಿಯಿಂದ ಪಾಠವಾಗದ ಕಾರಣ, ಹಾಗೇ ವಾಪಸ್ ಬಂದಿದ್ದಾರೆ. ಆ ರೀತಿಯಾಗಿ ಜನರಿಂದ ಬಯ್ಯಿಸಿಕೊಂಡ ವಿಡಿಯೊವನ್ನೂ ಹಾಕಿದ್ದರೆ, ರಮ್ಯಾ ನಿಜವಾಗಿಯೂ ಸಮಸ್ಯೆಯನ್ನೇ ಕೇಳಲೆಂದು ಬಂದಿದ್ದರು ಎನ್ನಬಹುದಿತ್ತು. ಆದರೆ ಸಾರ್ವಜನಿಕರು ಮೋದಿಗೆ ಬಯ್ಯುವ ವಿಡಿಯೊವನ್ನು ಶೂಟಿಂಗ್ ಮಾಡಲು ನಟಿಯಾಗಿ ಬಂದಿದ್ದರು ಎಂದು ಜನರಿಗೆ ಬಹಳ ಬೇಗವೇ ಗೊತ್ತಾಗಿ ಹೋಯಿತು. ರಮ್ಯಾ ಅವರೇ, ಇನ್ನೊಮ್ಮೆ ಮಂಡ್ಯದ ಮಾರ್ಕೆಟ್‌ಗೆ ಹೋಗು ವಾಗ ನಾನೇ ರಾಹುಲ್ ಗಾಂಧಿ ಎಂದು ಹೋಗಬೇಡಿ. ನೀವು ಮತ್ತೊಂದು ರಾಹುಲ್ ಗಾಂಧಿಯಾಗುವುದು ಬೇಡ. ಆ ಸ್ಥಾನ ಅವರು ಬಿಟ್ಟುಕೊಡುವುದಿಲ್ಲ. ನೀವು ನಿಮ್ಮದೇ ಛಾಪು ಮೂಡಿಸಿ ಮತ್ತೊಮ್ಮೆ ಮಂಡ್ಯದ ‘ಮನೆಮಗಳು’ ಆಗುವುದಕ್ಕೆ ಮಾರ್ಕೆಟ್ ಮೂಲಕ ಎಂಟ್ರಿ ಪಡೆದು ಮೊದಲ ಪ್ರಯತ್ನ ಮಾಡಿದ್ದೀರಿ.
ಶುಭವಾಗಲಿ.

ಬ್ರಾಹ್ಮಣರೇ ಇವರ ಅಕ್ಕಿ ಬೇಳೆ, ದ್ರಾಕ್ಷಿ ಗೋಡಂಬಿ!

$
0
0

brahmin

ನಿನ್ನೆ ಒಂದು ಖಾಸಗಿ ನ್ಯೂಸ್ ಚಾನೆಲ್‌ನ್ನು ನೋಡುತ್ತಿದ್ದಾಗ ಕೆಳಗೆ ದಪ್ಪಕ್ಷರದಲ್ಲಿ ಬರೆದಿದ್ದ ಸಾಲುಗಳು ನನ್ನನ್ನು ಆಕರ್ಷಿಸಿದವು. ಅದರಲ್ಲಿ ಇದ್ದಿದ್ದು, ‘ಅರ್ಚಕರ ನೇಮಕಾತಿಗೆ ಮೀಸಲಾತಿ ತನ್ನಿ’ ಎಂದು. ಅಂದರೆ ಮುಜರಾಯಿ ಇಲಾಖೆಯನ್ವಯ ಯಾವ್ಯಾವ ದೇವಸ್ಥಾನಗಳು ಬರುತ್ತವೋ, ಸರಕಾರದ ಆಡಳಿತದಲ್ಲಿ ಯಾವ್ಯಾವ ದೇವಸ್ಥಾನಗಳಿರುತ್ತವೋ ಅವೆಲ್ಲದರ ಅರ್ಚಕರ ನೇಮಕದಲ್ಲಿ ಮೀಸಲು ಕೊಡಬೇಕೆಂಬುದು ವಾದ. ಇದಕ್ಕೆ ಅರ್ಜಿ ಸಲ್ಲಿಸಿದರೂ, ‘ಇದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದಿದ್ದಾರೆ ಎಂಬ ಸಾಲುಗಳು ಬರುತ್ತಿತ್ತು.

ಇದನ್ನು ನೋಡಿ ನನಗೆ ಆಶ್ಚರ್ಯ ಆಗಿದ್ದೇಕೆಂದರೆ, ಮೀಸಲು ಎಂದರೇನು? ನಾನು ಒಂದು ವಿಷಯವನ್ನು ಓದಿ ಸಂಪೂರ್ಣ ತಿಳಿದುಕೊಂಡು ಸ್ಥಾನ ಗಿಟ್ಟಿಸಿಕೊಂಡಿರುತ್ತೇನೆ. ಇನ್ನೊಬ್ಬ ನನ್ನಂತೆಯೇ ಓದಿರುತ್ತಾನೆ, ಪಾಸ್ ಸಹ ಆಗಿರುತ್ತಾನೆ. ಆದರೆ ನನ್ನಷ್ಟು ಅಂಕ ಬಂದಿರುವುದಿಲ್ಲ. ಆತನನ್ನು ಮುಂದೆ ತಳ್ಳುವುದಕ್ಕಾಗಿ ಮೀಸಲು. ಇದು ಯಾವುದೋ ಸರಕಾರಿ ಕೆಲಸದಲ್ಲಿ ಬಹಳ ಆಪ್ತವಾಗಿರುತ್ತದೆ. ಏಕೆಂದರೆ, ಅಲ್ಲಿ ಕೆಲಸ ಮಾಡಿದರೂ, ಬಿಟ್ಟರೂ ಕ್ಯಾರೆ ಎನ್ನುವವನಿಲ್ಲ. ಆದರೆ ಅರ್ಚಕರ ವೃತ್ತಿಯಲ್ಲಿ ಇದು ಹೇಗೆ ಕೆಲಸ ಮಾಡಬಹುದು ಎಂದು ನೋಡೋಣ. ಮಂತ್ರಗಳ ಉಚ್ಚಾರಣೆ, ಕೈಕರಣ ಸಹಿತ ಪೂರ್ತಿ ಮಂತ್ರ ನೆನಪಿಟ್ಟುಕೊಂಡಿರುವವನು ಅರ್ಚಕ ಸ್ಥಾನಕ್ಕೆ ಸೂಕ್ತನೋ? ಅಥವಾ ಅರ್ಧಮರ್ಧ ಮಂತ್ರ ಕಲಿತು, ಉಚ್ಚಾರಣೆ-ಕೈಕರಣ ಸರಿಯಾಗಿ ಬರದೇ ಇರುವವನು ಅರ್ಚಕ ಸ್ಥಾನಕ್ಕೆ ಹೆಚ್ಚು ಸೂಕ್ತನೋ? ಭಕ್ತಾದಿಗಳು ತಮ್ಮ ಗ್ರಹಚಾರ ಕಳೆದುಕೊಳ್ಳುವುದಕ್ಕಾಗಿ ಹೋಮ, ಹವನ ಮತ್ತೊಂದು ಮಗದೊಂದು ಮಾಡಿಸುತ್ತಾರೆ. ಆದರೆ, ಅಲ್ಲೂ ಉಚ್ಚಾರಣೆ ತಪ್ಪಿ, ಮಂತ್ರವೂ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳದೇ ಹೇಳಿದರೆ ಭಕ್ತಾದಿಗಳ ಗ್ರಹಚಾರ ಕಳೆಯುತ್ತದೋ? ಮತ್ತಷ್ಟು ಹೆಚ್ಚುತ್ತದೋ? ಉಚ್ಚಾರ ಸರಿ ಇರುವುದು, ಕೈಕರಣ ಗೊತ್ತಿರುವುದು ಕೇವಲ ಬ್ರಾಹ್ಮಣರಿಗೆ ಮಾತ್ರ ಎಂದು ನಾನೆಲ್ಲೂ ಹೇಳಿಲ್ಲ. ಬದಲಾಗಿ ಇಲ್ಲಿ ಅರ್ಚಕ ವೃತ್ತಿಗೆ ಬರುವುದಕ್ಕೂ ಶ್ರಮ ವಹಿಸಬೇಕು ಎನ್ನುವುದರ ಬಗ್ಗೆ ಮಾತಾಡುತ್ತಿದ್ದೇನೆ. ದೇವರ ಬಳಿ ನಿಂತವನು ಆರಾಮಾಗಿ ಆ ಸ್ಥಾನಕ್ಕೆ ಬಂದಿರುತ್ತಾನೆ ಎಂಬ ಊಹೆಯೇ ದೊಡ್ಡ ಮೂರ್ಖತನ.

ಸರಿ, ಮಂತ್ರಗಳಲ್ಲಿರುವುದು ಏನು? ದೇವರನ್ನು ಹೊಗಳುವ ಸಾಲುಗಳು. ಅದನ್ನೂ ಸರಿಯಾಗಿ ಮಾಡದೇ, ಅದರಲ್ಲೂ ಮೀಸಲು ಕೇಳುವವನು ಅರ್ಚಕ ಎಂದು ಕರೆಯಿಸಿಕೊಳ್ಳಲು ಯಾವ ರೀತಿಯಲ್ಲಿ ಅರ್ಹ? ಭಗವದ್ಗೀತೆಯಲ್ಲಿ ಕೃಷ್ಣನೇ ಹೇಳುತ್ತಾನೆ ‘ದೈವಾಧೀನಂ ಜಗತ್‌ಸರ್ವಂ ಮಂತ್ರಾಧೀನಂತು ದೈವತಂ ತನ್ಮಂತ್ರಾ ಬ್ರಾಹ್ಮಣಾಧೀನಂ ಬ್ರಾಹ್ಮಣೋ ಮಮದೇವತಾ॥’
ದೇವರು ಅಧೀನನಾಗಿರುವುದು ಮತ್ತು ಆತನಿಗೆ ಶಕ್ತಿ ವೃದ್ಧಿಸುವುದೇ ಮಂತ್ರಗಳಿಂದ. ಇಂಥ ಹೇಳುವ ಮಂತ್ರದಲ್ಲೂ ವಿನಾಯಿತಿ ಬೇಕು, ಮೀಸಲು ಬೇಕು ಎಂದರೆ, ಯಾವ ಬಾಯಿಯಿಂದ ಅವನನ್ನು ಅರ್ಚಕ ಎಂದು ಕರೆಯುವುದು? ಮಾಡುವ ಕೆಲಸವನ್ನೇ ಸರಿಯಾಗಿ ಮಾಡದವನಿಗೆ ಮೀಸಲು ಕೊಟ್ಟು ಮಾಡುವುದಾದರೂ ಏನು?

‘ಜನ್ಮನಾ ತಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ’ ಎಂದು ವೇದಗಳಲ್ಲಿ ಹೇಳಿದ್ದಾರೆ. ಇದರ ಅರ್ಥ – ‘ಹುಟ್ಟುವಾಗ ಎಲ್ಲರೂ ಶೂದ್ರರೇ ಆಗಿರುತ್ತಾರೆ, ಸಂಸ್ಕಾರದಿಂದ ಬ್ರಾಹ್ಮಣರಾಗುತ್ತಾರೆ’ ಎಂದು. ಅಂದರೆ, ಹುಟ್ಟಿನಿಂದ ಯಾರೂ ಮಂತ್ರ ಹೇಳಿಕೊಂಡು, ಜನಿವಾರ ಧರಿಸಿಯೇ ಹುಟ್ಟಿರುವುದಿಲ್ಲ. ಅರ್ಥಾತ್, ಬ್ರಾಹ್ಮಣ ಕುಲದಲ್ಲಿ ಹುಟ್ಟಿದರೂ ಆತ ಶೂದ್ರನೇ ಆಗಿರುತ್ತಾನೆ ಮತ್ತು ಕೆಲ ಸಂಸ್ಕಾರವನ್ನು ಅನುಸರಿಸುವುದರಿಂದ ಶೂದ್ರನೂ ದ್ವಿಜ, ಬ್ರಾಹ್ಮಣನಾಗುತ್ತಾನೆ ಎಂದರ್ಥ. ಹುಳುಕು ಹುಡುಕುವವರು ಮತ್ತು ಅರೆಬೆಂದ ತಲೆಗಳು ಇದರಲ್ಲೂ ಹುಳುಕು ಹುಡುಕುತ್ತವೆ. ಏನೆಂದರೆ, ಬ್ರಾಹ್ಮಣರಿಗೆ ಮಾತ್ರ ಸಂಸ್ಕಾರ ಇರುವುದಾ? ಬೇರೆಯವರಿಗಿಲ್ಲವಾ ಎಂದು. ಅಂಥ ತಲೆಗಳಿಗೆ ಉತ್ತರಿಸಲೆಂದೇ ವೇದಗಳಲ್ಲಿ ಮತ್ತೊಂದು ಮಾತಿದೆ. ‘ಬ್ರಹ್ಮಜ್ಞಾನ ಇತಿ ಬ್ರಾಹ್ಮಣಃ’ ಅಂದರೆ, ಬ್ರಾಹ್ಮಣ ಎಂಬುದು ಜನನ ಪತ್ರದಲ್ಲಿ, ಶಾಲಾ ದಾಖಲೆಯಲ್ಲಿ ಬರೆಯುವಾಗ ಜಾತಿ ಎಂದಾಯಿತೇ ಹೊರತು, ಅಲ್ಲಿಯವರೆಗೆ ‘ಯಾರು ಬ್ರಹ್ಮಜ್ಞಾನವನ್ನು ಪಡೆದಿರುತ್ತಾನೋ ಅವನು ಬ್ರಾಹ್ಮಣನಾಗುತ್ತಾನೆ’ ಎಂಬುದೇ ಅರ್ಥವಾಗಿತ್ತು. ಎಲ್ಲೂ ಬ್ರಹ್ಮಜ್ಞಾನ ಒಂದೇ ಒಂದು ಜಾತಿಗೆ, ಧರ್ಮಕ್ಕೆ ಮಾತ್ರ ಸೀಮಿತ ಎಂದು ಹೇಳಿಲ್ಲ. ವೇದಗಳಲ್ಲಿ ಬ್ರಾಹ್ಮಣ ಎಂಬ ಪದದ ಅರ್ಥವೇ ಇದು.

ದೇವರು ಒಲಿಯುವುದು ಯಾವುದೋ ಜಾತಿಗಲ್ಲ ಅಥವಾ ಮೀಸಲಿಗಲ್ಲ, ಬದಲಿಗೆ ತಪಸ್ಸಿಗೆ ಎಂದು ದೇವರೇ ನಮಗೆ ತೋರಿಸಿಕೊಟ್ಟಿದ್ದಾನೆ. ರಾವಣ ರಾಕ್ಷಸ ಎಂದು ಗೊತ್ತಿದ್ದರೂ ಅವನ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗಿ ವರ ಕೊಟ್ಟನೇ ಹೊರತು, ಜಾತಿ ನೋಡಿ ಅಲ್ಲ. ಕೃಷ್ಣಮಠದಲ್ಲಿ ದಿನವೂ ಅನುಷ್ಠಾನ ಮಾಡಿದರೂ ಮಾಧ್ವರಿಗೆ ಕಾಣದ ಕೃಷ್ಣ, ನಿತ್ಯವೂ ಬಂದು ಬಾಗಿಲ ಬಳಿಯಲ್ಲೇ ಬೇಡುವ, ಭಕ್ತಿ ಸಮರ್ಪಿಸುವ ಕನಕನಿಗೆ ಕಾಣುತ್ತಾನೆಂದರೆ, ಮೂರ್ತಿಯೇ ಆತನ ಕಡೆ ತಿರುಗುತ್ತದೆ ಎಂದರೆ ಅದರರ್ಥ, ಅವನ ಸನ್ನಿಧಾನದಲ್ಲಿ ಪೂಜೆ ಮಾಡುವವರಿಗಿಂತಲೂ ಹೊರಗೆ ನಿಂತಿರುವ ಕನಕನ ಭಕ್ತಿಯನ್ನೇ ಅವನು ಮೆಚ್ಚಿದನೆಂದು. ಮೀಸಲು ಕೇಳುವವರಲ್ಲಿ ಎಷ್ಟು ಜನ ಇದೇ ಕನಕ ದಾಸರು ಬರೆದಿರುವ ಕೃತಿಗಳನ್ನು ಸರಿಯಾಗಿ ಉಚ್ಚಾರ ಮಾಡಬಲ್ಲರು? ಬೇಡ, ಅವರ ಕೃತಿಗಳ್ಯಾವುವು, ಅದರಲ್ಲಿ ಅವರೇನು ಬರೆದಿದ್ದಾರೆ ಎಂಬುದಾದರೂ ಈ ಓರಾಟಗಾರರಿಗೆ ಸರಿಯಾಗಿ ಗೊತ್ತೇ? ತಮ್ಮ ಜಾತಿಯ ನಾಯಕ ಮಾಡಿರುವ ಸಾಧನೆಗಳು ಗೊತ್ತಿಲ್ಲ, ಕೃತಿಗಳೂ ಗೊತ್ತಿಲ್ಲ. ಆದರೆ ಮೀಸಲು ಪಡೆದು ಅರ್ಚಕನಾಗಬೇಕು.

ವಿಪರ್ಯಾಸ ಹೇಗಿದೆ ನೋಡಿ, ಕ್ಷತ್ರಿಯ ರಾಮನ ರಾಮಾಯಣ ಬರೆದಿದ್ದು ಕಾಡಲ್ಲಿ ಕಳ್ಳತನ ಮಾಡುತ್ತಿದ್ದ ವಾಲ್ಮೀಕಿ. ಅವರಿಬ್ಬರನ್ನೂ ಪೂಜೆ ಮಾಡುವವನು ಬ್ರಾಹ್ಮಣ. ವಾಲ್ಮೀಕಿ ಬ್ರಹ್ಮಜ್ಞಾನ ಪಡೆಯಲು ತಪಸ್ಸಿಗೆ ಕುಳಿತಾಗ ಅವರ ದೇಹದ ಸುತ್ತ ಹುತ್ತವೇ ಬೆಳೆದುಬಿಟ್ಟಿತ್ತು. ಆ ಅರಿಯುವಿಕೆ ಇದೆಯಲ್ಲ, ಅದು ಬ್ರಹ್ಮಜ್ಞಾನ. ವಾಲ್ಮೀಕಿ ಸಂಸ್ಕಾರದಲ್ಲಿ ಬ್ರಾಹ್ಮಣನಾಗಿದ್ದು ಆಗ. ಆತ ರಾಮಾಯಣ ಬರೆಯುವಾಗ ಬ್ರಹ್ಮಾದಿಗಳು, ನಾರದರು ಭೂಮಿಗೆ ಬಂದು ಆಶೀರ್ವಾದ ಮಾಡಿದ್ದರು. ಅಂದರೆ ಇಲ್ಲಿ ಜಾತಿಗಿಂತಲೂ ಹೆಚ್ಚು ಪ್ರಾಧಾನ್ಯ ತಪಸ್ಸಿಗೆ ಇದೆ ಎಂದರ್ಥ. ತಪಸ್ಸು ಎಂದರೆ ಮೂಗು ಮುಚ್ಚಿಕೊಂಡು ಕೂರುವುದು ಅಂತಲೂ ಅರ್ಥವಲ್ಲ. ಬದಲಿಗೆ ಶ್ರಮ ಎಂದರ್ಥ.

ಹನ್ನೆರಡು ವರ್ಷಗಳ ಕಾಲ ಯಾವುದೋ ಪಾಠಶಾಲೆಯಲ್ಲಿ ಉಪ್ಪು – ಹುಳಿ- ಖಾರ ಇಲ್ಲದ ಗಂಜಿ ತಿಂದುಕೊಂಡು, ಬೆಳಗ್ಗೆ ನಾಲ್ಕು ಗಂಟೆಗೆದ್ದು 5 ಗಂಟೆಯಿಂದ 9 ಗಂಟೆಯವರೆಗೆ ಹಸಿವಿನಿಂದ ಮಂತ್ರ ಹೇಳಿದವನಿಗಿಂತ ಮಾಂಸ ಮದ್ಯಗಳನ್ನು ಸೇವಿಸುವ ವ್ಯಕ್ತಿಯೊಬ್ಬ ಮೀಸಲಿನ ದಯೆಯಿಂದ ದೇವರ ಬಳಿ ಬಂದ ಎಂದರೆ, ತಪಸ್ಸಿಗೆ ಏನು ಬೆಲೆ ಕೊಟ್ಟಂತಾಗುತ್ತದೆ? ಮಾಂಸ ತಿನ್ನಲೇಬಾರದು ಎನ್ನುವುದು ನನ್ನ ವಾದವಲ್ಲ. ಋಷಿಮುನಿಗಳು ಹೇಳಿದಂತೆ, ಆಯುರ್ವೇದ ಹೇಳುವಂತೆ ಮತ್ತು ಇಂದಿನ ವಿಜ್ಞಾನವೂ ಸಾಬೀತು ಮಾಡಿರುವಂತೆ ಮನುಷ್ಯನ ವರ್ತನೆ ಅವನ ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ. ‘ಅರ್ಚಕನಾದವನಿಗೆ ಬೇಕಾಗುವುದು ತಾಳ್ಮೆಯೇ ಹೊರತು ಆಕ್ರೋಶವಲ್ಲ. ಮಾಂಸಾಹಾರ ಸೇವಿಸಿದರೆ, ಕೋಪ ಸಹಜವಾಗಿಯೇ ಬರುತ್ತದೆ. ಅದನ್ನು ತ್ಯಜಿಸಿ ಸಾತ್ವಿಕ ಆಹಾರ ಸೇವಿಸುವುದೂ ಒಂದು ರೀತಿಯ ತಪಸ್ಸು. ಮೀಸಲು ಕೇಳುವ ಎಷ್ಟು ಜನ ಇದನ್ನೆಲ್ಲ ಪಾಲಿಸಲು ಸಾಧ್ಯ? ಯಾವ ಶ್ರಮವನ್ನೂ ಪಡದೇ, ವಿಗ್ರಹದ ಬಳಿ ಹೋಗುವುದಕ್ಕೂ ಮೀಸಲು ಬೇಕು ಎಂದರೆ, ಅದ್ಕಕಿಂತ ಹೇಯ ಮತ್ತೊಂದಿದೆಯೇ?

ಸರಿ, ಇಷ್ಟು ದಿನ ಇಲ್ಲದ ಅರ್ಚಕ ವೃತ್ತಿಯ ಮೀಸಲು ಈಗಲೇ ಏಕೆ ಬಂತು? ಅದರಲ್ಲೂ ಒಂದು ಸ್ವಾರಸ್ಯಕರ ಸಂಗತಿಯಿದೆ. ಹೆಚ್ಚಾಗಿ ಪೌರೋಹಿತ್ಯ, ಅರ್ಚಕ ವೃತ್ತಿ ಮಾಡುತ್ತಿರುವವರು ಬ್ರಾಹ್ಮಣರು. ಬ್ರಾಹ್ಮಣರು ತಮ್ಮ ಪಾಡಿಗೆ ತಾವಿದ್ದರೂ ಬೇರೆ ಜಾತಿಗಳಿಗೆ ಇವರೆಲ್ಲ ಸೇರಿ ಏನೋ ಮಾಡಿಬಿಡುತ್ತಾರೆ ಎಂಬ ಕಲ್ಪನೆ(ಜನರಲ್ಲಿ ಹೆದರಿಕೆ ಹುಟ್ಟಿಸುವ ಮನೋಭಾವ) ಎಡಪಂಥೀಯರದ್ದು. ಪೌರೋಹಿತ್ಯದಲ್ಲೂ ಮೀಸಲು ತಂದು ಅಲ್ಲೂ ಬೇರೆ ಜಾತಿಯವರನ್ನು ನೇಮಿಸಿಬಿಟ್ಟರೆ, ಬ್ರಾಹ್ಮಣ್ಯವನ್ನು ನಾಶ ಮಾಡಬಹುದು ಎಂದು ಎಡಪಂಥೀಯರ ಆಲೋಚನೆ. ಇದೇ ಕಾರಣಕ್ಕೆ ಇತ್ತೀಚೆಗೆ ‘ಬ್ರಾಹ್ಮಣ್ಯ ಮುಕ್ತ ಭಾರತದತ್ತ ನಮ್ಮ ನಡಿಗೆ’ ಎಂಬ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮಸಲಹೆಗಾರರು, ಕಚೇರಿಯಲ್ಲಿನ ಕೆಲಸ ಬಿಟ್ಟು ಬಂದು ಟೌನ್‌ಹಾಲ್‌ನಲ್ಲಿ ಪ್ರತಿಭಟನಾಕಾರರೊಂದಿಗೆ ಮಾತಾಡಿ ಅವರಿಗೆ ಧೈರ್ಯ ತುಂಬಿದ್ದಾರೆ.

ಯಾಕೆ ಎಲ್ಲರಿಗೂ ಬ್ರಾಹ್ಮಣರ ಮೇಲೆ ಕೋಪ? ಇವರ ಈ ನಡೆ ಬ್ರಾಹ್ಮಣ್ಯದ ಮೇಲಲ್ಲ, ಬದಲಿಗೆ ಬ್ರಾಹ್ಮಣರನ್ನು ಕಂಡರೇ ಇವರ್ಯಾರಿಗೂ ಆಗುವುದಿಲ್ಲ. ಕೇಳಿದರೆ ‘ಇಲ್ಲ ನಮಗೆ ಬ್ರಾಹ್ಮಣರ ಮೇಲೆ ಕೋಪ ಇಲ್ಲ, ನಮ್ಮದು ಬ್ರಾಹ್ಮಣ್ಯದ ವಿರುದ್ಧ ಹೋರಾಟ’ ಎನ್ನುತ್ತಾರೆ. ಈ ವಾಕ್ಯ ಹೇಗಿದೆಯೆಂದರೆ, ಗೌಡರ ಮೇಲೆ ಕೋಪ ಇಲ್ಲ ಗೌಡತ್ವದ ವಿರುದ್ಧ ಹೋರಾಟ, ಲಿಂಗಾಯತರ ಮೇಲೆ ಕೋಪವಿಲ್ಲ, ಲಿಂಗದ ಕಾನ್ಸೆಪ್ಟೇ ಸರಿ ಇಲ್ಲ ಅದರ ವಿರುದ್ಧ ಹೋರಾಟ ಎನ್ನುವುದಕ್ಕಿಂತ ಯಾವ ರೀತಿಯಲ್ಲಿ ಇವರ ಹೇಳಿಕೆಗಳು ವಿಭಿನ್ನ? ಬ್ರಾಹ್ಮಣರು ಯಾವ ಕೆಲಸ ಮಾಡುತ್ತಾರೋ ಅದಕ್ಕೊಂದು ಕಲ್ಲು ಎಸೆಯಲು ತಯಾರಾಗಿರುತ್ತಾರಲ್ಲ, ಇವರೇನಾ ಜಾತ್ಯತೀತ ಪಾಲಕರು? ಬ್ರಾಹ್ಮಣರು ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ, ಹಾಗಾಗಿ ಅಲ್ಲೂ ಮೀಸಲು ಕೇಳಿದರು, ಖಾಸಗಿ ಕ್ಷೇತ್ರದಲ್ಲಿ ಬ್ರಾಹ್ಮಣರು ಹೆಚ್ಚು ಕಾಣಿಸಿಕೊಂಡರು, ಅಲ್ಲೂ ಈಗ ಮೀಸಲು ಕೇಳುತ್ತಿದ್ದಾರೆ. ಅಲ್ಲೆಲ್ಲೂ ಇವರ ಬೇಳೆ ಬೇಯಲಿಲ್ಲ, ಅದಕ್ಕೆ ಈಗ ಅರ್ಚಕ ಸ್ಥಾನಕ್ಕೆ ಮೀಸಲು ಬೇಕು ಎನ್ನುತ್ತಿದ್ದಾರೆ. ದೇವರನ್ನು ಸಂತುಷ್ಟಗೊಳಿಸುವುದಕ್ಕೆ ಹೇಳುವ ಮಂತ್ರದಲ್ಲೂ ಮೀಸಲು ಬೇಕು ಎನ್ನುವುದು ಅಂಥವರ ಬೌದ್ಧಿಕ ಅಧಃಫತನಕ್ಕೆ ಹಿಡಿದ ಕನ್ನಡಿಯಲ್ಲದೆ ಮತ್ತಿನ್ನೇನು? ಮಂತ್ರವನ್ನೇ ಹೇಳಲು ಬಾರದವನು ದೇವರಿಗೆ ಹೇಗೆ ತಾನೆ ಪೂಜೆ ಮಾಡಲು ಸಾಧ್ಯ?

ಬ್ರಾಹ್ಮಣರು, ಗೌಡರು, ಶೆಟ್ಟಿಗಳು, ಲಿಂಗಾಯತರು ಮತ್ತು ಇನ್ನಿತರ ಜನರಲ್ ಮೆರಿಟ್‌ನವರು ತಮ್ಮ ಬುದ್ಧಿಶಕ್ತಿಯಿಂದ ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ, ಅದಕ್ಕೇ ನಮಗೆಲ್ಲ ಹೊಟ್ಟೆ ಉರಿ. ಗೌಡರನ್ನು ಮತ್ತಿತರನ್ನು ಮುಟ್ಟಿದರೆ ನಮಗೆ ಉಳಿಗಾಲವಿಲ್ಲ, ಪುಳಿಚಾರು ತಿನ್ನುವ ಬ್ರಾಹ್ಮಣರನ್ನು ಅದಕ್ಕಾಗಿಯೇ ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಬಾಯಿಬಿಟ್ಟು ಒಂದು ಮಾತು ಹೇಳಿಬಿಡಿಯಲ್ಲ? ಇವರ ‘ಬ್ರಾಹ್ಮಣ್ಯ ಮುಕ್ತ ಭಾರತದತ್ತ ನಮ್ಮ ನಡಿಗೆ’ ಎಂಬ ಹೋರಾಟ ನಡೆದ ಮೇಲೇ ಇಂಥ ಬೇಡಿಕೆಗಳು ತಲೆಯೆತ್ತುತ್ತವೆ ಎಂದರೆ, ಇಷ್ಟು ದಿನ ಯಾರಿಗೂ ಮೀಸಲು ಬೇಕು ಎಂದು ಅನಿಸಲೇ ಇಲ್ಲವೋ?

ಕೆಲ ಎಡಪಂಥೀಯ ಸಂಘಟನೆಗಳು ದೇವರನ್ನೇ ನಂಬುವುದಿಲ್ಲ. ಮಾತೆತ್ತಿದರೆ ರಾಮ ಸೀತೆಯನ್ನು ನೋಯಿಸಿದವನು, ಸ್ತ್ರೀ ದ್ವೇಷಿ. ಕೃಷ್ಣ ಹುಡುಗಿಯರ ಸುತ್ತಲೇ ಇರುತ್ತಿದ್ದ, ಹಾಗಾಗಿ ಅವನು ಸರಿ ಇಲ್ಲ ಎಂದು ಹೇಳುತ್ತಿದ್ದವರ ತಂಡವೇ ಮೀಸಲು ಕೇಳಿದೆ ಎಂದರೆ, ಇವರ ಉದ್ದೇಶ ಹಿಂದುಳಿದವರನ್ನು ಮೇಲೆತ್ತುವುದೋ ಅಥವಾ ಬ್ರಾಹ್ಮಣರನ್ನು ಬಗ್ಗುಬಡಿಯುವುದೋ? ಇನ್ನೊಬ್ಬರು ನೆಮ್ಮದಿಯಿಂದಿರಲೂ ಬಿಡುವುದಿಲ್ಲ, ತಾವೂ ನೆಮ್ಮದಿಯಿಂದಿರುವುದಿಲ್ಲ. ಇಷ್ಟಾಗಿಯೂ ಇವರ ವಿಚಾರ, ಕುತಂತ್ರ ಏನೇ ಇರಲಿ ಬೇಸರವಿಲ್ಲ. ತಲೆ ಖರ್ಚು ಮಾಡುವವನು ಬ್ರಾಹ್ಮಣನಾಗಿದ್ದರೂ ಇನ್ನೊಂದು ಜಾತಿಯಾಗದ್ದರೂ ಎಲ್ಲಿ ಬೇಕಾದರೂ ಬದುಕು ಕಟ್ಟಿಕೊಳ್ಳುತ್ತಾನೆ. ಮೀಸಲಿನ ಕ್ಯೂನಲ್ಲಿ ನಿಂತು ಕಾಕಾ ಎನ್ನುವುದಿಲ್ಲ.

ಆದರೆ, ಅರ್ಚಕನ ಸ್ಥಾನಕ್ಕೇರಬೇಕಾದರೆ ಶಾಸ್ತ್ರೋಕ್ತವಾಗಿ ಮಂತ್ರವನ್ನು ಕಲಿತು ಬರಲಿ, ಆಗ ಅವರನ್ನು ಅರ್ಚಕ ಎಂದು ಒಪ್ಪಿಕೊಳ್ಳೋಣ. ಹಾಗೆ ತಪಸ್ಸು ಮಾಡಿದ ರಾಕ್ಷಸ ರಾವಣನನ್ನೇ ಇಂದಿಗೂ ಜನರು ಗೌರವಿಸುವಾಗ, ವಾಲ್ಮೀಕಿಯನ್ನೇ ನಮ್ಮ ಗುರುಗಳು ಎಂದು ಬ್ರಾಹ್ಮಣರು ಆರಾಧಿಸುವಾಗ, ಕ್ಷತ್ರಿಯ ರಾಮ, ಗೊಲ್ಲರ ಕೃಷ್ಣನನ್ನೇ ಮನೆದೇವರನ್ನಾಗಿಸಿಕೊಂಡಿರುವಾಗ, ನಮ್ಮ ಜತೆಯಲ್ಲಿದ್ದವರೇ ಗುಡಿಯಲ್ಲಿ ಆರತಿ ಎತ್ತುತ್ತಿದ್ದಾರೆ ಎಂದರೆ ಯಾಕೆ ಮತ್ತು ಹೇಗೆ ಒಪ್ಪುವುದಿಲ್ಲ? ಅದನ್ನು ಬಿಟ್ಟು ದೇವರ ಮುಂದೆ ಮಂತ್ರ ಹೇಳುವುದಕ್ಕೂ ಮೀಸಲು ಕೇಳಿದರೆ, ನಾಳೆ ಅಂಥ ಪೂಜಾರಿಯ ಕಣ್ಣು, ಮನಸ್ಸು ತವಕಿಸುವುದು ದೇವರ ಪೂಜೆಗಲ್ಲ, ಬದಲಿಗೆ ತಿಂಗಳ ಸಂಬಳ, ಆರತಿ ತಟ್ಟೆಯ ಕಾಸು ಮತ್ತು ಹುಂಡಿಯೊಳಗಿರುವ ಹಣಕ್ಕಷ್ಟೇ.

Viewing all 155 articles
Browse latest View live